Saturday, 25th May 2019

4 weeks ago

ಬೆಂಗಳ್ಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ

ಬೆಂಗಳೂರು: ನಗರದ ಹಲವೆಡೆ ಹಾಗೂ ದಕ್ಷಿಣದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗಿದ್ದು, ಕೊಡಗಿನ ಸುಂಟಿಕೊಪ್ಪ, ಮಡಿಕೇರಿ ಮತ್ತು ಕಡಗದಾಳು ಸುತ್ತಮುತ್ತ ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು ಸಿಡಲು ಸಹಿತ ಆಲಿಕಲ್ಲು ಮಳೆಯಾಗಿದೆ. ಹಿಂದೂ ಮಹಾಸಾಗರದ ಪೂರ್ವಭಾಗ ಮತ್ತು ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಮಳೆಯಾಗಿದ್ದು, ಮುಂದಿನ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇರುವುದಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರಲು ಕೊಡಗು ಜಿಲ್ಲಾಡಳಿತ ಮನವಿ ಮಾಡಿದೆ. ಇತ್ತ ಮಂಡ್ಯದ ಜಿಲ್ಲೆಯ […]

1 month ago

ಗ್ರಾಮಸ್ಥರಲ್ಲಿ ಭಯ ಮೂಡಿಸಿದ ಕಾಡಾನೆಗಳ ಹಿಂಡು

ಮಡಿಕೇರಿ: ಕಾಡಾನೆಯೊಂದು ಮೊನ್ನೆಯಷ್ಟೇ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿತ್ತು. ಈ ಬೆನ್ನಲ್ಲೇ ಕಾಡಾನೆಗಳ ಹಿಂಡೊಂದು ಸೋಮವಾರಪೇಟೆ ತಾಲೂಕಿನಲ್ಲಿ ಇಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತೂರು ಗ್ರಾಮದ ಕಾಫಿ ತೋಟಗಳಿಗೆ ಕಾಡಾನೆಗಳ ಹಿಂಡೊಂದು ನುಗ್ಗಿ ದಾಂಧಲೆ ನಡೆಸಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮಸ್ಥರಿಗೆ ಆನೆಗಳು ಕಾಣಿಸಿದ್ದವು. ಇದರಿಂದಾಗಿ...

ಕೊಡಗು ಸಂತ್ರಸ್ತರಿಗೆ ಪಿಎಫ್‍ಐ ವತಿಯಿಂದ 18 ಲಕ್ಷ ಧನಸಹಾಯ

3 months ago

ಮಡಿಕೇರಿ: ಕಳೆದ ಆಗಸ್ಟ್ ನಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ನೆರವು ನೀಡಲಾಯಿತು. 180 ಕುಟುಂಬಗಳಿಗೆ 18 ಲಕ್ಷ ರೂ. ಧನಸಹಾಯವನ್ನು ಸಂಘಟನೆಯಿಂದ ವಿತರಿಸಲಾಯಿತು. ಮುಖ್ಯವಾಗಿ ಮಳೆಯಿಂದ ಹಾನಿಯಾದ ಮನೆಗಳ ರಿಪೇರಿಗೆ...

ನೀರು ಕೇಳಿದ ಕೆಲಸದವರಿಗೆ ಕಾಫಿ ಮಾಡಿ ಕೊಟ್ಟ ಮಹಾತಾಯಿಯನ್ನೇ ಕೊಲೆಗೈದ್ರು!

3 months ago

ಮಡಿಕೇರಿ: ತೋಟದ ಒಂಟಿ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ವೃದ್ಧ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಮಡಿಕೇರಿಯ ಕುಂಬಳದಾಳು ಗ್ರಾಮದಲ್ಲಿ ನಡೆದಿದೆ. 74 ವರ್ಷದ ರಾಧಾ ಕೊಲೆಯಾದ ವೃದ್ಧೆಯಾಗಿದ್ದು, ಫೆ.21 ರಂದು ಮನೆಯಲ್ಲಿಯೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಮನೆಯಲ್ಲಿದ್ದ ಅಮ್ಮ...

ಮೂರು ದಶಕಗಳ ಹೋರಾಟಕ್ಕೆ ಮಣಿಯದ ಸರ್ಕಾರ- ಸ್ಥಳೀಯರಿಂದ ಕುಶಾಲನಗರ ಬಂದ್

3 months ago

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡಬೇಕೆಂದು ಇಲ್ಲಿನ ಜನರು ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ನಮ್ಮ ಊರು ತಾಲೂಕು ಕೇಂದ್ರವಾಗುತ್ತೆ ಎಂದು ಕಂಡಿದ್ದ ಕನಸು ನನಸು...

ಕೊಡಗು ಸಂತ್ರಸ್ತರಿಗೆ 999 ರೂ. ಪರಿಹಾರ – ಸರ್ಕಾರದ ವಿರುದ್ಧ ರೈತರ ಆಕ್ರೋಶ

4 months ago

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಅವಾಂತರದಿಂದ ಸಾಕಷ್ಟು ನಷ್ಟವಾಗಿದ್ದು, ಎಲ್ಲವನ್ನೂ ಮರೆತಿರೋ ರಾಜ್ಯ ಸರ್ಕಾರ ಕೇಂದ್ರ ಕೊಟ್ಟ ಹಣವನ್ನಷ್ಟೇ ಪರಿಹಾರ ಘೋಷಿಸಿ ಸುಮ್ಮನಾಗಿದ್ದಕ್ಕೆ ಟೀಕೆ ಕೇಳಿ ಬಂದಿದೆ. ರೈತರು ಎಕರೆಗಟ್ಟಲೆ ಜಾಗದಲ್ಲಿ ಬೆಳೆದಿದ್ದ ಭತ್ತ, ಕಾಫಿ ಸೇರಿ ಇತರೆ...

ಹೆದರಬೇಡಿ, ನಿಮ್ಮ ಜೊತೆ ನಾವಿದ್ದೀವಿ- ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳಿಗೆ ಸುಧಾಮೂರ್ತಿ ಭೇಟಿ

4 months ago

ಮಡಿಕೇರಿ: ಕೊಚ್ಚಿ ಹೋದ ಕೊಡಗನ್ನ ಮತ್ತೆ ಕಟ್ಟೋ ಪ್ರಯತ್ನ ಎಲ್ಲರಿಂದಲೂ ನಿರಂತರವಾಗಿ ಆಗ್ತಾನೇ ಇದೆ. ಸರ್ಕಾರ ಒಂದ್ಕಡೆ ಪ್ರಯತ್ನ ಮಾಡ್ತಿದ್ರೆ, ಇನ್ನೊಂದೆಡೆ ಸಂಘ ಸಂಸ್ಥೆಗಳು, ಖಾಸಗಿಯವರು ಕೂಡ ಕೈ ಜೋಡಿಸುತ್ತಲೇ ಇದ್ದಾರೆ. ಸದ್ಯ ಸಂತ್ರಸ್ತರಿಗೆ ಮನೆಗಳನ್ನ ಕಟ್ಟೋ ಕೆಲಸ ಭರದಿಂದ ಸಾಗ್ತಿದ್ದು,...

ಹಿಂದೂ ಹುಡುಗಿಯ ಮೈ ಮುಟ್ಟಿದ ಕೈ ಇರಬಾರದು: ಅನಂತ್ ಕುಮಾರ್ ಹೆಗ್ಡೆ

4 months ago

ಮಡಿಕೇರಿ: ಜಾತಿ ವಿಷಬೀಜ ಸಮಾಜದಲ್ಲಿ ಸೇರಿಕೊಂಡ ಬಳಿಕ ನಾವು ನಿರ್ಮಾಣ ಮಾಡಿದ್ದನ್ನು ನಮ್ಮದು ಎಂದು ಹೇಳಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಹಿಂದೂಗಳು ಒಗ್ಗಟ್ಟಾಗಿ ನಿಲ್ಲದೇ ಇದ್ದರೆ ಏನಾಗುತ್ತದೆ ಎಂಬುವುದನ್ನು ಇತಿಹಾಸ ನೋಡಿದರೆ ನಮಗೆ ಅರಿವಾಗುತ್ತದೆ. ಆದ್ದರಿಂದ ಜಾತಿ ಪ್ರಶ್ನೆ ಇಲ್ಲದೆ ಹಿಂದೂ...