Sunday, 19th May 2019

1 year ago

ನಾವೇ ದುಡ್ಡು ಹಾಕಿ ನೀರು ತರ್ತೀವಿ- ಮಹದಾಯಿಗಾಗಿ ಸ್ಥಾಪನೆಯಾಯ್ತು ಜನಸಾಮಾನ್ಯರ ಪಕ್ಷ

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಜನ ಸಾಮಾನ್ಯರ ಮಧ್ಯದಲ್ಲಿಯೇ ನೂತನ ಜನ ಸಾಮಾನ್ಯರ ಪಕ್ಷಕ್ಕೆ ಚಾಲನೆ ನೀಡಲಾಯಿತು. ಡಾ. ಅಯ್ಯಪ್ಪ ನೇತೃತ್ವದಲ್ಲಿ ಮುನ್ನಡೆಯುತ್ತಿರೋ ಪಕ್ಷಕ್ಕೆ ರೈತ ಮಹಿಳೆ ನಿಂಬೆವ್ವ ದೊರೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಜನ ಸಾಮಾನ್ಯರ ಪಕ್ಷವನ್ನ ಬೆಂಬಲಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಚಂಪಾ, ಮಹಾದಾಯಿ ಹೋರಾಟಗಾರ ವಿಜಯ್ ಕುಲಕರ್ಣಿ ಸೇರಿದಂತೆ ಮಹದಾಯಿ ಹೋರಾಟಗಾರರು ಹಾಗೂ ಬಹುತೇಕ ರೈತಪರ ಸಂಘಟನೆಗಳು […]