Tag: kiccha sudeep

  • ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ

    ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ಮನೆ(Bigg Boss House) ಇದೀಗ ಹೊತ್ತಿ ಉರಿಯುತ್ತಿದೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ಟಾಸ್ಕ್‌ವೊಂದರಲ್ಲಿ ರೂಪೇಶ್ ಶೆಟ್ಟಿ ಅವರ ಶರ್ಟ್‌ನ ಪ್ರಶಾಂತ್‌ ಸಂಬರ್ಗಿ ಕಿತ್ತೆಸಿದಿದ್ದಾರೆ. ಸಂಬರ್ಗಿ ವೈಲೆಂಟ್ ಆಟಕ್ಕೆ ಮನೆಮಂದಿ ಫುಲ್ ಗರಂ ಆಗಿದ್ದಾರೆ.

    PRASHANTH SAMBARGI

    ದಿನದಿಂದ ದಿನಕ್ಕೆ ಮನೆಯ ವಾತಾವರಣ ಹದಗೆಡುತ್ತಿದೆ. ಮಾಸ್ಟರ್ ಮೈಂಡ್ ಸಂಬರ್ಗಿಯ ಆಟ ಲಿಮಿಟ್ ಮೀರಿ ಅಡ್ಡ ದಾರಿಹಿಡಿಯುತ್ತಿದೆ. ಮನೆಮಂದಿಗೆ ಗೊಂಬೆ ತಯಾರಿಸುವ ಟಾಸ್ಕ್ ನೀಡಲಾಗಿತ್ತು. ಗೊಂಬೆ ತಯಾರಿಸಲು ಕಚ್ಚಾ ವಸ್ತುಗಳು ಬರುತ್ತವೆ. ಅದನ್ನು ಪಡೆಯಲು ಮನೆ ಮಂದಿ ಮಧ್ಯೆ ಜಗಳ ಏರ್ಪಟ್ಟಿದೆ. ಪ್ರಶಾಂತ್ ಸಂಬರ್ಗಿ(Prashnath Sambargi) ಎಲ್ಲರಿಂದಲೂ ವಸ್ತುಗಳನ್ನು ಕಿತ್ತುಕೊಂಡರು ಎನ್ನುವ ಆರೋಪವನ್ನು ಮಾಡಿದರು. ಇದಕ್ಕೆ ಅರುಣ್ ಸಾಗರ್(Arun Sagar) ಕೂಡ ಸಂಬರ್ಗಿ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ:‘ಕಾಂತಾರ’ ಸಿನಿಮಾಗೆ ಕೇರಳದಲ್ಲೂ ಹರಿದು ಬಂತು ಭಾರೀ ಕಲೆಕ್ಷನ್

    ROOPESH SHETTY 2

    ಪ್ರಶಾಂತ್ ಸಂಬರ್ಗಿ ಅವರೇ ನೀವು ನಡೆದುಕೊಂಡ ರೀತಿ ಸರಿ ಇಲ್ಲ. ನಾನು ಈಗ ಸಂಬರ್ಗಿ ಆಡಿದ ರೀತಿಯೇ ಆಡುತ್ತೇನೆ ಎಂದು ಚಾಲೆಂಜ್ ಮಾಡಿದರು. ಅದೇ ರೀತಿ ನಡೆದುಕೊಂಡರು. ಅವರು ಕೂಡ ವೈಲೆಂಟ್ ಆಗಿ ಆಟ ಆಡಿದರು. ಬಳಿಕ ರೂಪೇಶ್ ಶೆಟ್ಟಿ ಅವರಿಂದ ಪ್ರಶಾಂತ್ ಸಂಬರ್ಗಿ ವಸ್ತುಗಳನ್ನು ಕದಿಯಲು ಪ್ರಯತ್ನಿಸಿದರು. ಈ ವೇಳೆ ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ರೂಪೇಶ್ ಶೆಟ್ಟಿಯ(Roopesh Shetty) ಅಂಗಿಯನ್ನು ಹಿಡಿದು ಪ್ರಶಾಂತ್ ಸಂಬರ್ಗಿ ಎಳೆದಾಡಿದರು. ರೂಪೇಶ್ ಶೆಟ್ಟಿಯ ಅಂಗಿ ಕಳಚಿತು. ಮಾತಿನ ದಾಟಿ ಬದಲಾಗಿ ಕೈ ಕೈ ಮಿಲಾಯಿಸಿದ್ದಾರೆ.

    bigg boss

    ಬಳಿಕ ನಾನೇನೂ ಮಾಡೇ ಇಲ್ಲಾ ಎಂದು ವಾದ ಮಾಡಿದ್ದಾರೆ. ಪ್ರಶಾಂತ್ ಸಂಬರ್ಗಿ ಆಟಕ್ಕೆ ಮನೆ ಮಂದಿ ಕೂಡ ರಾಂಗ್ ಆಗಿದ್ದಾರೆ. ತನ್ನ ತಂಡವನ್ನ ಗೆಲ್ಲಿಸುವ ನಿಟ್ಟಿನಲ್ಲಿ ಸಂಬರ್ಗಿ ಇಟ್ಟ ಹೆಜ್ಜೆ ಹಲವರ ಮನಸ್ತಾಪಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್

    ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್

    ದೊಡ್ಮನೆಯ ವಾತಾವರಣ ಬದಲಾಗಿದೆ. ದಿನದಿಂದ ದಿನಕ್ಕೆ ಮನೆಯವರ ಜಗಳ, ಹಾರಾಟ, ಹೋರಾಟ ಎಲ್ಲವೂ ಜೋರಾಗುತ್ತಿದೆ. ಬಿಗ್ ಬಾಸ್ ಮನೆ ಇದೀಗ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಗೊಂಬೆಗಳನ್ನ ಮಾಡುವ ಟಾಸ್ಕ್‌ನಲ್ಲಿ ರೂಪೇಶ್ ರಾಜಣ್ಣ ವರ್ತನೆಯಿಂದ ತನ್ನ ತಂಡಕ್ಕೆ ಕುತ್ತು ತಂದಿದ್ದಾರೆ. ರಾಜಣ್ಣನ ನಡೆಯಿಂದ ಮನೆ ಮಂದಿ ಕೆಂಡಾಮಂಡಲ ಆಗಿದ್ದಾರೆ.

    Bigg Boss 1 7

    ದೊಡ್ಮನೆ ಆಟ ಸಾಕಷ್ಟು ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಬಿಗ್ ಬಾಸ್(Bigg Boss House) ಭಿನ್ನ ಟಾಸ್ಕ್ ಕೊಡುವುದರಲ್ಲಿ ಯಾವಾಗಲೂ ಮುಂದು. ಈ ಬಾರಿ ಕೆಂಪು ಮತ್ತು ಹಸಿರು ಗಂಪುಗಳನ್ನಾಗಿ ಮಾಡಿ, ಟಾಯ್ ಫ್ಯಾಕ್ಟರಿ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ರೂಪೇಶ್ ರಾಜಣ್ಣ(Roopesh Rajanna) ಮಾಡಿದ್ದ ಒಂದು ತಪ್ಪಿನಿಂದ ತನ್ನ ತಂಡಕ್ಕೆ ಹಿನ್ನಡೆಯುಂಟು ಮಾಡಿದ್ದಾರೆ. ಈ ವಿಷ್ಯ ಮನೆಯ ಕಲಹಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡುವತ್ತ `ಕಾಂತಾರ’

    bigg boss

    ಈ ಟಾಸ್ಕ್ ಆಡುವಾಗ ಬಿಗ್ ಬಾಸ್ (Bigg Boss) ಕೊಟ್ಟಿರುವ ನಿಯಮಗಳನ್ನ ಪಾಲಿಸುವುದಕ್ಕಿಂತ ಹೆಚ್ಚಾಗಿ ತಮ್ಮ ತಮ್ಮದೇ ನಿಯಮಗಳನ್ನ ಸ್ಪರ್ಧಿಗಳು ರೂಪಿಸಿಕೊಂಡಿದ್ದಾರೆ. ಗೊಂಬೆ ತಯಾರಿಸುವ ಟಾಸ್ಕ್‌ಲ್ಲಿ ತಮ್ಮ ತಮ್ಮ ಗೊಂಬೆಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ(Responsibility) ಆಯಾ ತಂಡಗಳದ್ದು ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಷ್ಟಕ್ಕೆ ಕಿತ್ತುಕೊಳ್ಳೋದು ಬೇಡ, ವೈಲೆನ್ಸ್ ಬೇಡ, ಯಾರೂ ಇಲ್ಲದಾಗ ಕದಿಯಬಹುದು ಅಂತೆಲ್ಲಾ ಸ್ಪರ್ಧಿಗಳು ತಮಗೆ ತಾವೇ ರೂಲ್ಸ್ ಹಾಕಿಕೊಂಡರು. ಆದರೆ ಅದನ್ನ ಯಾರೂ ಫಾಲೋ ಮಾಡುತ್ತಿರಲಿಲ್ಲ. ಬಳಿಕ, ಯಾರು ಯಾವಾಗ ಹೇಗೆ ಬೇಕಾದರೂ ಗೊಂಬೆಗಳನ್ನ, ಸಾಮಾಗ್ರಿಗಳನ್ನ ಎತ್ತಿಕೊಳ್ಳಬಹುದು ಎಂಬ ನಿಯಮವನ್ನ ಸ್ಪರ್ಧಿಗಳೇ ಜಾರಿಗೊಳಿಸಿದರು. ಈ ನಿಯಮದ ಪ್ರಕಾರ ಎದುರಾಳಿ ಹಸಿರು ಬಣ್ಣದ ತಂಡದಲ್ಲಿದ್ದ ರಿಬ್ಬನ್‌ಗೆ ರೂಪೇಶ್ ರಾಜಣ್ಣ ಕೈಹಾಕಿದರು. ಆ ವೇಳೆ ಬಿಗ್ ಬಾಸ್ ಮನೆಯಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ಇದನ್ನೂ ಓದಿ:ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ `ಕಾಂತಾರ’ ನಟಿ ಸಪ್ತಮಿ ಭೇಟಿ

    prashanth sambargi 1 2

    ರಿಬ್ಬನ್‌ಗೆ ರೂಪೇಶ್ ರಾಜಣ್ಣ ಕೈಹಾಕಿದಾಗ, ಕೆಂಪು ಬಣ್ಣದ ತಂಡದ ಬಳಿಯಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ಪ್ರಶಾಂತ್ ಸಂಬರಗಿ ಅಗ್ರೆಸ್ಸಿವ್ ಆಗಿ ಕೆಂಪು ತಂಡದ ವಸ್ತುಗಳನ್ನೆಲ್ಲಾ ಎಸೆದರು. ತಯಾರಾಗಿದ್ದ ಮೂರು ಗೊಂಬೆಗಳನ್ನು ಹಸಿರು ತಂಡ ಎತ್ತಿಕೊಂಡುಬಿಟ್ಟರು. ಇದರಿಂದ ಕೆಂಪು ಬಣ್ಣದ ತಂಡದ ಸದಸ್ಯರು ರೂಪೇಶ್ ರಾಜಣ್ಣ ವಿರುದ್ಧ ಸಿಡಿಮಿಡಿಗೊಂಡರು. ಈ ವೇಳೆ ಎರಡು ತಂಡದ ನಡುವೆ ಮಾತಿನ ಚಕಮಕಿ ಜೋರಾಗಿದೆ. ಬಳಿಕ 2 ತಂಡ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಬಿಗ್ ಬಾಸ್ ಶಿಕ್ಷೆ ಕೊಟ್ಟಿದ್ದಾರೆ. ಎರಡು ತಂಡದಿಂದ ಒಬ್ಬೊಬ್ಬ ಸ್ಪರ್ಧಿಯನ್ನು ತೆಗೆದು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ಅಡಿಗ ಸ್ಮಾರ್ಟ್ ಗೇಮ್‌ಗೆ, ಸ್ಪರ್ಧಿಗಳಿಗೆ ಶುರುವಾಯ್ತು ಟೆನ್ಷನ್

    ರಾಕೇಶ್ ಅಡಿಗ ಸ್ಮಾರ್ಟ್ ಗೇಮ್‌ಗೆ, ಸ್ಪರ್ಧಿಗಳಿಗೆ ಶುರುವಾಯ್ತು ಟೆನ್ಷನ್

    ಬಿಗ್ ಬಾಸ್ ಮನೆಯ(Bigg Boss Kannada) ಸ್ಪರ್ಧಿಗಳಲ್ಲಿ ಅಜಾತಶತ್ರು ಅಂದ್ರೆ ರಾಕೇಶ್ ಅಡಿಗ. ಯಾರ ಕೆಂಗಣ್ಣಿಗೂ ಗುರಿಯಾಗದೇ ಕೂಲ್ ಆಗಿ ತಮ್ಮದೇ ಶೈಲಿಯಲ್ಲಿ ಆಡುತ್ತಿದ್ದಾರೆ. ದೊಡ್ಮನೆ ಆಟ 50 ದಿನ ಪೂರೈಸಿರುವ ಬೆನ್ನಲ್ಲೇ ರಾಕೇಶ್ ಅಡಿಗ ಅವರ ಆಟ ಈಗ ಮನೆಯವರ ಕಣ್ಣಿಗೆ ಹೈಲೈಟ್ ಆಗುತ್ತಿದೆ. ಇವರೂ ಹೀಗೆ ಆಡಿದರೆ ರಾಕೇಶ್(Rakesh Adiga) ಅವರೇ ಬಿಗ್ ಬಾಸ್ ವಿನ್ನರ್ ಪಟ್ಟ ತೆಗೆದುಕೊಳ್ಳುತ್ತಾರೆ ಎಂಬ ಟೆನ್ಷನ್ ಮನೆಮಂದಿಗೆ ಶುರುವಾಗಿದೆ.

    rakesh adiga 5

    ದೊಡ್ಮನೆಯ ಆಟ 50 ದಿನ ಸಾಗಿದೆ. ಅರ್ಧ ದಾರಿ ಸಾಗಿರುವ ಬಿಗ್ ಬಾಸ್‌ನಲ್ಲಿ(Bigg Boss) ಒಂದು ಸರ್‌ಪ್ರೈಸ್ ಇತ್ತು. ಆರ್ಯವರ್ಧನ್(Aryavardhan) ಅವರನ್ನು ಮೊದಲು ಎಲಿಮಿನೇಟ್ ಮಾಡಲಾಗಿತ್ತು. ಆದರೆ, ಈ ವಾರ ಎಲಿಮಿನೇಷನ್ ಮಾಡಲ್ಲ ಎಂದು ಬಿಗ್ ಬಾಸ್ ನಂತರ ಘೋಷಿಸಿದರು. ಈ ವೇಳೆ ಎಲ್ಲಾ ಸ್ಪರ್ಧಿಗಳು ಖುಷಿಪಟ್ಟರು. ಮತ್ತೊಂದೆಡೆ ಈ ಫೇಕ್ ಎಲಿಮಿನೇಷನ್‌ನಿಂದ ಎಲ್ಲಾ ಸ್ಪರ್ಧಿಗಳಿಗೆ ಶಾಕ್ ಕೂಡ ಆಗಿತ್ತು.

    rakesh adiga 1 1

    ಪ್ರತಿ ವೀಕೆಂಡ್‌ನಲ್ಲಿ ಕಿಚ್ಚ ಒಂದು ಸ್ಪರ್ಧಿಗೆ ಚಪ್ಪಾಳೆ ನೀಡುತ್ತಾರೆ. ಈ ಚಪ್ಪಾಳೆ ತೆಗೆದುಕೊಳ್ಳೋಕೆ ಸ್ಪರ್ಧಿಗಳು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಕಳೆದ ವಾರವೂ ಸುದೀಪ್ ಚಪ್ಪಾಳೆ ನೀಡಿದ್ದಾರೆ. ಒಂದು ವಾರದ ಪರ್ಫಾರ್ಮೆನ್ಸ್ ನೋಡಿ ಅಲ್ಲ. ಬದಲಿಗೆ ಕಳೆದ 50 ದಿನಗಳನ್ನು ಗಮನಿಸಿ ಸುದೀಪ್ (Kiccha Sudeep) ಚಪ್ಪಾಳೆ ನೀಡಿದ್ದಾರೆ. ಈ ಚಪ್ಪಾಳೆ ಸಿಕ್ಕಿದ್ದು ರಾಕೇಶ್ ಪಾಲಿಗೆ. ಇದನ್ನೂ ಓದಿ: ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

    ಬಿಗ್ ಬಾಸ್ ಒಟಿಟಿಯಿಂದ ರಾಕೇಶ್ ಅಡಿಗ ಗಮನ ಸೆಳೆದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ರಾಕಿ ಹೈಲೈಟ್ ಆಗುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಅವರು ಒಂದೇ ರೀತಿಯ ಪರ್ಫಾರ್ಮೆನ್ಸ್ ನೀಡುತ್ತಾ ಬಂದಿದ್ದಾರೆ. ಅವರು ಜಗಳ ಮಾಡಿಕೊಳ್ಳೋದೇ, ಮನೆ ಮಂದಿಯ ನಂಬಿಕೆಗೆ ರಾಕೇಶ್ ಪಾತ್ರರಾಗಿದ್ದಾರೆ. ಟಾಸ್ಕ್‌ಗಳ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಸದ್ಯ ರಾಕೇಶ್ ಆಟ ನೋಡಿ ಮನೆಯವರಿಗೆ ಹೆಚ್ಚು ಟೆನ್ಷನ್ ಆಗಿದೆ. ರೂಪೇಶ್ ಶೆಟ್ಟಿ ಸೇರಿದಂತೆ ಮೊದಲಾದವರು ಈ ಬಗ್ಗೆ ಟೆನ್ಷನ್ ಮಾಡಿಕೊಂಡಿದ್ದಾರೆ. ರಾಕೇಶ್ ಅವರನ್ನು ಸೆಡ್ಡು ಹೊಡೆಯದೇ ಇದ್ದರೆ ಸಂಕಷ್ಟ ಪಕ್ಕಾ ಎಂಬುದು ಅವರಿಗೆ ಗೊತ್ತಾಗಿದೆ. ಹೀಗೆಯೇ ಮುಂದುವರಿದರೆ ಅವರು ಬಿಗ್ ಬಾಸ್ ವಿನ್ನರ್ ಆಗಬಹುದು ಎಂದು ಲೆಕ್ಕಚಾರ ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕಿಚ್ಚನಿಗೆ ಜೋಡಿಯಾಗಲಿದ್ದಾರೆ ರಮ್ಯಾ

    ಮತ್ತೆ ಕಿಚ್ಚನಿಗೆ ಜೋಡಿಯಾಗಲಿದ್ದಾರೆ ರಮ್ಯಾ

    ಸ್ಯಾಂಡಲ್‌ವುಡ್(Sandalwood) ಕ್ವೀನ್ ರಮ್ಯಾ ಮತ್ತೆ ಚಂದನವನಕ್ಕೆ ಕಮ್‌ಬ್ಯಾಕ್ ಆಗಿದ್ದಾರೆ. ಪದ್ಮಾವತಿಯ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್‌ಗೆ(Kiccha Sudeep) ಮತ್ತೆ ನಾಯಕಿಯಾಗಿ ರಮ್ಯಾ(Ramya) ಸಾಥ್ ನೀಡಲಿದ್ದಾರೆ.

    ramya 2

    ಅಂತೂ ಇಂತೂ ಅಭಿಮಾನಿಗಳ ಮನದಾಸೆಗೆ ಮಣಿದು ಹತ್ತು ವರ್ಷಗಳ ನಂತರ ನಟಿ ರಮ್ಯಾ ಕಂಬ್ಯಾಕ್ ಆಗುತ್ತಿದ್ದಾರೆ. ನಿರ್ಮಾಪಕಿಯಾಗಿ ಜೊತೆಗೆ ನಾಯಕಿಯಾಗಿಯೂ ಕೂಡ ಫ್ಯಾನ್ಸ್ ರಮ್ಯಾ ಸಿಹಿ ಸುದ್ದಿ ಈಗಾಗಲೇ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್‌ವೊಂದು ಗಾಂಧಿನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ.

    RAMYA 1

    `ಸ್ವಾತಿ ಮುತ್ತಿನ ಮಳೆ ಹನಿಯೇ’ ನಿರ್ಮಾಣ ಹೊಣೆ ಹೊತ್ತಿರುವ ರಮ್ಯಾ, `ಉತ್ತರಕಾಂಡ’ ಚಿತ್ರದಲ್ಲಿ ಧನಂಜಯ್‌ಗೆ(Dhananjay) ನಾಯಕಿಯಾಗಿ ರಮ್ಯಾ ಎಂಟ್ರಿ ಕೊಡ್ತಿದ್ದಾರೆ. ಮುಂದಿನ ವರ್ಷ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ. ಇದರ ಮಧ್ಯೆ ಕಿಚ್ಚನ ಮುಂದಿನ ಚಿತ್ರಕ್ಕೆ ರಮ್ಯಾ ನಾಯಕಿ ಎಂಬ ಸುದ್ದಿ ಚಿತ್ರನಗರಿಯಲ್ಲಿ ಚಾಲ್ತಿಯಲ್ಲಿದೆ. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

    sudeep 1 4

    `ರಂಗ ಎಸ್‌ಎಸ್‌ಎಲ್‌ಸಿ’, ಕಿಚ್ಚ ಹುಚ್ಚ, ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆಮಾತು ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಸುದೀಪ್, ರಮ್ಯಾ ಜೋಡಿಯಾಗಿ ನಟಿಸಿದ್ದರು. `ವಿಕ್ರಾಂತ್ ರೋಣ’ ಚಿತ್ರದ ಸಕ್ಸಸ್ ನಂತರ ಸುದೀಪ್(Kiccha Sudeep) ಕೂಡ ತಮ್ಮ ಮುಂದಿನ ಚಿತ್ರದ ಬಗ್ಗೆ ಸೆಲೆಕ್ಟೀವ್ ಆಗಿದ್ದಾರೆ. ಅವರ ಮುಂದಿನ ಪ್ರಾಜೆಕ್ಟ್‌ಗೆ ರಮ್ಯಾನೇ ನಾಯಕಿ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವಿಷ್ಯ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ವಿಷ್ಯವಾಗಿ ರೂಪೇಶ್‌ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್‌

    ಸಾನ್ಯ ವಿಷ್ಯವಾಗಿ ರೂಪೇಶ್‌ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್‌

    ಬಿಗ್ ಬಾಸ್ ಮನೆಯಲ್ಲಿ(Bigg Boss House) ರೂಪೇಶ್ ಮತ್ತು ಸಾನ್ಯ ಜೋಡಿಯಾಗಿ ಹೈಲೈಟ್ ಆಗಿದ್ದರು. ಆದರೆ ದೊಡ್ಮನೆಯ ಎಲಿಮಿನೇಷನ್‌ನಿಂದ ಸಾನ್ಯ ಹೊರಬಂದಿದ್ದರು. ಇದಾದ ಬಳಿಕ ಸಾನ್ಯಗಾಗಿ ಕಣ್ಣೀರಿಡುತ್ತಲೇ ಎರಡೆರಡು ಪ್ಲೇಟ್ ಇಟ್ಟುಕೊಂಡು ಊಟ ಮಾಡಿದ್ದರು. ಇದೀಗ ಈ ವಿಷ್ಯವಾಗಿ ಶೆಟ್ಟ ಕಾಲೆಳೆದಿದ್ದಾರೆ ಕಿಚ್ಚ ಸುದೀಪ್.

    roopesh shetty 1 1

    ಓಟಿಟಿಯಿಂದ ಟಿವಿ ಬಿಗ್ ಬಾಸ್‌ವೆರೆಗೂ ಸಾನ್ಯ ಮತ್ತು ರೂಪೇಶ್ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಲೇ ಬಂದಿದ್ದರು. ಜೊತೆಯಾಗಿಯೇ ಇರುತ್ತಿದ್ದರು. ಆದರೆ ಸಾನ್ಯ ಎಲಿಮಿನೇಷನ್‌ನಿಂದ ರೂಪೇಶ್ ಶೆಟ್ಟಿಗೆ(Roopesh Shetty) ದೊಡ್ಡ ಆಘಾತವೇ ಆಗಿತ್ತು. ಪ್ರತಿದಿನ ಕಣ್ಣೀರಿಡುತ್ತಲೇ ಇದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಟ ಮಾಡುತ್ತಿರಲಿಲ್ಲ. ಸಾನ್ಯ ಹೋದ ನಂತರದಲ್ಲಿ ರೂಪೇಶ್‌ಗೆ ಒಂಟಿತನ ಕಾಡಿದೆ. ಈ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಊಟ ಮಾಡುವಾಗ ಸಾನ್ಯ ಅಯ್ಯರ್(Sanya Iyer) ಹೆಸರಲ್ಲಿ ಒಂದು ಪ್ಲೇಟ್ ತೆಗೆದುಕೊಂಡು ಬಂದಿದ್ದಾರೆ ರೂಪೇಶ್ ಶೆಟ್ಟಿ. ತಮ್ಮ ಪ್ಲೇಟ್‌ನ ಊಟವನ್ನು ಆ ಪ್ಲೇಟ್‌ಗೆ ಹಾಕಿಕೊಂಡು ಊಟ ಮಾಡಿದ್ದಾರೆ. ಸಾನ್ಯ ನೆನಪಲ್ಲಿ ಎರಡು ಪ್ಲೇಟ್‌ನಲ್ಲಿ ಅವರು ಊಟ ಮಾಡಿದ್ದಾರೆ.

    roopesh shetty 1

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಸಾನ್ಯ ಅವರ ಪಾಲಿಗೆ ಒಂದಷ್ಟು ಮೊಟ್ಟೆ ನೀಡಲಾಗಿತ್ತು. ಈ ಮೊಟ್ಟೆಯನ್ನು ರೂಪೇಶ್‌ಗೆ ಕೊಟ್ಟು ಹೋಗಿದ್ದರು. ಅದನ್ನು ರೂಪೇಶ್ ತಿಂದಿದ್ದಾರೆ. ಈ ಎಲ್ಲಾ ವಿಚಾರ ಇಟ್ಟುಕೊಂಡು ರೂಪೇಶ್ ಅವರ ಕಾಲೆಳೆದಿದ್ದಾರೆ ಕಿಚ್ಚ. ಆಪ್ತರಾದವರು ಬಿಟ್ಟು ಹೋದಾಗ ಊಟ ಮಾಡುವವರು ಊಟ ಬಿಟ್ಟಿದ್ದು ನೋಡಿದ್ದೀನಿ. ಗಡ್ಡ ಬಿಟ್ಟಿದ್ದನ್ನು ನೋಡಿದ್ದೀನಿ. ಆದರೆ, ಆಪ್ತರಾದವರು ಬಿಟ್ಟು ಹೋದಾಗ ಎರಡೆರಡು ಪ್ಲೇಟ್ ಊಟ ಮಾಡಿದ್ದು, ಎಕ್ಸ್ಟ್ರಾ ಮೊಟ್ಟೆ ತಿಂದ್ರಿ. ಮಿಸ್ ಮಾಡಿಕೊಂಡ್ರೆ ಹೀಗೆ ಮಿಸ್ ಮಾಡ್ಕೊಬೇಕು ಎಂದು ರೂಪೇಶ್ ಅವರ ಕಾಲೆಳೆದರು ಸುದೀಪ್. ಇದನ್ನೂ ಓದಿ:ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ROOPESH SHETTY

    ಅಂದಹಾಗೆ, ಸಾನ್ಯ ಅಯ್ಯರ್ 6ನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದರು. ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಗೆ ಮತ್ತೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷ್ಯ ನಿಜವೇ ಆದರೆ ಆಟದಲ್ಲಿ ಸಾಕಷ್ಟು ಟ್ವಿಸ್ಟ್ ಇರಲಿದೆ. ಎಲ್ಲದ್ದಕ್ಕೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಶೆಟ್ಟಿಗೆ ಶಿಕ್ಷೆ

    ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಶೆಟ್ಟಿಗೆ ಶಿಕ್ಷೆ

    ದೊಡ್ಮನೆಯಲ್ಲಿ ಮೊದಲ ಸೀಸನ್‌ನಿಂದಲೂ ಕೆಲವು ಪದ್ಧತಿಯನ್ನ ಅನುಸರಿಸಿಕೊಂಡು ಬಂದಿದ್ದಾರೆ. ಇನ್ನೂ ಮನೆಯ ರೂಲ್ಸ್ ಫಾಲೋ ಮಾಡದೇ ಇದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಇದೀಗ ರೂಪೇಶ್ ಶೆಟ್ಟಿ(Roopesh Shetty) ಮಾಡಿದ್ದ ಸಣ್ಣ ತಪ್ಪಿಗೆ ಬಿಗ್ ಬಾಸ್(Bigg Boss) ದೊಡ್ಡ ಶಿಕ್ಷೆಯನ್ನೆ ಕೊಟ್ಟಿದ್ದಾರೆ. ರೂಪೇಶ್ ತಪ್ಪಿಗೆ ತಕ್ಕ ಪಾಠ ಕಲಿಸಿದ್ದಾರೆ.

    roopesh shetty 1

    ಸಾನ್ಯ(Sanya Iyer) ಎಲಿಮಿನೇಷನ್ ನೋವಿನಿಂದ ಇರುವ ರೂಪೇಶ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ವಸ್ತುಗಳನ್ನು ನೀಡಲಾಗುತ್ತದೆ. ಇದನ್ನು ಡ್ಯಾಮೇಜ್ ಮಾಡಿದರೆ ತಪ್ಪಿತಸ್ಥರಿಗೆ ಬಿಗ್ ಬಾಸ್ ಪನಿಶ್​ಮೆಂಟ್ ನೀಡುತ್ತಾರೆ. ಈಗ ರೂಪೇಶ್ ಶೆಟ್ಟಿ ಅವರು ಮನೆಯ ಗಾಜಿನ ಲೋಟವನ್ನು ಒಡೆದು ಹಾಕಿದ್ದಾರೆ. ಇದನ್ನು ಬಿಗ್ ಬಾಸ್ ಗಮನಿಸಿ, ಇದಕ್ಕೆ ಪನಿಶ್​ಮೆಂಟ್ ನೀಡಲಾಗಿದೆ.

    roopesh 1 1ರೂಪೇಶ್ ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುತ್ತಾರೆ. ಈ ಕಾರಣಕ್ಕೆ ಕಾಫಿ ಕಪ್​​ನ ಗಾತ್ರದ ಲೋಟ ಕೊಟ್ಟು ಅದರಲ್ಲಿ ಮಾತ್ರ ನೀರು ಕುಡಿಯುವಂತೆ ಆದೇಶ ಹೊರಡಿಸಿದ್ದಾರೆ ಬಿಗ್​ ಬಾಸ್. ಇದನ್ನು ಕೇಳಿ ರೂಪೇಶ್​ ಶೆಟ್ಟಿಗೆ ಶಾಕ್ ಆಗಿದೆ. ಅನಿವಾರ್ಯವಾಗಿ ಅವರು ಅದರಲ್ಲೇ ನೀರು ಕುಡಿಯೋಕೆ ಶುರು ಮಾಡಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ

    roopesh shetty 3 1

    ಅಮೂಲ್ಯ ಗೌಡ ಅವರು ರೂಪೇಶ್ ಅವರ ಗಾಜಿನ ಲೋಟವನ್ನು ಕಿತ್ತುಕೊಂಡು ಓಡಿದ್ದಾರೆ. ಇದರಿಂದ ರೂಪೇಶ್ ಪೇಚಿಗೆ ಸಿಲುಕಿದ್ದಾರೆ. ಈ ಪನಿಶ್​​ಮೆಂಟ್​ನಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಂತೂ ನಿಜ. ಈ ಮೊದಲು ರೂಪೇಶ್ ರಾಜಣ್ಣ ಕೂಡ ಗ್ಲಾಸ್ ಒಡೆದಿದ್ದರು. ಆದರೆ, ಅವರಿಗೆ ಬಿಗ್ ಬಾಸ್ ಪನಿಶ್​ಮೆಂಟ್ ನೀಡಿಲ್ಲ. ಈ ಬಗ್ಗೆ ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಿಗರ ಬಗ್ಗೆ ಮಾತನಾಡಿದ್ದ ಸಂಬರ್ಗಿ ವಿರುದ್ಧ ಸಿಡಿದೆದ್ದ ಕಿಚ್ಚ

    ಕನ್ನಡಿಗರ ಬಗ್ಗೆ ಮಾತನಾಡಿದ್ದ ಸಂಬರ್ಗಿ ವಿರುದ್ಧ ಸಿಡಿದೆದ್ದ ಕಿಚ್ಚ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನಲ್ಲಿ(Bigg Boss House) ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ (Roopesh Rajanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಜಗಳ ಆಡುತ್ತಲೇ ಇರುತ್ತಾರೆ. ಈ ಕಿರಿಕ್ ದೊಡ್ಮನೆಯಲ್ಲಿ ತಾರಕಕ್ಕೇರಿದ್ದು ಇದೆ. ಈ ಮಾತಿನ ಚಕಮಕಿಯಲ್ಲಿ ಕನ್ನಡ ಪರ ಹೋರಾಟಗಾರರಿಗೆ ಸಂಬರ್ಗಿ ಅವಮಾನ ಮಾಡಿದ್ದಾರೆ. ಈ ವಿಷ್ಯವಾಗಿ ಸಂಬರ್ಗಿಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    prashanth sambargi

    ಬಿಗ್ ಬಾಸ್‌ನಲ್ಲಿ ಕಿರಿಕ್ ಜೋಡಿ ಎಂದೇ ರೂಪೇಶ್ ರಾಜಣ್ಣ ಮತ್ತು ಸಂಬರ್ಗಿ ಹೈಲೈಟ್ ಆಗಿದ್ದಾರೆ. ರೂಪೇಶ್ ರಾಜಣ್ಣನ ಮೇಲೆ ಮಾತಿನ ಭರದಲ್ಲಿ ಪ್ರಶಾಂತ್ ಸಂಬರ್ಗಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ರಾಜಣ್ಣ ಅವರನ್ನು ರೋಲ್ ಕಾಲ್ ಗಿರಾಕಿ, ಈ ಮನೆಯಲ್ಲಿ ಕನ್ನಡ ಹೋರಾಟಗಾರನ್ನು ಬಾಯಿ ಮುಚ್ಚಿಸಿದ್ದೇನೆ ಎಂದು ಪ್ರಶಾಂತ್(Prashanth Sambargi) ರಾಂಗ್ ಆಗಿದ್ದರು. ಸಂಬರ್ಗಿ ಈ ನಡೆಗೆ ಬಿಗ್ ಬಾಸ್(Bigg Boss) ಮನೆಯಿಂದ ಹೊರ ಹಾಕಿ ಎಂದು ಕನ್ನಡ ಪರ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ:ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    sudeep 1 1

    ಬಳಿಕ ಬಿಗ್ ಬಾಸ್ ಆದೇಶದ ನಂತರ ಕನ್ನಡ ಹೋರಾಟಗಾರರಿಗೆ ನೋವಾಗಿದ್ರೆ ಕ್ಷಮಿಸಿ. ನನ್ನ, ರಾಜಣ್ಣನ ಮೈಂಡ್ ಗೇಮ್ ಅದು. ನನ್ನ ಪ್ರೀತಿಯ ಕನ್ನಡಿಗರಿಗೆ ನೋವಾಗಿದ್ರೆ, ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ರಭಸದಿಂದ ಬಂದ ಮಾತು, ವಿರುದ್ಧವಾಗಿರಬಹುದು. ದಯವಿಟ್ಟು ಕನ್ನಡ ಹೋರಾಟಗಾರರೇ ಕ್ಷಮೆ ಇರಲಿ, ನನ್ನಿಂದ ತಪ್ಪಾಗಿದೆ ಎಂದು ಕಣ್ಣೀರು ಹಾಕಿದ್ದರು. ಇದಾದ ಬಳಿಕ ವಾರದ ಪಂಚಾಯಿತಿಯಲ್ಲಿ ಸಂಬರ್ಗಿಗೆ ಸುದೀಪ್(Kiccha sudeep) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    prashanth sambargi 1 2

    ಮಾತನಾಡುವ ಬರದಲ್ಲಿ ಕನ್ನಡ ಪರ ಹೋರಾಟಗಾರಿಗೆ ಅವಮಾನ ಮಾಡಿದ್ದೀರಿ. ನೀವು, ರಾಜಣ್ಣ ವೈಯಕ್ತಿಕವಾಗಿ ಎಷ್ಟಾದ್ರೂ ಜಗಳ ಮಾಡಿ. ಅದು ತಪ್ಪಲ್ಲ. ಯಾರೂ ಬೇಡ ಅನ್ನಲ್ಲ. ಆದ್ರೆ ಮಿತಿ ಮೀರಿ ಅದು ಕನ್ನಡ ಪರ ಹೋರಾಡುವವರಿಗೆ ನೋವಾಗಿದೆ. ಕನ್ನಡಕ್ಕಾಗಿ ಹೋರಾಟ ಮಾಡೋ ಎಷ್ಟೋ ಪ್ರಮಾಣಿಕರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ನಿಮ್ಮ ಮಾತು ಬೇಸರ ತಂದಿದೆ. ಇನ್ನೊಮ್ಮೆ ಆ ರೀತಿ ಮಾತನಾಡಬೇಡಿ ಎಂದು ವಾರ್ನಿಂಗ್ ಸುದೀಪ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

    ಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ (Bigg Boss House) ಮೋಡಿ ಮಾಡಿದ್ದ ಸ್ಪರ್ಧಿ ಸಾನ್ಯ ಅಯ್ಯರ್ (Sanya Iyer) ಇದೀಗ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್‌ನ 6ನೇ ವಾರಕ್ಕೆ ಸಾನ್ಯ ಆಟ ಅಂತ್ಯವಾಗಿದೆ.

    sanya

    ಕಿರುತೆರೆಯ ಪುಟ್ಟಗೌರಿಯಾಗಿ(PuttaGowri) ಅಪಾರ ಅಭಿಮಾನಿಗಳ ಮನಗೆದ್ದ ಕಲಾವಿದೆ ಸಾನ್ಯ ಅಯ್ಯರ್, ಓಟಿಟಿ ಸೀಸನ್(Bigg Boss Ott) ಮತ್ತು ಟಿವಿ ಬಿಗ್ ಬಾಸ್‌ನಲ್ಲಿ(Bigg Boss) ಸಖತ್ ಹೈಲೈಟ್ ಆಗಿದ್ದರು. ಟಾಸ್ಕ್, ಮನರಂಜನೆ, ಹೀಗೆ ಎಲ್ಲಾ ವಿಚಾರದಲ್ಲೂ ಸ್ಪರ್ಧಿಯಾಗಿ ಸಾನ್ಯ ಸೈ ಎನಿಸಿಕೊಂಡಿದ್ದರು.‌ ಸಾನ್ಯ ಮಾತನಾಡುವ ಸ್ಪಷ್ಟ ಕನ್ನಡ ವೀಕ್ಷಕರಿಗೆ ಮೆಚ್ಚುಗೆ ಆಗಿತ್ತು. ಇದೀಗ ಸಾನ್ಯ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

    sanya iyer 1 3

    ಟಿವಿ ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಸಾನ್ಯ ಅಯ್ಯರ್ ಗುರುತಿಸಿಕೊಂಡಿದ್ದರು. ಜೊತೆಗೆ ರೂಪೇಶ್ ಶೆಟ್ಟಿ(Roopesh Shetty) ಜೊತೆಗಿನ ಫ್ರೆಂಡ್‌ಶಿಪ್ ವಿಷ್ಯವಾಗಿ ಸಾನ್ಯ ಹೈಲೈಟ್ ಆಗಿದ್ದರು. ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಇವರಿಬ್ಬರ ನಡುವಿನ ಗೆಳೆತನ ಗಟ್ಟಿಯಾಗುತ್ತಲೇ ಬಂದಿತ್ತು. ಇದೀಗ ಸಾನ್ಯ ಎಲಿಮಿನೇಟ್ ಆಗಿರೋದು ರೂಪೇಶ್ ಸೇರಿದಂತೆ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ..?- ರಾಕಿಂಗ್ ಸ್ಟಾರ್ ಯಶ್ ಹೇಳಿದ್ದು ಹೀಗೆ

    sanya iyer 4

    ಪುಟ್ಟಗೌರಿಯ ಗಟ್ಟಿ ಆಟವನ್ನ ಮೆಚ್ಚಿಕೊಂಡಿರುವ ಆಕೆಯ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ. ದೊಡ್ಮನೆಯಿಂದ 6ನೇ ವಾರಕ್ಕೆ ಸಾನ್ಯ ಔಟ್ ಆಗಿದ್ದಾರೆ. ಇನ್ನೂ ನಟಿಯ ಮುಂದಿನ ಸಿನಿಪಯಣಕ್ಕೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ಹಾಡಿಗೆ ರೂಪೇಶ್ ಶೆಟ್ಟಿ ರಾಂಗ್

    ಸಾನ್ಯ ಅಯ್ಯರ್ ಹಾಡಿಗೆ ರೂಪೇಶ್ ಶೆಟ್ಟಿ ರಾಂಗ್

    ಬಿಗ್ ಬಾಸ್ ಮನೆಯ ಲವ್ ಬರ್ಡ್ಸ್ ಸಾನ್ಯ ಅಯ್ಯರ್(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh shetty) ನಡುವೆ ಮತ್ತೆ ಜಟಾಪಟಿ ಶುರುವಾಗಿದೆ. ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ದೊಡ್ಮನೆಯಲ್ಲಿ ಹೈಲೈಟ್ ಆಗಿದ್ದ ಸಾನ್ಯ, ರೂಪು ಜೋಡಿ ನಡುವೆ ಕಿರಿಕ್ ಶುರುವಾಗಿದೆ.

    sanya iyer 2

    ದೊಡ್ಮನೆಯಲ್ಲಿ ಕಳೆದ ಸೀಸನ್‌ನ ಜೋಡಿಯಾಗಿ ಅರವಿಂದ್ ಮತ್ತು ದಿವ್ಯಾ ಹೈಲೈಟ್ ಆಗಿದ್ದರು. ಇದೀಗ ಸೀಸನ್ 9ರ ಟಿವಿ ಬಿಗ್ ಬಾಸ್‌ನಲ್ಲಿ ಸಾನ್ಯ ಮತ್ತು ರೂಪೇಶ್ ಹೈಲೈಟ್ ಆಗುತ್ತಿದ್ದಾರೆ. ಓಟಿಟಿಯಿಂದ ಶುರುವಾದ ಇವರಿಬ್ಬರ ಸ್ನೇಹ ಟಿವಿ ಬಿಗ್ ಬಾಸ್‌ನಲ್ಲೂ ಮುಂದುವರೆದಿದೆ. ಹೀಗಿರುವಾಗ ರೂಪೇಶ್‌ಗಾಗಿ ಸಾನ್ಯ ಹಾಡಿದ್ದ ಹಾಡೇ ಇಬ್ಬರ ನಡುವಿನ ಕಲಹಕ್ಕೆ ಕಾರಣವಾಗಿದೆ.

    Roopeh Shetty And Sanya Iyer 1

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಸಾನ್ಯ ಅಯ್ಯರ್ ರೂಪೇಶ್‌ಗಾಗಿ ಒಂದು ಸಾಂಗ್ ಡೇಡಿಕೇಟ್ ಮಾಡಿದ್ದರು. ಹಾಡುವಾಗ ಅಪಸ್ವರ ಬಂದ ಕಾರಣ ತಾನು ಸರಿಯಾಗಿ ಹಾಡಿಲ್ಲ ಎಂದು ಸಾನ್ಯ ಬೇಸರ ಮಾಡಿಕೊಂಡಿದ್ದರು. ಅದಕ್ಕೆ ರೂಪೇಶ್ ಕೂಡ ಸುಮ್ಮನೆ ಯಾಕೆ ಬೇಜಾರು ಮಾಡಿಕೊಳ್ಳುತ್ತೀಯಾ ಎಂದು ಕೇಳಿದ್ದಾರೆ. ನನಗೆ ಈ ಹಾಡು ಸರಿಯಾಗಿ ಹಾಡಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್‌

    sanya

    ಚೆನ್ನಾಗಿ ಹಾಡಿದ್ಯಾ ಅಂತಾ ಹೇಳ್ತಿದ್ದೀನಿ ತಾನೇ ಎಂದು ರೂಪೇಶ್ ಹೇಳಿದ್ರೆ, ನೀನು ಏನು ನನ್ನ ಮೇಲೆ ಕೋಪಿಸಿಕೊಳ್ಳುವುದು ಎಂದು ಸಾನ್ಯ ರಾಂಗ್ ಆಗಿದ್ದಾರೆ. ಯಾಕೆ ಕೋಪ ಮಾಡಿಕೊಳ್ಳುತ್ತೀಯಾ ಚೆನ್ನಾಗಿ ಹಾಡಿಲ್ಲ ಅಂತಾ ತಾನೇ ಎಂದು ಸಾನ್ಯ ಕೇಳಿದಾಗ ನಿನ್ನ ತಂಟೆಗೆ ನಾನಿಲ್ಲ ಎಂದು ರೂಪೇಶ್ ಶೆಟ್ಟಿ ಕೈಮುಗಿದಿದ್ದಾರೆ. ಇವರಿಬ್ಬರ ಜಗಳಕ್ಕೆ ಮನೆಮಂದಿ ಮೂಕ ಪ್ರೇಕ್ಷಕರಾಗಿದ್ದಾರೆ. ಕಿಚ್ಚನ ಕ್ಲಾಸ್ ನಂತರ ದಿನದಿಂದ ದಿನಕ್ಕೆ ಇವರಿಬ್ಬರ ನಡುವೆ ಗ್ಯಾಪ್ ಜಾಸ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಜೋಡಿ ಮತ್ತೆ ಒಂದಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್‌ನ ಇವರೇ ಗೆಲ್ಲುತ್ತಾರೆ ಸೀಕ್ರೆಟ್‌ ಬಿಚ್ಚಿಟ್ಟ ಮಯೂರಿ

    ಬಿಗ್ ಬಾಸ್‌ನ ಇವರೇ ಗೆಲ್ಲುತ್ತಾರೆ ಸೀಕ್ರೆಟ್‌ ಬಿಚ್ಚಿಟ್ಟ ಮಯೂರಿ

    ಶ್ವಿನಿ ನಕ್ಷತ್ರ, ಕೃಷ್ಣಲೀಲಾ, ಇಷ್ಟಕಾಮ್ಯ ಹೀಗೆ ಸಾಕಷ್ಟು ಸೀರಿಯಲ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಹುಬ್ಬಳ್ಳಿ ಹುಡುಗಿ ಮಯೂರಿ(Mayuri) ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್‌ನಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಪಟ್ಟವನ್ನ ಯಾರು ಗೆಲ್ಲಬೇಕು, ಗೆಲ್ಲಬಹುದು ಎಂಬುದರ ಬಗ್ಗೆ ಮಯೂರಿ ಮಾತನಾಡಿದ್ದಾರೆ.

    Mayuri Kyatari

    ಚಂದನವನದಲ್ಲಿ ಸಾಕಷ್ಟು ಸಿನಿಮಾಗಳ ಕಮಾಲ್ ಪ್ರತಿಭಾನ್ವಿತ ನಟಿ ಮಯೂರಿ ಬಿಗ್ ಬಾಸ್ ಮನೆಯಲ್ಲಿ(Bigg Boss House) ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ನಾಲ್ಕನೇ ವಾರಕ್ಕೆ ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿನ ನೆನಪು ಮತ್ತು ಸ್ಪರ್ಧಿಗಳ ಗೆಲುವಿನ ಬಗ್ಗೆ ಮಯೂರಿ ಇದೀಗ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ: ನೇಹಾ ಗೌಡ

    MAYURI

    ಬಿಗ್ ಬಾಸ್‌ನ ಯಾರು ಗೆಲ್ಲಬೇಕು, ಗೆಲ್ಲಬಹುದು ಎಂದು ಹೇಳೋದು ತುಂಬಾ ಕಷ್ಟ. ಆ ಮನೆಯಲ್ಲಿ ಪ್ರತಿಯೊಬ್ಬರು ಗೆಲ್ಲುವಂತಹ ಅರ್ಹತೆ ಇರುವವರೇ ಇರೋದು. ಅದರಲ್ಲೂ ಈ ಬಾರಿ ಪ್ರವೀಣರು ಮತ್ತು ನವೀನರ ಪೈಪೋಟಿ ಜೋರಾಗಿ ಇರೋದರಿಂದ ಯಾರು ಗೆಲ್ಲುತ್ತಾರೆ ಅಂತಾ ಊಹೆ ಮಾಡೋದು ಅಸಾಧ್ಯ ಎಂದಿದ್ದಾರೆ. ಹೀಗಿರುವಾಗ ಟಾಪ್ 3ರಲ್ಲಿ ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಇದ್ದೇ ಇರುತ್ತಾರೆ. ಇವರು ಚೆನ್ನಾಗಿ ಆಡುತ್ತಾ ಮನರಂಜನೆ ಕೊಡುತ್ತಿದ್ದಾರೆ ಎಂದು ಮಯೂರಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]