Tuesday, 26th March 2019

2 months ago

ಕೊಡಗು ಸಂತ್ರಸ್ತರಿಗೆ 999 ರೂ. ಪರಿಹಾರ – ಸರ್ಕಾರದ ವಿರುದ್ಧ ರೈತರ ಆಕ್ರೋಶ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಅವಾಂತರದಿಂದ ಸಾಕಷ್ಟು ನಷ್ಟವಾಗಿದ್ದು, ಎಲ್ಲವನ್ನೂ ಮರೆತಿರೋ ರಾಜ್ಯ ಸರ್ಕಾರ ಕೇಂದ್ರ ಕೊಟ್ಟ ಹಣವನ್ನಷ್ಟೇ ಪರಿಹಾರ ಘೋಷಿಸಿ ಸುಮ್ಮನಾಗಿದ್ದಕ್ಕೆ ಟೀಕೆ ಕೇಳಿ ಬಂದಿದೆ. ರೈತರು ಎಕರೆಗಟ್ಟಲೆ ಜಾಗದಲ್ಲಿ ಬೆಳೆದಿದ್ದ ಭತ್ತ, ಕಾಫಿ ಸೇರಿ ಇತರೆ ಬೆಳೆ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಆದ್ರೆ ರಾಜ್ಯ ಸರ್ಕಾರ ಕೆಲವರಿಗೆ ಮಾತ್ರ ಕೇವಲ 999 ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಜೊತೆಗೆ ಈ ಹಣ ಪಡೆಯೋಕೆ ದಾಖಲೆ ಕೂಡಾ ಕೊಡಬೇಕು ಎಂದು […]

6 months ago

ತಿತ್ಲಿ ಚಂಡಮಾರುತಕ್ಕೆ ತತ್ತರಿಸಿ ಕೊಚ್ಚಿ ಹೋಯ್ತು ಸೇತುವೆ: ವಿಡಿಯೋ ನೋಡಿ

ಭುವನೇಶ್ವರ: ತಿತ್ಲಿ ಚಂಡಮಾರುತದ ಅಬ್ಬರಕ್ಕೆ ಒಡಿಶಾದಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಗಂಜಮ್ ಜಿಲ್ಲೆಯ ಕಳಿಂಗದಳ ಪ್ರದೇಶದಲ್ಲಿ ಘಟನೆ ನಡೆದಿದ್ದು, ಬಹುದಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬಂಗಾಳಕೊಲ್ಲಿ ಕಾಣಿಸಿಕೊಂಡ ತಿತ್ಲಿ...

ಕೊಡಗು ನಿರಾಶ್ರಿತರಿಗೆ ಸೂರು ವಿಳಂಬ- ಇತ್ತ ಬಾಡಿಗೆ ಮನೆಯೂ ಸಿಗ್ತಿಲ್ಲ

6 months ago

ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ಸೂರು ಕಳೆದುಕೊಂಡ ಸಾವಿರಾರು ನಿರಾಶ್ರಿತರಿಗೆ ಸೂರು ಕಲ್ಪಿಸೋ ಕಾರ್ಯ ವಿಳಂಬವಾಗ್ತಿರೋದ್ರಿಂದ ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿರಲು ಹಿಂದೇಟು ಹಾಕ್ತಿದ್ದಾರೆ. ಅದ್ರಿಂದ ಬಾಡಿಗೆ ಮನೆಗಳಿಗೆ ತೆರಳೋಕೆ ಮುಂದಾಗ್ತಿರೋ ನಿರಾಶ್ರಿತ ಕುಟುಂಬಗಳಿಗೆ ಜಿಲ್ಲಾಡಳಿತ ತಿಂಗಳ ಬಾಡಿಗೆ ಕೊಡೋಕೆ ರೆಡಿ ಇದ್ರೂ ಬಾಡಿಗೆ...

ಸೂರು ಕಳೆದುಕೊಂಡಿರೋ ಕೊಡಗು ಸಂತ್ರಸ್ತರಿಂದ ಲಂಚ ಪೀಕಿದ ಅಧಿಕಾರಿ – ವಿಡಿಯೋ ನೋಡಿ

6 months ago

ಕೊಡಗು: ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಜನರು ಹೊಸದಾಗಿ ಪಡಿತರ ಚೀಟಿ ನೀಡುವ ವಿಚಾರದಲ್ಲಿಯೂ ಅಧಿಕಾರಿಗಳು ಲಂಚ ಪಡೆಯುತ್ತಿರುವ ಶೋಚನೀಯ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ. ಮಹಾಮಳೆಗೆ ಕೊಡಗಿನ ಜನ ತತ್ತರಿಸಿ ಹೋಗಿದ್ದು, ಅನೇಕರು ತಮ್ಮ ವಾಸಸ್ಥಳಗಳನ್ನು ಕಳೆದುಕೊಂಡು...

ಕೊಡಗಿನ ಜಲಸ್ಫೋಟಕ್ಕೆ ಕಾರಣವೇನು? ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳ ಪ್ರಾಥಮಿಕ ವರದಿಯಲ್ಲಿ ಉಲ್ಲೇಖ

6 months ago

ಮಡಿಕೇರಿ: ಕೊಡಗಿನಲ್ಲಾದ ಮಹಾ ಪ್ರಳಯಕ್ಕೆ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪವೇ ಪ್ರಮುಖ ಕಾರಣ ಅಂತ ತಿಳಿದು ಬಂದಿದೆ. ಜಿಲ್ಲಾಡಳಿತದ ಮನವಿ ಮೇರೆಗೆ 1 ತಿಂಗಳ ಕಾಲ ಅಧ್ಯಯನ ನಡೆಸಿದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಅನೇಕ ದಶಕಗಳಿಂದಲೂ...

ಕೊಡಗು ನಿರಾಶ್ರಿತರಿಗೆ ತಿಂಗಳಿಗೆ 10 ಸಾವಿರ ರೂ. ಸಹಾಯಧನ – ಯು.ಟಿ.ಖಾದರ್

6 months ago

ಬೆಂಗಳೂರು: ಕೊಡಗು ನಿರಾಶ್ರಿತರಿಗೆ ಟೆಂಟ್ ನಿರ್ಮಾಣ ಮಾಡಿಕೊಡುವ ಪ್ರಸ್ತಾವನೆ ಕೈ ಬಿಡಲಾಗಿದ್ದು, ಮನೆ ನಿರ್ಮಿಸುವವರೆಗೆ ಪ್ರತಿ ತಿಂಗಳು ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಧನ ನೀಡಲಾಗುತ್ತದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾಧ್ಯಮಗಳ ಜೊತೆ...

ನೋಡ ನೋಡುತ್ತಿದಂತೆ ಪ್ರವಾಹದಲ್ಲಿ ಕೊಚ್ಚಿಹೋಯ್ತು ವೋಲ್ವೋ ಬಸ್ – ವಿಡಿಯೋ ನೋಡಿ

6 months ago

ನವದೆಹಲಿ: ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಪ್ರವಾಸಿಗರ ವೋಲ್ವೋ ಬಸ್ ಒಂದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದಿದೆ. ಬಸ್ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಘಟನೆ ವೇಳೆ ಬಸ್ಸಿನಲ್ಲಿ ಯಾರು...

ಕೇರಳ ಪ್ರವಾಹ – ಮಾರುತಿ ಸುಜುಕಿಯ 357 ಹೊಸ ಕಾರುಗಳು ಗುಜುರಿಗೆ!

7 months ago

ತಿರುವನಂತಪುರ: ಕೇರಳ ಪ್ರವಾಹಕ್ಕೆ ಒಂದೇ ಕಾರ್ ಶೋರೂಂನ 357 ಹೊಸ ಕಾರುಗಳು ಸಂಪೂರ್ಣ ಹಾಳಾಗಿದ್ದು, ಎಲ್ಲಾ ಕಾರುಗಳನ್ನು ಗುಜುರಿಗೆ ಹಾಕಲು ಶೋರೂಂ ಮಾಲೀಕರು ನಿರ್ಧರಿಸಿದ್ದಾರೆ. ಪ್ರವಾಹದಿಂದಾಗಿ ತ್ರಿಶೂರ್ ನ ಮಾರುತಿ ಸುಜುಕಿ ಕಾರು ಡೀಲರ್ ಬಿಆರ್‌ಡಿ ಕಾರ್ ವರ್ಲ್ಡ್ ಶೋರಂನ ಒಟ್ಟು...