Sunday, 18th August 2019

Recent News

2 weeks ago

ಬರ್ಬರವಾಗಿ ಹತ್ಯೆಗೈದು ದೇವಸ್ಥಾನದ ಬಳಿಯೇ ಶವ ಬಿಸಾಡಿದ್ರು

ಕೋಲಾರ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಾರಿಯಮ್ಮ ದೇವಾಲಯದಲ್ಲಿ ನಡೆದಿದೆ. ಪ್ರದೀಪ್ ರಾಜ್ 28 ಕೊಲೆಯಾದ ದುರ್ದೈವಿ. ಭಾನುವಾರ ಬಡಾವಣೆಯ ಮಾರಿಯಮ್ಮ ದೇವಾಲಯದಲ್ಲಿ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯರೊಂದಿಗೆ ಕುಡಿದು ಪ್ರದೀಪ್ ಗಲಾಟೆ ಮಾಡಿಕೊಂಡಿದ್ದನು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆತನನ್ನು ಕಿಡಿಗೇಡಿಗಳು ಕೊಲೆ ಮಾಡಿ ನಂತರ ಶವವನ್ನು ದೇವಾಲಯದ ಬಳಿ ತಂದು ಬಿಸಾಡಿದ್ದಾರೆ ಎಂದು ಆರೋಪಿಸಿಲಾಗಿದೆ. ಇಂದು ಮುಂಜಾನೆ ಶವವಾಗಿ ಪ್ರದೀಪ್ […]

2 weeks ago

ತುಂಬಿದ ಬಸ್ಸಿನಲ್ಲಿ ಪ್ರೇಮಿಗಳ ಪರಸ್ಪರ ಚುಂಬನ

ಕೋಲಾರ: ತುಂಬಿದ ಬಸ್ಸಿನಲ್ಲಿ ಪ್ರೇಮಿಗಳು ಪರಸ್ಪರ ಚುಂಬನ ನೀಡಿ ಅಸಭ್ಯವಾಗಿ ವರ್ತಿಸಿದ ಘಟನೆ ಶುಕ್ರವಾರ ಕೋಲಾರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರೇಮಿಗಳು ಬಂಗಾರಪೇಟೆ ಮೂಲದವರು ಎಂದು ಹೇಳಲಾಗುತ್ತಿದೆ. ಶುಕ್ರವಾರ ಕೋಲಾರದಿಂದ ಬಂಗಾರಪೇಟೆಗೆ ಸಂಚರಿಸುತ್ತಿದ್ದ ಕೆಎ 07- ಎಫ್-1432 ಸರ್ಕಾರಿ ಸರ್ಕಾರಿ ಬಸ್ಸಿನಲ್ಲಿ ಯುವಕ- ಯುವತಿ ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರಯಾಣಿಕರು ಪ್ರೇಮಿಗಳು ಪರಸ್ಪರ ಚುಂಬನ...

ಸರ್ಕಾರಿ ಹುದ್ದೆಗೆ ಗುಡ್‍ಬೈ, ಪ್ರಕೃತಿ ಮಾತೆಗೆ ಜೈ ಅಂದ್ರು ಕೋಲಾರದ ರಾಜಶೇಖರ್

2 weeks ago

ಕೋಲಾರ: ಕೈ ಕೆಸರಾದರೆ ಬಾಯಿ ಮೊಸರು. ಈ ಗಾದೆಗೆ ಇಂದಿನ ಪಬ್ಲಿಕ್ ಹೀರೋ ಕೋಲಾರದ ರಾಜಶೇಖರ್ ಅವರು ನಿದರ್ಶನವಾಗಿದ್ದಾರೆ. ರ‍್ಯಾಂಕ್ ಪಡೆದ ಎಂಜಿನಿಯರ್ ಪದವೀಧರರಾಗಿದ್ದರೂ, ಆರೋಗ್ಯ ಕೈಕೊಟ್ಟಿತ್ತು. ಆದರೆ, ಭೂಮಾತೆಯನ್ನು ನಂಬಿದ ರಾಜಶೇಖರ್‍ಗೆ ಆರೋಗ್ಯ-ಐಶ್ವರ್ಯ ಎಲ್ಲವೂ ಸಿಕ್ಕಿದೆ. ಹೌದು. ಕೋಲಾರದ ಚಾಮರಹಳ್ಳಿಯ...

ನೋಡುಗರನ್ನು ಆಕರ್ಷಿಸುತ್ತಿರುವ ಹಕ್ಕಿಗಳ ಗೂಡಿನ ವಿನ್ಯಾಸ

3 weeks ago

ಕೋಲಾರ: ಬರದ ನಾಡು, ಚಿನ್ನದ ಬೀಡು ಕೋಲಾರದಲ್ಲಿ ಗೀಜಗ ಗೂಡಿನ ಸುಂದರ ಸೊಬಗಿನ ಅಂದ ನೋಡಲು ಎರಡು ಕಣ್ಣುಗಳು ಸಾಲದಾಗಿವೆ. ಬಣ್ಣ ಬಣ್ಣದ ಗೀಜಗ ಪಕ್ಷಿಗಳು ನೀರಿಲ್ಲದ ಬರಿದಾಗಿರುವ ಕೆರೆಗಳಲ್ಲಿ ಬೆಳೆದಿರುವ ಜಾಲಿ ಮರಗಳಲ್ಲಿ ತಮ್ಮದೆ ಕನಸಿನ ಗೂಡು ಕಟ್ಟಿಕೊಂಡು ಆನಂದವಾಗಿವೆ....

ಟಿಪ್ಪು ಮಹಾನ್ ಸ್ವಾತಂತ್ರ್ಯ ಹೋರಾಟಗಾರ – ಕೋಲಾರದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ

3 weeks ago

ಕೋಲಾರ: ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರದ್ದು ಪಡಿಸಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಟಿಪ್ಪು ಸೆಕ್ಯುಲರ್ ಸೇನೆ ಕಾರ್ಯಕರ್ತರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದರು. ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಮಾನವ ಸರಪಳಿ ರಚಿಸಿ...

ಐಎಂಎ ವಂಚನೆ ಪ್ರಕರಣ – ಸಂಸ್ಥೆಗೆ ಸೇರಿದ ಜಮೀನು ವಶಕ್ಕೆ

3 weeks ago

ಕೋಲಾರ: ಬಹು ಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸದ್ಯ ಸಂಸ್ಥೆಗೆ ಸೇರಿದ ಜಮೀನುಗಳನ್ನು ಕೋಲಾರ ಜಿಲ್ಲಾಡಳಿತ ವಶಕ್ಕೆ ನೀಡಲಾಗಿದೆ. ಜಿಲ್ಲೆಯ ಮಾಲೂರು ತಾಲೂಕಿನ ಪುರ ಮತ್ತು ಬೈರತನಹಳ್ಳಿ ಗ್ರಾಮದಲ್ಲಿ ಐಎಂಐ ಜಮೀನುಗಳನ್ನು ವಶಕ್ಕೆ ಪಡೆಯಲಾಗಿದೆ. ಪುರ ಗ್ರಾಮದ ಸರ್ವೆ...

ವಿದ್ಯುತ್ ಕಾಮಗಾರಿ ವೇಳೆ ಕರೆಂಟ್ ಶಾಕ್- ಇಬ್ಬರು ಕಾರ್ಮಿಕರು ಸಾವು

3 weeks ago

ಕೋಲಾರ: ವಿದ್ಯುತ್ ಕಾಮಗಾರಿ ವೇಳೆ ಕರೆಂಟ್ ಶಾಕ್ ತಗಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಿರುಪಾಕ್ಷಿ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಗುತ್ತಿಗೆ ಕಾರ್ಮಿಕರಾದ ಆಂಧ್ರ ಮೂಲದ ರಾಜಬಾಬು (35) ಮತ್ತು ಚಿನ್ನಿಬಾಬು (32) ಸಾವನ್ನಪ್ಪಿದ್ದು, ನಾಲ್ವರು...

ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

3 weeks ago

-ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು ಕೋಲಾರ: ಸಮಾಜದಲ್ಲಿ ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ ಎಂದು ಜಿಲ್ಲೆಯಲ್ಲಿ ನಡೆದ ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕ್ರಮದಲ್ಲಿ ನಟ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಸೇವಾ ಸಮಿತಿ 2ನೇ ವರ್ಷದ ಸಂಸ್ಥಾಪನಾ ದಿನಾಚರಣೆ...