Saturday, 23rd February 2019

10 hours ago

ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಹೈದರಾಬಾದ್/ಮಂಡ್ಯ: ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದ ನಿವಾಸಿಗಳು ಖಾಸಗಿ ಬಸ್‍ನಲ್ಲಿ ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವಾಗ ಮಂತ್ರಾಲಯ ಕರ್ನೂಲ್ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ. ಎದುರುಗಡೆಯಿಂದ ಬಂದ ಕಾರನ್ನು ಅವಾಯ್ಡ್ ಮಾಡಲು ಹೋಗಿ ಬಸ್ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲೇ ಒಬ್ಬರು ಮೃತರಾಗಿದ್ದಾರೆ. ಬಸ್‍ನಲ್ಲಿ 45 ಜನ ಪ್ರಯಾಣಿಕರಿದ್ದು 20ಕ್ಕೂ ಅಧಿಕ ಜನರಿಗೆ […]

24 hours ago

ಪ್ರಿಯಕರನ ರೂಮಿನಲ್ಲೇ ಪ್ರೇಯಸಿ ಆತ್ಮಹತ್ಯೆ

ಹೈದರಾಬಾದ್: ಪ್ರಿಯಕರ ಮದುವೆಯಾಗಲೂ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತನ ರೂಮಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದದ್ರಿ ಜಿಲ್ಲೆಯ ವಲ್ಲಿಗೊಂಡ ಮಂಡಲದ ಪುಲಿಗಲ್ಲದಲ್ಲಿ ನಡೆದಿದೆ. ಪೈಲ್ಲಾ ದಿವ್ಯ ರೆಡ್ಡಿ(20) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮೆಡಿಪಲ್ಲಿನಲ್ಲಿರುವ ತನ್ನ ಗೆಳೆಯ ಬೊಗ್ಗಾ ನವೀನ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿ ನವೀನ್ ವಿರುದ್ಧ ಆತ್ಮಹತ್ಯೆ ಪ್ರಕರಣ ಹಾಗೂ ವಂಚನೆ...

ಮದ್ವೆ ವಿಚಾರವನ್ನು ಪ್ರಸ್ತಾಪಿಸಿ ಪಾಕ್ ಪ್ರಧಾನಿಗೆ ಆರ್‌ಜಿವಿ ಕೊಟ್ಟ ಟಾಂಗ್ ಫುಲ್ ವೈರಲ್

2 days ago

ಹೈದರಾಬಾದ್: ಪುಲ್ವಾಮಾ ದಾಳಿಯಲ್ಲಿ ಸಾಕ್ಷ್ಯಾಧಾರಗಳಿಲ್ಲದೇ ಪಾಕಿಸ್ತಾನ ವಿರುದ್ಧ ಭಾರತ ಆರೋಪ ಮಾಡುತ್ತಿದೆ ಎಂದಿದ್ದ ಪಾಕ್ ಪ್ರಧಾನಿಗೆ ನಿರ್ದೇಶಕ ರಾಮ್ ಗೋಪಲ್ ವರ್ಮಾ ಮೈಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಶೇರ್...

`ಅಪ್ಪ’ ಆಗಲಿದ್ದಾರೆ ವಿಜಯ್ ದೇವರಕೊಂಡ

2 days ago

ಹೈದರಾಬಾದ್: ಅರ್ಜುನ್ ರೆಡ್ಡಿ ಖ್ಯಾತಿಯ ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅವರು ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ನಂತರ ಅವರು ಈಗಾಗಲೇ ಸಹಿ ಹಾಕಿರುವ `ಕ್ರಾಂತಿ ಮಾಧವ್’ ಚಿತ್ರ ಸೆಟ್ಟೆರಲಿದೆ. ಈ ಚಿತ್ರದಲ್ಲಿ ವಿಜಯ್ ತಂದೆಯ...

ಶೂಟಿಂಗ್ ಸೆಟ್‍ನಲ್ಲಿ ನಕ್ಕ ‘ಗರ್ಭಿಣಿ’ ಪ್ರಿಯಾಂಕ!

3 days ago

ಹೈದರಾಬಾದ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗರ್ಭಿಣಿಯಾಗಿದ್ದಾರೆ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಫೋಟೋ ಶೂಟ್‍ಗೆ ಪೋಸ್ ಕೊಟ್ಟು ಕೊಟ್ಟು ಪ್ರಿಯಾಂಕಾ ಚೋಪ್ರಾ ಸುಸ್ತಾಗಿದ್ದರು....

ತರಗತಿಯಲ್ಲಿ ಶಿಕ್ಷಕರಿದ್ದಾಗ್ಲೇ ಡ್ರಿಂಕ್ಸ್ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿಯರು

3 days ago

ಹೈದಾರಾಬಾದ್: ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ತರಗತಿಯಲ್ಲೇ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ...

ಪ್ರೇಯಸಿ ಮದ್ವೆಯಾದ ಮರುದಿನವೇ ಯುವಕ ಆತ್ಮಹತ್ಯೆ

4 days ago

ಹೈದರಾಬಾದ್: 24 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಾಜೇಂದ್ರನಗರದಲ್ಲಿ ನಡೆದಿದ್ದು, ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಸಾಯಿ(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸೋಮವಾರ ರಾಜೇಂದ್ರ ನಗರ ಪೊಲೀಸ್...

ಪೊಲೀಸ್ ಫಿಟ್ನೆಸ್ ಪರೀಕ್ಷೆಯಲ್ಲಿ ಕುಸಿದು ಬಿದ್ದು ಯುವತಿ ದುರ್ಮರಣ

4 days ago

ಹೈದರಾಬಾದ್: ಪೊಲೀಸ್ ಕಾನ್ಸ್ ಟೇಬಲ್ ಫಿಟ್ನೆಸ್ ಪರೀಕ್ಷೆಯ 100 ಮೀಟರ್ ಓಟದಲ್ಲಿ 20 ವರ್ಷದ ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತೆಲಂಗಾಣದ ಕರಿಂನಗರದಲ್ಲಿ ನಡೆದಿದೆ. ಸೋಮವಾರ ಈ ಘಟನೆ ನಡೆದಿದ್ದು, ಮಮತಾ(20) ಮೃತ ಯುವತಿ. ಪೊಲೀಸ್ ತರಬೇತಿ ಕೇಂದ್ರದಲ್ಲಿ ವದ್ಲಕೊಂಡ...