Monday, 18th November 2019

Recent News

14 hours ago

ಹಾಲಾಯ್ತು, ಈಗ ಆಲ್ಕೋಹಾಲ್‍ನಲ್ಲೂ ಕಲಬೆರಕೆ – ಅರ್ಧ ಬಾಟಲ್ ಖಾಲಿ ಮಾಡ್ದಾಗ ಗೊತ್ತಾಯ್ತು ಸತ್ಯ

ಕೋಲಾರ: ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನ ಬೈರಸಂದ್ರ ಬಳಿಯ ಶ್ರೀ ಲಕ್ಷ್ಮೀ ವೈನ್ಸ್‍ನಲ್ಲಿ ಖರೀದಿಸಿದ ಬಿಯರ್ ನಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ. ಚಿಲ್ಡ್ ಬಿಯರ್ ನಲ್ಲಿ ಕಲಬೆರಕೆಯಾಗಿದ್ದು, ಅರ್ಧ ಬಾಟಲಿ ಕುಡಿದ ಬಳಿಕ ಇದು ಗ್ರಾಹಕನ ಅರಿವಿಗೆ ಬಂದಿದೆ. ಈ ಕುರಿತು ಬಾರ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಕ್ಸ್ ಮಾಡುವ ವೇಳೆ ಏನೋ ಬಿದ್ದಿದೆ ಎಂದು […]

1 week ago

ಅಕ್ರಮವಾಗಿ ವಾಸವಿದ್ದು ವೇಶ್ಯಾವಾಟಿಕೆ ನಡೆಸಿದ್ದ ಬಾಂಗ್ಲಾ ಮಹಿಳೆಯರು ಅರೆಸ್ಟ್

ಕೋಲಾರ: ಅಕ್ರಮವಾಗಿ ವಾಸವಾಗಿದಿದ್ದು ಅಷ್ಟೇ ಅಲ್ಲದೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಬಾಂಗ್ಲಾದೇಶದ ವಲಸಿಗ ಮಹಿಳೆಯರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಶಿಲ್ಪಿ ಅಕ್ತಾರ್ ಪಾಕಿಯಾ ಹಾಗೂ ರುಬೀಯಾ ಬಂಧಿತ ಬಾಂಗ್ಲಾ ಮೂಲದ ಮಹಿಳೆಯರು. ಈ ಇಬ್ಬರು ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯಲ್ಲಿ ಅಕ್ರಮವಾಗಿ ವಾಸವಿದ್ದು, ಅಲ್ಲಿಯೇ ವೇಶ್ಯಾವಾಟಿಕೆ ನಡೆಸಿದ್ದರು. ಬಂಗಾರಪೇಟೆಯ ಕೆಲ ವ್ಯಕ್ತಿಗಳು ಶಿಲ್ಪಿ ಹಾಗೂ ರುಬೀಯಾಳನ್ನು ಕರೆತಂದಿದ್ದರು....

ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

2 weeks ago

ಕೋಲಾರ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಿಗೆ ಬಿಜೆಪಿ ದೇಶದ್ರೋಹ ಪಟ್ಟ ಕಟ್ಟಿದೆ. ಅದು ಬಿಜೆಪಿಯ ನಂಬಿಕೆ ಮತ್ತು ಸಿದ್ದಾಂತ. ಅವರ ಕೈಯಲ್ಲಿ ಅಧಿಕಾರಿವಿದೆ ಹಾಗಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ್ ಕುಮಾರ್ ಆರೋಪಿಸಿದ್ದಾರೆ. ಕೋಲಾರದ ಶ್ರೀನಿವಾಸಪುರದ...

ರಮೇಶ್ ಕುಮಾರ್ ಕಾಲಿಗೆ ನಮಸ್ಕರಿಸಿದ ಪವನ್ ಕಲ್ಯಾಣ್

2 weeks ago

ಕೋಲಾರ: ಇಂದು ಕೋಲಾರ ಜಿಲ್ಲೆಗೆ ಬಂದಿದ್ದ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಗೌನಿಪಲ್ಲಿ ನಡೆದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ...

ಕೋಲಾರಕ್ಕೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿ

2 weeks ago

ಕೋಲಾರ: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೋಲಾರ ಜಿಲ್ಲೆಗೆ ಆಗಮಿಸಿದ್ದಾರೆ. ಪವನ್ ಕಲ್ಯಾಣ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಗೌನಿಪಲ್ಲಿ ಗ್ರಾಮಕ್ಕೆ ಬಂದಿದ್ದಾರೆ. ಪವನ್ ಅವರು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ವಿಮಾನ ಗೋಪುರ ಮಹಾಕುಂಬಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ...

ಸರ್ಕಾರಿ ಕಚೇರಿಯಲ್ಲಿ ಖಾಸಗಿ ದರ್ಬಾರ್-ಲಂಚ ಕೊಟ್ರೆ ಮಾತ್ರ ಆಗುತ್ತೆ ನಿಮ್ಮ ಕೆಲಸ

2 weeks ago

ಕೋಲಾರ: ಜಿಲ್ಲೆಯ ಮಾಲೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಲಂಚ ನೀಡಿದರೆ ಮಾತ್ರ ನಿಮ್ಮ ಕೆಲಸಗಳು ನಡೆಯುತ್ತವೆ ಎಂಬ ಆರೋಪಗಳು ಕೇಳಿ ಬಂದಿವೆ. ಇಲ್ಲಿನ ಸರ್ಕಾರಿ ಕಚೇರಿಯೊಳಗೆ ಖಾಸಗಿ ವ್ಯಕ್ತಿಗಳು ಪತ್ಯೇಕ ಆಸನದ ವ್ಯವಸ್ಥೆ ಮಾಡಿಕೊಂಡು ದರ್ಬಾರ್ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಚೇರಿಯಿಂದ...

ಸ್ನೇಹಿತರು ಕರೆದ್ರು ಅಂತ ರಾತ್ರಿ ಮನೆಯಿಂದ ಹೋದ ವ್ಯಕ್ತಿ ಶವವಾಗಿ ಪತ್ತೆ

3 weeks ago

ಕೋಲಾರ: ರಾತ್ರಿ ಸ್ನೇಹಿತರು ಕರೆದರು ಅಂತ ಮನೆಯಿಂದ ಹೊರ ಹೋದ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮುದುವಾಡಿ ಗ್ರಾಮದ ಪ್ರಕಾಶ್ (29) ಅನುಮಾನಸ್ಪದವಾಗಿ ಮೃತಪಟ್ಟ ವ್ಯಕ್ತಿ. ಮುದುವಾಡಿ ಹೊಸಹಳ್ಳಿ ಗ್ರಾಮದ ಬಳಿ ಪ್ರಕಾಶ್ ಶವ ಪತ್ತೆಯಾಗಿದೆ....

ಜಮೀನು ಅತಿಕ್ರಮಿಸಿ ರಸ್ತೆ ನಿರ್ಮಾಣ- ಬಿಜೆಪಿ ಸಂಸದ ಮುನಿಸ್ವಾಮಿಯಿಂದ ದೌರ್ಜನ್ಯ

3 weeks ago

ಕೋಲಾರ: ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ತಮ್ಮ ಜಮೀನಿಗೆ ಸಂಸದರು ಅಕ್ರಮವಾಗಿ ಪ್ರವೇಶಿಸಿ ರಸ್ತೆ ನಿರ್ಮಿಸಿದ ಆರೋಪದ ಮೇಲೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ರೈತ ರಾಜಗೋಪಾಲ ಗೌಡರು ದೂರು ನೀಡಿದ್ದಾರೆ. ಜಗದೇನಹಳ್ಳಿಯ ಜಮೀನಿಗೆ...