Saturday, 18th January 2020

Recent News

19 hours ago

6.3 ಕಿ.ಮೀ ಉದ್ದ, 27 ಸಾವಿರ ಕೆಜಿ ಕೇಕ್ ಮಾಡಿ ಚೀನಾ ದಾಖಲೆ ಮುರಿದ ಕೇರಳ ಬೇಕರ್ಸ್

ತಿರುವನಂತಪುರಂ: 6.3 ಕಿಲೋ ಮೀಟರ್ ಉದ್ದ ಮತ್ತು 27 ಸಾವಿರ ಕೆಜಿ ತೂಕದ ವಿಶ್ವದ ಅತಿ ಉದ್ದದ ಕೇಕ್ ತಯಾರಿಸಿ ಕೇರಳ ಬೇಕರ್ಸ್ ತಂಡ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಕೇರಳದ ತ್ರಿಶೂರ್‍ನಲ್ಲಿ ಬೇಕರ್ಸ್ ಅಸೋಸಿಯೇಷನ್ ಕೇರಳ (ಬಿಎಕೆಇ) ಅವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 500 ಬೇಕರಿಗಳಿಂದ 1500 ಬೇಕರ್ಸ್‍ಗಳು ಮತ್ತು ಅಡುಗೆ ಮಾಡುವವರು ಸೇರಿ ವಿಶ್ವದ ಅತಿ ಉದ್ದದ ಕೇಕ್ ತಯಾರಿಸಿದ್ದಾರೆ. 12 ಸಾವಿರ ಕೆ.ಜಿ ಸಕ್ಕರೆ ಮತ್ತು ಹಿಟ್ಟನ್ನು ಬಳಸಿ ಈ ಕೇಕ್ […]

3 days ago

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ವಿಸ್ಮಯ ಕಣ್ತುಬಿಕೊಂಡ ಭಕ್ತಗಣ

ತಿರುವನಂತಪುರಂ: ಪ್ರತಿ ವರ್ಷದಂತೆ ಈ ಬಾರಿ ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ದೇವಾಲಯದಿಂದ 8 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಬುಧವಾರ ಸಂಜೆ 6.45ರ ಸುಮಾರಿಗೆ ಕಾಣಿಸಿಕೊಂಡಿತು. ಈ ವಿಶೇಷ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯ ದರ್ಶನವಾಗುತ್ತಿದ್ದಂತೆ ಗಟ್ಟಿ ಸ್ವರದಲ್ಲಿ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಹೇಳಿ ಜಯಘೋಷ...

ಕೊಚ್ಚಿಯಲ್ಲಿ ಧರೆಗುರುಳಿದ ಅಕ್ರಮ ಕಟ್ಟಡಗಳು- ಬೆಂಗ್ಳೂರಲ್ಲಿ ಕೆರೆದಂಡೆಯ ಮನೆಯವರಿಗೆ ಢವ ಢವ

7 days ago

ಬೆಂಗಳೂರು: ಕೇರಳದ ಕೊಚ್ಚಿಯಲ್ಲಿ ಕೋಟಿಗಟ್ಟಲೇ ಮೌಲ್ಯದ ಕಟ್ಟಡಗಳು ಉರುಳಿವೆ. ಕೊಚ್ಚಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಕೆರೆ ಭೂಮಿಗಳ್ಳರಿಗೆ ನಡುಕ ಶುರುವಾಗಿದೆಯಾ? ಲೇಕ್ ವ್ಯೂವ್ ಪಾಯಿಂಟ್ ಮೂಡ್ ನಲ್ಲಿದ್ದವರು ಆತಂಕಗೊಂಡಿದ್ದಾರೆ. ಬೆಂಗಳೂರಿನಲ್ಲೂ ಕೊಚ್ಚಿ ಮಾದರಿಯಲ್ಲಿ ಶುರುವಾಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ. ಕೇರಳದಂತೆ ಬೆಂಗಳೂರಿನಲ್ಲೂ ಅಕ್ರಮ...

ನೆಲಕ್ಕುರುಳಿದ ಗಗನಚುಂಬಿ ಕಟ್ಟಡ- 4 ಅಪಾರ್ಟ್​ಮೆಂಟ್​ಗಳ ಪೈಕಿ 2 ನೆಲಸಮ

7 days ago

– 800 ಕೆಜಿ ಸ್ಫೋಟಕ ಬಳಸಿ ಬ್ಲಾಸ್ಟ್ ತಿರುವನಂತಪುರಂ: ನಿಯಮಮೀರಿ ಕೆರೆದಂಡೆಯ ಮೇಲೆ ಅಕ್ರಮವಾಗಿ ಕಟ್ಟಿದ್ದ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡುವ ಕೆಲಸವನ್ನು ಕೇರಳ ಸರ್ಕಾರ ಶುರುಮಾಡಿದೆ. ಸುಪ್ರೀಕೋರ್ಟ್ ನ ಆದೇಶದ ಬೆನ್ನಲ್ಲೇ ಸುಮಾರು ನಾಲ್ಕು ತಿಂಗಳ ನಂತರ ಕಟ್ಟಡವನ್ನು ನೆಲಸಮ ಮಾಡಲು...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆಜಿ ಚಿನ್ನ ವಶ

1 week ago

– ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ ಮಂಗಳೂರು: ದುಬೈನಿಂದ ಮಂಗಳೂರಿಗೆ ಬರುವ ಕೆಲವರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಪ್ರಕರಣ ಪದೇ ಪದೇ ಬೆಳಕಿಗೆ ಬರುತ್ತಿದ್ದು, ಮತ್ತೆ ಈ ಅಕ್ರಮ ಚಿನ್ನ ಸಾಗಾಟ ಮುಂದುವರೆದಿದೆ. ಮೂರು ಬೇರೆ ಬೇರೆ ಪ್ರಕರಣದಲ್ಲಿ ಅಕ್ರಮವಾಗಿ...

ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್

2 weeks ago

ಚಾಮರಾಜನಗರ: ದಶಕದ ಹಿಂದೆಯೇ ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಲಾಗಿದೆ. ಆದರೆ ರಾಜ್ಯದ ಗಡಿಯಂಚಿನಲ್ಲಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಭಾಗದಲ್ಲಿ ಕದ್ದುಮುಚ್ಚಿ ಹೊರ ರಾಜ್ಯಗಳ ಲಾಟರಿ ದಂಧೆ ನಡೆಯುತ್ತಿದೆ. ಕೂಲಿ ಕಾರ್ಮಿಕರು, ಬಡವರೇ ದಂಧೆಕೋರರ ಟಾರ್ಗೆಟ್ ಆಗಿರುವುದು ಆಂತಕಕಾರಿ ವಿಷಯವಾಗಿದೆ. ಕೇರಳ...

‘ಅಮ್ಮ ನಾನು ನಿನ್ನ ಮಗಳು’ – ಅನುರಾಧ ಪೋಡ್ವಾಲ್‍ರಿಂದ 50 ಕೋಟಿ ರೂ. ಬೇಡಿಕೆ ಇಟ್ಟ ಪುತ್ರಿ

2 weeks ago

ತಿರುವನಂತಪುರಂ: ತಮ್ಮ ಅದ್ಭುತ ಕಂಠಸಿರಿಯಿಂದ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗಾಯಕಿ ಅನುರಾಧ ಪೋಡ್ವಾಲ್‍ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಮಹಿಳೆಯೊಬ್ಬರು ತಾನು ಅನುರಾಧ ಪೋಡ್ವಾಲ್‍ ಮಗಳು, ನನ್ನನ್ನು ದೂರ ಇಟ್ಟಿದ್ದಕ್ಕೆ ಅನುರಾಧ ಅವರಿಂದ ನನಗೆ 50 ಕೋಟಿ ರೂ. ಪರಿಹಾರ ಕೊಡಿಸಿ...

ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

2 weeks ago

ಮಂಡ್ಯ: ಕೇರಳದ ಕಸ ಕರ್ನಾಟಕಕ್ಕೆ ರವಾನೆಯಾಗುತ್ತಿದ್ದು, ಇದರಿಂದ ಮೈಸೂರು ಮತ್ತು ಮಂಡ್ಯ ವ್ಯಾಪ್ತಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಸಕ್ಕರೆ ನಗರಿ ಮಂಡ್ಯಗೆ ಕೇರಳದಿಂದ ಅತೀ ಹೆಚ್ಚು ತ್ಯಾಜ್ಯ ರವಾನೆಯಾಗುತ್ತಿದೆ. ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಕೇರಳದ ತ್ಯಾಜ್ಯ ವಸ್ತುಗಳಾದ ರಬ್ಬರ್, ಬಟ್ಟೆ, ಪ್ಲಾಸ್ಟಿಕ್‍ಗಳು ಲಾರಿ...