Monday, 18th March 2019

Recent News

2 weeks ago

ನೀರು ಕುಡಿಯಲು ಬಂದು ಕೆರೆಯಲ್ಲೇ ರಾತ್ರಿ ಕಳೆದ ತಾಯಿ-ಮರಿಯಾನೆಗಳು

ಮಡಿಕೇರಿ: ಕಾಡಲ್ಲಿ ನೀರು ಸಿಗದೆ ಮೂರು ಆನೆಗಳು ನಾಡಿನತ್ತ ಬಂದಿವೆ. ಕೆರೆಯಲ್ಲಿದ್ದ ನೀರು ನೋಡಿ ಕುಡಿಯಲು ಹೋಗಿ ಅಲ್ಲೇ ಒಂದು ರಾತ್ರಿ ಕಳೆದಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇಲಾವರ ಸಮೀಪದ ಚೆಯ್ಯಂಡಾನೆ ಗ್ರಾಮದಲ್ಲಿ ನಡೆದಿದೆ. ಬಿಸಿಲಿನ ಬೇಗೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಕಾಡುಗಳಲ್ಲಿ ನೀರಿಲ್ಲದೆ ಕಾಡು ಪ್ರಾಣಿಗಳು ಅನುಭವಿಸುತ್ತಿರುವ ಯಾತನೆ ಹೇಳತೀರದಾಗಿದೆ. ಮೂರು ಆನೆಗಳು ಬಾಯಾರಿಕೆ ತಡೆದುಕೊಳ್ಳಲಾಗದೇ ನೀರನ್ನ ಹುಡುಕಿಕೊಂಡು ನಾಡಿಗೆ ಬಂದಿವೆ. ಈ ವೇಳೆ ಅವುಗಳು ಕೆರೆಯಲ್ಲಿ ನೀರು ಕಂಡು ಕುಡಿಯಲು ಕೆಳಗೆ […]

2 weeks ago

ನಾಶವಾದ ಬೆಳೆಯ ಮೇಲೆ ಬಿದ್ದು ರೈತನ ಗೋಳಾಟ

ಮಂಡ್ಯ: ಜಿಲ್ಲೆಯಲ್ಲಿ ಆನೆಗಳ ದಾಳಿ ಮುಂದುವರಿದಿದ್ದು, ರೈತನೊಬ್ಬನ ಬಾಳೆ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಇದರಿಂದ ರೈತ ನಾಶವಾದ ಬೆಳೆಯ ಮೇಲೆ ಬಿದ್ದು ಒದ್ದಾಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಚನಹಳ್ಳಿ ಗ್ರಾಮದ ನಿವಾಸಿ ರಾಜು ಎಂಬವರ ಬಾಳೆ ಬೆಳೆ ನಾಶವಾಗಿದೆ. ಈ ಘಟನೆ ಬುಧವಾರ ರಾತ್ರಿ ನಡೆದಿದ್ದು, ರೈತ ರಾಜು...

ಬಾಳೆಹಣ್ಣಿನ ಜೊತೆ ಯುವಕನ ತಲೆ ಜಗಿದ ಸಾಕಾನೆ!

1 month ago

ತುಮಕೂರು: ಮದವೇರಿದ ಸಾಕಾನೆಯೊಂದು ಬಾಳೆ ಹಣ್ಣಿನೊಂದಿಗೆ ಯುವಕನ ತಲೆಯನ್ನೇ ಜಗಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ತಾಲೂಕಿನ ಕೋರಾ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಈ ಹೃದಯ ವಿದ್ರಾವಕ ಘಟನೆ ಜರುಗಿದೆ. ಈ ಘಟನೆಯಲ್ಲಿ ಆಟೋ ಚಾಲಕನಾಗಿದ್ದ 20 ವರ್ಷದ...

ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡಾನೆಗೆ ಗುಂಡಿಟ್ಟ ಪಾಪಿಗಳು..!

1 month ago

ಸಾಂದರ್ಭಿಕ ಚಿತ್ರ ಚಾಮರಾಜನಗರ: ದಂತಕ್ಕಾಗಿ ಕಾಡೆನೆಯೊಂದಕ್ಕೆ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದು ಆನೆಯ ಎರಡು ದಂತಗಳನ್ನು ಅಪಹರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಧಾಮದ ಕೊತ್ತನೂರು ವಲಯದ ಚಿಕ್ಕಲ್ಲೂರು ಗಸ್ತಿನಲ್ಲಿ ಜರುಗಿದೆ. ವೀರಪ್ಪನ್ ಅಟ್ಟಹಾಸದ ನಂತರ ಇದೀಗ ಮತ್ತೆ ಮಲೆಮಹದೇಶ್ವರ...

ಗಿನ್ನಿಸ್ ದಾಖಲೆ ಬರೆದಿದ್ದ ಏಷ್ಯಾದ ಹಿರಿಯ ಆನೆ ಸಾವು

1 month ago

ತಿರುವನಂತಪುರಂ: ಏಷ್ಯಾದ ಅತ್ಯಂತ ಹಿರಿಯ ಸಾಕಾನೆ ಎಂಬ ದಾಖಲೆ ಬರೆದಿದ್ದ ದಾಕ್ಷಾಯಿಣಿ ಆನೆ ತನ್ನ 88 ವರ್ಷದಲ್ಲಿ ಕೊನೆಯುಸಿರೆಳೆದಿದ್ದೆ. ಕೇರಳ ಪಪ್ಪನಮ್ ಕೋಡೆ ಕೇಂದ್ರದಲ್ಲಿದ್ದ ದಾಕ್ಷಾಯಿಣಿ ತನ್ನ 2016ರಲ್ಲಿ ಗಿನ್ನಿಸ್ ದಾಖಲೆಯನ್ನು ಬರೆದಿತ್ತು. ಆದರೆ ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಸಾವನ್ನಪ್ಪಿದೆ. 2016ರಲ್ಲಿ...

ಸಫಾರಿ ವಾಹನವನ್ನ ಅಟ್ಟಾಡಿಸಿದ ಒಂಟಿ ಸಲಗ – ವಿಡಿಯೋ ನೋಡಿ

1 month ago

ಚಾಮರಾಜನಗರ: ಸಫಾರಿ ವಾಹನವನ್ನ ಒಂಟಿ ಸಲಗವೊಂದು ಅಟ್ಟಾಡಿಸಿಕೊಂಡು ಬಂದಂತಹ ಘಟನೆ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಭಾನುವಾರ ಈ ಘಟನೆ ನಡೆದಿದ್ದು, ರಜೆ ಇದ್ದ ಕಾರಣ ಬಂಡೀಪುರದಲ್ಲಿ ಸಫಾರಿಗೆಂದು ಪ್ರವಾಸಿಗರು ಹೋಗಿದ್ದರು. ಬಳಿಕ ವಾಹನದಲ್ಲಿಯೇ ಕುಳಿತು ಉದ್ಯಾನವನವನ್ನು ವೀಕ್ಷಿಸುತ್ತಿದ್ದರು. ಇತ್ತ...

ಕಾಡಾನೆ ಕಾಲ್ತುಳಿತಕ್ಕೆ ವೃದ್ಧೆ ಸಾವು..!- ಹೆದ್ದಾರಿ ತಡೆದು ಗ್ರಾಮಸ್ಥರ ಆಕ್ರೋಶ

2 months ago

ಚಾಮರಾಜನಗರ: ಬಹಿರ್ದೆಸೆಗೆಂದು ತೆರೆಳಿದ್ದ ವೃದ್ಧೆ ಮನೆಗೆ ಮರಳುವಾಗ ದಾರಿ ಮಧ್ಯೆ ಆನೆ ತುಳಿದು ಆಕೆ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಮಹಂತಾಳಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಹಂತಾಳಪುರ ಗ್ರಾಮದ ನಿವಾಸಿ ಶಿವಮ್ಮ(65) ಆನೆ ದಾಳಿಗೆ ಬಲಿಯಾದ ವೃದ್ಧೆ. ಮಹಾಂತಾಳಪುರದ ಸುತ್ತಮುತ್ತ...

ದಂತದಿಂದ ತಿವಿದ 9 ವರ್ಷದ ಸಾಕಾನೆ- ಮಾವುತನಿಗೆ ಗಂಭೀರ ಗಾಯ

2 months ago

ಮಡಿಕೇರಿ: ಕಾವಾಡಿಯೊರ್ವರನ್ನು ಸಾಕಾನೆಯೊಂದು ತನ್ನ ದಂತದಿಂದ ತಿವಿದು ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ. ಶಿಬಿರದಲ್ಲಿ ನವೀನ್(30) ಕಾವಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಸಾಕಾನೆಯಿಂದ ತಿವಿತಕ್ಕೊಳಗಾಗಿದ್ದು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ನವೀನ್ ನನ್ನು...