Thursday, 18th July 2019

Recent News

1 month ago

ಬಸ್, ಲಾರಿ ನಡುವೆ ಭೀಕರ ಅಪಘಾತ- 11 ಮಂದಿ ಸ್ಥಳದಲ್ಲೇ ಸಾವು

ನವದೆಹಲಿ: ಡಬ್ಬಲ್ ಡೆಕ್ಕರ್ ಬಸ್ಸೊಂದರ ಬ್ರೇಕ್ ಫೇಲ್ ಆಗಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ. ಹಜಾರಿಬಾಘ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ ಜಾರ್ಖಂಡ್‍ನ ರಾಂಚಿಯಿಂದ ಪಾಟ್ನಾ ಜಿಲ್ಲೆಯ ಮಸೌರಿ ಪ್ರದೇಶಕ್ಕೆ ಹೋಗುತ್ತಿತ್ತು. ಈ ವೇಳೆ ಹೆದ್ದಾರಿ ಮಧ್ಯದಲ್ಲಿ ಬಸ್ ಬ್ರೇಕ್‍ಫೇಲ್ ಆಗಿ ಅಪಘಾತವಾಗಿದ್ದು, 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ 25 ಮಂದಿ ಗಾಯಗೊಂಡಿದ್ದಾರೆ. […]

1 month ago

ಬಯೋಮೆಟ್ರಿಕ್ ಕೆಟ್ಟಿದ್ದಕ್ಕೆ 3 ತಿಂಗಳು ರೇಷನ್ ಕೊಡ್ಲಿಲ್ಲ: ಹಸಿವಿನಿಂದ ವೃದ್ಧ ಸಾವು

ರಾಂಚಿ: ಹಸಿವಿನಿಂದ ಬಳಲಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ. ಜಾರ್ಖಂಡ್ ಸಮೀಪ ಲಾತೆಹರ್ ಗ್ರಾಮದ ನಿವಾಸಿ ರಾಂಚರಣ್ ಮುಂಡಾ (65) ಮೃತ ವೃದ್ಧ. ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಯಂತ್ರ ಕೆಟ್ಟಿತ್ತು. ಹೀಗಾಗಿ ಕಳೆದ ಮೂರು ತಿಂಗಳುಗಳಿಂದ ಯಾವುದೇ ಆಹಾರ ಪದಾರ್ಥ ವಿತರಣೆ ಮಾಡಿರಲಿಲ್ಲ. ಹೀಗಾಗಿ ಹಸಿವಿನಿಂದ ಬಳಲಿ ರಾಂಚರಣ್ ಪ್ರಾಣ ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು...

ತಾಯಿಯ ವೇತನ ಕೇಳಲು ಬಂದಿದ್ದ ಮಗನಿಗೆ ಬೆಂಕಿ ಇಟ್ಟು ಕೊಂದ್ರು!

3 months ago

ರಾಂಚಿ: ತಾಯಿಯ ವೇತನ ಕೇಳಲು ಬಂದಿದ್ದ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಅಮಾನವೀಯ ಘಟನೆ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ. ಪನ್ನೂಲಾಲ್ ಸಾವೋ (38) ಕೊಲೆಯಾದ ವ್ಯಕ್ತಿ. ರವೀಂದ್ರ ಕುಮಾರ್ ಮೆಹ್ತಾ ಕೊಲೆ ಮಾಡಿದ ಆರೋಪಿ. ಡುಮರಾನ್ ಗ್ರಾಮದಲ್ಲಿ ಗುರುವಾರ...

ಎಲ್ಲ ಕಳ್ಳರ ಹೆಸರಿನ ಕೊನೆಗೆ ‘ಮೋದಿ’ ಯಾಕಿರುತ್ತೆ: ರಾಹುಲ್ ಗಾಂಧಿ ಪ್ರಶ್ನೆ

5 months ago

ರಾಂಚಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಮುಖಂಡರ ಆರೋಪ-ಪ್ರತ್ಯಾರೋಪಗಳು ಆರಂಭಗೊಂಡಿವೆ. ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಲ್ಲ ಕಳ್ಳರ ಹೆಸರಿನ ಕೊನೆಗೆ ‘ಮೋದಿ’ ಯಾಕೆ ಇರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ನೀವು...

7 ವರ್ಷದ ಬಾಲಕಿ ಮೇಲೆ 9ರ ಬಾಲಕನಿಂದ ಅತ್ಯಾಚಾರ..!

7 months ago

ರಾಂಚಿ: ಜಾರ್ಖಂಡ್‍ನ ಸಿಂಗ್ಬಾಮ್ ಜಿಲ್ಲೆಯಲ್ಲಿ 9 ವರ್ಷದ ಬಾಲಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಂಗ್ಬಾಮ್ ಜಿಲ್ಲೆಯ ಬ್ಯಾಗ್ಬೆರಾ ಪ್ರದೇಶದಲ್ಲಿ ಡಿ. 12ರಂದು ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯ ಅಜ್ಜ-ಅಜ್ಜಿ ಪೊಲೀಸರಿಗೆ...

ಶವವನ್ನು ಕುಕ್ಕಿ ಕುಕ್ಕಿ ತಿಂದ ನರಭಕ್ಷಕ ಕಾಗೆ

8 months ago

ರಾಂಚಿ: ಜಾರ್ಖಂಡ್‍ನ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ರಿಮ್ಸ್ ಆಸ್ಪತ್ರೆಯಲ್ಲಿ ಶವಗಾರದ ಮುಂದೆ ಇರಿಸಿದ್ದ ಶವವನ್ನು ಕಾಗೆಯೊಂದು ಕುಕ್ಕಿ ಕುಕ್ಕಿ ತಿಂದಿದೆ. ಮಂಗಳವಾರ ಬೆಳಗ್ಗೆ ರಾಂಚಿಯ ಮಾರ್ಕೆಟ್ ಬಳಿಯ ಛಾಂದ್ರಿ ಕೆರೆಯಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು. ಪೊಲೀಸರು ಆ ಶವವನ್ನು ರಿಮ್ಸ್ ಆಸ್ಪತ್ರೆಗೆ...

ಗನ್ ಬಿಟ್ಟು ಚಾಕ್ ಪೀಸ್ ಹಿಡಿದು ಪಾಠ ಮಾಡಿದ ಯೋಧರು!

8 months ago

ರಾಂಚಿ: ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ಶಿಕ್ಷಕರು ತೊಡಗಿದ್ದರಿಂದ ಜಾರ್ಖಂಡ್ ರಾಜ್ಯದ ರಾಮಘಡ ಜಿಲ್ಲೆಯ ಶಾಲೆಯಲ್ಲಿ ಯೋಧರು ಶಸ್ತ್ರಾಸ್ತ್ರವನ್ನು ಬಿಟ್ಟು ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ. ಹೌದು, ದೇಶವನ್ನು ಕಾಯುವ ಯೋಧರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ನೈಪುಣ್ಯತೆಯನ್ನು ಹೊಂದಿರುತ್ತಾರೆನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಜಾರ್ಖಂಡ್‍ನ ನಕ್ಸಲ್ ಪೀಡಿತ...

ಜಮೀನಿನಲ್ಲಿ ಶೌಚ ಮಾಡಿದಕ್ಕೆ ಕೊಲೆಗೈದ್ರು!

8 months ago

ರಾಂಚಿ: ಜಮೀನಿನಲ್ಲಿ ಶೌಚ ಮಾಡಿದ ಅಂತಾ 45 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಕೊಲೆಗೈದಿರುವ ಅಮಾನವೀಯ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ. ಪಲಮು ಜಿಲ್ಲೆಯ ಸುಕ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಘಟನೆ ನಡೆದಿದೆ. ಮೃತ ವ್ಯಕ್ತಿಯ ಪುತ್ರ ಶುಕ್ರವಾರ...