Saturday, 24th August 2019

1 week ago

2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

ಲಕ್ನೋ: 75 ವರ್ಷದ ವೃದ್ಧರೊಬ್ಬರು ಎರಡನೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಆ ಮದುವೆಗೆ ಅವರ ಕುಟುಂಬಸ್ಥರು ನಿರಾಕರಿಸಿದ್ದಕ್ಕೆ ಮನನೊಂದು ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ವೃದ್ಧ ಅರ್ಷದ್(75) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅರ್ಷದ್ ಅವರ ಪತ್ನಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅರ್ಷದ್ ಅವರಿಗೆ ಒಟ್ಟು 8 ಮಂದಿ ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ಆದರೆ ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಅರ್ಷದ್‍ರಿಗೆ ಎರಡನೇ ಮದುವೆಯಾಗುವ ಆಸೆ ಬಂದಿತ್ತು. ಈ ವಯಸ್ಸಿನಲ್ಲಿ […]

1 week ago

ಜೀವನದಲ್ಲಿ ಸೋತಿದ್ದೇನೆ- ಅಪ್ಪ, ಅಮ್ಮ, ಮಗ, ಪತ್ನಿಗೆ ಶೂಟ್ ಮಾಡಿ ತಾನೂ ಆತ್ಮಹತ್ಯೆ ಮಾಡ್ಕೊಂಡ

ಚಾಮರಾಜನಗರ: ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತರಾದವರನ್ನು ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾಗಿರುವ ಓಂ ಪ್ರಕಾಶ್, ಪತ್ನಿ ನಿಖಿತ, ಮಗ ಆರ್ಯ ಕೃಷ್ಣ, ತಾಯಿ ಹೇಮಲತ, ತಂದೆ ನಾಗರಾಜು ಭಟ್ಟಚಾರ್ಯ ಎಂದು ಗುರುತಿಸಲಾಗಿದೆ. ಸದ್ಯ ಈಗ ಹಣಕಾಸಿನ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ....

ನಿಮ್ಮೊಂದಿಗೆ ನಾವಿದ್ದೇವೆ- ಸಾವನ್ನಪ್ಪಿದ್ದ ಪೊಲೀಸ್ ಕುಟುಂಬಕ್ಕೆ ಧೈರ್ಯ ತುಂಬಿದ ರವಿಚನ್ನಣ್ಣನವರ್

2 weeks ago

ಬೆಂಗಳೂರು: ಎಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಕಾಲಿಕ ಮರಣ ಹೊಂದಿದ್ದು, ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ಹಾಗೂ ಸಿಬ್ಬಂದಿ ವರ್ಗದವರು ಶ್ರದ್ಧಾಂಜಲಿ ಸಲ್ಲಿಸಿದರು. ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ಠಾಣೆಯಲ್ಲಿ ಎಎಸ್‍ಐ ಆಗಿ ಹಲವು...

ಪ್ರವಾಹದಲ್ಲಿ ಸಿಲುಕಿದ್ದ ಯೋಧನ ಕುಟುಂಬ ರಕ್ಷಣೆ

2 weeks ago

ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಯೋಧನ ಕುಟುಂಬವನ್ನು ರಕ್ಷಣೆ ಮಾಡಲಾಗಿದೆ. ಯೋಧ ಈರಪ್ಪ ಹಡಪದ ಅವರು ಜಮ್ಮು- ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಪತಿ ಈರಪ್ಪ ಅವರು ಕಳೆದ 20 ದಿನಗಳಿಂದ ನಮ್ಮ ಸಂಪರ್ಕಕ್ಕೆ...

ಮಹಾ ಮಳೆಗೆ ಕೊಡಗಿನಲ್ಲಿ ಭೂಕುಸಿತ – ಒಂದೇ ಕುಟುಂಬದ 5 ಮಂದಿ ಸಾವು

2 weeks ago

ಮಡಿಕೇರಿ: ಮಹಾಮಳೆಯ ಅಬ್ಬರಕ್ಕೆ ಭಾಗಮಂಡಲದ ಸಮೀಪ ಇರುವ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ. ಮಡಿಕೇರಿ ತಾಲೂಕಿನ ಕೋರಂಗಾಲ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿತದ ಪರಿಣಾಮ ಸಂಪೂರ್ಣ ನೆಲಸಮ ಆಗಿದೆ. ಈ ಪರಿಣಾಮ...

ರಾತ್ರಿಯಿಡಿ ಟ್ರ್ಯಾಕ್ಟರ್ ಟೈರ್‌ನಲ್ಲಿ ನಿಂತು ರಕ್ಷಣೆಗಾಗಿ ಕೂಗುತ್ತಿದ್ದ ಧಾರವಾಡ ಕುಟುಂಬ

2 weeks ago

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿನ ತುಪ್ಪರಿ ಹಳ್ಳ ತುಂಬಿ ಬಂದಿದ್ದು, ಇದರ ಮಧ್ಯೆ ಏಳು ಜನ ಸಿಲುಕಿಕೊಂಡು ಪಾರಾಗಿ ಬಂದಿದ್ದಾರೆ. ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಸೋರುತ್ತಿದೆ ಎಂದು ಹನಮನಹಾಳ ರಸ್ತೆಯಲ್ಲಿ ಇರುವ ತಮ್ಮ ಶೆಡ್...

ಹೆಚ್‍ಡಿಕೆ ರಾಜಕೀಯ ನಿವೃತ್ತಿಯ ಮಾತು

3 weeks ago

ಹಾಸನ: ಮಾಜಿ ಸಿಎಂ ಹೆಚ್.ಡಿ.ಕು`ಮಾರಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಇಂದು ಕೆ.ಆರ್.ಪೇಟೆಗೆ ತೆರಳೋ ಮಾರ್ಗ ಮಧ್ಯೆ ಹಾಸನಕ್ಕೆ ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವರು ಕೊಟ್ಟ ಅವಕಾಶದಿಂದ ಎರಡು ಬಾರಿ ಸಿಎಂ ಆಗಿದ್ದೇನೆ. ನಾನು ಆಕಸ್ಮಿಕವಾಗಿ ಈ...

ಕುಟುಂಬದ ಐವರನ್ನು ಕೊಲೆಗೈದು ಆತ್ಮಹತ್ಯೆಗೆ ಶರಣು

3 weeks ago

– ಸ್ಥಳದಲ್ಲಿ ಸಿಕ್ತು 19 ಪುಟದ ಡೆತ್‍ನೋಟ್ ಚಂಡೀಗಢ: ಯುವಕನೊಬ್ಬ ತನ್ನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಬಾಜ್‍ನ ಮೋಗದಲ್ಲಿ ನಡೆದಿದೆ. ಸಂದೀಪ್ ಸಿಂಗ್ (27) ಕೊಲೆ ಮಾಡಿದ ಯುವಕ. ಸಂದೀಪ್ ತನ್ನ ತಂದೆ, ತಾಯಿ,...