Tuesday, 22nd October 2019

Recent News

19 hours ago

ಸಿಎಂ, ಗವರ್ನರ್ ನಡುವೆ ಹೆಲ್ಮೆಟ್ ವಾರ್- ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಟಾಂಗ್

ಪುದುಚೇರಿ: ಹೆಲ್ಮೆಟ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಉಪರಾಜ್ಯಪಾಲೆ ಕಿರಣ್ ಬೇಡಿ ನಡುವಿನ ಟ್ವೀಟ್ ವಾರ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಿರಣ್ ಬೇಡಿ ಹಾಗೂ ನಾರಾಯಣಸ್ವಾಮಿ ಇಬ್ಬರೂ ಸಹ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದೀಗ ಹೆಲ್ಮೆಟ್ ಕುರಿತು ಒಬ್ಬರಿಗೊಬ್ಬರು ಟ್ವೀಟ್ ಮಾಡುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ. ನಾರಾಯಣಸ್ವಾಮಿಯವರು ಹೆಲ್ಮೆಟ್ ಧರಿಸದೆ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಿದ್ದನ್ನು ಕಂಡು ಕಿರಣ್ ಬೇಡಿ ಕಿಡಿಕಾರಿದ್ದರು. ಈ ಕುರಿತು ಟ್ವೀಟ್ ಮಾಡಿ ಮೋಟಾರು ವಾಹನಗಳ ಕಾಯ್ದೆ […]

5 days ago

ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಬಿತ್ತು ದಂಡ

ಲಕ್ನೋ: ಹೆಲ್ಮೆಟ್ ಧರಿಸದ ಟ್ಯ್ರಾಕ್ಟರ್ ಚಾಲಕನಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿ ಪೇಚಿಗೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಹಾಪುಡ ಜಿಲ್ಲೆಯ ಗಢಮುತ್ತೇಶ್ವರ ನಿವಾಸಿಗೆ ಪೊಲೀಸರು ದಂಡ ಹಾಕಿದ್ದಾರೆ. ಗಢಮುತ್ತೇಶ್ವರ ನಿವಾಸಿ ತನ್ನ ಟ್ರ್ಯಾಕ್ಟರ್ ನಲ್ಲಿ ಹೊರಟ್ಟದ್ದನು. ಡ್ರೈವಿಂಗ್ ಲೈಸನ್ಸ್ ಮತ್ತು ಹೆಲ್ಮೆಟ್ ಇಲ್ಲವೆಂದು ಪೊಲೀಸರು 3 ಸಾವಿರ ರೂ. ಚಲನ್ ಚಾಲಕನಿಗೆ ನೀಡಿದ್ದಾರೆ. ದಂಡದ ರಶೀದಿ...

ಹೆಲ್ಮೆಟ್ ಧರಿಸಿ ಮಹಿಳೆಯರ ಕೋಲಾಟ

2 weeks ago

ಕಾರವಾರ: ದಸರಾ ಪ್ರಯುಕ್ತ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಲ್ಮೆಟ್ ಧರಿಸಿ ಕೋಲಾಟ ಆಡಿದ್ದಾರೆ. ಕಾರವಾರದ ಕೆ.ಎಚ್.ಬಿ. ಕಾಲೋನಿಯಲ್ಲಿ ದಸರಾ ಪ್ರಯುಕ್ತ ಮಹಿಳೆಯರು ದಾಂಡಿಯಾ ನೃತ್ಯ ಮಾಡುತ್ತಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಹೆಲ್ಮೆಟ್ ಧರಿಸಿ ಆಗಮಿಸಿದ ಮಹಿಳೆಯರು ದಾಂಡಿಯಾ ನೃತ್ಯಕ್ಕೆ ಹೆಜ್ಜೆ...

ದಂಡ ಹಾಕಿ ಉಚಿತ ಹೆಲ್ಮೆಟ್ ನೀಡಿ ಗಾಂಧಿ ಜಯಂತಿ ಆಚರಿಸಿದ ಸಂಚಾರಿ ಪೊಲೀಸರು

3 weeks ago

ರಾಯಚೂರು: ದೇಶದ ಪಿತಾಮಹಾ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಹಿನ್ನೆಲೆ ರಾಯಚೂರಿನಲ್ಲಿ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ರೀತಿಯಲ್ಲಿ ಅರಿವು ಮೂಡಿಸಿದ್ದು, ಸಂಚಾರಿ ಪೊಲೀಸರು ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ಹಾಕುವ ಜೊತೆಗೆ ಉಚಿತ ಹೆಲ್ಮೆಟ್ ನೀಡಿದರು....

ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

1 month ago

ಲಕ್ನೋ: ಉತ್ತರ ಪ್ರದೇಶದ ನೊಯ್ದಾದ ಖಾಸಗಿ ಬಸ್ ಮಾಲೀಕರೊಬ್ಬರು ತಮ್ಮ ಬಸ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ಸಾರಿಗೆ ಇಲಾಖೆ 500 ರೂ. ದಂಡದ ಚಲನ್ ಕಳುಹಿಸಿದೆ ಎಂದು ಆರೋಪಿಸಿದ್ದಾರೆ. ಸೆಪ್ಟೆಂಬರ್ 11ರಂದು ಆನ್‍ಲೈನ್ ಮೂಲಕ ಚಲನ್ ಕಳುಹಿಸಲಾಗಿದ್ದು, ನಮ್ಮ ಸಹೋದ್ಯೋಗಿಯೊಬ್ಬರು...

ತಲೆಯ ಗಾತ್ರದ ಹೆಲ್ಮೆಟ್ ಸಿಗದೆ ವ್ಯಕ್ತಿಯ ಪರದಾಟ- ದಂಡ ವಿಧಿಸದೆ ಬಿಟ್ಟು ಕಳುಹಿಸಿದ ಪೊಲೀಸ್

1 month ago

ಗಾಂಧಿನಗರ: ಹೊಸ ಟ್ರಾಫಿಕ್ ನಿಯಮಗಳ ಅನ್ವಯವಾದ ಬಳಿಕ ಸೂಕ್ತ ದಾಖಲೆ ಹೊಂದಿರದ ವಾಹನ ಸವಾರರು ಭಾರೀ ದಂಡ ಪಾವತಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಗುಜರಾತ್‍ನ ವ್ಯಕ್ತಿ ಮಾತ್ರ ಹೆಲ್ಮೆಟ್ ಧರಿಸದಿದ್ದರೂ ದಂಡ ಪಾವತಿ ಮಾಡದೆ ಇರುವ ಅವಕಾಶವನ್ನು ಪಡೆದಿದ್ದಾರೆ. ಗುಜರಾತ್‍ನ ಚೋಟಾ...

ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ರೂಲ್ ಬಗ್ಗೆ ಚನ್ನಣ್ಣವರ್ ಪಾಠ – ರಾತ್ರಿ ಬೈಕ್ ಏರಿ ರೌಂಡ್ಸ್

1 month ago

ಬೆಂಗಳೂರು: ಎಸ್‍ಪಿ ರವಿ.ಡಿ.ಚನ್ನಣ್ಣವರ್ ಅವರು ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣಕ್ಕೆ ದಿಢೀರ್ ಭೇಟಿ ಕೊಟ್ಟು ರಾತ್ರೋರಾತ್ರಿ ಸಿಟಿ ರೌಂಡ್ಸ್ ಹಾಕಿದ್ದಾರೆ. ರವಿ.ಡಿ.ಚನ್ನಣ್ಣವರ್ ಅವರು ನೆಲಮಂಗಲಕ್ಕೆ ರಾತ್ರಿ ಭೇಟಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಪಾಠ ಮಾಡಿದ್ದಾರೆ. ಎಲ್ಲಾ ಪೊಲೀಸ್...

ಕಾರಿನಲ್ಲಿ ಹೆಲ್ಮೆಟ್ ಹಾಕದ್ದಕ್ಕೆ ಚಾಲಕನ ಮೇಲೆ ಬಿತ್ತು ದಂಡ

1 month ago

ಲಕ್ನೋ: ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಟ್ರಾಫಿಕ್ ಪೊಲೀಸರು ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು, ಆ ಚಾಲಕ ಹೆಲ್ಮೆಟ್ ಹಾಕಿಕೊಂಡೇ ಈಗ ಕಾರು ಚಲಾಯಿಸುತ್ತಿದ್ದಾರೆ. ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ಸಂಚಾರಿ ನಿಯಮಗಳಲ್ಲಿ ಜಾರಿಯಲ್ಲಿ ಇರುವುದು ಎಲ್ಲರಿಗೂ...