Wednesday, 13th November 2019

Recent News

13 hours ago

ಪಕ್ಷ ನಿಷ್ಠರಿಗೆ ಒಳ್ಳೆಯ ಅವಕಾಶವಿದೆ, ಕಾಯಬೇಕು – ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಪಕ್ಷದಲ್ಲಿ ನಿಷ್ಠೆಯಿಂದಿರುವವರಿಗೆ ಖಂಡಿತ ಒಳ್ಳೆಯ ಅವಕಾಶವಿದೆ. ಆತುರದ ನಿರ್ಧಾರ ತಗೆದುಕೊಳ್ಳುವವರಿಗೆ ಒಳ್ಳೆಯದಾಗುವುದಿಲ್ಲ ಎಂದು ಬಿಜೆಪಿ ಅತೃಪ್ತರ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಅನರ್ಹ ಶಾಸಕರ ಕುರಿತು ಮಹತ್ವದ ತೀರ್ಪು ಬರಲಿದೆ. ಅದರ ಮೇಲೆ ಮುಂದಿನ ರಾಜ್ಯದ ರಾಜಕಾರಣ ನಿರ್ಧಾರವಾಗಲಿದೆ. ತೀರ್ಪು ಬರುವವರೆಗೂ ಕಾದುನೋಡಬೇಕಿದೆ ಎಂದರು. ಬಿಜೆಪಿಯ ಅತೃಪ್ತ ನಾಯಕರು ಸಿದ್ದರಾಮಯ್ಯ ಭೇಟಿ ಮಾಡಿದ ಬಗ್ಗೆ ನಾನು ಏನು ಹೇಳುವುದಿಲ್ಲ. […]

1 day ago

ಕೆರೆಯಲ್ಲಿ ಈಜಲು ತೆರೆಳಿದ್ದ ನಾಲ್ವರು ಸ್ನೇಹಿತರು ನೀರು ಪಾಲು

ಹುಬ್ಬಳ್ಳಿ: ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಸ್ನೇಹಿತರು ನೀರು ಪಾಲಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಕೆರೆಯಲ್ಲಿ 7 ಸ್ನೇಹಿತರು ಈಜಲು ತೆರಳಿದ ವೇಳೆ ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಹುಬ್ಬಳ್ಳಿಯ ನಿವಾಸಿಗಳಾದ ಜುನೈದ್ (18), ಸುಭಾನಿ (18), ಐಯಾನ್ (18) ಮತ್ತು ಸುಭಾನಿ (18) ಎಂದು ಗುರುತಿಸಲಾಗಿದೆ. ಈದ್ ಮಿಲಾದ್...

ಮತ್ತೆ ಚರ್ಚೆಗೆ ಗ್ರಾಸವಾದ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ

5 days ago

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮೂರುಸಾವಿರ ಮಠ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಠದ ಉತ್ತರಾಧಿಕಾರಿ ವಿಷಯ ಮತ್ತೀಗ ಮುನ್ನೆಲೆಗೆ ಬಂದಿದೆ. ರಾಜಕಾರಣಿಗಳು ತಮ್ಮ ಗೊಂದಲವನ್ನ ಮುಂದುವರಿಸುತ್ತಿದ್ದು ಉತ್ತರಾಧಿಕಾರಿ ವಿಷಯಕ್ಕೆ ಉತ್ತರವೇ ಸಿಗದಾಗಿದೆ. ಸದ್ಯ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಶ್ರೀ ಗುರುಸಿದ್ಧ ರಾಜಯೋಗಿಂದ್ರ...

ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್- ವಿದೇಶ ಪ್ರವಾಸ ರದ್ದು ಮಾಡ್ತೀನಿ ಎಂದ ಜಗದೀಶ್ ಶೆಟ್ಟರ್

2 weeks ago

ಹುಬ್ಬಳ್ಳಿ: ರಾಜ್ಯದ ಹಲವು ಭಾಗದಲ್ಲಿ ಪ್ರವಾಹದ ರೌದ್ರನರ್ತನಕ್ಕೆ ಜನರ ಜೀವನ ಅಸ್ತವ್ಯಸ್ಥಗೊಂಡಿದೆ. ಪ್ರವಾಹ ಇಳಿದರೂ ಜನರ ಸಂಕಷ್ಟಕ್ಕೆ ಮಾತ್ರ ಇನ್ನೂ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ವಿದೇಶ ಪ್ರವಾಸಕ್ಕೆ ಹೊರಟಿದ್ದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈ...

ನೆರೆ ಪರಿಹಾರ ಕಾರ್ಯಗಳಿಗೆ ಹಣದ ತೊಂದರೆ ಇಲ್ಲ – ಸಿಎಂ ಬಿಎಸ್ ವೈ

3 weeks ago

ಹುಬ್ಬಳ್ಳಿ: ನೆರೆ ಪರಿಹಾರ ಕಾರ್ಯಗಳಿಗೆ ಹಣದ ತೊಂದರೆ ಇಲ್ಲ. ಸಂತ್ರಸ್ತರ ನೆರವಿಗೆ ಧಾವಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಮನೆ ಕಟ್ಟಲು...

ಹುಬ್ಬಳ್ಳಿಯಲ್ಲಿ ಹಿಟ್‍ಮ್ಯಾನ್ – ಮಳೆಯಲ್ಲೂ ದ್ವಿಶತಕ ವೀರನ ನೋಡಲು ಮುಗಿಬಿದ್ದ ಜನ

3 weeks ago

ಹುಬ್ಬಳ್ಳಿ: ಕ್ರಿಕೆಟಿಗ ರೋಹಿತ್ ಶರ್ಮಾ ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದು, ಅವರನ್ನು ನೋಡಲು ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೇ ಮುಗಿಬಿದ್ದಿದ್ದಾರೆ. ಇಂದು ನಗರದಲ್ಲಿರುವ ಕ್ರಿಕ್ ಕಿಂಗ್ ಡಮ್ ಸಂಸ್ಥೆಯೊಂದಿಗೆ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆಗೆ ಆಗಮಿಸಿದ್ದ ರೋಹಿತ್ ಶರ್ಮಾರನ್ನು ನೋಡಲು ಅಭಿಮಾನಿಗಳು ಮಳೆಯನ್ನು...

ಇಂಡಿಗೋ ವಿಮಾನ ಹಾರಾಟದಲ್ಲಿ ಮತ್ತೆ ವ್ಯತ್ಯಯ- ಕಾದು ಸುಸ್ತಾದ ಸಿದ್ದರಾಮಯ್ಯ

3 weeks ago

ಹುಬ್ಬಳ್ಳಿ: ಇಂಡಿಗೋ ವಿಮಾನಯಾನ ಸೇವೆಯಲ್ಲಿ ಮತ್ತೆ ವ್ಯತಯ ಉಂಟಾಗಿದ್ದು, ಒಂದೂವರೆ ಗಂಟೆ ತಡವಾಗಿ ಹುಬ್ಬಳ್ಳಿಗೆ ಆಗಮಿಸಿದೆ. ಇದರಿಂದಾಗಿ ವಿಮಾನದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಸಹ ತಡವಾಗಿದ್ದು, ಒಂದೂವರೆ ಗಂಟೆ ವಿಮಾನದಲ್ಲೇ ಕಾಲ ಕಳೆದಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಬೇಕಾದ ಇಂಡಿಗೋ ವಿಮಾನ ಇಂದು...

ಕಮಲೇಶ್ ತಿವಾರಿ ಹತ್ಯೆ – ಹುಬ್ಬಳ್ಳಿ ಮೂಲದ ವ್ಯಕ್ತಿಯ ಬಂಧನ

3 weeks ago

ಹುಬ್ಬಳ್ಳಿ: ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್ ತಿವಾರಿಯ ಕೊಲೆ ಪ್ರಕರಣ ಸಂಬಂಧ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹಳೆ ಹುಬ್ಬಳ್ಳಿಯ ಅರವಿಂದ ನಗರದ ಮೊಹಮ್ಮದ್ ಜಾಫರ್ ಸಾಧೀಕ್ ಎಂದು ಗುರುತಿಸಲಾಗಿದೆ. ರೈಲ್ವೆ ಇಲಾಖೆಯ ಕಾರ್ಯಾಗಾರದಲ್ಲಿ ನೌಕರನಾಗಿದ್ದ...