Tuesday, 22nd October 2019

8 months ago

ಹುಟ್ಟುಹಬ್ಬದ ದಿನ ಪತಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಅಮೂಲ್ಯ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಅವರು ತಮ್ಮ ಪತಿ ಜಗದೀಶ್ ಹುಟ್ಟುಹಬ್ಬದ ಪ್ರಯುಕ್ತ ಸರ್ಪ್ರೈಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೆ ಜಗದೀಶ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೂಲ್ಯ ಪತಿಗೆ ಸರ್ಪ್ರೈಸ್ ಕೊಡಬೇಕೆಂದು ಬರ್ತ್ ಡೇ ಪಾರ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸ್ಪೆಷಲ್ ಅತಿಥಿಯಾಗಿ ಆಹ್ವಾನಿಸಿದ್ದರು. ಅಮೂಲ್ಯ ಬಾಲನಟಿ ಆಗಿದ್ದಾಗನಿಂದಲೂ ದರ್ಶನ್ ಜೊತೆಗೆ ಉತ್ತಮ ಭಾಂದವ್ಯವಿದೆ. ಹೀಗಾಗಿ ಅಮೂಲ್ಯ ಕರೆದಿದ್ದರಿಂದ ದರ್ಶನ್ ಪಾರ್ಟಿಗೆ ಬಂದು ಅಮೂಲ್ಯ ಪತಿಗೆ ಶಾಕ್ ಕೊಟ್ಟಿದ್ದಾರೆ. Thank u so much […]

2 years ago

ಇಂದು ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಅಮೂಲ್ಯ-ಜಗದೀಶ್ ಮದುವೆ

ಮಂಡ್ಯ: ನಟಿ ಅಮೂಲ್ಯ ಜಗದೀಶ್ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಆದಿಚುಂಚನಗಿರಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಅಮೂಲ್ಯ ಜಗದೀಶ್ ಕೈ ಹಿಡಿಯಲಿದ್ದಾರೆ. ಆದಿಚುಂಚನಗಿರಿಯ ನಾಗಲಿಂಗನ ಸನ್ನಿಧಿಯಲ್ಲಿ ಮದುವೆ ನಡೆಯಲಿದ್ದು, ಅದ್ಧೂರಿ ಮಂಟಪ ಸಜ್ಜಾಗಿದೆ. ನಾನಾ ಬಗೆಯ ಪುಷ್ಪಗಳಿಂದ ಮಂಟಪವನ್ನ ಅಲಂಕರಿಸಲಾಗಿದೆ. 12 ರಿಂದ 12.30 ರ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ವಿವಾಹ ನಡೆಯಲಿದೆ. ಮೊದಲಿಗೆ ಸೋದರಮಾವನಿಂದ...