Recent News

5 days ago

ಬೈಕಿನಲ್ಲಿದ್ದ ಬಾಲಕರಿಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ – ಓರ್ವ ಸಾವು, 20 ಮಂದಿಗೆ ಗಾಯ

ವಿಜಯಪುರ: ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಹತ್ತಿರ ನಡೆದಿದೆ. ಈ ಘಟನೆಯಲ್ಲಿ ಬೈಕಿನಲ್ಲಿದ್ದ ಬಾಲಕ ಸಾವನ್ನಪ್ಪಿದ್ದು, ಬಸಿನಲ್ಲಿದ್ದ 20 ಜನರಿಗೆ ಗಾಯಗಳಾಗಿವೆ. ವಿಜಯಪುರದಿಂದ ತಾಳಿಕೋಟೆಗೆ ಆಗಮಿಸುತ್ತಿದ್ದ ಕೆಎ 28 ಎಫ್ 2087 ಬಸ್, ರಸ್ತೆ ಮಧ್ಯೆ ಬೈಕಿನಲ್ಲಿ ಬಂದ ಇಬ್ಬರು ಬಾಲಕರನ್ನು ತಪ್ಪಿಸಲು ಹೋಗಿ ಈ ಅನಾಹುತ ಸಂಭವಿಸಿದೆ. ಬಸ್ಸಿನ ಚಕ್ರದೊಳಗೆ ಬೈಕ್ ಸಿಲುಕಿಕೊಂಡ ಕಾರಣ ಓರ್ವ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತ […]

1 week ago

ಸರ್ಕಾರಿ ರಾಜಹಂಸ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

ಗದಗ: ಸರ್ಕಾರಿ ರಾಜಹಂಸ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, 5 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಬಳಿ ನಡೆದಿದೆ. ರಾಜಹಂಸ ಬಸ್ ಯಾದಗಿರಿಯಿಂದ ಗದಗ ಮಾರ್ಗವಾಗಿ ಧಾರವಾಡಕ್ಕೆ ತೆರಳುತ್ತಿತ್ತು. ಆದರೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಬಳಿ ಬರುತ್ತಿದ್ದಂತೆ ಬಸ್ ರಸ್ತೆ ಬದಿ ಪಲ್ಟಿಯಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ...

ಬೇರೆ ರೂಟ್‍ಗೆ ಹೋಗು ಅಂದಿದ್ದಕ್ಕೆ ಬಡಿದಾಡಿದ ಸಾರಿಗೆ ಸಿಬ್ಬಂದಿ!

5 months ago

ಹಾವೇರಿ: ವಾಯುವ್ಯ ಸಾರಿಗೆ ಬಸ್ ಕಂಟ್ರೋಲರ್ ಮತ್ತು ಕಂಡಕ್ಟರ್ ನಡುವೆ ಮಾತಿಗೆ ಮಾತು ಬೆಳೆದು ಬಸ್ ನಿಲ್ದಾಣದಲ್ಲಿಯೇ ಇಬ್ಬರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ. ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್.ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ನಡುವೆ ಗಲಾಟೆ ನಡೆದಿದೆ....

ಬಸ್ ರಿಪೇರಿ ಮಾಡೋ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ!

5 months ago

ಬಳ್ಳಾರಿ: ಸಾರಿಗೆ ಬಸ್ ರಿಪೇರಿ ಮಾಡುವ ಮೆಕ್ಯಾನಿಕಲ್ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಮಾಡುವ ಶಿಕ್ಷೆ ಕೊಟ್ಟ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೌದು. ಸಾರಿಗೆ ಇಲಾಖೆ ಅಧಿಕಾರಿಗಳ ಅಮಾನುಷ ವರ್ತನೆಯಿಂದ ಮೆಕ್ಯಾನಿಕಲ್ ಸಿಬ್ಬಂದಿ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ ಅನುಭವಿಸಿದ ಘಟನೆ ಗುರುವಾರ...

ಮಂಡ್ಯ ಬಸ್ ದುರಂತದ ನಾಲೆಗೆ ತಡೆಗೋಡೆ ನಿರ್ಮಾಣ- ಶಾಂತಿ ಹೋಮ ನಡೆಸಲು ಗ್ರಾಮಸ್ಥರ ನಿರ್ಧಾರ

11 months ago

ಮಂಡ್ಯ: 30 ಜನರನ್ನು ಬಲಿ ಪಡೆದ ಕನಗನಮರಡಿ ಬಸ್ ದುರಂತದ ನಂತರ ಎಚ್ಚೆತ್ತುಕೊಂಡ ಸರ್ಕಾರ ನಾಲೆಗೆ ತಡೆಗೋಡೆಯನ್ನು ನಿರ್ಮಿಸಿದೆ. ಹಾಗೆಯೆ ಗ್ರಾಮಸ್ಥರು ಸ್ಥಳದಲ್ಲಿ ಶಾಂತಿ ಹೋಮ ನಡೆಸಲು ಮುಂದಾಗಿದ್ದಾರೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ನಾಲೆಯ ಎಡಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಸರ್ಕಾರ...

ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

11 months ago

ಗದಗ: ಪಾಳಿ ವಿಷಯಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ಕಂಡಕ್ಟರ್‌ಗಳು  ಬೀದಿ ರಂಪಾಟ ಮಾಡಿಕೊಂಡ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಬೀದಿ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು...

ಹಳಿ ಮೇಲೆ ನಿಂತ ಸರ್ಕಾರಿ ಬಸ್ – ಗೇಟ್ ಮನ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

12 months ago

ಬೆಳಗಾವಿ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಬ್ರೇಕ್ ಫೇಲ್ ಆದ ಪರಿಣಾಮ ರೈಲ್ವೇ ಹಳಿ ಮೇಲೆ ನಿಂತಿದ್ದು, ಈ ವೇಳೆ ಗೇಟ್‍ಮನ್ ಸಮಯಪ್ರಜ್ಞೆಯಿಂದಾಗಿ ನಡೆಯಬಹುದಾದ ಭಾರೀ ಅನಾಹುತ ತಪ್ಪಿದೆ. ಜಿಲ್ಲೆಯ ಖಾನಾಪುರ ತಾಲೂಕಿನ ಗೋದಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು,...

30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

1 year ago

ಚಿಕ್ಕಮಗಳೂರು: ಸರ್ಕಾರಿ ಬಸ್ಸೊಂದು ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಡೂರು ತಾಲೂಕು ತಂಗಲಿ ಸಮೀಪದ ವೇದಾ ನದಿ ಸೇತುವೆಯಿಂದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 20 ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್...