Thursday, 21st November 2019

Recent News

3 weeks ago

ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ ಮಾದಪ್ಪನ ಸನ್ನಿಧಿ- ಇಂದಿನಿಂದ ಜಾತ್ರಾ ಮಹೋತ್ಸವ ಆರಂಭ

ಚಾಮರಾಜನಗರ: ಬೆಳಕಿನ ಹಬ್ಬದ ಸಂಭ್ರಮಕ್ಕೆ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟ ತಯಾರಾಗಿದೆ. ದೀಪಾವಳಿ ಹಿನ್ನೆಲೆ ಬೆಟ್ಟದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಇಂದಿನಿಂದ ಬೆಟ್ಟದಲ್ಲಿ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಈಗಾಗಲೇ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಹಳೇ ಮೈಸೂರು, ಬೆಂಗಳೂರು, ತಮಿಳುನಾಡು ಸೇರಿದಂತೆ ಇನ್ನಿತರ ಭಾಗಗಳಿಂದ ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ. ಅಲ್ಲದೆ ದೀಪಾವಳಿ ಅಂಗವಾಗಿ ಇಂದಿನಿಂದ […]

1 month ago

ಅಸಭ್ಯವಾಗಿ ವರ್ತಿಸಿದವನಿಗೆ ಗೂಸಾ ಕೊಟ್ಟ ಪೊಲೀಸರು

ಬೆಂಗಳೂರು: ನಗರದ ಹೊರವಲಯದ ಜಾತ್ರೆಯಲ್ಲಿ ಪೊಲೀಸರು ಓರ್ವನಿಗೆ ಗೂಸಾ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು ಹೊರವಲಯ ಬಾಗಲಗುಂಟೆಯ ಗ್ರಾಮದೇವತೆ ಮಾರಮ್ಮ ದೇವಿ ಜಾತ್ರೆ ನಡೆಯುತ್ತಿದೆ. ಜಾತ್ರೆ ಹಿನ್ನೆಲೆಯಲ್ಲಿ ಎಂಇಐ ಲೇಔಟ್ ಮೈದಾನದಲ್ಲಿ ಆಟಿಕೆ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಒಬ್ಬ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದಾನೆಂದು ಮಾಹಿತಿ ತಿಳಿದ ಪೊಲೀಸ್...

ಮೀನು ಬೇಟೆಯಾಡಿ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ ಭಕ್ತರು!

6 months ago

– ಮಂಗ್ಳೂರಿನ ಮೂಲ್ಕಿಯಲ್ಲಿ ಮೀನು ಜಾತ್ರೆ ಮಂಗಳೂರು: ಈ ದೈವಸ್ಥಾನದ ಪಕ್ಕದಲ್ಲಿರುವ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಮೀನು ಹಿಡಿಯುತ್ತಾರೆ. ಹಾಗಂತ ಅವರೆಲ್ಲರು ಮೀನುಗಾರರು ಅಲ್ಲ. ಬದಲಾಗಿ ಭಕ್ತರು. ತಾವು ಹಿಡಿದ ಮೀನನ್ನು ದೇವರ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ. ಮಾರಿ ಜಾತ್ರೆ,...

39 ವರ್ಷಗಳ ಬಳಿಕ ಗ್ರಾಮದಲ್ಲಿ ದ್ಯಾಮಮ್ಮ ದೇವಿ ಜಾತ್ರೆ

6 months ago

ಕೊಪ್ಪಳ: ಜಿಲ್ಲೆಯ ಈ ಗ್ರಾಮದಲ್ಲಿ ಕಳೆದ 39 ವರ್ಷಗಳಿಂದ ಜಾತ್ರೆ ಆಗಿರಲಿಲ್ಲ. ದೇವಿ ಪ್ರಸಾದ (ವರ) ಕೊಟ್ಟಿರಲಿಲ್ಲ ಎನ್ನುವ ಕಾರಣಕ್ಕೆ 39 ವರ್ಷಗಳಿಂದ ಜಾತ್ರೆ ಎನ್ನುವುದೇ ಮರೆತು ಹೋಗಿತ್ತು. ಆದರೆ ದೇವಿ ಈ ಬಾರಿ ಪ್ರಸಾದ ಕೊಟ್ಟ ಕಾರಣ ಈ ಬಾರಿ...

ಜಾತ್ರೆಯಲ್ಲಿ ಮುಕ್ಕಾಲು ಕೆಜಿ ಬಂಗಾರದ ಸರ ಧರಿಸಿ ಗಮನ ಸೆಳೆದ ಗೋಲ್ಡನ್ ಸಹೋದರರು!

7 months ago

ಚಿಕ್ಕಬಳ್ಳಾಪುರ: ಬಂಗಾರ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಮಹಿಳೆಯರಿಗಂತೂ ಇನ್ನಿಲ್ಲದ ಇಷ್ಟ. ಆದರೆ ಸಹೋದರಿಬ್ಬರು ಮೈ ಮೇಲೆ ಧರಿಸಿದ ಮಣಗಟ್ಟದ ಬಂಗಾರ ಜನಾಕರ್ಷಣೆ ಪಡೆದ ಪ್ರಸಂಗ ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ ಗ್ರಾಮದಲ್ಲಿ ನಡೆಯಿತು. ಏಳು ವರ್ಷಗಳಿಗೆ ಒಮ್ಮೆ ನಡೆಯುವ ಬೀರೇಶ್ವರ,...

ಮನೆಯ ಸಜ್ಜ ಮುರಿದು ಬಿದ್ದು 30 ಜನರಿಗೆ ಗಾಯ

7 months ago

ತುಮಕೂರು: ಚೌಡೇಶ್ವರಿ ದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ವೀಕ್ಷಿಸಲು ಭಕ್ತರು ನಿಂತಿದ್ದ ಬಿಲ್ಡಿಂಗ್ ಸಜ್ಜ ಕಳಚಿ ಬಿದ್ದು 30 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗಿನ ಜಾವ ಸಂಭವಿಸಿದೆ. ದೇಶದ ಅತೀ ದೊಡ್ಡ ಅಗ್ನಿಕೊಂಡ ಎಂದು ಪ್ರಸಿದ್ಧಿಯಾಗಿರುವ ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕೊಂಡ...

ನಿಖಿಲ್ ಎಲ್ಲಿದ್ದೀಯಪ್ಪ – ಜಾತ್ರೆಯಲ್ಲಿ ಯುವಕರಿಂದ ಘೋಷಣೆ

7 months ago

ಬೆಳಗಾವಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂಬ ಡೈಲಾಗ್ ಸಖತ್ತಾಗಿ ಟ್ರೋಲ್ ಆಗುತ್ತಿದ್ದು, ಸ್ವತಃ ಸಿಎಂ ಕುಮಾರಸ್ವಾಮಿ ಅವರು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದರು. ಆದರೂ ಜಿಲ್ಲೆಯಲ್ಲಿ ನಡೆದ ಜಾತ್ರೆಯಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಯುವಕರು ಘೋಷಣೆ ಕೂಗಿದ್ದಾರೆ. ಜಿಲ್ಲೆಯ ರಾಮದುರ್ಗ...

ಅಗ್ನಿಕೊಂಡದಲ್ಲಿ ಎರಡು ಬಾರಿ ಬಿದ್ದ ಭಕ್ತ – ರಕ್ಷಣೆ ಮಾಡಲು ಹೋದ 7 ಮಂದಿಗೆ ಗಾಯ

8 months ago

ಬೆಂಗಳೂರು: ಪ್ರಖ್ಯಾತ ಕುದೂರಮ್ಮ ದೇವಿಯ ಜಾತ್ರ ಮಹೋತ್ಸವದಲ್ಲಿ ಭಕ್ತರು ಅಗ್ನಿಕೊಂಡ ಹಾದು ಹೋಗುವಾಗ, ಹರಕೆ ಹೊತ್ತಿದ್ದ ಭಕ್ತರು ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಕುದೂರಿನಲ್ಲಿ ನಡೆದಿದೆ. ಸ್ಥಳೀಯ ರಮೇಶ್ ಕಾಲು ಎಡವಿ ಬಿದ್ದು ಬೆಂಕಿಯಲ್ಲಿ ತೀವ್ರ ಗಾಯಗೊಂಡಿದ್ದಾರೆ....