Tag: Jagannath Rath Yatra

  • ಪುರಿ ಕಾಲ್ತುಳಿತದಲ್ಲಿ ಮೂವರ ಸಾವು ಪ್ರಕರಣ – ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ

    ಪುರಿ ಕಾಲ್ತುಳಿತದಲ್ಲಿ ಮೂವರ ಸಾವು ಪ್ರಕರಣ – ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ

    – ಜಗನ್ನಾಥ ಭಕ್ತರಲ್ಲಿ ಕ್ಷಮೆಯಾಚಿಸಿದ ಒಡಿಶಾ ಸಿಎಂ, ಇಬ್ಬರು ಅಧಿಕಾರಿಗಳ ಅಮಾನತು

    ಭುವನೇಶ್ವರ: ಒಡಿಶಾದ (Odisha) ಪುರಿ ಜಗನ್ನಾಥ ರಥಯಾತ್ರೆ (Puri Jagannath Rath Yatra) ವೇಳೆ ಕಾಲ್ತುಳಿತ (Stampede) ಉಂಟಾಗಿ ಮೂವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇದೀಗ ಘಟನೆಗೆ ಕ್ಷಮೆಯಾಚಿಸಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಘೋಷಣೆ ಮಾಡಿದ್ದಾರೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನಾನು ಮತ್ತು ನನ್ನ ಸರ್ಕಾರ ಎಲ್ಲಾ ಜಗನ್ನಾಥ ಭಕ್ತರರಲ್ಲಿ ಕ್ಷಮೆಯಾಚಿಸುತ್ತದೆ. ಜೀವ ಕಳೆದುಕೊಂಡ ಭಕ್ತರ ಕುಟುಂಬಗಳಿಗೆ ನಾವು ನಮ್ಮ ಸಂತಾಪ ಸೂಚಿಸುತ್ತೇವೆ. ಈ ಆಳವಾದ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಅವರಿಗೆ ನೀಡಬೇಕೆಂದು ಮಹಾಪ್ರಭು ಜಗನ್ನಾಥನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Uttar Pradesh | ರೀಲ್ಸ್ ಮಾಡೋಕೆ ಐಫೋನ್‌ಗಾಗಿ ಬೆಂಗಳೂರು ಯುವಕನ ಕೊಲೆ

    Puri Jagannath

    ತಲಾ 25 ಲಕ್ಷ ಪರಿಹಾರ ಘೋಷಣೆ
    ದುರಂತದಲ್ಲಿ ಪ್ರಾಣ ಕಳೆದುಕೊಂಡ ಭಕ್ತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರದವು ನಿಮ್ಮೊಂದಿಗಿರಲಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಆತ್ಮಾಹುತಿ ದಾಳಿಯ ಹೊಣೆ ಹೊರಿಸಲು ಪಾಕ್ ಯತ್ನ – ಭಾರತ ತಿರುಗೇಟು

    ಆಡಳಿತಾತ್ಮಕ ತನಿಖೆಗೆ ಆದೇಶ
    ಇನ್ನೂ ಘಟನೆಗೆ ನಿಖರ ಕಾರಣ ತಿಳಿಯಲು ಪೂರ್ಣ ಪ್ರಮಾಣದ ಆಡಳಿತಾತ್ಮಕ ತನಿಖೆಗೆ ಮಾಝಿ ಆದೇಶಿಸಿದ್ದಾರೆ. ಈ ಬೆನ್ನಲ್ಲೇ ಭದ್ರತಾ ಲೋಪಕ್ಕೆ ಕಾರಳವಾದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ – ಮೂವರು ಸಾವು, 10 ಮಂದಿಗೆ ಗಾಯ

    Puri Jagannath 2

    ಏನಿದು ಘಟನೆ?
    ಇದೇ ಜೂ.27ರಂದು ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಾಲಯದ ಬಳಿ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಪ್ರಭಾತಿ ದಾಸ್, ಬಸಂತಿ ಸಾಹು ಹಾಗೂ ಪ್ರೇಮಕಾಂತ್ ಮೊಹಂತಿ (70) ಎಂದು ಗುರುತಿಸಲಾಗಿದೆ. ಮೂವರೂ ಒಡಿಶಾದ ಖುರ್ದಾ ಜಿಲ್ಲೆಯವರಾಗಿದ್ದು, ರಥಯಾತ್ರೆಗಾಗಿ ಪುರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ – 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, 40ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕ

    ಜಗನ್ನಾಥ ದೇವರು ಮತ್ತು ಅವರ ಅಣ್ಣ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ದೇವಿಯ ರಥಯಾತ್ರೆಯ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

    Puri Jagannath 3

    ಜಗನ್ನಾಥ ರಥಯಾತ್ರೆ ವಿಶೇಷ ಏನು?
    ಅಹಮದಾಬಾದ್‌ನಲ್ಲಿ ನಡೆಯುವ ರಥಯಾತ್ರೆ ಅದೊಂದು ಐತಿಹಾಸಿಕ ಹಿಂದೂ ಹಬ್ಬ. 1878ರಿಂದಲೂ ಪ್ರತಿವರ್ಷ ರಥೋತ್ಸವ ಜರುಗುತ್ತಿದೆ. ಜಗನ್ನಾಥ ದೇವಸ್ಥಾನವು ಆಷಾಢ ಸುಧ್ ಬಿಜ್‌ನಂದು ರಥಯಾತ್ರೆ ಮೆರವಣಿಗೆಯನ್ನು ಆಯೋಜಿಸುತ್ತದೆ. ಈ ಹಬ್ಬದಂದು ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವತೆಗಳನ್ನು ಪೂಜಿಸಲಾಗುತ್ತದೆ. ಇದು 148ನೇ ಜಗನ್ನಾಥ ರಥಯಾತ್ರೆ ಆಗಿದೆ.

  • ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ – ಮೂವರು ಸಾವು, 10 ಮಂದಿಗೆ ಗಾಯ

    ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ – ಮೂವರು ಸಾವು, 10 ಮಂದಿಗೆ ಗಾಯ

    ಭುವನೇಶ್ವರ: ಒಡಿಶಾದ (Odisha) ಪುರಿ ಜಗನ್ನಾಥ ರಥಯಾತ್ರೆ (Puri Jagannath Rath Yatra) ವೇಳೆ ಕಾಲ್ತುಳಿತ (Stampede) ಉಂಟಾಗಿ ಮೂವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.

    ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಾಲಯದ ಬಳಿ ಕಾಲ್ತುಳಿತ ಉಂಟಾಗಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಪ್ರಭಾತಿ ದಾಸ್, ಬಸಂತಿ ಸಾಹು ಹಾಗೂ ಪ್ರೇಮಕಾಂತ್ ಮೊಹಂತಿ (70) ಎಂದು ಗುರುತಿಸಲಾಗಿದೆ. ಮೂವರೂ ಒಡಿಶಾದ ಖುರ್ದಾ ಜಿಲ್ಲೆಯವರಾಗಿದ್ದು, ರಥಯಾತ್ರೆಗಾಗಿ ಪುರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶತಕ ಹೊಡೆದು ಹಲವು ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

    ಇಂದು ಮುಂಜಾನೆ 4:30ರ ವೇಳೆಗೆ ಘಟನೆ ನಡೆದಿದೆ. ಗುಂಡಿಚಾ ದೇವಾಲಯದ ಬಳಿ ರಥಯಾತ್ರೆಯನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹವೇ ಸೇರಿತ್ತು. ರಥಗಳು ಭಕ್ತರನ್ನು ಸಮೀಪಿಸುತ್ತಿದ್ದಂತೆ ಜನಸಂದಣಿ ಹೆಚ್ಚಾಗಿ ಕಾಲ್ತುಳಿತ ಉಂಟಾಗಿದೆ. ಇದನ್ನೂ ಓದಿ: ನಕಲಿ ಬ್ರಾಂಡೆಡ್ ಜೀನ್ಸ್ ತಯಾರಿಕಾ ಅಡ್ಡೆ ಮೇಲೆ ಪೊಲೀಸ್ ದಾಳಿ – 30 ಲಕ್ಷಕ್ಕೂ ಅಧಿಕ ಮೌಲ್ಯದ ಜೀನ್ಸ್ ಸೀಜ್

  • ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ – 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, 40ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕ

    ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ – 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, 40ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕ

    ಭುವನೇಶ್ವರ: ಒಡಿಶಾದ ಪುರಿಯಲ್ಲಿಂದು ನಡೆಯುತ್ತಿದ್ದ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ (Jagannath Rath Yatra) ವೇಳೆ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ. 40ಕ್ಕೂ ಹೆಚ್ಚು ಭಕ್ತರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

    Puri Jagannath 2

    ಜಗನ್ನಾಥ ದೇವರು ಮತ್ತು ಅವರ ಅಣ್ಣ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ದೇವಿಯ ರಥಯಾತ್ರೆಯ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಭಕ್ತರನ್ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಅಂಬುಲೆನ್ಸ್‌ಗಳು ರಥಯಾತ್ರೆ ಸ್ಥಳಕ್ಕೆ ತಲುಪಿವೆ. ಸಂತ್ರಸ್ತರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರಿಗೂ ಅಗತ್ಯ ವೈದ್ಯಕೀಯ ನೆರವು ನೀಡಲಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ

    Puri Jagannath 3

    ಬಲಭದ್ರನ ತಾಳಧ್ವಜ ರಥ ಎಳೆಯುವ ವೇಳೆ ವಿಳಂಭವಾಗಿತ್ತು. ಇದರಿಂದ ರಥಯಾತ್ರೆ ಮಾರ್ಗದ ತಿರುವಿನಲ್ಲಿ ಬಹಳಷ್ಟು ತೊಂದ್ರೆ ಉಂಟಾಗಿತ್ತು. ಈ ವೇಳೆ ರಥ ನಿಂತಿದ್ದರಿಂದ ರಥ ನಿಂತಿದ್ದರಿಂದ ಕಾಲ್ತುಳಿತ ಸಂಭವಿಸಿತು ಎಂದು ಹೇಳಲಾಗುತ್ತಿದೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಒಡಿಶಾ ಸಚಿವ ಮುಖೇಶ್ ಮಹಾಲಿಂಗ್, ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ರಕ್ಷಣಾ ತಂಡವು ಕೂಡಲೇ ನೆರವಿಗೆ ಧಾವಿಸಿ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಆರೋಗ್ಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ನೀರು ಮತ್ತು ಗ್ಲೂಕೋಸ್‌ಗೆ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಭಕ್ತರ ಆರೋಗ್ಯ ವಿಚಾರಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!

    ಜಗನ್ನಾಥ ರಥಯಾತ್ರೆ
    ಅಹಮದಾಬಾದ್‌ನಲ್ಲಿ ನಡೆಯುವ ರಥಯಾತ್ರೆ ಅದೊಂದು ಐತಿಹಾಸಿಕ ಹಿಂದೂ ಹಬ್ಬ. 1878ರಿಂದಲೂ ಪ್ರತಿವರ್ಷ ರಥೋತ್ಸವ ಜರುಗುತ್ತಿದೆ. ಜಗನ್ನಾಥ ದೇವಸ್ಥಾನವು ಆಷಾಢ ಸುಧ್ ಬಿಜ್‌ನಂದು ರಥಯಾತ್ರೆ ಮೆರವಣಿಗೆಯನ್ನು ಆಯೋಜಿಸುತ್ತದೆ. ಈ ಹಬ್ಬದಂದು ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವತೆಗಳನ್ನು ಪೂಜಿಸಲಾಗುತ್ತದೆ. ಇದು 148ನೇ ಜಗನ್ನಾಥ ರಥಯಾತ್ರೆ ಆಗಿದೆ.

  • ಜಗನ್ನಾಥ ರಥಯಾತ್ರೆ ಮೆರವಣಿಗೆಯಲ್ಲಿ ದಿಕ್ಕಾಪಾಲಾಗಿ ಓಡಿದ ಆನೆಗಳು – ಬೆಚ್ಚಿಬಿದ್ದ ಭಕ್ತರು

    ಜಗನ್ನಾಥ ರಥಯಾತ್ರೆ ಮೆರವಣಿಗೆಯಲ್ಲಿ ದಿಕ್ಕಾಪಾಲಾಗಿ ಓಡಿದ ಆನೆಗಳು – ಬೆಚ್ಚಿಬಿದ್ದ ಭಕ್ತರು

    ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಶುಕ್ರವಾರ ನಡೆದ 148ನೇ ಜಗನ್ನಾಥ ರಥಯಾತ್ರೆಯ (Jagannath Rath Yatra) ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ. ಪರಿಣಾಮ ಇಬ್ಬರು ಭಕ್ತರು ಗಾಯಗೊಂಡಿದ್ದಾರೆ.

    ಶುಕ್ರವಾರ ಬೆಳಗ್ಗೆ 10:15 ರ ಸುಮಾರಿಗೆ ರಥಯಾತ್ರೆ ನಗರದ ಖಾದಿಯಾ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಯೊಂದು ಇದ್ದಕ್ಕಿದ್ದಂತೆ ಗುಂಪಿನಿಂದ ದೂರ ಸರಿದು ವಿರುದ್ಧ ದಿಕ್ಕಿನಲ್ಲಿ ಓಡಲು ಪ್ರಾರಂಭಿಸಿತು. ಕಿರಿದಾದ ಬೀದಿಯಾದ್ದರಿಂದ ಜನರು ಭಯಭೀತರಾದರು. ಇದರ ಜೊತೆ ಇನ್ನೆರಡು ಆನೆಗಳು ಸಹ ಓಡಿದವು. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಂತರ ಮಾವತರು ಆನೆಗಳನ್ನು ನಿಯಂತ್ರಿಸಿದರು. ಆನೆಗಳನ್ನು ಕರೆದೊಯ್ದ ಬಳಿಕ ಮೆರವಣಿಗೆ ಮುಂದುವರಿಯಿತು. ಇದನ್ನೂ ಓದಿ: ಇಂದು ವೈಭವದ ಪುರಿ ಜಗನ್ನಾಥ ರಥಯಾತ್ರೆ

    Jagannath Rath Yatra 3

    ಗಾಯಗೊಂಡಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಪುರುಷ ಭಕ್ತನನ್ನು ಚಿಕಿತ್ಸೆಗಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

    ಖಾಡಿಯಾ ಪ್ರದೇಶದಲ್ಲಿ ಆನೆಗಳು ಗಲಿಬಿಲಿಗೊಂಡ ಕಾರಣ ಅವುಗಳನ್ನು ರಥಯಾತ್ರೆಯಿಂದ ಹೊರಗೆ ಕರೆದೊಯ್ಯಲಾಗಿದೆ. ಮೆರವಣಿಗೆ ವೇಳಾಪಟ್ಟಿಯಂತೆ ಮುಂದುವರೆದಿದೆ ಎಂದು ಅಹಮದಾಬಾದ್ ನಗರ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಾ.ನಗರ| ಹುಲಿಗಳು ಸತ್ತ 10 ಹೆಜ್ಜೆ ದೂರದಲ್ಲಿಯೇ ಹಸು ಕಳೇಬರ ಪತ್ತೆ- ವಿಷಪ್ರಾಶನ ಶಂಕೆ

    148ನೇ ರಥಯಾತ್ರೆಯ 16 ಕಿ.ಮೀ. ಮೆರವಣಿಗೆಯು ಶುಕ್ರವಾರ ಮುಂಜಾನೆ ಆರಂಭವಾಯಿತು. ಮೆರವಣಿಗೆಗೆ ಜಮಾಲ್ಪುರದ ಜಗನ್ನಾಥ ದೇವಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳ ಆರತಿ ಮೂಲಕ ಚಾಲನೆ ಕೊಟ್ಟರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಪಾಲ್ಗೊಂಡಿದ್ದರು. ರಾಜ್ಯದ ಐತಿಹಾಸಿಕ ಮತ್ತು ದೊಡ್ಡ ರಥಯಾತ್ರೆಯ ಭದ್ರತೆಗಾಗಿ 23,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಇತರ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

  • ಇಂದು ವೈಭವದ ಪುರಿ ಜಗನ್ನಾಥ ರಥಯಾತ್ರೆ

    ಇಂದು ವೈಭವದ ಪುರಿ ಜಗನ್ನಾಥ ರಥಯಾತ್ರೆ

    ಗಾಂಧೀನಗರ: ಪುರಿಯಲ್ಲಿ ಶುಕ್ರವಾರದಿಂದ ವೈಭವದ ಜಗನ್ನಾಥ ರಥಯಾತ್ರೆ (Jagannath Rath Yatra) ಆರಂಭವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.

    ಯಾತ್ರೆಗೆ ಸಮಗ್ರ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಸ್ವೈನ್ ಅವರು, ಗುಂಡಿಚಾ ಯಾತ್ರೆಗಾಗಿ ಮೂರು ರಥಗಳನ್ನು ಅವುಗಳ ಗೊತ್ತುಪಡಿಸಿದ ಸ್ಥಳಕ್ಕೆ ತರಲಾಗಿದೆ. ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮ – ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ

    Jagannath Rath Yatra 1 1

    ಇಂದು ಮಹಾಪ್ರಭುಗಳ ರಥಯಾತ್ರೆ ನಡೆಯಲಿದೆ. ಪುರಿಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಪೊಲೀಸರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಾರ್ವಜನಿಕ ಸುರಕ್ಷತೆ, ಜನಸಂದಣಿ ನಿರ್ವಹಣೆ ಮತ್ತು ಸಾರ್ವಜನಿಕ ಅನುಕೂಲಕ್ಕಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಂಚಾರ ಸುಗಮಗೊಳಿಸುವಿಕೆಯನ್ನು ನೋಡಿಕೊಳ್ಳಲಾಗಿದೆ. ಕೇಂದ್ರ ಸಂಸ್ಥೆಗಳು ಸಹ ಸಹಾಯ ಮಾಡಿವೆ. ರಥಯಾತ್ರೆಯನ್ನು ಸುಗಮವಾಗಿ ನಡೆಸಲಾಗುವುದು. ನಮ್ಮ ಕಣ್ಗಾವಲು ತಂಡಗಳು ಸಂಯೋಜಿತ ನಿಯಂತ್ರಣ ಕೊಠಡಿಯಲ್ಲಿ ಇರುತ್ತವೆ. ನಮ್ಮಲ್ಲಿ ಡ್ರೋನ್ ವಿರೋಧಿ ತಂಡಗಳೂ ಇವೆ. ಅವರು ಇಂದು ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿದರು. ಸ್ನೇಹಪರ ಡ್ರೋನ್‌ಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಡ್ರೋನ್ ಚಲನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪುರಿ ಎಸ್‌ಪಿ ವಿನೀತ್ ಅಗರ್‌ವಾಲ್ ಹೇಳಿದ್ದಾರೆ.

    ನಾನು ಮುಂಬೈನಿಂದ ಬಂದಿದ್ದೇನೆ. ಇದು ಇಹಲೋಕದ ಹೊರಗಿನ ಅನುಭವ. ನಾನು ಜಗನ್ನಾಥನ ಭಕ್ತ. ಆದರೆ ನಾನು ಇಲ್ಲಿಗೆ ಬಂದಿರುವುದು ಇದೇ ಮೊದಲು. ಇದು ದೈವಿಕ ಅನುಭವ. ನಾನು ರಥವನ್ನು ಎಳೆಯಲು ಬಯಸುತ್ತೇನೆ. ಒಂದು ದಿನ ಭಗವಂತ ತನ್ನ ವಾಸಸ್ಥಾನದಿಂದ ಹೊರಬಂದು ವಿಶ್ವವನ್ನು ಆಶೀರ್ವದಿಸುತ್ತಾನೆ. ಎಲ್ಲರೂ ಇಲ್ಲಿಗೆ ಬಂದು ಆಶೀರ್ವಾದ ಪಡೆಯಬೇಕು. ಇಲ್ಲಿನ ಹವಾಮಾನ ತುಂಬಾ ಆಹ್ಲಾದಕರವಾಗಿದೆ. ರಾತ್ರಿಯಿಡೀ ಮಳೆಯಾಯಿತು ಎಂದು ಭಕ್ತೆಯೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಘಟಪ್ರಭಾ ತಟದಲ್ಲಿ ಪ್ರವಾಹ ಭೀತಿ – ಮುಧೋಳ ತಾಲೂಕಿನ ಸೇತುವೆ ಜಲಾವೃತ ಸಾಧ್ಯತೆ

    ಏನೇನು ಕಾರ್ಯಕ್ರಮ?
    ಗುಂಡಿಚಾ ಮಾರ್ಜನಾ (ದೇವಾಲಯ ಶುಚಿಗೊಳಿಸುವಿಕೆ): ಜೂನ್ 26
    ರಥಯಾತ್ರೆ (ರಥ ಮೆರವಣಿಗೆ): 27 ಜೂನ್ (ಶುಕ್ರವಾರ)
    ಹೇರಾ ಪಂಚಮಿ: ಜುಲೈ 1
    ಬಹುದಾ ಯಾತ್ರೆ: ಜುಲೈ 4–5
    ಸುನಾ ಬೇಶಾ (ಚಿನ್ನದ ಉಡುಪು): ಜುಲೈ 5–6.
    ನೀಲಾದ್ರಿ ಬಿಜಯ್: ಜುಲೈ 8.

    ಪುರಿಯಾದ್ಯಂತ ಮತ್ತು 35 ಕಿಮೀ ದೂರದಲ್ಲಿರುವ, 13 ನೇ ಶತಮಾನದ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾದ ಕೊನಾರ್ಕ್‌ನ ರಸ್ತೆಗಳಲ್ಲಿ ಕಣ್ಗಾವಲುಗಾಗಿ 275 ಕ್ಕೂ ಹೆಚ್ಚು ಎಐ ವ್ಯವಸ್ಥೆಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಜಗನ್ನಾಥ ರಥಯಾತ್ರೆ
    ಅಹಮದಾಬಾದ್‌ನಲ್ಲಿ ನಡೆಯುವ ರಥಯಾತ್ರೆ ಅದೊಂದು ಐತಿಹಾಸಿಕ ಹಿಂದೂ ಹಬ್ಬ. 1878ರಿಂದಲೂ ಪ್ರತಿವರ್ಷ ರಥೋತ್ಸವ ಜರುಗುತ್ತಿದೆ. ಜಗನ್ನಾಥ ದೇವಸ್ಥಾನವು ಆಷಾಢ ಸುಧ್ ಬಿಜ್‌ನಂದು ರಥಯಾತ್ರೆ ಮೆರವಣಿಗೆಯನ್ನು ಆಯೋಜಿಸುತ್ತದೆ. ಈ ಹಬ್ಬದಂದು ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವತೆಗಳನ್ನು ಪೂಜಿಸಲಾಗುತ್ತದೆ. ಈಗ ಮತ್ತೆ 148ನೇ ಜಗನ್ನಾಥ ರಥಯಾತ್ರೆಗೆ ವೇದಿಕೆ ಸಿದ್ಧವಾಗಿದೆ.

  • ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

    ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

    ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಕಾಲ್ತುಳಿತ ಪ್ರಕರಣಗಳು ವರದಿಯಾಗುತ್ತಿವೆ. ಮಹಾಕುಂಭಮೇಳ, ತಿರುಪತಿ ದೇವಸ್ಥಾನ, ಅಲ್ಲು ಅರ್ಜುನ್ ಅಭಿನಯದ ಪುಷ್ಪಾ-2 ಸೆಲೆಬ್ರೇಷನ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ ಸಂಭ್ರಮದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಹತ್ತಾರು ಮಂದಿ ಉಸಿರು ಚೆಲ್ಲಿದರು. ಈ ದುರಂತಗಳು ಆಡಳಿತ ಸರ್ಕಾರಗಳು ಹಾಗೂ ಭದ್ರತಾ ವ್ಯವಸ್ಥೆಗಳಿಗೆ ಎಚ್ಚರಿಕೆ ಕರೆಗಂಟೆಯಾಗಿದೆ. ಲಕ್ಷಾಂತರ ಮಂದಿ ಸೇರುವಂತಹ ಸಮಾರಂಭ, ಜಾತ್ರೆ, ಸಂಭ್ರಮೋತ್ಸವಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗಳು ಚಿಂತನೆ ನಡೆಸಿವೆ. ಈ ಹೊತ್ತಿನಲ್ಲೇ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಐತಿಹಾಸಿಕ ಜಗನ್ನಾಥ ರಥ ಯಾತ್ರೆಗೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನಲ್ಲಾದ ಕಾಲ್ತುಳಿತ ಅವಘಡದಿಂದ ಎಚ್ಚೆತ್ತಿರುವ, ಅಹಮದಾಬಾದ್ ಪೊಲೀಸರು ನಯಾ ಪ್ಲ್ಯಾನ್‌ವೊಂದನ್ನು ರೂಪಿಸಿದ್ದಾರೆ. ದುರಂತಗಳು ಸಂಭವಿಸಿದಂತೆ ನೋಡಿಕೊಳ್ಳಲು ಎಐ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

    ಜಗನ್ನಾಥ ರಥಯಾತ್ರೆ
    ಅಹಮದಾಬಾದ್‌ನಲ್ಲಿ ನಡೆಯುವ ರಥಯಾತ್ರೆ ಅದೊಂದು ಐತಿಹಾಸಿಕ ಹಿಂದೂ ಹಬ್ಬ. 1878ರಿಂದಲೂ ಪ್ರತಿವರ್ಷ ರಥೋತ್ಸವ ಜರುಗುತ್ತಿದೆ. ಜಗನ್ನಾಥ ದೇವಸ್ಥಾನವು ಆಷಾಢ ಸುಧ್ ಬಿಜ್‌ನಂದು ರಥಯಾತ್ರೆ ಮೆರವಣಿಗೆಯನ್ನು ಆಯೋಜಿಸುತ್ತದೆ. ಈ ಹಬ್ಬದಂದು ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವತೆಗಳನ್ನು ಪೂಜಿಸಲಾಗುತ್ತದೆ. ಈಗ ಮತ್ತೆ 148ನೇ ಜಗನ್ನಾಥ ರಥಯಾತ್ರೆಗೆ ವೇದಿಕೆ ಸಿದ್ಧವಾಗಿದೆ. ಇದೇ ಜೂ.27 ರಂದು ರಥೋತ್ಸವ ನಡೆಯಲಿದೆ. ಪವಿತ್ರ ಮೆರವಣಿಗೆಯನ್ನು ವೀಕ್ಷಿಸಲು 15 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದೆ.

    bengaluru stambede 1

    ಕರ್ನಾಟಕದ ಬೆಂಗಳೂರಿನಲ್ಲಿ ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ 11 ಜನರು ಸಾವನ್ನಪ್ಪಿ, ಹತ್ತಾರು ಜನರು ಗಾಯಗೊಂಡ ದುರ್ಘಟನೆ ನಡೆಯಿತು. ಪರಿಣಾಮವಾಗಿ ಅಹಮದಾಬಾದ್‌ನಲ್ಲಿ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಲಕ್ಷಾಂತರ ಮಂದಿ ಸೇರುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಸೂಕ್ತ ಭದ್ರತಾ ವ್ಯವಸ್ಥೆಗೆ ಮುಂದಾಗಿವೆ.

    ಕಾಲ್ತುಳಿತ ತಪ್ಪಿಸಲು ಎಐ ಮೊರೆ!
    ಅತಿಹೆಚ್ಚು ಜನಸಂದಣಿಯ ಮಾರ್ಗದುದ್ದಕ್ಕೂ ಅತ್ಯಾಧುನಿಕ ಸಾಫ್ಟ್‌ವೇರ್‌ ವ್ಯವಸ್ಥೆ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಸಂಭವನೀಯ ಕಾಲ್ತುಳಿತ ತಪ್ಪಿಸಲು ಕೃತಕ ಬುದ್ಧಿಮತ್ತೆ (AI) ಹೊಂದಿರುವ ಡ್ರೋನ್ ಬಳಸಲು ಅಹಮದಾಬಾದ್ ಪೊಲೀಸರು ಕ್ರಮವಹಿಸಿದ್ದಾರೆ. ಈ ವ್ಯವಸ್ಥೆಯು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ‘ಕಳೆದ ವರ್ಷ ಜಗನ್ನಾಥ ದೇವಸ್ಥಾನದಿಂದ ಆರಂಭವಾಗಿ ಸರಸ್ಪುರದ ವರೆಗೆ ಸಾಗಿ ಅದೇ ದೇವಸ್ಥಾನದಲ್ಲಿ ಕೊನೆಗೊಳ್ಳುವ ರಥಯಾತ್ರೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ನಾವು ಸಾಕಷ್ಟು ತಂತ್ರಜ್ಞಾನವನ್ನು ಬಳಸಿದ್ದೇವೆ. ಈ ಬಾರಿ ವಿಶೇಷವಾಗಿ ಯಾತ್ರೆಯ ಮಾರ್ಗದಲ್ಲಿ ಅತ್ಯಂತ ಜನದಟ್ಟಣೆಯ ಸ್ಥಳಗಳಲ್ಲಿ ಎಐ ಆಧಾರಿತ ಕಾಲ್ತುಳಿತ ತಪ್ಪಿಸುವ ವ್ಯವಸ್ಥೆಯನ್ನು ಬಳಸಲು ನಾವು ಯೋಜಿಸುತ್ತಿದ್ದೇವೆ ಎಂದು ಅಪರಾಧ ವಿಭಾಗದ ಎಸಿಪಿ ಭರತ್ ಪಟೇಲ್ ತಿಳಿಸಿದ್ದಾರೆ.

    ಹೊಸ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತೆ?
    ನಿರ್ದಿಷ್ಟ ಚದರ ಮೀಟರ್‌ಗಳ ವ್ಯಾಪ್ತಿಯಲ್ಲಿ ಜನರ ಸಾಂದ್ರತೆಯನ್ನು ಈ ತಂತ್ರಜ್ಞಾನ ಲೆಕ್ಕಹಾಕುತ್ತದೆ. ಈ ಭಾಗದಲ್ಲಿ ಕಾಲ್ತುಳಿತದ ಅಪಾಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಕಾಲ್ತುಳಿತ ತಪ್ಪಿಸಲು ಜನಸಂದಣಿಯನ್ನು ಚದುರಿಸಲು ಅಧಿಕಾರಿಗಳಿಗೆ ಸಿಗ್ನಲ್ ರವಾನಿಸುತ್ತದೆ. ಈ ಟೆಕ್ನಾಲಜಿ ಫಲಿತಾಂಶಗಳ ಆಧಾರದ ಮೇಲೆ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ಅಪರಾಧ ಪತ್ತೆ ದಳ (ಡಿಸಿಬಿ) ಹಂಚಿಕೊಂಡ ಮಾಹಿತಿಯ ಪ್ರಕಾರ, ‘ಸಿಸಿಟಿವಿ ಕ್ಯಾಮೆರಾಗಳಲ್ಲಿನ ಕಾಲ್ತುಳಿತ ವಿರೋಧಿ ಅಲ್ಗಾರಿದಮ್‌ಗಳು ಜನಸಂದಣಿ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಜನನಿಬಿಡ ಪ್ರದೇಶಗಳಲ್ಲಿ ಅಪಾಯಕಾರಿ ಸಂದರ್ಭಗಳನ್ನು ತಡೆಗಟ್ಟಲು ಎಐ ಮತ್ತು ಇಮೇಜ್ ಸಂಸ್ಕರಣೆಯನ್ನು ಬಳಸಿಕೊಳ್ಳುತ್ತವೆ’.

    rcb bengaluru stampede

    ರಥಯಾತ್ರೆಯ ಮಾರ್ಗದಲ್ಲಿ ಅತ್ಯಂತ ಜನದಟ್ಟಣೆಯ ಸ್ಥಳಗಳೆಂದರೆ ಜಗನ್ನಾಥ ದೇವಸ್ಥಾನ, ಧಲ್ ನಿ ಪೋಲ್ ಬಳಿಯ ಕಿರಿದಾದ ಮಾರ್ಗ, ಚಕಲೇಶ್ವರ ಮಹಾದೇವ ದೇವಸ್ಥಾನದ ಬಳಿಯ ಪ್ರದೇಶ, ಭಾಗವಹಿಸುವವರು ಊಟಕ್ಕೆ ನಿಲ್ಲುವ ಸರಸ್ಪುರ ನಿಲ್ದಾಣ ಮತ್ತು ಜಗನ್ನಾಥ ದೇವಸ್ಥಾನಕ್ಕೆ ಹಿಂತಿರುಗುವ ಮಾರ್ಗದಲ್ಲಿ ಶಹಪುರ ಪ್ರದೇಶದಲ್ಲಿ ಕಿರಿದಾದ ಮಾರ್ಗ. ತಂತ್ರಜ್ಞಾನದ ಕುರಿತು ಮಾತನಾಡಿರುವ ಎಸಿಪಿ ಪಟೇಲ್, ಈ ಸಿಸ್ಟಮ್ ಅತಿಹೆಚ್ಚು ಜನಸಂದಣಿ ಇರುವ ಪ್ರದೇಶಗಳನ್ನು ಎಣಿಸಲು ಥರ್ಮಲ್ ಇಮೇಜಿಂಗ್ ಮತ್ತು ಪಿಕ್ಸೆಲ್-ಕೌಂಟಿಗ್‌ನ್ನು ಬಳಸುತ್ತದೆ. ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ಕ್ಷೇತ್ರ ಘಟಕಗಳಲ್ಲಿ ಇರಿಸಲಾಗುವ ಪರದೆಗಳಿಗೆ ಈ ಮಾಹಿತಿಯನ್ನು ನಿರಂತರವಾಗಿ ರವಾನಿಸುತ್ತದೆ. ಇದರಿಂದಾಗಿ ನಿರ್ದಿಷ್ಟ ಜಾಗದಲ್ಲಿ ಜನರ ಸಂಖ್ಯೆಯು ಮಿತಿಯನ್ನು ಮೀರಿದರೆ ಕ್ರಮ ಕೈಗೊಳ್ಳಲು ಸ್ಥಳದಲ್ಲಿ ನಿಯೋಜನೆಗೊಳ್ಳುವ ಪಡೆಗಳಿಗೆ ತಕ್ಷಣ ಸೂಚನೆ ನೀಡಬಹುದು.

    ರಥಯಾತ್ರೆಯು ಮೆರವಣಿಗೆಯಾಗಿರುವುದರಿಂದ ಜನಸಂದಣಿಯು ಸಾಗುತ್ತಾ ಅಂತಿಮವಾಗಿ ಒಂದು ಪ್ರದೇಶದಲ್ಲಿ ಜಮಾಯಿಸುವ ಸಾಧ್ಯತೆ ಇರುತ್ತದೆ. ಇದೆಲ್ಲವನ್ನೂ ಲೆಕ್ಕಾಚಾರ ಮಾಡಿ, ಒಂದೆಡೆ ಸೇರುವ ಜನಸಮೂಹಕ್ಕೆ ಸ್ಥಳಾವಕಾಶ ಕಲ್ಪಿಸಲು ಪೊಲೀಸ್ ಸಿಬ್ಬಂದಿಯನ್ನು ನಿರ್ದಿಷ್ಟ ಪ್ರದೇಶದಲ್ಲಿ ನಿಯೋಜನೆ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಯಾತ್ರೆಯಲ್ಲಿ ಯಾವುದೇ ಕಾಲ್ತುಳಿತ ಸಂಭವಿಸಿಲ್ಲ. ಸುಧಾರಿತ ತಂತ್ರಜ್ಞಾನವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಳಸಲಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಸೇರಿದಂತೆ ಇತರೆ ಅವಘಡಗಳನ್ನು ಮನನ ಮಾಡಿಕೊಂಡು ಇಲ್ಲಿನ ಪೊಲೀಸ್ ಇಲಾಖೆ ಎಚ್ಚರಿಕೆ ಹೆಜ್ಜೆಯನ್ನಿಟ್ಟಿದೆ.

    Jagannath Rath Yatra 1

    ಏನಿದು ಹೊಸ ತಂತ್ರಜ್ಞಾನ?
    * ಮೇಲ್ವಿಚಾರಣೆ: ಎಐ-ಚಾಲಿತ ಸಿಸಿಟಿವಿ ಕ್ಯಾಮೆರಾಗಳು ನೈಜ ಸಮಯದಲ್ಲಿ ವೀಡಿಯೊ ಸ್ಟ್ರೀಮ್‌ಗಳನ್ನು ನಿರಂತರವಾಗಿ ವಿಶ್ಲೇಷಿಸುತ್ತವೆ.

    * ಜನಸಂದಣಿ ಸಾಂದ್ರತೆಯ ಅಂದಾಜು: ಅಲ್ಗಾರಿದಮ್‌ಗಳು ನಿರ್ದಿಷ್ಟ ಪ್ರದೇಶದಲ್ಲಿನ ಜನರ ಸಂಖ್ಯೆಯನ್ನು ಲೆಕ್ಕಾಚಾರ ಮಾಡುತ್ತದೆ. ಇದು ಪಿಕ್ಸೆಲ್-ಆಧಾರಿತ ವಿಶ್ಲೇಷಣೆ ಮಾಡುತ್ತದೆ. ತಲೆಗಳ ಮೂಲಕ ವ್ಯಕ್ತಿಗಳನ್ನು ಗುರುತಿಸಲು ಮತ್ತು ಎಣಿಸಲು ಯಂತ್ರ ಕಲಿಕೆ ಮಾದರಿಗಳನ್ನು ಬಳಸುವುದು.

    * ಮಿತಿ: ಜನಸಂದಣಿ ಸಾಂದ್ರತೆಗಾಗಿ ಮೌಲ್ಯಮಾಪನ ಮಾಡುತ್ತದೆ. ಪತ್ತೆಯಾದ ಸಾಂದ್ರತೆಯು ಮಿತಿಗಳನ್ನು ದಾಟಿದರೆ, ಎಚ್ಚರಿಕೆ ಸಂದೇಶ ರವಾನಿಸುತ್ತದೆ.

    * ಅವಘಡಗಳ ಪತ್ತೆ: ಈ ಅಲ್ಗಾರಿದಮ್‌ಗಳು ಚಲನೆಯಲ್ಲಿ ಹಠಾತ್ ಉಲ್ಬಣಗಳು, ಅಸಾಮಾನ್ಯ ಕ್ಲಸ್ಟರಿಂಗ್ ಮಾದರಿಗಳು, ಬಿದ್ದ ವ್ಯಕ್ತಿಗಳು ಮತ್ತು ಆಕ್ರಮಣಕಾರಿ ಚಲನೆಯಂತಹ ಅಸಾಮಾನ್ಯ ಜನಸಂದಣಿಯ ನಡವಳಿಕೆಯನ್ನು ಗುರುತಿಸಬಹುದು.

    * ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ: ಸಂಭಾವ್ಯ ಕಾಲ್ತುಳಿತದ ಅಪಾಯವನ್ನು ಪತ್ತೆಹಚ್ಚಿದ ನಂತರ, ವ್ಯವಸ್ಥೆಯು LCD ಡಿಸ್ಪ್ಲೇಗಳು, GSM ಸಂದೇಶಗಳು ಅಥವಾ ಇತರ ಸಂವಹನ ಮಾರ್ಗಗಳ ಮೂಲಕ ಭದ್ರತಾ ಸಿಬ್ಬಂದಿ ಅಥವಾ ನಿಯಂತ್ರಣ ಕೊಠಡಿಗಳಿಗೆ ತಕ್ಷಣದ ಎಚ್ಚರಿಕೆಗಳನ್ನು ಕಳುಹಿಸುತ್ತದೆ.

    Jagannath Rath Yatra 2

    ಟೆಕ್ನಾಲಜಿ ಪ್ರಯೋಜನಗಳೇನು?
    * ಪೂರ್ವಭಾವಿ ತಡೆಗಟ್ಟುವಿಕೆ: ಕಾಲ್ತುಳಿತಗಳು ಸಂಭವಿಸುವ ಮೊದಲೇ ಪತ್ತೆಹಚ್ಚುವ ಮತ್ತು ಎಚ್ಚರಿಕೆ ನೀಡುವ ಸಾಮರ್ಥ್ಯ. ಇದು ಅಧಿಕಾರಿಗಳಿಗೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

    * ನಿಖರ ಡೇಟಾ: ಜನಸಂದಣಿ ಸಾಂದ್ರತೆ ಮತ್ತು ಚಲನೆಯ ಕುರಿತು ತಕ್ಷಣದ & ನಿಖರವಾದ ಡೇಟಾವನ್ನು ಒದಗಿಸುತ್ತದೆ.

    * ಸುರಕ್ಷತೆ: ಮಾನವ ದೋಷಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಅಪಾಯಗಳಿಗೆ ತ್ವರಿತ ಪ್ರತಿಕ್ರಿಯೆಗಳನ್ನು ಸಕ್ರಿಯಗೊಳಿಸುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

    * ಮುನ್ನೆಚ್ಚರಿಕೆ ಕ್ರಮಕ್ಕೆ ಸಹಕಾರಿ: ಹೆಚ್ಚಿನ ಜನಸಂದಣಿ ಸಾಂದ್ರತೆಯಿರುವ ಪ್ರದೇಶಗಳಿಗೆ ಭದ್ರತಾ ಸಿಬ್ಬಂದಿ ಮತ್ತು ಸಂಪನ್ಮೂಲಗಳ ಉತ್ತಮ ನಿಯೋಜನೆಗೆ ಸಹಾಯ ಮಾಡುತ್ತದೆ.

    * ಭವಿಷ್ಯದ ಯೋಜನೆಗಾಗಿ ಡೇಟಾ: ಭವಿಷ್ಯದ ಕಾರ್ಯಕ್ರಮಗಳಿಗಾಗಿ ಜನಸಂದಣಿ ನಿರ್ವಹಣಾ ತಂತ್ರಗಳನ್ನು ಸುಧಾರಿಸಲು ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಬಹುದು.

    ಸವಾಲುಗಳೇನು?
    * ಸೀಮಿತ ನಿಖರತೆ: ಎಐ ಅಲ್ಗಾರಿದಮ್‌ಗಳು ಮುಚ್ಚುವಿಕೆ (ಜನರು ಪರಸ್ಪರ ನಿರ್ಬಂಧಿಸುವುದು), ವಿಭಿನ್ನ ಪರಿಸ್ಥಿತಿಗಳು (ಬೆಳಕು, ಹವಾಮಾನ ಮತ್ತು ಕ್ಯಾಮೆರಾ ಕೋನಗಳಲ್ಲಿನ ಬದಲಾವಣೆಗಳು) ಮತ್ತು ತರಬೇತಿ ಡೇಟಾದಲ್ಲಿನ ಪಕ್ಷಪಾತ (ತಪ್ಪು ಧನಾತ್ಮಕತೆಗೆ ಕಾರಣವಾಗುತ್ತದೆ) ಸಮಸ್ಯೆಗಳು ಎದುರಾಗಬಹುದು.

    * ಕಂಪ್ಯೂಟೇಶನಲ್ ಸಂಕೀರ್ಣತೆ ಮತ್ತು ವೆಚ್ಚ: ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳು, ಶಕ್ತಿಯುತ ಸಂಸ್ಕರಣಾ ಘಟಕಗಳು ಮತ್ತು ಅತ್ಯಾಧುನಿಕ ಅಲ್ಗಾರಿದಮ್‌ಗಳ ಅಗತ್ಯತೆಯಿಂದಾಗಿ ಅಂತಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿಯೋಜಿಸುವುದು ದುಬಾರಿಯಾಗಬಹುದು.

    * ಡೇಟಾ ಗೌಪ್ಯತೆ ಮತ್ತು ನೈತಿಕ ಕಾಳಜಿ: CCTV ಮತ್ತು AIನ ವ್ಯಾಪಕ ಬಳಕೆಯು ಗೌಪ್ಯತೆ ಮತ್ತು ಡೇಟಾದ ಸಂಭಾವ್ಯ ದುರುಪಯೋಗದ ಬಗ್ಗೆ ಕಳವಳ ಹುಟ್ಟುಹಾಕುತ್ತದೆ.

    * ಅಸ್ತಿತ್ವದಲ್ಲಿರುವ ಮೂಲಸೌಕರ್ಯದೊಂದಿಗೆ ಏಕೀಕರಣ: ಹಳೆಯ ಸಿಸಿಟಿವಿ ನೆಟ್‌ವರ್ಕ್ಗಳೊಂದಿಗೆ ಹೊಸ AI-ಚಾಲಿತ ವ್ಯವಸ್ಥೆಗಳನ್ನು ಸಂಯೋಜಿಸುವುದು ಸಂಕೀರ್ಣವಾಗಬಹುದು.

    * ಮಿತಿಗಳನ್ನು ವ್ಯಾಖ್ಯಾನಿಸುವುದು: ವಿಭಿನ್ನ ಪರಿಸರ ಮತ್ತು ಸಾಂಸ್ಕೃತಿಕ ಸಂದರ್ಭಗಳಿಗೆ ಸೂಕ್ತವಾದ ಜನಸಂದಣಿ ಸಾಂದ್ರತೆಯ ಮಿತಿಗಳನ್ನು ನಿರ್ಧರಿಸುವುದು ಸವಾಲಿನದ್ದಾಗಿರಬಹುದು.