Tuesday, 10th December 2019

Recent News

1 day ago

ನಿಧನರಾದ ಅಭಿಮಾನಿ ಕುಟುಂಬಕ್ಕೆ ಅಲ್ಲು ಅರ್ಜುನ್ ಆರ್ಥಿಕ ನೆರವು

ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹಿರಿಯ ಅಭಿಮಾನಿ ನಿಧನರಾಗಿದ್ದು, ಇಬ್ಬರು ನಟರು ಸಂತಾಪ ಸೂಚಿಸಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ನೂರ್ ಅಹಮ್ಮದ್ ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಹಲವು ವರ್ಷಗಳಿಂದ ಮೆಗಾ ಸ್ಟಾರ್ ಕುಟುಂಬಕ್ಕೆ ಬೆಂಬಲಿಸಿದ್ದಾರೆ. ಅಲ್ಲದೆ ಅವರು ‘ಗ್ರೇಟರ್ ಹೈದರಾಬಾದ್ ಮೆಗಾ ಫ್ಯಾನ್ಸ್ ಅಸೋಸಿಯೆಶನ್’ ಅಧ್ಯಕ್ಷರಾಗಿದ್ದರು. Stylish Star #AlluArjun paid […]

1 week ago

ಅಭಿಮಾನಿಯ ಕಾಲು ಮುಟ್ಟಿದ ರಜನಿಕಾಂತ್ – ಫೋಟೋ ವೈರಲ್

ಚೆನ್ನೈ: ದಿವ್ಯಾಂಗ ಅಭಿಮಾನಿಯ ಕಾಲು ಮುಟ್ಟುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಸರಳತೆ ಮೆರೆದಿದ್ದಾರೆ. ಕೇರಳದ 21 ವರ್ಷದ ದಿವ್ಯಾಂಗ ಕಲಾವಿದ ಎಂ.ಬಿ.ಪ್ರಣವ್ ಚೆನ್ನೈನ ನಿವಾಸದಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರೊಂದಿಗೆ ಮಾತುಕತೆ ನಡೆಸಿದ್ದು, ದಿವ್ಯಾಂಗರಾಗಿರುವುದರಿಂದ ಕಾಲಿನಲ್ಲಿ ಚಿತ್ರಗಳನ್ನು ಬಿಡಿಸುತ್ತಾರೆ. ಇದನ್ನು ಕಂಡ ರಜನಿಕಾಂತ್ ಅವರ ಕಾಲನ್ನು ಮುಟ್ಟಿ ಭಾವುಕರಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ...

ರಾಕಿಬಾಯ್‍ಗಾಗಿ ಕನ್ನಡ ಕಲಿತು, ಭೇಟಿಯಾಗಲು ಫಿಲಿಪೈನ್ಸ್‌ನಿಂದ ಬಂದ ಅಭಿಮಾನಿ

3 weeks ago

ಬೆಂಗಳೂರು: ‘ಕೆಜಿಎಫ್’ ಸಿನಿಮಾ ಬಿಡುಗಡೆಯಾದ ಬಳಿಕ ರಾಕಿಂಗ್ ಸ್ಟಾರ್ ಯಶ್‍ಗೆ ಕೇವಲ ಸ್ಯಾಂಡಲ್‍ವುಡ್‍ನಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗಷ್ಟೆ ಕೇರಳದಿಂದ ಯಶ್ ಭೇಟಿಯಾಗಲು ಅಭಿಮಾನಿಗಳು ಬಂದಿದ್ದರು. ಇದೀಗ ರಾಕಿಭಾಯ್ ನೋಡಲು ಅಭಿಮಾನಿಯೊಬ್ಬರು ಕನ್ನಡ ಕಲಿತು ಫಿಲಿಪೈನ್ಸ್‌ನಿಂದ ಬಂದಿದ್ದಾರೆ....

ಮತ್ತೆ ಅಭಿಮಾನಿಗಳ ಮನಗೆದ್ದ ವಿರಾಟ್ ಕೊಹ್ಲಿ – ವೈರಲ್ ವಿಡಿಯೋ

3 weeks ago

ಇಂದೋರ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ತಮ್ಮ ನೆಚ್ಚಿನ ಅಭಿಮಾನಿಯೊಂದಿಗೆ ಮಾತನಾಡಬೇಕು ಎಂದು ಅಭಿಮಾನಿಗಳು ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾರೆ. ಇಂತಹದ್ದೇ ಘಟನೆ ಬಾಂಗ್ಲಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂದೋರ್ ನಲ್ಲಿ...

ಕ್ರಿಕೆಟ್ ನೋಡಲು ಲಕ್ನೋಗೆ ಬಂದು ರೂಮ್ ಸಿಗದೆ ಪರದಾಡಿದ ಅಫ್ಘಾನ್ ಕ್ರೀಡಾಭಿಮಾನಿ

1 month ago

ಲಕ್ನೋ: ಕ್ರಿಕೆಟ್ ನೋಡಲು ಲಕ್ನೋಗೆ ಬಂದ ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು ಉಳಿದುಕೊಳ್ಳಲು ಹೋಟೆಲ್ ರೂಮ್ ಸಿಗದೆ ಪರದಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಕ್ನೋದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯನ್ನು ವೀಕ್ಷಿಸಲು ಅಫ್ಘಾನಿಸ್ತಾದಿಂದ ಶೇರ್ ಖಾನ್...

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

1 month ago

ಮುಂಬೈ: ಇಂಟರ್‌ನೆಟ್ ಸ್ಟಾರ್ ರಾನು ಮೊಂಡಲ್ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ರಾನು ಮೊಂಡಲ್ ಅವರು ಮಾರ್ಕೆಟ್‌ಗೆ ಹೋಗಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ರಾನು ಅವರನ್ನು...

ಮಹಾರಾಷ್ಟ್ರ ಸಿಎಂ ಆಗಿ ಎಂದ ಅಭಿಮಾನಿಯ ಮನವಿಗೆ ನಟ ಅನಿಲ್ ಪ್ರತಿಕ್ರಿಯೆ

1 month ago

ಮುಂಬೈ: ವಿಧಾನಸಭಾ ಚುನಾವಣೆ ಮುಗಿದ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಪಕ್ಷದ ನಡುವೆ ಸಿಎಂ ಖುರ್ಚಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಈ ನಡುವೆ ಅಭಿಮಾನಿಯೊಬ್ಬರು ನಟ ಅನಿಲ್ ಕಪೂರ್ ಅವರಿಗೆ ಸಿಎಂ ಆಗುವಂತೆ ಮನವಿ ಮಾಡಿದ್ದಾರೆ. ಅಭಿಮಾನಿಯ ಮನವಿಗೆ ಅನಿಲ್...

ಡಿಕೆಶಿ ಸಿಎಂ ಆಗೋವರೆಗೂ ಮದ್ವೆಯಾಗಲ್ಲ: ಅಭಿಮಾನಿ ಶಪಥ

1 month ago

– ಈ ದೇಹ ಮಣ್ಣಿಗೆ, ಪ್ರಾಣ ಡಿಕೆಶಿ ಅಣ್ಣನಿಗೆ – ಅಭಿಮಾನಿಯ ವಿಡಿಯೋ ವೈರಲ್ ರಾಮನಗರ: ಮಾಜಿ ಸಚಿವ, ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವವರೆಗೂ ನಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಡಿಕೆಶಿ ಅಭಿಮಾನಿಯೊಬ್ಬ ಶಪಥ ಮಾಡಿದ್ದಾರೆ. ಈ ವಿಡಿಯೋ...