Friday, 19th July 2019

Recent News

2 days ago

ಹಾಸನದಲ್ಲಿ ಬಂದೂಕುಧಾರಿಗಳು ಪ್ರತ್ಯಕ್ಷ – ಪೊಲೀಸರಿಂದ ಶೋಧ

ಹಾಸನ: ಜಿಲ್ಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬಂದೂಕು ತೋರಿಸಿ ಬೆದರಿಕೆ ಹಾಕಿರುವ ಪ್ರಕರಣ ಕಂಡುಬಂದಿದ್ದು, ಪೊಲೀಸರು ಪಶ್ಚಿಮ ಘಟ್ಟದಲ್ಲಿ ಶೋಧಕಾರ್ಯ ಮಾಡುತ್ತಿದ್ದಾರೆ. ಹಾಸನ ಮಂಗಳೂರು ನಡುವಿನ ರೈಲ್ವೆ ಹಳಿಯ ಯಡಕುಮೇರಿ ಬಳಿ ಪ್ರತ್ಯಕ್ಷವಾಗಿದ್ದ ಇಬ್ಬರು ಶಸ್ತ್ರಾಸ್ತ್ರಧಾರಿಗಳು, ಎರಡು ದಿನಗಳ ಹಿಂದೆ ರೈಲ್ವೆ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ. ಬಂದೂಕುದಾರಿಗಳನ್ನು ನಕ್ಸಲರೆಂಬ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಅರಣ್ಯ ಇಲಾಖೆ, ರೈಲ್ವೇ ಪೊಲೀಸ್, ಮತ್ತು ಸಕಲೇಶಪುರ ಗ್ರಾಮಾಂತರ ಪೊಲೀಸರಿಂದ ಜಂಟಿಯಾಗಿ ಕಡಗರವಳ್ಳಿ ಮತ್ತು ಯಡಕುಮೇರಿ ಭಾಗದಲ್ಲಿ ಶೋಧಕಾರ್ಯ ಮಾಡುತ್ತಿದ್ದಾರೆ.

1 week ago

ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಬಿಜೆಪಿ ಶಾಸಕನ ಡ್ಯಾನ್ಸ್ – ವಿಡಿಯೋ ವೈರಲ್

ಡೆಹ್ರಾಡೂನ್: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಉತ್ತರಾಖಂಡ್‍ನ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಇದೀಗ ಮತ್ತೆ ಸುದ್ದಿಯಾಗಿದ್ದು, ನಾಲ್ಕೈದು ಗನ್ ಹಿಡಿದುಕೊಂಡು ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ ಆಕಾಶ್ ವಿಜಯ್‍ವರ್ಗಿಯಾ ಪ್ರಕರಣದ ನಂತರ ಪ್ರಧಾನಿ ಮೋದಿ ಅವರು ಎಲ್ಲ ಜನಪ್ರತಿನಿಧಿಗಳು ಶಿಸ್ತಿನಿಂದ ವರ್ತಿಸಬೇಕು....

ಗನ್ ತೋರಿಸಿ ಅಪ್ರಾಪ್ತ ಅಕ್ಕ-ತಂಗಿ ಮೇಲೆ ಗ್ಯಾಂಗ್‍ರೇಪ್

1 month ago

ಲಕ್ನೋ: ಗದ್ದೆಗೆ ಹೋಗಿದ್ದ ಇಬ್ಬರು ಅಪ್ರಾಪ್ತೆಯರಿಗೆ ದುಷ್ಕರ್ಮಿಗಳು ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಸಮೀಪದ ಕೆಸರ್ವಾ ಗ್ರಾಮದಲ್ಲಿ ನಡೆದಿದೆ. ಕೆಸರ್ವಾ ಗ್ರಾಮದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ...

ಬೆಂಗಳೂರಲ್ಲಿ ಅಪರಿಚಿತರಿಂದ ಗುಂಡಿನ ದಾಳಿ

3 months ago

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ಸೈಯದ್ ಝುಬೇರ್ ದಾಳಿಗೊಳಗಾದ ವ್ಯಕ್ತಿ. ನಗರದ ಔಟರ್ ರಿಂಗ್ ರಸ್ತೆಯ ಎಚ್‍ಬಿಆರ್ ಲೇಔಟ್‍ನಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಸೈಯದ್ ಝುಬೇರ್ ಮೇಲೆ...

ಸಿಆರ್‌ಪಿಎಫ್ ಪೇದೆಯಿಂದ ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ- ಮೂವರು ಸಾವು

4 months ago

ಶ್ರೀನಗರ: ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು ಸಿಆರ್‌ಪಿಎಫ್ ಪೇದೆಯೊಬ್ಬ ಮೂವರು ಸಹೋದ್ಯೋಗಿಗಳಿಗೇ ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್‍ಪುರ ಜಿಲ್ಲೆಯ ಸಿಆರ್‌ಪಿಎಫ್ ಕ್ಯಾಂಪ್ ಬಳಿ ನಡೆದಿದೆ. ಅಜಿತ್ ಕುಮಾರ್ ಬುಧವಾರ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ....

ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರ ರಾಮನಗರದಲ್ಲಿ ಗನ್ ಹಿಡಿದು ರೌಡಿಸಂ

4 months ago

ರಾಮನಗರ: ಶಿವರಾತ್ರಿ ಹಬ್ಬದಂದು ಸಿಎಂ ಸ್ವಕ್ಷೇತ್ರದಲ್ಲಿ ಹಾಡಹಾಗಲೇ ದುಷ್ಕರ್ಮಿಯೊಬ್ಬ ಕಾರಿನಲ್ಲಿ ಗನ್ ಹಿಡಿದು ಹೆದ್ದಾರಿಯ ರಸ್ತೆಯುದ್ದಕ್ಕೂ ಪುಂಡಾಟಿಕೆ ನಡೆಸಿದ ಘಟನೆ ನಡೆದಿದೆ. ಬೆಂಗಳೂರು – ಮೈಸೂರು ಹೆದ್ದಾರಿಯ ಚನ್ನಪಟ್ಟಣ್ಣದಿಂದ ರಾಮನಗರ ತನಕ ಹೆದ್ದಾರಿಯಲ್ಲಿ ಕಾರ್ ಹೊರಗಡೆ ಗನ್ ತೋರಿಸುತ್ತಲೇ ಪ್ರಯಾಣ ಮಾಡಿದ್ದಾನೆ....

ತೋಟಕ್ಕೆ ಬಂದ ಕೋತಿಗಳನ್ನು ಕೊಲ್ಲಲು ಹೋದ ಯುವಕ ತಾನೇ ಹೆಣವಾದ!

5 months ago

ಕಾರವಾರ: ತೋಟಕ್ಕೆ ಉಪಟಳ ಕೊಡುತ್ತಿದ್ದ ಮಂಗಗಳನ್ನು ಕೊಲ್ಲಲು ನಾಡ ಬಂದೂಕಿಗೆ ಮದ್ದು ಹಾಕುತ್ತಿದ್ದಾಗ ಗುಂಡು ತಲೆಗೆ ಸಿಡಿದು ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಾನಳ್ಳಿಯ ಕೆರೆಗದ್ದೆಯಲ್ಲಿ ನಡೆದಿದೆ. ಶಿರಸಿಯ ಹುಲೇಕಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ...

ಗೌರಿ ಹತ್ಯೆಗೆ ಬಳಸಿದ್ದ ಗನ್ ನದಿಗೆಸೆದ ಕೊಲೆಗಡುಕರು – ಗನ್ ಪತ್ತೆಗೆ ವಿಶೇಷ ತಂತ್ರಜ್ಞಾನ ಬಳಕೆ

6 months ago

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಗನ್ ಪತ್ತೆಗೆ ವಿಶೇಷ ತಂತ್ರಜ್ಞಾನ ಬಳಸಲಾಗ್ತಿದೆ. ಗೌರಿ ಹತ್ಯೆಗೆ ಬಳಸಿದ ಪಿಸ್ತೂಲನ್ನು ಮುಂಬೈ ಮತ್ತು ಥಾಣೆಯ ನಡುವಿನ ನದಿಯಲ್ಲಿ ಬಿಸಾಕಿದ್ದರು. ಆ ಗನ್ ಪತ್ತೆ ಹಚ್ಚುವ ಸಲುವಾಗಿ ಎಸ್‍ಐಟಿ ಪ್ರೋಬ್ ತಂತ್ರಜ್ಞಾನವನ್ನ...