Tag: K Chandrashekar Rao

  • ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾರನ್ನೇ ಪಕ್ಷದಿಂದ ಹೊರಹಾಕಿದ ಕೆಸಿಆರ್‌

    ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾರನ್ನೇ ಪಕ್ಷದಿಂದ ಹೊರಹಾಕಿದ ಕೆಸಿಆರ್‌

    ಹೈದರಾಬಾದ್: ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಹಾಗೂ ಎಂಎಲ್‌ಸಿ ಕೆ.ಕವಿತಾ (K.Kavitha) ಅವರನ್ನು ಬಿಆರ್‌ಎಸ್‌ನಿಂದ (BRS) ಅಮಾನತು ಮಾಡಲಾಗಿದೆ.

    ಕೆಸಿಆರ್ ವಿರುದ್ಧದ ಫೆಡರಲ್ ತನಿಖೆಗೆ ತಮ್ಮ ಸೋದರಸಂಬಂಧಿ, ಹಿರಿಯ ಬಿಆರ್‌ಎಸ್ ನಾಯಕ ಟಿ.ಹರೀಶ್ ರಾವ್ ಅವರನ್ನು ಕವಿತಾ ಸಾರ್ವಜನಿಕವಾಗಿ ದೂಷಿಸಿದ್ದರು. ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಾಲೇಶ್ವರಂ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಿದ ಬೆನ್ನಲ್ಲೇ ಈ ಆರೋಪ ಮಾಡಿದ್ದರು. ಇದನ್ನೂ ಓದಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಕ್ರಮ್-32 ಬಿಟ್ ಪ್ರೊಸೆಸರ್ ಚಿಪ್ ಅನಾವರಣ

    K Chandrashekar Rao KCR

    2014 ರಲ್ಲಿ ಬಿಆರ್‌ಎಸ್ ಅಧಿಕಾರದಲ್ಲಿದ್ದಾಗ ನೀರಾವರಿ ಸಚಿವರಾಗಿದ್ದ ಹರೀಶ್ ರಾವ್ ಅವರು ಅಪಾರ ಆಸ್ತಿಗಳಿಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಕಾಂಗ್ರೆಸ್‌ನ ಎ.ರೇವಂತ್ ರೆಡ್ಡಿ ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಕವಿತಾ ಗಂಭೀರ ಆರೋಪ ಮಾಡಿದ್ದರು.

    ಮಾಜಿ ರಾಜ್ಯಸಭಾ ಸಂಸದ ಜೆ.ಸಂತೋಷ್ ಕುಮಾರ್ ಅವರ ಹೆಸರನ್ನು ಸಹ ಉಲ್ಲೇಖಿಸಿದ್ದಾರೆ. ಕೆಸಿಆರ್ ಅವರಿಗೆ ಭ್ರಷ್ಟಾಚಾರದ ಕಳಂಕ ಏಕೆ ಬಂತು ಎಂಬುದರ ಕುರಿತು ನಾವು ಯೋಚಿಸಬೇಕು. ಕೆಸಿಆರ್ ಅವರಿಗೆ ಹತ್ತಿರವಿರುವ ಕೆಲವರು ಅವರ ಹೆಸರನ್ನು ಬಳಸಿಕೊಂಡು ಹಲವು ರೀತಿಯಲ್ಲಿ ಲಾಭ ಪಡೆದಿದ್ದಾರೆ. ಅವರ ದುಷ್ಕೃತ್ಯಗಳಿಂದಾಗಿ ಇಂದು ಕೆಸಿಆರ್ ಅವರ ಹೆಸರು ಅಪಖ್ಯಾತಿಗೆ ಒಳಗಾಗುತ್ತಿದೆ ಎಂದು ಕವಿತಾ ಆರೋಪಿಸಿದ್ದರು. ಇದನ್ನೂ ಓದಿ: 232 ಕೋಟಿ ವಂಚನೆ ಪ್ರಕರಣ – ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್‌ ಅರೆಸ್ಟ್‌

  • ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ತೆಲಂಗಾಣ (Telangana) ಸಿಎಂ ರೇವಂತ್ ರೆಡ್ಡಿ (Revanth Reddy) ಕ್ಷಮೆಯಾಚಿಸಿದ್ದಾರೆ.

    ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಒಂದು ದಿನದ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಾನು ದೃಢ ನಂಬಿಕೆಯುಳ್ಳವನು. ವರದಿಗಳಲ್ಲಿ ಬಿಂಬಿಸಲಾದ ಹೇಳಿಕೆಗಳಿಗೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಭಾರತ ಸಂವಿಧಾನ ಮತ್ತು ಅದರ ಸ್ವಾತಂತ್ರ‍್ಯದ ನನಗೆ ಗೌರವವಿದೆ ಮತ್ತು ಭವಿಷ್ಯದಲ್ಲಿಯೂ ಗೌರವವಿರುತ್ತದೆ ಆದ್ದರಿಂದ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ ಎಂದು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

    ರೇವಂತ್ ರೆಡ್ಡಿ ಹೇಳಿದ್ದೇನು?
    ಮಾಧ್ಯಮಗಳ ಜೊತೆ ಮಾತನಾಡಿದ್ದ ರೇವಂತ್ ರೆಡ್ಡಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ 15 ತಿಂಗಳ ಬಳಿಕ ಜಾಮೀನು ಸಿಕ್ಕಿತ್ತು. ಆಗ ಮುಖ್ಯಮಂತ್ರಿಗಳು ಇದನ್ನು ರಾಜಕೀಯ ನಾಟಕವೆಂದು ಕರೆದಿದ್ದರು. ಈಗ ಕವಿತಾ ಅವರಿಗೆ ಐದೇ ತಿಂಗಳಲ್ಲಿ ಜಾಮೀನು ಸಿಕ್ಕಿರುವ ಕುರಿತು ನನಗೆ ಅನುಮಾನವಿದೆ. ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ (K. Chandrashekar Rao) ನಡುವಿನ ಒಪ್ಪಂದದಿಂದ ಜಾಮೀನು ಸಿಕ್ಕಿರಬಹುದು ಎಂದು ಹೇಳಿಕೆ ನೀಡುವ ಮೂಲಕ ಸುಪ್ರೀಂ ಜಾಮೀನಿನ ಬಗ್ಗೆಯೇ ಅನಮಾನ ವ್ಯಕ್ತಪಡಿಸಿದ್ದರು.

    ಈ ಹೇಳಿಕೆಯ ಬಗ್ಗೆ ಗುರುವಾರ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿ, ಸಂವಿಧಾನಿಕ ಹುದ್ದೆಯಲ್ಲಿರುವ ನೀವು ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯೇ? ನಿಮ್ಮ ಹೇಳಿಕೆಗಳಿಂದ ಜನರ ಮನಸ್ಸಿನಲ್ಲಿ ಅನುಮಾನ ಮೂಡುತ್ತದೆ. ರಾಜಕೀಯ ಕಾರಣಗಳಿಗಾಗಿ ನಾವು ಏಕೆ ಆದೇಶವನ್ನು ನೀಡಬೇಕು? ನಿಮ್ಮ ರಾಜಕೀಯ ದ್ವೇಷಗಳ ನಡುವೆ ಏಕೆ ನ್ಯಾಯಾಲಯವನ್ನು ಎಳೆದು ತರುತ್ತೀರಿ ಎಂದು ಪ್ರಶ್ನಿಸಿ ರೇವಂತ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

  • ತೆಲಂಗಾಣ ಮಾಜಿ ಸಿಎಂ KCR ದಿಢೀರ್‌ ಆಸ್ಪತ್ರೆಗೆ ದಾಖಲು – ಬೆಂಬಲಿಗರಲ್ಲಿ ಆತಂಕ

    ತೆಲಂಗಾಣ ಮಾಜಿ ಸಿಎಂ KCR ದಿಢೀರ್‌ ಆಸ್ಪತ್ರೆಗೆ ದಾಖಲು – ಬೆಂಬಲಿಗರಲ್ಲಿ ಆತಂಕ

    ಹೈದರಾಬಾದ್‌: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (K Chandrashekar Rao )ಅವರು ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಚಂದ್ರಶೇಖರ್‌ ರಾವ್‌ ಅವರಿಂದು (ಡಿ.8) ಮುಂಜಾನೆ 2 ಗಂಟೆ ಸುಮಾರಿಗೆ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಕಾಲು ಜಾರಿ ಬಿದ್ದು, ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ (Hyderabad Hospital) ದಾಖಲಿಸಲಾಗಿದೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಸೇರಿ ನಾಲ್ವರು ಕೇಂದ್ರ ಸಚಿವರಿಗೆ ಹೆಚ್ಚುವರಿ ಖಾತೆಗಳ ಉಸ್ತುವಾರಿ

    KCR

    ಕೆ. ಚಂದ್ರಶೇಖರ್ ರಾವ್ ಅವರು ಕುಸಿದು ಬಿದ್ದ ನಂತರ ಸೊಂಟ ಮುರಿತಕ್ಕೆ ಒಳಗಾಗಿಗಿರಬಹುದು ಎಂದು ವೈದ್ಯರು (Doctor) ಶಂಕಿಸಿದ್ದಾರೆ. ಆರೋಗ್ಯ ತಪಾಸಣೆ (ಸ್ಕ್ಯಾನಿಂಗ್‌) ನಡೆಸಿದ ಬಳಿಕ ನಿಜಾಂಶ ತಿಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ. ಕೆಸಿಆರ್‌ (KCR) ಕಳೆದ ಮೂರು ದಿನಗಳಿಂದ ತಮ್ಮ ಮನೆಯಲ್ಲಿ ಜನರನ್ನು ಭೇಟಿಯಾಗುತ್ತಿದ್ದರು ಎಂದು ಹೇಳಲಾಗಿದೆ. ಇದನ್ನೂ ಓದಿ: ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

    ಕೆಸಿಆರ್ 2014 ರಿಂದ 2023ರ ವರೆಗೆ ತೆಲಂಗಾಣ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಆದ್ರೆ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (BRS) ಅನ್ನು ಕಾಂಗ್ರೆಸ್ ಸೋಲಿಸಿತು. ರೇವಂತ್ ರೆಡ್ಡಿ ಅವರು ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ 11 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

  • ಪೊಲೀಸರ ಮೇಲೆ ಹಲ್ಲೆ – ಆಂಧ್ರ ಸಿಎಂ ಸಹೋದರಿ ವೈಎಸ್ ಶರ್ಮಿಳಾ ಖಾಕಿ ವಶಕ್ಕೆ

    ಪೊಲೀಸರ ಮೇಲೆ ಹಲ್ಲೆ – ಆಂಧ್ರ ಸಿಎಂ ಸಹೋದರಿ ವೈಎಸ್ ಶರ್ಮಿಳಾ ಖಾಕಿ ವಶಕ್ಕೆ

    ಹೈದರಾಬಾದ್: ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವೈಎಸ್‍ಆರ್ ತೆಲಂಗಾಣ ಪಕ್ಷದ (YSR Telangana Party) ನಾಯಕಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ (Jagan Mohan Reddy) ಸಹೋದರಿ ವೈ.ಎಸ್ ಶರ್ಮಿಳಾ (Y.S Sharmila) ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

    ರಾಜ್ಯ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‍ಐಟಿ (SIT) ಕಚೇರಿಗೆ ತೆರಳುತ್ತಿದ್ದಾಗ ಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಶರ್ಮಿಳಾ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸದಂತೆ ಮನವರಿಕೆ ಮಾಡಲು ತೆರಳಿದ ಪೊಲೀಸರ ಮೇಲೆ ಅವರು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪ್ರತಿಭಟನೆಗೆ ರಾಜಕೀಯ ಪಕ್ಷಗಳನ್ನು ಕರೆದ ಕುಸ್ತಿಪಟುಗಳು

    ತೆಲಂಗಾಣದಲ್ಲಿ ಸ್ವತಂತ್ರವಾಗಿ ರಾಜಕೀಯ ಗುರುತನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಶರ್ಮಿಳಾ ಅವರು ನಿರಂತರವಾಗಿ ಪತ್ರಿಕೆ ಸೋರಿಕೆ ವಿಷಯವನ್ನು ಎತ್ತುತ್ತಿದ್ದಾರೆ. ಕಳೆದ ತಿಂಗಳು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈದರಾಬಾದ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

    ಶರ್ಮಿಳಾ ಇತ್ತೀಚೆಗೆ ತೆಲಂಗಾಣದಾದ್ಯಂತ ಮೆರವಣಿಗೆ ನಡೆಸಿದ್ದರು. ಈ ವೇಳೆ ಆಂಧ್ರದಲ್ಲಿ ಅಧಿಕಾರದಲ್ಲಿರುವ ತನ್ನ ಸಹೋದರನ ವೈಎಸ್‍ಆರ್ ಕಾಂಗ್ರೆಸ್ (YSR Congress Party) ಪಕ್ಷಕ್ಕೂ ತನ್ನ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಒತ್ತಿ ಹೇಳಿದ್ದರು.

    ತೆಲಂಗಾಣ ರಾಜ್ಯ ಪಬ್ಲಿಕ್ ಸರ್ವಿಸ್ ಕಮಿಷನ್ (Telangana, State Public Service Commission) ನಡೆಸಿದ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ನಂತರ ತೆಲಂಗಾಣದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಪ್ರಕರಣ ಸಂಬಂಧ 11 ಜನರನ್ನು ಬಂಧಿಸಲಾಗಿದೆ. ಹುದ್ದೆಗಳ ಭರ್ತಿಗೆ ಬಾಕಿಯಿದ್ದ ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋರಿಕೆ ಆರೋಪದ ಬಗ್ಗೆ ವಿರೋಧ ಪಕ್ಷಗಳು ಕೆ. ಚಂದ್ರಶೇಖರ ರಾವ್ (K.Chandrashekar Rao) ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹೆಲಿಕಾಪ್ಟರ್‌ನ ರೆಕ್ಕೆ ಬಡಿದು ಅಧಿಕಾರಿ ಸಾವು

  • ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು

    ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು

    ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ (Telangana CM) ಕೆ ಚಂದ್ರಶೇಖರ್ ರಾವ್ (K Chandrashekar Rao) ಅವರು ಭಾನುವಾರ ಹೊಟ್ಟೆನೋವಿನ (Abdominal Pain) ಹಿನ್ನೆಲೆ ಹೈದರಾಬಾದ್‌ನ (Hyderabad) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷದ ಮುಖ್ಯಸ್ಥ ಕೆಸಿಆರ್ ಅವರು ಹೊಟ್ಟೆನೋವಿನ ಹಿನ್ನೆಲೆ ನಗರದ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಹೊಟ್ಟೆಯಲ್ಲಿ ಸಣ್ಣ ಹುಣ್ಣು ಕಾಣಿಸಿಕೊಂಡಿದ್ದು, ಚಿಕಿತ್ಸೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Telangana cm KCR

    ಹೊಟ್ಟೆಯಲ್ಲಿ ಕಂಡುಬಂದಿರುವ ಹುಣ್ಣಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಇದನ್ನು ಹೊರತುಪಡಿಸಿ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಸೂಕ್ತವಾದ ಔಷಧಿ ನೀಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಶೂಟೌಟ್ ಕೇಸ್- A3 ಆರೋಪಿ ಲಿಂಬಾವಳಿ ಹೇಳಿಕೆ ಕೂಡ ದಾಖಲು

    ಕೆಸಿಆರ್ (KCR) ಆಸ್ಪತ್ರೆ ದಾಖಲಾಗಿರುವ ಹಿನ್ನೆಲೆ ಟ್ವೀಟ್ ಮಾಡಿರುವ ತೆಲಂಗಾಣದ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಕೆ ಚಂದ್ರಶೇಖರ್ ರಾವ್ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: RRR-ನಾಟು ನಾಟು ಹಾಡಿಗೆ ಆಸ್ಕರ್ : ಸಂತಸ ವ್ಯಕ್ತ ಪಡಿಸಿದ ಲಹರಿ ವೇಲು

  • ಆಂಧ್ರ ಸಿಎಂ ಸಹೋದರಿ ಅರೆಸ್ಟ್; ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕೇಸ್ ದಾಖಲು

    ಆಂಧ್ರ ಸಿಎಂ ಸಹೋದರಿ ಅರೆಸ್ಟ್; ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕೇಸ್ ದಾಖಲು

    ಹೈದರಬಾದ್: ಆಡಳಿತ ಪಕ್ಷ ಭಾರತೀಯ ರಾಷ್ಟ್ರೀಯ ಸಮಿತಿಯ ಶಾಸಕರೊಬ್ಬರ (BRS) ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದ ಮೇಲೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ (Y.S.Jagan Mohan Reddy) ಸಹೋದರಿ ಹಾಗೂ ವೈಎಸ್‍ಆರ್ ತೆಲಂಗಾಣ ಪಾರ್ಟಿಯ (YSRTP) ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರನ್ನು ತೆಲಂಗಾಣದ ಮೆಹಬೂಬಾಬಾದ್‍ನ ಬೆತೋಲ್‍ನಲ್ಲಿ ಬಂಧಿಸಲಾಗಿದೆ. ಅಲ್ಲದೇ ಶರ್ಮಿಳಾ ವಿರುದ್ಧ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ (SC, ST atrocities case) ಅಡಿ ಪ್ರಕರಣ ದಾಖಲಿಸಲಾಗಿದೆ.

    YS Sharmila 1

    ಶರ್ಮಿಳಾ ಅವರು ಮೆಹಬೂಬಾಬಾದ್ ನಗರದ ಶಾಸಕ ಶಂಕರ್ ನಾಯ್ಕ್ ವಿರುದ್ಧ ಪಕ್ಷದ ಸಭೆಯೊಂದರಲ್ಲಿ ಮಾನಹಾನಿ ಪದಗಳ ಬಳಕೆ ಮಾಡಿದ್ದರು. ದರೋಡೆ, ಅಕ್ರಮ, ಭೂ ಒತ್ತುವರಿ, ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಆರ್‍ಎಸ್ ಮಂಡಲ್ ಅಧ್ಯಕ್ಷ ಲುನಾವತ್ ಅಶೋಕ್ ಅವರು ಪೊಲೀಸ್ ಠಾಣೆಯಲ್ಲಿ ಶರ್ಮಿಳಾ ವಿರುದ್ಧ ದೂರು ದಾಖಲಿಸಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ಶಂಕರ್ ನಾಯ್ಕ್ ವಿರುದ್ಧ ಶರ್ಮಿಳಾ ಕಠಿಣ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೆಹಬೂಬಾಬಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನುಷ್ಯತ್ವ ಇರೋರು ಜನ ಸಾಯುತ್ತಿದ್ದಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ – ಫೇಸ್‌ಬುಕ್‌ನಲ್ಲಿ ರೋಹಿಣಿ ವಿರುದ್ಧ ರೂಪಾ ಕಿಡಿ

    FotoJet 3 15

    ಬೆತೋಲ್‍ನಲ್ಲಿ ಅವರು ಪಾದಯಾತ್ರೆ ನಡೆಸುತ್ತಿದ್ದ ವೇಳೆ ಅಡಳಿತ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಶರ್ಮಿಳಾ ಅವರನ್ನು ಬಂಧಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಅವರನ್ನು ಹೈದ್ರಾಬಾದ್‍ಗೆ (Hyderabad) ಕರೆದೊಯ್ಯಲಾಯಿತು.

    JAGAN MOHAN REDDY

    ಈ ಹಿಂದೆ ಸಹ ಶರ್ಮಿಳಾ ಅವರ ಬೆಂಬಲಿಗರು ಹಾಗೂ ಬಿಆರ್‍ಎಸ್ ಪಕ್ಷದ ಕಾರ್ಯಕರ್ತರೊಂದಿಗಿನ ಗಲಾಟೆ ವಿಚಾರವಾಗಿ ಹೈದ್ರಾಬಾದ್ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಶರ್ಮಿಳಾ ಅವರು ಕಾರಿನಲ್ಲಿರುವಾಗಲೇ ಪೊಲೀಸರು ಕಾರನ್ನು ಕ್ರೈನ್ ಮೂಲಕ ಎಳೆದೊಯ್ದಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ಶರ್ಮಿಳಾ ಅವರು ಜನರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಶಾಂತಿಯುತ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಜನಪ್ರಿಯತೆಯನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K. Chandrashekar Rao) ಹಾಗೂ ಅವರ ಬೆಂಬಲಿಗರು ಸಹಿಸುತ್ತಿಲ್ಲ ಎಂದು ಆರೋಪಿಸಿದ್ದರು. ಇದನ್ನೂ ಓದಿ: ನಟ ತಾರಕ ರತ್ನ ಅಂತಿಮ ದರ್ಶನಕ್ಕೆ ತೆಲುಗು ಫಿಲ್ಮ್ ಚೇಂಬರ್ ವ್ಯವಸ್ಥೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ

    ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ

    ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ (Delhi excise policy case) ಸಂಬಂಧಿಸಿ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ.

    ಆರೋಪಿ ಬುಚ್ಚಿ ಬಾಬು ಗೋರಂಟ್ಲಾ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ( K Chandrashekar Rao) ಅವರ ಪುತ್ರಿ ಎಂಎಲ್‍ಸಿ ಕವಿತಾ (Kavitha) ಅವರ ಮಾಜಿ ಆಡಿಟರ್ ಆಗಿದ್ದ.

    Delhi Liquor Policy Scam ED Names CM KCRs Daughter Kavitha in Case Alleges Role in Rs 100 Cr Kickbacks

    ಪ್ರಕರಣಕ್ಕೆ ಸಂಬಂಧಿಸಿದಂತೆ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಗೋರಂಟ್ಲಾ ಅವರು ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಗ್ರಾಮದೇವತೆಗಾಗಿ ಊರಿಗೆ ಊರೇ ಖಾಲಿ- ಕಲಘಟಗಿಯಲ್ಲಿ ವಿಶಿಷ್ಟ ಜಾತ್ರೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಡಿ. 12ರಂದು ಕೆಸಿಆರ್ ಪುತ್ರಿ ಕವಿತಾ ಅವರನ್ನು ಹೈದರಾಬಾದ್‍ನಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಜಾತಕ ಹೊಂದಿಸಿ ಹಿಂದೂ ಸಂಪ್ರದಾಯದಂತೆ 2 ಗಿಳಿಗಳಿಗೆ ಅದ್ಧೂರಿ ವಿವಾಹ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BRSನಿಂದ ಮೊದಲ ಸಾರ್ವಜನಿಕ ಸಭೆ – ಕೆಂಪು ಕೋಟೆ ಮೇಲೆ ಗುಲಾಬಿ ಬಾವುಟ ಹಾರಲಿದೆ : ಕೆಸಿಆರ್ ವಿಶ್ವಾಸ

    BRSನಿಂದ ಮೊದಲ ಸಾರ್ವಜನಿಕ ಸಭೆ – ಕೆಂಪು ಕೋಟೆ ಮೇಲೆ ಗುಲಾಬಿ ಬಾವುಟ ಹಾರಲಿದೆ : ಕೆಸಿಆರ್ ವಿಶ್ವಾಸ

    ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಪಕ್ಷದ (BRS) ವತಿಯಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್‌ನಿಂದ 200 ಕಿ.ಮೀ ದೂರದಲ್ಲಿರುವ ಖಮ್ಮಂನಲ್ಲಿ ಪಕ್ಷದ ಶಕ್ತಿ ಪ್ರದರ್ಶನ ನಡೆಯುತ್ತಿದೆ.

    ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ್ ರಾಷ್ಟ್ರ ಸಮಿತಿಯಾಗಿ ಹೆಸರು ಬದಲಿಸಿಕೊಂಡ ಬಳಿಕ ನಡೆಯುತ್ತಿರುವ ಈ ಬೃಹತ್ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal), ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan), ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann), ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಮತ್ತು ಸಿಪಿಐ ಜನರಲ್ ಸೆಸಿ ಡಿ ರಾಜಾ ಭಾಗಿಯಾಗಿದ್ದು, ಈ ಮೂಲಕ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನವೂ ನಡೆಯುತ್ತಿದೆ.

    Bharat Rashtra Samiti 2

    ಸಮಾವೇಶಕ್ಕೆ ತೆರಳುವ ಮುನ್ನ ಸರ್ಕಾರದಿಂದ ಬೃಹತ್ ಪ್ರಮಾಣದಲ್ಲಿ ನವೀಕರಿಸಲ್ಪಟ್ಟ ಹೈದರಾಬಾದ್ ಬಳಿಯ ಯಾದಾದ್ರಿಯಲ್ಲಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕೆಸಿಆರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಕೆಂಪು ಕೋಟೆಯ ಮೇಲೆ ಒಂದು ದಿನ ಗುಲಾಬಿ ಧ್ವಜ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಡಿತದ ಚಟವಿರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು: ವೀರೇಂದ್ರ ಹೆಗ್ಗಡೆ

    KCR 2

    ಅಬ್ ಕಿ ಬಾರ್ ಕಿಸಾನ್ ಸರ್ಕಾರ್ (ಈ ಬಾರಿ ರೈತರ ಸರ್ಕಾರ) ಘೋಷಣೆ ಕೂಗಿದ ಅವರು, ಹೊಸ ಆರ್ಥಿಕ, ಪರಿಸರ, ನೀರು, ವಿದ್ಯುತ್ ಮತ್ತು ಮಹಿಳಾ ಸಬಲೀಕರಣ ನೀತಿಗಳು ದೇಶದಲ್ಲಿ ಅಗತ್ಯವಿದೆ ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ರಾಜಕೀಯ ವಲಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಜನಪ್ರಿಯ ಬಜೆಟ್ ಬ್ಲೂಪ್ರಿಂಟ್‌ಗೆ ಸಿಎಂ ಸೂಚನೆ- ಎಲೆಕ್ಷನ್ ಬಜೆಟ್‌ನಲ್ಲಿ ಬಂಪರ್ ಗಿಫ್ಟ್ ಸುರಿಮಳೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾಸಕರ ಖರೀದಿಗೆ BJPಯಿಂದ ಸಾವಿರಾರು ಕೋಟಿ ಆಮಿಷ- ಕಾಂಗ್ರೆಸ್

    ಶಾಸಕರ ಖರೀದಿಗೆ BJPಯಿಂದ ಸಾವಿರಾರು ಕೋಟಿ ಆಮಿಷ- ಕಾಂಗ್ರೆಸ್

    ಬೆಂಗಳೂರು: ತೆಲಂಗಾಣದಲ್ಲಿ ಆಪರೇಷನ್ ಕಮಲ (Operation Kamala) ಶುರುವಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕರನ್ನು ಖರೀದಿಸಲು ಬಿಜೆಪಿ (BJP) ಸಾವಿರಾರು ಕೋಟಿ ಆಮಿಷ ಒಡ್ಡಿದೆ ಎಂದು ಕಾಂಗ್ರೆಸ್ (Congress) ಗಂಭೀರ ಆರೋಪ ಮಾಡಿದೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ (Congress), ಮೂಲಗಳ ಪ್ರಕಾರ ಆಪರೇಷನ್ ಕಮಲದ (Operation Kamala) ರೂವಾರಿಗಳು ಅಮಿತ್ ಶಾ (Amit Shah), ಬಿ.ಎಲ್ ಸಂತೋಷ್ ಹಾಗೂ ಜೆ.ಪಿ ನಡ್ಡಾ (JP Nadda). ಸಂಸ್ಕಾರ, ಚಾರಿತ್ರ್ಯ ಹಾಗೂ ನೈತಿಕ ರಾಜಕಾರಣದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿ.ಎಲ್.ಸಂತೋಷ್ ಮಾಡುವುದು ಮಾತ್ರ ಅನಾಚಾರ. ಆಪರೇಷನ್ ಕಮಲ ಯಾವ ಸಂಸ್ಕಾರ ಎಂದು ಪ್ರಶ್ನಿಸಿದೆ.

    amit shah narendra modi

    ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಶಾಸಕರನ್ನು ಖರೀದಿಸಲು ಸಾವಿರಾರು ಕೋಟಿ ಆಮಿಷ ಒಡ್ಡಲಾಗಿದೆ. ಬಿಜೆಪಿಯವರಿಗೆ ಇಷ್ಟೊಂದು ದುಡ್ಡು ಬರುವುದು ಎಲ್ಲಿಂದ? ಆಪರೇಷನ್ ಕಮಲಕ್ಕೆ ಪಿಎಂ ಕೇರ್ (PM Cares) ನಿಧಿ ಬಳಸಲಾಗುತ್ತಿದೆಯೇ ಅಥವಾ ಭ್ರಷ್ಟಾಚಾರದಿಂದ ಗಳಿಸಿದ ಹಣ ಬಳಕೆಯಾಗುತ್ತಿದೆಯೇ? ನಾ ಖಾವೂಂಗಾ, ನಾ ಖಾನೇದೂಂಗಾ ಎನ್ನುವ ಮೋದಿಯವರೆ (Narendra Modi), ಆಪರೇಷನ್ ಕಮಲದ ಹಣದ ಮೂಲ ಯಾವುದು ತಿಳಿಸುವಿರಾ? ಎಂದು ಕುಟುಕಿದೆ.

    JP Nadda Amit Shah modi

    ಈಗಾಗಲೇ ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಅಕ್ರಮವಾಗಿ ಅಧಿಕಾರಕ್ಕೇರಿರುವ ಬಿಜೆಪಿ (BJP) ಈಗ ತೆಲಂಗಾಣದಲ್ಲೂ ಅನಿಷ್ಟ ಪ್ರಯತ್ನಕ್ಕೆ ಕೈ ಹಾಕಿದೆ. ಆದರೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಿಲ್ಲ. ಏಕೆಂದರೆ ಆಪರೇಷನ್ ಕಮಲ ಬಿಜೆಪಿಯ ಅನೈತಿಕ ಶಿಶು. ಬಿಜೆಪಿಯವರು ಪ್ರಜಾಪ್ರಭುತ್ವದ ರಕ್ಷಕರಾಗದೇ ಭಕ್ಷಕರಾಗುತ್ತಿದ್ದಾರೆ ಎಂದು ಕಿಡಿ ಕಾರಿದೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ: ಕೆಸಿಆರ್

    ಮೋದಿ ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ: ಕೆಸಿಆರ್

    ನವದೆಹಲಿ: ನರೇಂದ್ರ ಮೋದಿ ಅವರು ಭಾರತ ಕಂಡ ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಾಗ್ದಾಳಿ ನಡೆಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇಂಧನ ಬೆಲೆಗಳಲ್ಲಿನ ನಿಯಮಿತ ಏರಿಕೆಯಿಂದ ನಿರುದ್ಯೋಗ, ಬಹು ಹಗರಣಗಳು ಮತ್ತು ದ್ವೇಷದ ಅಪರಾಧಗಳವರೆಗೆ, ಪ್ರಧಾನ ಮಂತ್ರಿಯು ಉತ್ತರದಾಯಿ ಎಂದು ಗುಡುಗಿದರು.

    NARENDRA MODI 4

    ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸುವಷ್ಟು ಧೈರ್ಯಶಾಲಿಯಾಗಿದ್ದರು. ಅದು ನೇರ ಘೋಷಿತ ತುರ್ತು ಪರಿಸ್ಥಿತಿ ಆಗಿತ್ತು. ಆದರೆ ಇಂದು ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಇಂತಹ ನರೇಂದ್ರ ಮೋದಿ ಸರ್ಕಾರ ಕೊನೆಗೊಂಡು ಬಿಜೆಪಿಯೇತರ ಸರ್ಕಾರ ಬರಬೇಕು ಎಂದರು.

    ಬಿಜೆಪಿ ವಾಶಿಂಗ್ ಪೌಡರ್ ನಿರ್ಮಾ ಆಗಿದೆ ಎಂದ ಅವರು, ಈಟಾಲ ರಾಜೇಂದರ್, ಸುಜನಾ ಚೌಧರಿ, ಸಿಎಂ ರಮೇಶ್, ಹಿಮಂತ್ ಬಿಸ್ವಾ ಶರ್ಮಾ ಮತ್ತು ಮುಕುಲ್ ರಾಯ್ ಸೇರಿದಂತೆ ಇತರರು ಬಿಜೆಪಿ ಸೇರಿದ ನಂತರ ನಾಯಕರ ಮೇಲೆ ದಾಳಿಗಳನ್ನು ನಿಲ್ಲಿಸಲಾಯಿತು ಎಂದು ಆರೋಪಿಸಿದರು. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ದ್ರೌಪದಿ ಮುರ್ಮು- ಎನ್‍ಡಿಎ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ

    BJP FLAG

    ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಮಾಜಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಮೇಲೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ನ್ಯಾಯಾಧೀಶರನ್ನು ಶ್ಲಾಘಿಸಿದರು.

    ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜಸ್ಟಿಸ್ ಪಾರ್ದಿವಾಲಾ, ನಾನು ನಿಮಗೆ ನಮಸ್ಕರಿಸುತ್ತೇನೆ. ಭಾರತವನ್ನು ಉಳಿಸಲು ದಯವಿಟ್ಟು ಅದೇ ಮನೋಭಾವವನ್ನು ಇಟ್ಟುಕೊಳ್ಳಿ. ನ್ಯಾಯಾಂಗವು ದೇಶವನ್ನು ಈ ದೇಶದ್ರೋಹಿಗಳು, ರಾಕ್ಷಸರು ಮತ್ತು ಸರ್ವಾಧಿಕಾರಿಗಳಿಂದ ರಕ್ಷಿಸಬೇಕಾಗಿದೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ – ಟಿಎಂಸಿ ನಡುವೆ `ಕಾಳಿ’ ಕದನ

    Live Tv
    [brid partner=56869869 player=32851 video=960834 autoplay=true]