Wednesday, 21st November 2018

Recent News

2 days ago

ಬಾಗಲಕೋಟೆ ರೈತನಿಗೆ ಸಾಲಕಟ್ಟುವಂತೆ ಸಮನ್ಸ್!

ಬಾಗಲಕೋಟೆ: ಒಂದು ಕಡೆ ಕಬ್ಬು ಬೆಳೆಗಾರರ ಹೋರಾಟ ಮುಗಿಲು ಮುಟ್ಟಿದೆ. ಈ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಬ್ಬು ಬೆಳೆಗಾರನೋರ್ವರಿಗೆ ಬ್ಯಾಂಕ್ ನಿಂದ ಕೋರ್ಟ್ ಸಮನ್ಸ್ ಬಂದಿದೆ. ಸಾಲ ಮರುಪಾವತಿ ಮಾಡುವಂತೆ ಸಮನ್ಸ್ ಜಾರಿಯಾಗಿದ್ದು, ರೈತ ಕಂಗಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ರೈತ ರವಿಶಂಕರ ವೆಂಕಪ್ಪ ಕುಸಗಲ್ ಗೆ ಬೆಂಗಳೂರಿನ ಡೆಬ್ಟ್ ರಿಕವರಿ ಟ್ರಿಬ್ಯೂನಲ್‍ನಿಂದ ಸಮನ್ಸ್ ಜಾರಿಯಾಗಿದೆ. ರೈತ ಇಂಡಿಯನ್ ಬ್ಯಾಂಕ್ ನಿಂದ 2015ರಲ್ಲಿ ಕಬ್ಬು ಬೆಳೆಸಾಲ ಅಂತ 10 ಲಕ್ಷ […]

2 days ago

ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮದ್ಯದ ಖಾಲಿ ಬಾಟಲಿಗಳು ಹಾಗೂ ಮಹಿಳೆಯರ ಚಪ್ಪಲಿಗಳನ್ನು ಪೋಸ್ಟ್ ಮಾಡುವ ಮೂಲಕ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಚಾಮರಾಜನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ...

ಅರಣ್ಯ ಒತ್ತುವರಿ ಜಮೀನು ತೆರವು ವಿವಾದ – ರೈತರ ಪ್ರತಿಭಟನೆಗೆ ಮಣಿದ ಸರ್ಕಾರ

5 days ago

– ಮೃತ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ ಶಿವಮೊಗ್ಗ: ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಜಮೀನು ತೆರವಿಗೆ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಸರ್ಕಾರ ಮಣಿದಿದೆ. ಆರ್ ಎಫ್‍ ಓ ಹನುಮಂತಪ್ಪ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ರೈತ...

ನಿಮ್ಮ ಸಾಲಮನ್ನಾ ಕಾಟಾಚಾರದ್ದು-ಸಿಎಂ ಎಚ್‍ಡಿಕೆ ಹಾಗು ಔರಾದ್ ಶಾಸಕರ ನಡುವೆ ಮಾತಿನ ಚಕಮಕಿ

6 days ago

ಬೀದರ್: ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಔರಾದ್ ಶಾಸಕ ಪ್ರಭು ಚವ್ಹಾಣ್, ನೀವು ಕಾಟಾಚಾರಕ್ಕೆ ಸಾಲಮನ್ನಾ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಕೆಲ ಕ್ಷಣ...

ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಕೈಬಿಡಲ್ಲ- ಸಿಎಂ

1 week ago

ಬೆಂಗಳೂರು/ತುಮಕೂರು: ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡಲ್ಲ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಟಿಪ್ಪು ಜಯಂತಿ ಆಚರಣೆ ನಿಲ್ಲಿಸಲ್ಲ. ಅಂತಹ ಯೋಚನೆಯೂ ನಮ್ಮ ಬಳಿ ಇಲ್ಲ. ನನಗೆ ಅನಾರೋಗ್ಯದ ನಿಮಿತ್ತ...

ಸಿಎಂ ಕುಮಾರಸ್ವಾಮಿಗೆ ನೆಲಮಂಗಲ ರೈತರಿಂದ ಸವಾಲ್

2 weeks ago

ಬೆಂಗಳೂರು: ಮುಖ್ಯಮಂತ್ರಿಗಳೇ ಪಾಂಡವಪುರದ ಗದ್ದೆಯಲ್ಲಿ ನಾಟಿ ಮಾಡುವುದಲ್ಲ. ರಾತ್ರಿ ವೇಳೆ ನಮ್ಮ ಹೊಲಗಳಲ್ಲಿ ಕೆಲಸ ಮಾಡಿ ಎಂದು ರೈತರು ಮುಖ್ಯಮಂತ್ರಿಗಳಿಗೆ ಸವಾಲ್ ಹಾಕಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿವಿಧೆಡೆ ರೈತರ ಜಮೀನುಗಳಿಗೆ ನೀರು ಹಾಯಿಸಲು ಬೆಸ್ಕಾಂ ಸಿಬ್ಬಂದಿ ರಾತ್ರಿ ವೇಳೆ...

ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಬಿಎಸ್‍ವೈಗೆ ಅಧಿಕಾರ ಸಿಕ್ಕಿಲ್ಲ: ಜಮೀರ್ ಅಹ್ಮದ್

2 weeks ago

ಬೆಂಗಳೂರು: ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಸಿಕ್ಕಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಟಾಂಗ್ ಕೊಟ್ಟಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬಿಜೆಪಿ 2013ರಲ್ಲಿ ಟಿಪ್ಪು ಜಯಂತಿ ಆಚರಿಸಿಲ್ಲ. ಹೀಗಾಗಿಯೇ...

ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಗೈರು ಯಾಕೆ: ನಿಜವಾದ ಕಾರಣ ತಿಳಿಸಿದ ದಿನೇಶ್ ಗುಂಡೂರಾವ್

2 weeks ago

ಬೆಂಗಳೂರು: ಬೇರೆ ಕಾರಣಗಳಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟನೆ ಕೊಟ್ಟಿದ್ದಾರೆ. ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ಕುಮಾರಸ್ವಾಮಿ ಹೆಸರು ಇಲ್ಲ ಯಾಕೆ ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ, ಬೇರೆ ಕಾರಣಗಳಿಂದಾಗಿ ಅವರು...