Tuesday, 12th November 2019

Recent News

6 months ago

ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ!

ಮೈಸೂರು: ಕಾಡಾನೆಯೊಂದು ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನನ್ನು ಕಾಲಿನಿಂದ ತುಳಿದು ಸಾಯಿಸಿದ ಘಟನೆ ಎಚ್.ಡಿ.ಕೋಟೆಯ ಹೈರಿಗೆ-ಮಾದಾಪುರ ಸಮೀಪದಲ್ಲಿ ನಡೆದಿದೆ. ರಾಯಚೂರಿನ ಕಕ್ಕೇರಿ ಮೂಲದ ಹನುಮಂತಪ್ಪ(50) ಮೃತ ದುರ್ದೈವಿ. ನಾಲೆ ಕೆಲಸಕ್ಕಾಗಿ ಮೈಸೂರಿಗೆ 8 ಮಂದಿ ಕೂಲಿ ಕಾರ್ಮಿಕರು ಬಂದಿದ್ದರು. ಅವರಲ್ಲಿ ಹನುಮಂತಪ್ಪ ಕೂಡ ಒಬ್ಬರು. ಬೇರೆ ಊರಿನಿಂದ ಜೀವನ ನಡೆಸಲು ಕೆಲಸಕ್ಕೆಂದು ಬಂದ ಹನುಮಂತಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇಂದು ಮುಂಜಾನೆ ಕಾರ್ಮಿಕರೆಲ್ಲ ನಾಲೆ ಕೆಲಸದಲ್ಲಿ ತೊಡಗಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಕಾಲಿನಿಂದ ಕಾರ್ಮಿಕನನ್ನು […]

6 months ago

ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದ ಧಗಧಗನೆ ಹೊತ್ತಿ ಉರಿದ ಲಾರಿ!

ಬೀದರ್: ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದಾಗಿ ಲಾರಿಯೊಂದು ಧಗಧಗನೆ ಉರಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಹೊರವಲಯದ ಶಾಪೂರ್ ಗೇಟ್ ಬಳಿ ನಡೆದಿದೆ. ಲಾರಿಯಲ್ಲಿದ್ದ ಡೀಸೆಲ್ ಖಾಲಿ ಮಾಡದೇ ವೆಲ್ಡಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ವೆಲ್ಡಿಂಗ್ ಕಾರ್ಮಿಕನ ಅಚಾರ್ತುದಿಂದಾಗ ಬೆಂಕಿಯ ಕೆನ್ನಾಲಿಗೆ ಲಾರಿ ಸುಟ್ಟು ಕರಕಲಾಗಿದೆ. ತುಕ್ಕು ಹಿಡಿದಿದ್ದ ಲಾರಿಯ ಟ್ಯಾಂಕರ್ ಗೆ...

ಕೆಲಸ ಮಾಡುವಾಗ ತುಂಡಾಯ್ತು ಕಾರ್ಮಿಕನ ಬೆರಳುಗಳು- ಚಿಕಿತ್ಸೆಗೆ ಹಣ ಕೇಳಿದಕ್ಕೆ ಕೊಲೆ ಬೆದರಿಕೆ

11 months ago

ಬೆಂಗಳೂರು: ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಬರಿಗೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನ ಬೆರಳುಗಳು ಮಷಿನ್‍ಗೆ ಸಿಲುಕಿ ತುಂಡಾದ ಘಟನೆ ಕಾಮಾಕ್ಷಿಪಾಳ್ಯದಲ್ಲಿ ಇಂದು ನಡೆದಿದೆ. ಕಾಮಾಕ್ಷಿಪಾಳ್ಯದ ತಿಮ್ಮೇಗೌಡ ಎಂಬ ವ್ಯಕ್ತಿಗೆ ಸೇರಿದ ಪ್ಲ್ಯಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅನಂತ್ ಬರ್ಮನ್ ಎಂಬ ಯುವಕ ನಾಲ್ಕು ಬೆರಳಗಳನ್ನು...

ಸಕ್ಕರೆ ಕಾರ್ಖಾನೆಯಲ್ಲಿ ಹಾವು ಕಚ್ಚಿ ಕೂಲಿ ಕಾರ್ಮಿಕ ಸಾವು

12 months ago

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಕಬ್ಬು ಅನ್‍ಲೋಡ್ ಮಾಡುತ್ತಿದ್ದಾಗ ಹಾವು ಕಚ್ಚಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಬೊಮ್ಮಯ್ಯ (48) ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ. ಬೊಮ್ಮಯ್ಯ ಕೂಲಿಗೆಂದು ಎತ್ತಿನ ಗಾಡಿಯಲ್ಲಿ ಬೇರೆ ರೈತರ ಕಬ್ಬನ್ನು ಮೈಷುಗರ್ ಕಾರ್ಖಾನೆಗೆ ತಂದಿದ್ದರು....

ಬೆಂಗ್ಳೂರಿನ ಜಿಟಿ ಮಾಲ್‍ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ದುರ್ಮರಣ

2 years ago

ಬೆಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಇಂದು ನಗರದಲ್ಲಿ ನಡೆದಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಈ ದುರಂತ ಸಂಭವಿಸಿದ್ದು, ಮೃತ ದುರ್ದೈವಿಯನ್ನು 40 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ಕೆಪಿ ಅಗ್ರಹಾರದ...

ಸಾಲ ವಾಪಸ್ ಕೊಡದ್ದಕ್ಕೆ ನಾಯಿ ಬಿಟ್ಟು ದಾಳಿ- ಕೊಡಗಿನಲ್ಲೊಬ್ಬ ಭಯಾನಕ ಮಾಲೀಕ

2 years ago

ಮಡಿಕೇರಿ: ಪಡೆದ ಸಾಲದ ಹಣ ಹಿಂದಿರುಗಿಸದ ತನ್ನ ಕಾರ್ಮಿಕನ ವಿರುದ್ಧ ಅಮಾನವೀಯವಾಗಿ ವರ್ತಿಸಿರೋ ಮಾಲೀಕನೋರ್ವ ಕಾರ್ಮಿಕನನ್ನು ಕಟ್ಟಿಹಾಕಿ ನಾಯಿಯಿಂದ ಕಚ್ಚಿಸಿರೋ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆಯ ಹರೀಶ್ ಎಂಬವರ ಮೇಲೆ ಮಾಲೀಕ ಕಿಶನ್ ನಾಯಿ...

ವಿಡಿಯೋ: ಮಂಡ್ಯದಲ್ಲಿ ವಿದ್ಯುತ್ ಹರಿದು ಕಂಬದಲ್ಲೇ ಒದ್ದಾಡಿದ ಕಾರ್ಮಿಕನ ರಕ್ಷಣೆ

2 years ago

ಮಂಡ್ಯ: ವಿದ್ಯುತ್ ಕಂಬ ಸ್ಥಳಾಂತರದ ವೇಳೆ ತಂತಿಯಲ್ಲಿ ವಿದ್ಯುತ್ ಹರಿದು ಒದ್ದಾಡುತ್ತಿದ್ದ ಕಾರ್ಮಿಕನನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಜಿಲ್ಲೆಯ ನಾಗಮಂಗಲ ತಾಲೂಕು ಬೆಳ್ಳೂರಿನಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ. ನಾಗಮಂಗಲ ತಾಲೂಕಿನ ಅರಸೇಗೌಡನಕೊಪ್ಪಲು ಗ್ರಾಮದ ಕುಮಾರ್...

ವೇತನ ಹೆಚ್ಚಳಕ್ಕಾಗಿ ಟೆಕ್ಸ್ಪೋಟರ್ ಕಂಪೆನಿಯ ಸಾವಿರಾರು ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ

2 years ago

ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಟೆಕ್ಸ್ಪೋಟರ್ ಇಂಡಸ್ಟ್ರೀಸ್ ಕಂಪನಿಯ ಸಾವಿರಾರು ಮಹಿಳಾ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕಂಪನಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ರು. ಪ್ರತಿ ವರ್ಷದಂತೆ ಕಾರ್ಮಿಕರ ವೇತನ ಹೆಚ್ಚಿಸಬೇಕು. ಆಡಳಿತ ಮಂಡಳಿ ಕಾರ್ಮಿಕರಿಗೆ ನೀಡಬೇಕಿದ್ದ ಸಾರಿಗೆ ವ್ಯವಸ್ಥೆ ಇನ್ನಿತರ ಮೂಲಭೂತ...