Wednesday, 24th July 2019

2 days ago

ಸಾಲ ಮಾಡಿ ಬಿತ್ತನೆ ಮಾಡಿದ ಫಸಲಿಗೆ ಕಳೆ ನಾಶಕ ಸಿಂಪಡಿಸಿದ ದುಷ್ಕರ್ಮಿಗಳು

ದಾವಣಗೆರೆ: ಅಲ್ಪಸ್ವಲ್ಪ ಮಳೆಗೆ ಕಷ್ಟಪಟ್ಟು ಸಾಲ ಮಾಡಿ ಬಿತ್ತನೆ ಮಾಡಿ ಬೆಳೆದ ಮೆಕ್ಕೆಜೋಳದ ಫಸಲಿಗೆ ದುಷ್ಕರ್ಮಿ ಕಳೆ ನಾಶಕ ಸಿಂಪಡಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಟಿ. ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಟಿ. ಗೊಲ್ಲರಹಟ್ಟಿ ಗ್ರಾಮದ ರೈತ ಯರ್ರಪ್ಪ ಅವರಿಗೆ ಸೇರಿದ ನಾಲ್ಕು ಏಕರೆಯಲ್ಲಿ ಮೆಕ್ಕೆಜೋಳದ ಬೆಳೆ ಬೆಳೆದಿದ್ದು, ಬೆಳೆ ನೋಡಿ ಸಹಿಸಲಾಗದ ದುಷ್ಕರ್ಮಿಗಳು ರಾತ್ರೋರಾತ್ರಿ ಕಳೆ ನಾಶಕ ಔಷಧಿ ಸಿಂಪಡಿಸಿದ್ದಾರೆ. ಔಷಧಿ ಸಿಂಪಡಿಸಿದ ನಂತರ ನಾಲ್ಕು ಎಕರೆಯಲ್ಲಿ ಇರುವ ಮೆಕ್ಕೆಜೋಳದ ಬೆಳೆ ಸಂಪೂರ್ಣ ಒಣಗಿ […]

6 days ago

ಸಾಲಬಾಧೆ ತಾಳಲಾರದೆ ದಂಪತಿ ನೇಣಿಗೆ ಶರಣು

ಮಂಡ್ಯ: ಸಾಲಬಾಧೆ ತಾಳಲಾರದೆ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದ ಕೂಲಿ ಕಾರ್ಮಿಕರಾದ ಮಂಜು(50), ಇಂದ್ರಮ್ಮ(45) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಸಾಲ ಬಾಧೆಯಿಂದ ಬಳಲುತ್ತಿದ್ದರಿಂದ ಮನನೊಂದು ಇಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಕೆ.ಶೆಟ್ಟಿಹಳ್ಳಿ ಗ್ರಾಮಕ್ಕೆ ಬಂದು...

ಸಾಲಬಾಧೆ ತಾಳಲಾರದೆ ಬೀದರ್ ರೈತ ಆತ್ಮಹತ್ಯೆ

1 week ago

ಬೀದರ್: ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಪಾಶಾಪೂರ್ ಗ್ರಾಮದಲ್ಲಿ ನಡೆದಿದೆ. ರಾಜಪ್ಪ ಬಿರಾದರ್ (42) ಆತ್ಮಹತ್ಯೆಗೆ ಶರಣಾದ ರೈತ. ವಿವಿಧ ಬ್ಯಾಂಕುಗಳಲ್ಲಿ ಆರು ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅಲ್ಲದೆ,...

ಮುಂಬೈ ಜನ ವೋಟ್ ಹಾಕಿದ್ರಾ ಅಲ್ಲಿ ಹೋಗಿ ಕೂರಕ್ಕೆ – ನಾರಾಯಣಗೌಡರ ವಿರುದ್ಧ ರೈತನ ಆಕ್ರೋಶ

2 weeks ago

ಮಂಡ್ಯ: ಶಾಸಕ ನಾರಾಯಣಗೌಡರನ್ನು ಕರೆದುಕೊಂಡು ಬಂದು ಕೆ.ಆರ್.ಪೇಟೆಗೆ ತಂದು ಬಿಟ್ಟು ಬಿಡಿ ಎಂದು ಜಮೀನಿನ ಬಳಿ ನಿಂತು ಮಾತನಾಡಿರುವ ರೈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾರಾಯಣಗೌಡ ಎಲ್ಲಿದ್ದಾರೆ ಎಂದು ಹುಡುಕಿಕೊಡಿ ಸಾಕು. ಅವರು ಏನೂ ರಾಜಕೀಯ ಮಾಡುವುದು ಬೇಡ....

ಕಣ್ಮುಂದೆಯೇ ರೈತ ಆತ್ಮಹತ್ಯೆಗೆ ಯತ್ನಿಸುತ್ತಿದ್ರೂ ನೋಡುತ್ತಾ ನಿಂತ ಪೊಲೀಸರು

2 weeks ago

ಜೈಪುರ್: ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸುತ್ತಿದ್ದರೂ ಪೊಲೀಸರು ನೋಡುತ್ತಾ, ನಗುತ್ತಾ ನಿಂತ ಅವಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜುಂಜುನು ಜಿಲ್ಲೆಯ ಗುಧಾ ಗ್ರಾಮದ ಬಾಬೂರಾವ್ ಸೈನಿ (35) ಆತ್ಮಹತ್ಯೆಗೆ ಯತ್ನಿಸಿದ್ದ ರೈತ. ಘಟನೆಯಲ್ಲಿ ಸೈನಿ ಅವರ ದೇಹವು ಶೇ.90 ರಷ್ಟು ಸುಟ್ಟಿದ್ದು, ಸಾವು-ಬದುಕಿನ...

ಸಾಲಮನ್ನಾ ರಿಟರ್ನ್ – ಕಂಗೆಟ್ಟು ಕಣ್ಣೀರಿಡುತ್ತಿರುವ ರೈತ

3 weeks ago

ಕೊಪ್ಪಳ: ಸಿಎಂ ಸಾಲಮನ್ನಾ ಯೋಜನೆ ಇದೀಗ ರಿವರ್ಸ್ ಗೇರ್ ಹಾಕಿದ್ದು, ಕಳೆದ ಮೂರು ನಾಲ್ಕು ತಿಂಗಳಲ್ಲಿ ಮನ್ನಾವಾಗಿದ್ದ ಸಾಲವೆಲ್ಲಾ ವಾಪಸ್ ಆಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಿಎಂ ಅವರ ಸಾಲಮನ್ನಾ ಯೋಜನೆಯಿಂದ ಖುಷಿಯಾಗಿದ್ದ ರೈತರಿಗೆ ಇದೀಗ ಬಿಗ್ ಶಾಕ್ ಆಗಿದೆ. ಹೌದು....

ಕಾರ್ಖಾನೆ ಬೇಜವಾಬ್ದಾರಿಯಿಂದ ಜೀವಜಲಕ್ಕೆ ಕುತ್ತು- ಬೋರ್‌ವೆಲ್‌ನಲ್ಲಿ ಬರ್ತಿದೆ ಕೆಂಪು ಮಿಶ್ರಿತ ಹಳದಿ ನೀರು

3 weeks ago

ಮೈಸೂರು: ನಮ್ಮೂರಲ್ಲೊಂದು ಸಕ್ಕರೆ ಕಾರ್ಖಾನೆಯಾದರೆ ಉದ್ಯೋಗ ಸಿಗುತ್ತದೆ, ಜೊತೆಗೆ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬನ್ನು ಊರಿನಲ್ಲಿರುವ ಕಾರ್ಖಾನೆಗೆ ಕಳುಹಿಸಬಹುದು. ಕಾರ್ಖಾನೆಯಿಂದ ಬದುಕು ಹಸನಾಗುತ್ತದೆ ಅಂದು ಕೊಂಡವರಿಗೆ ಇದೀಗ ಆ ಕಾರ್ಖಾನೆ ಕುಡಿಯುವ ನೀರಿನ ಕಂಟಕ ತಂದಿಟ್ಟಿದೆ. ಜೊತೆಗೆ ಭೂಮಿಯಲ್ಲಿ ಬೆಳೆ ಬೆಳೆಯಲಾಗದ...

ಹಾಸನದಲ್ಲಿ ಮೌನಿಯಾದ ವರುಣ- ಹಾವೇರಿಯಲಿ ಉತ್ತಮ ಮಳೆ

3 weeks ago

ಹಾಸನ: ಕಳೆದ ವರ್ಷ ಭಾರೀ ಮಳೆಯಾಗಿದ್ದ ಹಾಸನದಲ್ಲಿ ಈ ಬಾರಿ ಮಳೆರಾಯ ಮೌನಿ ಆಗಿದ್ದು, ರೈತರು ಕಂಗಾಲಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇಲ್ಲಿವರೆಗೆ ವಾಡಿಕೆಗಿಂತ ಶೇ.20ರಷ್ಟು ಮಳೆ ಕಡಿಮೆ ಆಗಿದೆ. ಜೂನ್ 2ನೇ ವಾರದಿಂದ ಮಳೆ ಕೈಕೊಟ್ಟಿದ್ದು, ಬಿತ್ತನೆಗೂ ಹಿನ್ನಡೆ ಆಗಿದೆ. ಸರಿಯಾದ...