Recent News

4 days ago

ಗವಿಮಠ ಜಾತ್ರೆಯಲ್ಲಿ ಭಕ್ತರಿಗೆ ಮಿರ್ಚಿ ಪ್ರಸಾದ

ಕೊಪ್ಪಳ: ಗವಿನಾಡು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮಿರ್ಚಿ ಹಬ್ಬ ಆರಂಭವಾಗಿದೆ. ಜಾತ್ರೆಯ ಹಿನ್ನೆಲೆ ಮಾಹಾದಾಸೋಹಕ್ಕೆ ಹೆಸರುವಾಸಿಯಾದ ಗವಿ ಮಠದಲ್ಲಿ ಮಿರ್ಚಿ ಮಾಡುವ ಕೆಲಸದಲ್ಲಿ ಬಾಣಸಿಗರು ನಿರತರಾಗಿದ್ದಾರೆ. ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರುವಾಸಿಯಾದ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಜಾತ್ರೆಯ ಮಾಹಾ ದಾಸೋಹ ಮತ್ತೊಂದು ವೈಶಿಷ್ಟ್ಯವಾಗಿದ್ದು, 300ಕ್ಕೂ ಹೆಚ್ಚು ಬಾಣಸಿಗರು ಮಿರ್ಚಿ ಮಾಡ್ತಿದಾರೆ. ದಾಸೋಹಕ್ಕೆ ಬಂದ ಭಕ್ತರಿಗೆ ಕಳೆದ ಐದು ವರ್ಷದಿಂದ ಗವಿ ಮಠ ಮಿರ್ಚಿ ನೀಡ್ತಿದೆ. ಸುಮಾರು ಮೂರು ಲಕ್ಷ ಜನರು ಇಂದು ಗವಿ […]

5 days ago

ಯಾರನ್ನೂ ಓಲೈಸುವ ಅಗತ್ಯವಿಲ್ಲ, ಹಲ್ಲೆ ಮಾಡಿದವ್ರ ಮೇಲೆ ಕಠಿಣ ಕ್ರಮ: ಜೋಶಿ

ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಕರಪತ್ರ ಹಂಚಲು ಮುಂದಾದ ಬಿಜೆಪಿ ನಾಯಕರ ಮೇಲೆ ಯುವಕರ ಗುಂಪು ಹಲ್ಲೆಗೆ ಯತ್ನಿಸಿದ ಘಟನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ರಾಯಚೂರಿಗೆ ತೆರಳುವ ಮಾರ್ಗ ಮಧ್ಯೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ...

ಗವಿಮಠ ಜಾತ್ರೆಯಲ್ಲಿ ರಾಜಕೀಯ ಮೇಲಾಟ

6 days ago

ಕೊಪ್ಪಳ: ಅದು ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರುವಾಸಿಯಾದ ಜಾತ್ರೆಯಾಗಿದ್ದು, ಆ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಜಾತ್ರೆಯ ಮಾಹಾ ದಾಸೋಹ ಮತ್ತೊಂದು ವೈಶಿಷ್ಟ್ಯ. ಆದರೆ ಈ ಬಾರಿ ಆ ಜಾತ್ರೆಗೆ ಪೊಲಿಟೀಕಲ್ ಟಚ್ ಕೊಡಲಾಗುತ್ತಿದೆ. ಕಾಂಗ್ರೆಸ್ ಬಿಜೆಪಿ ನಾಯಕರು...

ರಾಜ್ಯದಲ್ಲಿ ಮೊದಲ ಪ್ರಕರಣ – ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿದ ಕೊಪ್ಪಳದ ಸರ್ಕಾರಿ ವೈದರು

1 week ago

ಕೊಪ್ಪಳ: ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ. ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಈ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಯೋಸಹಜ ಹಾಗೂ ಅತಿಯಾದ ಮೊಣಕಾಲಿನ ಮೇಲಿನ ಒತ್ತಡದಿಂದಾಗಿ ಸವೆಯುವ ಮೊಣಕಾಲು ಚಿಪ್ಪಿನ...

ವಿಜಯ್ ಪ್ರಕಾಶ್ ಸನ್ಮಾನ ಮಾಡೋ ವಿಚಾರಕ್ಕೆ ಸಣ್ಣಪುಟ್ಟ ತಪ್ಪಾಗಿದೆ: ಶಾಸಕ ಮುನವಳ್ಳಿ

1 week ago

ಕೊಪ್ಪಳ: ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಚಾರಕ್ಕೆ ಡಿಸಿ ಜೊತೆಗಿನ ಮುನಿಸಿಗೆ ಶಾಸಕ ಪರಣ್ಣ ಮುನವಳ್ಳಿ ತೆರೆ ಎಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿಗಳು ಆಕಸ್ಮಿಕವಾಗಿ ಅವಸರದಲ್ಲಿ ಗಾಯಕ ವಿಜಯ ಪ್ರಕಾಶ್ ಅವರಿಗೆ ಸನ್ಮಾನ ಮಾಡಿದ್ದಾರೆ....

ಆನೆಗೊಂದಿ ಉತ್ಸವದಲ್ಲಿ ಗಾಯಕ ವಿಜಯ್ ಪ್ರಕಾಶ್‍ಗೆ ಅವಮಾನ

1 week ago

ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಷಯದಲ್ಲಿ ಶಾಸಕ ಮತ್ತು ಜಿಲ್ಲಾಧಿಕಾರಿ ನಡುವೆ ಕಿರಿಕ್ ನಡೆದಿದೆ. ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದಲ್ಲಿ ಶಾಸಕ ಮತ್ತು ಡಿಸಿ ನಡುವೆ ರಂಪಾಟ ನಡೆದಿದ್ದು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಡಿಸಿ...

ಗವಿ ಸಿದ್ದೇಶ್ವರ ಸ್ವಾಮೀಜಿ ತೋಳಲ್ಲಿ ಪುಟ್ಟ ಕಂದಮ್ಮ – ವಿಡಿಯೋ ವೈರಲ್

1 week ago

ಕೊಪ್ಪಳ: ಗವಿ ಮಠದ ಅಭಿನವ ಗವಿ ಸಿದ್ದೇಶ್ವರ ಮಾಹಾಸ್ವಾಮಿಗಳು ಮಗುವೊಂದನ್ನು ಎತ್ತಿಕೊಂಡು ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾರ್ಯಕ್ರಮವೊಂದರಲ್ಲಿ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು ಪುಟ್ಟ ಕಂದಮ್ಮನೊಂದಿಗೆ ಕಾಲ ಕಳೆದಿದ್ದಾರೆ. ಕಂದಮ್ಮನನ್ನು ಎತ್ತಿಕೊಂಡು ಓಡಾಡುತ್ತಾ ಸ್ವಾಮೀಜಿ ಕಾಲ ಕಳೆದಿದ್ದಾರೆ. ಎಲ್ಲವನ್ನೂ ಮರೆತು...

ಶ್ರೀಗವಿಮಠ ಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ ಕಾರ್ಯಕ್ರಮ

1 week ago

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತವಾದ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ಮಹೋತ್ಸವ ರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಾತ್ರೆಯ ಸಾಂಪ್ರದಾಯಿಕ ಆಕರ್ಷಣೆಗಳಲ್ಲಿ ಒಂದಾದ ತೆಪ್ಪೋತ್ಸವ ಕಾರ್ಯಕ್ರಮವೂ ಶ್ರೀ ಗವಿಮಠ ಆವರಣದಲ್ಲಿನ ಕೆರೆಯಲ್ಲಿ ಜರುಗಿತು. ಪೂರ್ವದಲ್ಲಿ ಶ್ರೀ ಗವಿಸಿದ್ಧೇಶ್ವರ ಪಲ್ಲಕ್ಕಿಯೂ ಕೆರೆಯ...