Saturday, 25th January 2020

1 day ago

ಶಾಪಿಂಗ್ ಕಾಂಪ್ಲೆಕ್ಸ್‌ಗೆ ನುಗ್ಗಿದ ಲಾರಿ- ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿಯೊಂದು ಶಾಪಿಂಗ್ ಕಾಂಪ್ಲೆಕ್ಸ್‌ಗೆ ನುಗ್ಗಿದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ತೇಜಸ್ (28) ಮೃತ ಚಾಲಕ. ವಿದ್ಯಾರಣ್ಯಪುರದ ಮುಖ್ಯರಸ್ತೆಯ ಬೊಮ್ಮಸಂದ್ರದಲ್ಲಿ ಈ ಘಟನೆ ಸಂಭವಿಸಿದೆ. ಸರಿಯಾಗಿ ಡ್ರೈವಿಂಗ್ ಬಾರದ ಕ್ಲೀನರ್ ಮಲ್ಲಪ್ಪ ಟಿಪ್ಪರ್ ಲಾರಿ ಓಡಿಸುತ್ತಿದ್ದನು. ಈ ವೇಳೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಲಾರಿ ನುಗ್ಗಿದೆ. ಗುದ್ದಿದ ರಭಸಕ್ಕೆ ಜಾರಿ ನಜ್ಜುಗುಜ್ಜಾಗಿದ್ದು, ಶಾಪಿಂಗ್ ಕಾಂಪ್ಲೆಕ್ಸ್ ಗೋಡೆ ಕುಸಿದಿದೆ. ಲಾರಿಯಲ್ಲೇ […]

4 days ago

ಹೆದ್ದಾರಿಯಲ್ಲೇ ಹೊತ್ತಿ ಉರಿದ 39 ಮಂದಿ ಪ್ರಯಾಣಿಕರಿದ್ದ ಬಸ್

– ತಪ್ಪಿದ ದೊಡ್ಡ ಅನಾಹುತ ಚಿತ್ರದುರ್ಗ/ಬೆಳಗಾವಿ: ಕೆಎಸ್ಆರ್‌ಟಿಸಿ ಕರೋನಾ ಬಸ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಹೊತ್ತಿ ಉರಿದ ಘಟನೆ ಜಿಲ್ಲೆ ಯ ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿ ಬಳಿ ನಡೆದಿದೆ. ಬಸ್ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಆದರೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಸುಟ್ಟು ಕರಕಲಾದ ವಸ್ತುಗಳ ದುರ್ವಾಸನೆ ಹರಡಿದ್ದರಿಂದ ಪ್ರಯಾಣಿಕರು ತಕ್ಷಣ ಚಾಲಕನಿಗೆ ತಿಳಿಸಿದ್ದಾರೆ....

6ರ ಬಾಲಕಿ ಮೇಲೆ ರೇಪ್, ಕೊಲೆ ಆರೋಪ- ವ್ಯಕ್ತಿಯನ್ನ ಜೀವಂತವಾಗಿ ಸುಟ್ಟ ಜನ

7 days ago

– ಪೊಲೀಸರಿಗೆ ಒಪ್ಪಿಸಲು ಹೋಗುವಾಗ್ಲೇ ವ್ಯಕ್ತಿಯ ಕಗ್ಗೊಲೆ ಮೆಕ್ಸಿಕೊ: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ ಎಂದು ಶಂಕಿಸಿ ಗ್ರಾಮಸ್ಥರು ವ್ಯಕ್ತಿಯೊಬ್ಬನನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮೆಕ್ಸಿಕೋದ ಚಿಯಾಪಾಸ್ ಗ್ರಾಮದಲ್ಲಿ ನಡೆದಿದೆ. ಆಲ್ಫ್ರೆಡೋ ರೊಬ್ಲೆರೊ...

ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿಗೆ ಬೆಂಕಿ- ಹೊತ್ತಿಉರಿದ ಬಣವೆಗಳು

2 weeks ago

ಚಿತ್ರದುರ್ಗ: ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿಗೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ಹೊಸದುರ್ಗ ತಾಲೂಕಿನ ನಾಗಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ. ಶಾಶ್ವತ ಬರದನಾಡೆಂಬ ಹಣೆಪಟ್ಟಿ ಹೊತ್ತಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಸಕಾಲಕ್ಕೆ ಮಳೆ ಬಾರದೇ ಬರ ತಾಂಡವವಾಡುತ್ತಿದೆ. ಹೀಗಾಗಿ ಜಿಲ್ಲೆಯ ಹೊಸದುರ್ಗ, ಚಳ್ಳಕೆರೆ ಹಾಗೂ...

ಬೃಹತ್ ಆಕಾರದಲ್ಲಿ ಬೆಳೆದ ಮರಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

2 weeks ago

ಬೆಂಗಳೂರು: ಬೃಹತ್ ಆಕಾರವಾಗಿ ಬೆಳೆದು ಒಣಗಿರುವ ಮರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವಂತ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲದ ರೇಣುಕಾ ನಗರದಲ್ಲಿನ ರಸ್ತೆ ಬದಿಯಲ್ಲಿದ್ದ ಹಲವು ವರ್ಷಗಳ ಮರದ ಬುಡಕ್ಕೆ ಕೆಲ ಕಿಡಿಗೇಡಿಗಳು ಶುಕ್ರವಾರ ರಾತ್ರಿ ಬೆಂಕಿ ಇಟ್ಟಿದ್ದಾರೆ. ಹೀಗಾಗಿ ರಾತ್ರಿಯಿಡಿ...

ಕುಡಿದ ಮತ್ತಿನಲ್ಲಿ ಬೌನ್ಸ್ ಸ್ಕೂಟಿಗೆ ಬೆಂಕಿ ಇಟ್ಟ ರೌಡಿಶೀಟರ್‌ಗಳು

3 weeks ago

ಬೆಂಗಳೂರು: ಕೆಲ ರೌಡಿಶೀಟರ್‌ಗಳು ಬಾಡಿಗೆಗೆ ತೆಗೆದುಕೊಂಡು ಬಂದಿದ್ದ ಬೌನ್ಸ್ ಸ್ಕೂಟಿಗೆ ಬೆಂಕಿ ಹಚ್ಚಿ ಸುಟ್ಟ ಹಾಕಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿದೆ. ಈ ಪುಂಡರು ಸ್ಕೂಟಿಯನ್ನು ಸುಟ್ಟು ಹಾಕಿರುವ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ....

ದುಷ್ಕರ್ಮಿಗಳ ಕೃತ್ಯಕ್ಕೆ ಭತ್ತದ ಬೆಳೆ ಭಸ್ಮ

4 weeks ago

ಮಂಡ್ಯ: ಭತ್ತ ಕಟಾವು ಮಾಡಿ ಒಕ್ಕಣೆ ಮಾಡಲು ಮೆದೆ ಹಾಕಿದ್ದ ಭತ್ತದ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿವಪುರ ಬಳಿ ನಡೆದಿದೆ. ಶಿವಪುರ ಗ್ರಾಮದ ರೈತ ವೆಂಕಟೇಶ್ ಎಂಬುವವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ...

ಅಗ್ನಿ ಅವಘಡ- 5 ಲಕ್ಷ ರೂ. ಮೌಲ್ಯದ ಸೋಯಾ ಭಸ್ಮ

4 weeks ago

ಬೀದರ್: ಜಿಲ್ಲಾ ಉಸ್ತುವಾರಿ ಸಚಿವರ ಸ್ವ-ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ತಡರಾತ್ರಿ 80 ಕ್ವಿಂಟಾಲ್ ಸೋಯಾ ಸಂಪೂರ್ಣ ಬೆಂಕಿ ಆಹುತಿಯಾಗಿದೆ. ದೇವರಾವ್ ಜಾದವ್ ಅವರಿಗೆ ಸೇರಿದ ಸುಮಾರು 5 ಲಕ್ಷ ರೂ.ನ ಸೋಯಾ ಅಗ್ನಿಗೆ ಆಹುತಿಯಾಗಿದೆ. ಬೀದರ್ ಜಿಲ್ಲೆಯ ಔರಾದ್...