Monday, 16th July 2018

Recent News

3 days ago

ನದಿ ನೀರಿಗೆ ಕೊಚ್ಚಿ ಹೋದ ಲಾರಿ- ಮೂವರ ಪೈಕಿ ಇಬ್ಬರು ನೀರು ಪಾಲು

– ಮಳೆಗೆ ಏಳೆಂಟು ಅಡಿ ರಸ್ತೆಯೇ ಕುಸಿಯಿತು ಹಾವೇರಿ: ಮಳೆಯ ಅಬ್ಬರಕ್ಕೆ ನದಿ ನೀರಿನಲ್ಲಿ ಲಾರಿ ಕೊಚ್ಚಿ ಹೋದ ಪರಿಣಾಮ ಅದರಲ್ಲಿದ್ದ ಇಬ್ಬರು ನೀರು ಪಾಲಾದ ಘಟನೆ ನಾಗನೂರು ತಾಲೂಕಿನ ಗ್ರಾಮದ ಬಳಿ ನಡೆದಿದೆ. ಬಸವರಾಜ ಸೋಮಣ್ಣ (25) ಲಕ್ಷ್ಮಣ ದೊಡ್ಡತಳವಾರ ( 35) ನೀರು ಪಾಲಾದ ದುರ್ದೈವಿಗಳು. ಹಾವೇರಿಯಿಂದ ಹಾನಗಲ್‍ಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಲಾರಿಯಲ್ಲಿದ್ದ ಮೂವರ ಪೈಕಿ ಇಬ್ಬರು ನೀರು ಪಾಲಾಗಿದ್ದಾರೆ. ಇನ್ನು ಘಟನೆಯಲ್ಲಿ ಗುಡ್ಡಪ್ಪ ಸೋಮಣ್ಣವರ (25) ಎಂಬವರು ಅಪಾಯದಿಂದ […]

5 days ago

ಜಾವಲಿನ್ ಎಸೆತದ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

ಹಾವೇರಿ: ಜಾವಲಿನ್ ಎಸೆತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಲ್ಲಿಕ್ (16) ಮೃತ ವಿದ್ಯಾರ್ಥಿ. ಮಲ್ಲಿಕ್ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ಶಾಲೆಯಲ್ಲಿ ಜಾವಲಿನ್ ಎಸೆತದ ವೇಳೆ ಭರ್ಜಿ ಚುಚ್ಚಿ ತೀವ್ರವಾಗಿ ಗಾಯಗೊಂಡಿದ್ದ. ಗಾಯಗೊಂಡಿದ್ದ ವಿದ್ಯಾರ್ಥಿಗೆ ಕೂಡಲೇ...

ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ!

6 days ago

ಹಾವೇರಿ: ನಗರದ ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದ ಆಸಾಮಿಯನ್ನು ಪೊಲೀಸರು ವಶಕ್ಕೆ ಪಡೆದಿರೋ ಘಟನೆ ಹಾವೇರಿ ನಗರದ ಅಶ್ವಿನಿನಗರದಲ್ಲಿ ನಡೆದಿದೆ. ವೈದ್ಯ ಡಾ. ಎಸ್.ಡಿ.ಸೀಗಿಹಳ್ಳಿ ಎಂಬವರ ಲೆಟರ್ ಪ್ಯಾಡ್ ನಕಲು ಮಾಡಿಕೊಂಡು ಎಸ್.ಆರ್.ಹುಲ್ಲಾಳ ಎಂಬಾತ...

ವ್ಯಸನ ಮುಕ್ತ ಕಾರಾಗೃಹ ಕೈದಿಗಳಿಂದ ಶಪಥ- ವ್ಯಸನ ನಮ್ಮ ಜೇಬಿನಲ್ಲಿ ಇಟ್ಟುಕೊಂಡ ಹಾವು: ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್

1 week ago

ಹಾವೇರಿ: ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನ ನಮ್ಮ ಜೇಬಿನಲ್ಲಿ ಇಟ್ಟುಕೊಂಡ ನಾಗರ ಹಾವಿದ್ದಂತೆ. ಅದು ಯಾವಾಗಲಾದರೂ ನಮಗೆ ಕೆಟ್ಟದನ್ನು ಮಾಡುವ ಸಾಧ್ಯತೆ ಇರುತ್ತದೆ. ಕಾರಣ ಶಾಶ್ವತವಾಗಿ ವ್ಯಸನಗಳಿಂದ ಹೊರ ಬಂದು ಜೀವನ ಪೂರ್ತಿ ಶಾಂತಚಿತ್ತರಾಗಿ ಸಮಾಜಮುಖಿಯಾಗಿ ಬಾಳುವಂತೆ ಕೈದಿಗಳಿಗೆ ಜಿಲ್ಲಾಧಿಕಾರಿ...

ಅಜ್ಜ-ಅಜ್ಜಿಯ ಆಸರೆಯಲ್ಲಿರುವ ವಿದ್ಯಾಳ ವಿದ್ಯಾಭ್ಯಾಸಕ್ಕೆ ಬೇಕಿದೆ ನೆರವು

1 week ago

ಹಾವೇರಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಜೊತೆಗೆ ಕೈಲಾಗದಿರುವ ವಯಸ್ಸಾದ ದಂಪತಿ. ತಂದೆ ತಾಯಿಯನ್ನು ಕಳೆದುಕೊಂಡ ಈ ಅನಾಥ ಮಕ್ಕಳಿಗೆ ಈಗ ಅಜ್ಜ-ಅಜ್ಜಿಯೇ ಆಸರೆ. ಹೌದು ಇದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕರೂರು ಗ್ರಾಮದ ಕರುಣಾಜನಕ ಕಥೆ. ವಿದ್ಯಾ ಮತ್ತು...

ಹಾವೇರಿಯಲ್ಲಿ ರೈತರಿಗೆ ಕಾರಹುಣ್ಣಿಮೆ ಬಳಿಕ ಬಂಡಿ ಓಟದ ಖುಷಿ

1 week ago

ಹಾವೇರಿ: ಕಾರಹುಣ್ಣಿಮೆ ಹಬ್ಬ ಅಂದ್ರೆ, ಉತ್ತರ ಕರ್ನಾಟಕ ಭಾಗದ ರೈತರಿಗೆ ಖುಷಿ. ಎಂಥಾ ಕಷ್ಟಕಾಲ, ಬರಗಾಲ ಬಂದ್ರೂ ಸಹ ರೈತರು ಈ ಹಬ್ಬವನ್ನ ಮಾತ್ರ ಮರೆಯೋದಿಲ್ಲ. ಅದ್ರಲ್ಲೂ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆಯ ಬಂಡಿ ಓಟವನ್ನ ನಡೆಸ್ತಾರೆ. ಎರಡು ದಿನಗಳ...

ಟಗರು ಕಾಳಗವನ್ನು ಮೀರಿಸುವಂತೆ ನಡೆಯಿತು ಕೃಷ್ಣಮೃಗಗಳ ಕಾಳಗ- ವಿಡಿಯೋ ನೋಡಿ

2 weeks ago

ಹಾವೇರಿ: ಉತ್ತರ ಕರ್ನಾಟಕ ಭಾಗದಲ್ಲಿ ಟಗರು ಕಾಳಗ ಅಂದ್ರೆ ಅದು ಸಖತ್ ಫೇಮಸ್. ಆದರೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಟಗರು ಕಾಳಗವನ್ನೂ ಮೀರಿಸುವಂತೆ ಕೃಷ್ಣಮೃಗಗಳ ಕಾಳಗ ನಡೆದಿದೆ. ಸುಮಾರು ಅರ್ಧ ಗಂಟೆ ಕಾಲ ಬಿಟ್ಟುಬಿಡದೆ ಕೃಷ್ಣ...

ಸರ್ಕಾರಿ ಬಸ್ ಹಳ್ಳಕ್ಕೆ ಉರುಳಿ 11 ಮಂದಿಗೆ ಗಾಯ!

2 weeks ago

ಹಾವೇರಿ: ಸರ್ಕಾರಿ ಬಸ್ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದು ಹನ್ನೊಂದು ಜನರಿಗೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಹಿರೇಮೊರಬ ಗ್ರಾಮದ ಬಳಿ ನಡೆದಿದೆ. 11 ಜನ ಗಾಯಾಳುಗಳಿಗೆ ಮಾಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಏಳು...