Recent News

2 years ago

ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಚೇತರಿಕೆ- ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು: ತೂಕ ಇಳಿಸಿಕೊಳ್ಳಲು ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬುಲೆಟ್ ಪ್ರಕಾಶ್ ದಪ್ಪಗಿದಿದ್ದಕ್ಕೆ ಸಣ್ಣ ಆಗಲು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆದ ನಂತರ ಬುಲೆಟ್ ಪ್ರಕಾಶ್ ದೇಹದಲ್ಲಿ 35 ಕೆ.ಜಿ ತೂಕ ಇಳಿಕೆಯಾಗಿತ್ತು. ತೂಕ ಇಳಿಕೆಯಾದ ಪರಿಣಾಮ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈ […]

2 years ago

ಅಪರೂಪದ ಕಾಯಿಲೆಯಿಂದ ಬಳಲುತ್ತಿರೋ ಬಗ್ಗೆ ಸುಳಿವು ನೀಡಿದ ಬಾಲಿವುಡ್ ನಟ ಇರ್ಫಾನ್ ಖಾನ್

ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದರ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತು ಸ್ವತಃ ಇರ್ಫಾನ್ ಖಾನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಇರ್ಫಾನ್ ನಟನೆಯ ಸಿನಿಮಾ ಚಿತ್ರೀಕರಣವನ್ನು ಮುಂದೂಡಲಾಗಿದೆ ಎಂದು ಕಳೆದ ತಿಂಗಳಷ್ಟೇ ನಿರ್ಮಾಪಕ ವಿಶಾಲ್ ಭಾರದ್ವಾಜ್ ತಿಳಿಸಿದ್ದರು. ಕೆಲ ತಿಂಗಳ ಮಟ್ಟಿಗೆ ಚಿತ್ರದ...

ಚಿಕನ್ ಪ್ರಿಯರೇ, ನೀವು ಕೋಳಿ ಮಾಂಸ ತಿನ್ನೋ ಮೊದಲು ಈ ಸ್ಟೋರಿ ಓದಿ

2 years ago

ನವದೆಹಲಿ: ಚಿಕನ್ ಪ್ರಿಯರೇ, ನೀವು ತಿನ್ನುವ ಕೋಳಿ ಮಾಂಸ ತುಂಬಾ ಅಪಾಯಕಾರಿ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ. ಕೋಳಿಯಿಂದ ತಯಾರಿಸುವ ಬಿರಿಯಾನಿ, ಕಬಾಬ್, ಮಾಂಸ ಎಲ್ಲವು ತುಂಬಾ ಡೇಂಜರ್ ಆಗಿವೆ. ಕೋಳಿಗಳ ಬೆಳವಣಿಗೆ ಬೇಗವಾಗಬೇಕೆಂದು ಅವುಗಳಿಗೆ ಕಾಲಿಸ್ಟಿನ್ ಎಂಬ ಆ್ಯಂಟಿಬಯಾಟಿಕ್ಸ್ ಔಷಧವನ್ನು...

ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

2 years ago

ಹೈದರಾಬಾದ್: ಹನ್ನೊಂದು ತಿಂಗಳ ಹೆಣ್ಣು ಶಿಶು ಆಕಸ್ಮಿಕವಾಗಿ ಇಯರ್ ಫೋನ್ ನುಂಗಿ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ಪರ್ಸಲಾಪುದಿ ಗ್ರಾಮದಲ್ಲಿ ಈ ಘಟನೆ ನಡೆದೆ. ಶಸ್ತ್ರ ಚಿಕಿತ್ಸೆಯ ಮೂಲಕ ಇಯರ್ ಫೋನನ್ನು ದೇಹದಿಂದ ಹೊರ...

ನಾನ್ ಇಲ್ಲಿರಲ್ಲ..ನನ್ನ ಮಠಕ್ಕೆ ಕಳುಹಿಸಿ – ಆಸ್ಪತ್ರೆಯಲ್ಲಿ ಹಠ ಹಿಡಿದ ಸಿದ್ದಗಂಗಾ ಶ್ರೀ

2 years ago

ಬೆಂಗಳೂರು: ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಆಸ್ಪತ್ರೆಯಲ್ಲಿ ನಾನಿರಲ್ಲ.. ನನ್ನನ್ನು ಮಠಕ್ಕೆ ಕಳುಹಿಸಿ ಎಂದು ಶ್ರೀಗಳು ಹಠ ಮಾಡುತ್ತಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಶುಕ್ರವಾರ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ...

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

2 years ago

ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಬಹುದು ಎಂಬ ಸುದ್ದಿಯನ್ನು ಹೇಳಿದ್ದೆವು. ಆದರೆ ಇದೀಗ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಶ್ರೀಗಳಿಗೆ ಕಫ, ಜ್ವರ ಕಾಣಿಸಿಕೊಂಡು ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ...

ಗಂಟಲು ತೊಂದರೆ ಇದ್ರೂ ಭಾಷಣ ಮುಂದುವರೆಸಿದ ಬಿಎಸ್‍ವೈ

2 years ago

ಮಂಡ್ಯ: ನಿರಂತರವಾಗಿ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗಂಟಲು ಇಂದು ಕೈಕೊಟ್ಟಿದ್ದು ವೇದಿಕೆ ಮೇಲೆ ಮಾತನಾಡೋಕೆ ಹರಸಾಹಸ ಪಟ್ಟರು. ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ವೇದಿಕೆ ಮೇಲೆ ಮಾತನಾಡಲು ಯಡಿಯೂರಪ್ಪ ಬಳಲಿದಂತೆ ಕಂಡು...

2 ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ಮಾಡಿದ್ರು, ಗುಣಮುಖರಾಗುತ್ತಿದ್ರು: ಕಾಶಿನಾಥ್ ಸಹೋದರಿ ಗಾಯತ್ರಿ

2 years ago

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದು, 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ಎರಡು ದಿನಗಳ ಹಿಂದೆ ಸಿನಿಮಾದ ಡಬ್ಬಿಂಗ್ ಸಹ ಮಾಡಿದ್ದರು. ಉಸಿರಾಟದ...