Thursday, 19th July 2018

Recent News

4 weeks ago

ಕಾಲುವೆಗೆ ಬಿದ್ದು 2 ಗಂಟೆ ಪರದಾಡಿದ್ದ ಕುದುರೆಯ ರಕ್ಷಣೆ -ವಿಡಿಯೋ ನೋಡಿ

ಗದಗ: ಮಲಪ್ರಭಾ ಬಲದಂಡೆ ಕಾಲುವೆಗೆ ಬಿದ್ದು ಪರದಾಟ ನಡೆಸಿದ್ದ ಕುದುರೆಯೊಂದನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಕುದುರೆ ಕಾಲುವೆ ಪಕ್ಕ ನಡೆದು ಹೋಗುವ ವೇಳೆ ಕಾಲುಜಾರಿ ಕಾಲುವೆಯಲ್ಲಿ ಸಿಲುಕಿ ಪರದಾಟ ನಡೆಸಿದ್ದನ್ನು ಕಂಡ ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದರು. ಆದರೆ ಸೂಕ್ತ ಸಲಕರಣೆ ಹಾಗೂ ಕಾಲುವೆ ಜೇಡಿ ಮಣ್ಣಿನಿಂದ ಕೂಡಿದ್ದ ಕಾರಣ ರಕ್ಷಣೆ ಮಾಡಲು ವಿಫಲರಾಗಿದ್ದರು. ಈ ವೇಳೆ ಅಗ್ನಿಶಾಮಕ ರಕ್ಷಣಾ ತಂಡಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳೀಯರ ಮಾಹಿತಿ […]

1 month ago

ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಜಲಸಮಾಧಿ!

ಬೆಂಗಳೂರು: ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿದ್ದ ಕೃಷಿ ಹೊಂಡದಲ್ಲಿ ಈಜಲು ಹೋಗಿ ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಲೇಕ್ಯಾತನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ತಂದೆ ರಾಜಣ್ಣ ಮತ್ತು ಮಗ ಅಮಿತ್ ಮೃತ ದುರ್ದೈವಿಗಳು. ರಾಜಣ್ಣ ಮೂಲತಃ ದುಬೈನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ರಜೆಯ ನಿಮಿತ್ತ...

ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಂದೆ

3 months ago

ಮಂಡ್ಯ: ನೀರಿನಲ್ಲಿ ಮುಳುಗುತ್ತಿದ್ದ ಒಂದು ವರ್ಷದ ಮಗನನ್ನು ರಕ್ಷಿಸಿ ತಂದೆ ಪ್ರಾಣಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರೇಶ್ವರ ಗ್ರಾಮದ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಫಿರೋಜ್ ಮಗನನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾರೆ. ಫಿರೋಜ್ ಪತ್ನಿ ಜಬಿನ್...

32 ಮಂದಿ ಪ್ರಯಾಣಿಕರಿದ್ದ ಐರಾವತ ಬಸ್ ನಲ್ಲಿ ಬೆಂಕಿ

3 months ago

ಚಿಕ್ಕಬಳ್ಳಾಪುರ: ಐರಾವತ ಬಸ್ಸಿನ ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಈ ಅವಘಡ ದೇವನಹಳ್ಳಿ ಪಟ್ಟಣದ ಹೊರವಲಯದ ರಾಣಿಕ್ರಾಸ್ ಬಳಿ ಸಂಭವಿಸಿದೆ. ಕೆಎ 57 ಎಫ್ 212 ಸಂಖ್ಯೆಯ...

ಸುಟ್ಟು ಕರಕಲಾಯ್ತು 32 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್!

3 months ago

ಕೊಪ್ಪಳ: ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಖಾಸಗಿ ಬಸ್ ಸುಟ್ಟು ಕರಕಲಾಗಿರುವ ಘಟನೆ ಯಲಬುರ್ಗಾ ತಾಲೂಕಿನ ಗುನ್ನಾಳ ಕ್ರಾಸ್ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 50 ಕ್ಕೆ ಹೊಂದಿಕೊಂಡಿರುವ ಗುನ್ನಾಳ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಸದ್ಯ ಈ ಅವಘಡದಿಂದ...

ಅಯ್ಯೋ.. ಬಿಟ್ ಬಿಡ್ರೋ.. ನಾನು ಸಾಯ್ತಿನಿ -ಮೂರನೇ ಬಾರಿಗೆ ಕಾಳಿ ನದಿಗೆ ಹಾರಿದ ವ್ಯಕ್ತಿ

3 months ago

ಕಾರವಾರ: ಕೌಟುಂಬಿಕ ಕಲಹದಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬ ಮೂರನೇ ಬಾರಿ ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಸದಾಶಿವ ಗಡದಲ್ಲಿ ನಡೆದಿದೆ. ಧಾರವಾಡ ಮೂಲದ ಶಂಕರ್ ಬಂಜಾರ ಎಂಬವರೇ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ...

ಶಾಪಿಂಗ್ ಮಾಲ್ ನಲ್ಲಿ ಅಗ್ನಿ ದುರಂತ – 37 ಮಂದಿ ಸಜೀವ ದಹನ, 69 ಮಂದಿ ಕಣ್ಮರೆ

4 months ago

ಮಾಸ್ಕೋ: ರಷ್ಯಾದಲ್ಲಿ ಬೃಹತ್ ಶಾಪಿಂಗ್ ಮಾಲ್‍ವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ ಪರಿಣಾಮ 37 ಮಂದಿ ಸಜೀವ ದಹನವಾಗಿದ್ದು, 69 ಜನ ಕಾಣೆಯಾಗಿದ್ದಾರೆ. ನಗರದ ವೆಸ್ಟರ್ನ್ ಸೈಬೀರಿಯಾದ ಕೆಮೆರಾವೋನಲ್ಲಿರುವ ವಿಂಟರ್ ಚೆರ್ರಿ ಶಾಪಿಂಗ್ ಸೆಂಟರ್ ನಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ....

ಗುಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು- ಸ್ಥಳೀಯ ನಿವಾಸಿಗಳಲ್ಲಿ ಆತಂಕ

4 months ago

ಯಾದಗಿರಿ: ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಂಚಿದ ಪರಿಣಾಮ ಹೊತ್ತಿ ಉರಿದ ಘಟನೆ ಜಿಲ್ಲೆಯ ನಾಯ್ಕಲ್ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳು ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮ ಗುಡ್ಡದ ಸುತ್ತಲೂ ಬೆಂಕಿ ಆವರಿಸಿದ್ದರಿಂದ ಗುಡ್ಡದ ಕೆಳ ಭಾಗದಲ್ಲಿ ವಾಸಿಸುತ್ತಿರುವ...