Sunday, 21st October 2018

3 weeks ago

ಇಂದಿನಿಂದಲೇ ಶಿಕ್ಷಕರ ವರ್ಗಾವಣೆ ಆರಂಭ: ಎನ್. ಮಹೇಶ್

ಚಾಮರಾಜನಗರ: ಇಂದಿನಿಂದಲೇ ಶಿಕ್ಷಕರ ವರ್ಗಾವಣೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಎನ್ ಮಹೇಶ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಿಕ್ಷಕರ ವರ್ಗಾವಣೆಯಲ್ಲಿ ಸಣ್ಣಪುಟ್ಟ ಗೊಂದಲಗಳು ಇದ್ದವು. ಹೀಗಾಗಿ ವರ್ಗಾವಣೆಯನ್ನು ಎರಡು ದಿನಗಳ ಕಾಲ ತಡೆ ಹಿಡಿಯಲಾಗಿತ್ತು. ಇದೀಗ ಕಾನೂನು ತಜ್ಞರ ಅಭಿಪ್ರಾಯ ಪಡೆದ ನಂತರ ಗೊಂದಲ ಬಗೆಹರಿದಿದೆ. ಶಿಕ್ಷಕರ ಅನುಕೂಲ ಹಾಗೂ ಶಾಲೆಯ ಸಮರ್ಪಕ ನಿರ್ವಹಣೆಗೆ ವರ್ಗಾವಣೆ ಮಾಡಲಾಗುತ್ತಿದೆ. ಒಂದು ವೇಳೆ ಶಿಕ್ಷಕರು ವರ್ಗಾವಣೆ ಮಾಡಬೇಡಿ ಎಂದು ಹೇಳುವುದಕ್ಕೆ ಗಂಭೀರವಾದ ಕಾರಣ, ಮಾನವೀಯತೆ, ಆಡಳಿತಾತ್ಮಕ ಕಾರಣಗಳನ್ನು […]

3 weeks ago

ಸ್ವಚ್ಛ ಕ್ಯಾಂಪಸ್ ವಿಭಾಗದಲ್ಲಿ ರೇವಾ ವಿವಿಗೆ ದೇಶದಲ್ಲೇ 6ನೇ ರ‍್ಯಾಂಕ್

ಬೆಂಗಳೂರು: ವಿಶಾಲ ಕ್ಯಾಂಪಸ್ ಹೊಂದಿರುವ ರೇವಾ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) `ಸ್ವಚ್ಛ ಕ್ಯಾಂಪಸ್’ಗಾಗಿ 6ನೇ ರ‍್ಯಾಂಕ್ ನೀಡಿ ಪುರಸ್ಕರಿಸಿದೆ. ಎಂಎಚ್‌ಆರ್‌ಡಿ ರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯಗಳ ಸಮೀಕ್ಷೆ ನಡೆಸಿದ್ದು, ರೇವಾ ವಿಶ್ವವಿದ್ಯಾಲಯವೂ ಸ್ಥಾನ ಗಿಟ್ಟಿಸಿಕೊಂಡಿದೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಚಿವ ಪ್ರಕಾಶ್ ಜಾವಡೇಕರ್ ಅವರು ರ‍್ಯಾಂಕಿಂಗ್ ಪ್ರಮಾಣ ಪತ್ರವನ್ನು ರೇವಾ ವಿಶ್ವವಿದ್ಯಾಲಯದ...

ಶಿಕ್ಷಕಿಯಾಗಿ ಸ್ಲಂ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಕನಸು ಕಂಡಿರುವ ಯುವತಿಗೆ ಬೇಕಿದೆ ಸಹಾಯ

2 months ago

ಬೆಳಗಾವಿ: ಕೊಳಚೆ ಪ್ರದೇಶದಲ್ಲಿ ವಾಸಮಾಡುತ್ತಿದ್ದರು, ಉನ್ನತ ವ್ಯಾಸಂಗ ಪಡೆದು ತನ್ನಂತೆ ಸ್ಲಂನಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಬೆಳಗಾವಿಯ ವಿದ್ಯಾರ್ಥಿನಿ ಕನಸಿಗೆ ಬಡತನ ಅಡ್ಡಿಯಾಗಿದೆ. ಮನೆಯಲ್ಲಿ ಬಡತನವಿದ್ದರೂ ಅಂಜಲಿ ಕೊಂಡುರ್ ತನ್ನ ಕಷ್ಟಗಳನ್ನ ಬದಿಗಿರಿಸಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 78.88% ಹಾಗೂ ಪಿಯುಸಿ...

ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ-ಸಂಬಳದ ಅರ್ಧ ಹಣ ಶಾಲೆಗೆ ಮೀಸಲಿಟ್ಟ ಶಿಕ್ಷಕ

2 months ago

ಗದಗ: ಅನೇಕ ಶಿಕ್ಷಕರು ಬಿಲ್ ಮತ್ತು ಬೆಲ್‍ಗೆ ಸೀಮಿತರಾಗಿದ್ದಾರೆ ಅನ್ನೋ ಆರೋಪ ಇದೆ. ಆದರೆ ಗದಗನ ನರೇಗಲ್ ಶಾಲೆಯ ಶಿಕ್ಷಕ ಡಿ.ಎಚ್.ಪರಂಗಿ ಅವರು ತಮ್ಮ ಆದಾಯದ ಅರ್ಧದಷ್ಟು ಹಣವನ್ನು ಬಡಮಕ್ಕಳ ಶಿಕ್ಷಣ, ಪರಿಸರ, ಸಾಮಾಜಿಕ ಕಾರ್ಯಕ್ಕೆ ಖರ್ಚು ಮಾಡುತ್ತಿದ್ದಾರೆ. ಪರಂಗಿಯವರು ತಾವೇ...

ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಘಟಿಕೋತ್ಸವ

2 months ago

ಬೆಂಗಳೂರು: ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ಬಿಇ, ಬಿಆರ್ಕ್, ಎಂ.ಟೆಕ್, ಎಂ. ಆರ್ಕ್, ಎಂಬಿಎ, ಮತ್ತು ಎಂಸಿಎಯ ಘಟಿಕೋತ್ಸವ ಸಮಾರಂಭದಲ್ಲಿ ಚೆನ್ನೈನ ಅಣ್ಣಾ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ಸೂರಪ್ಪ ಪದವಿ ಪ್ರದಾನ ಮಾಡಿದರು. 13 ಬಿಇ...

ತಾಯಿಯನ್ನು ಕೊಂದ ತಂದೆಯನ್ನೇ ಜೈಲಿಗೆ ಕಳುಹಿಸಿದ ಮಗ ಗ್ರಾಮದಲ್ಲಿ ಈಗ ಹೀರೋ!

3 months ago

ಚಿತ್ರದುರ್ಗ: ಮಗನೊಬ್ಬ ತನ್ನ ತಾಯಿಯನ್ನ ಕೊಂದ ತಂದೆಯನ್ನೆ ಜೈಲಿಗೆ ಕಳಿಸಿದ್ದು, ಆತನಿಗೆ ಅನಾಥ ಪ್ರಜ್ಞೆ ಕಾಡದಿರಲೆಂದು ಖಾಸಗಿ ಶಾಲೆಯೊಂದು ಆತನನ್ನು ದತ್ತು ಪಡೆದಿದೆ. ಬಗ್ಗಲರಂಗವ್ವನಹಳ್ಳಿ ಗ್ರಾಮದ ನಾಲ್ಕು ವರ್ಷದ ಬಾಲಕ ಧನುಷ್ ತಾಯಿ ಕೊಲೆಯಾದಾಗ ಕಣ್ಣಾರೆ ಕಂಡ ಸತ್ಯವನ್ನ ನ್ಯಾಯಾಧೀಶರ ಮುಂದೆ...

ಎಂಜಿನಿಯರಿಂಗ್ ಗೆ ಪ್ರವೇಶ ಪಡೆದ ಬಡ ವಿದ್ಯಾರ್ಥಿನಿಗೆ ಬೇಕಿದೆ ಹಾಸ್ಟೆಲ್ ಫೀಸ್

3 months ago

ಕಾರವಾರ: ಹೆತ್ತವರು ಓದದೇ ಇದ್ರೂ ಮಕ್ಕಳನ್ನು ಓದಿಸುವ ಆಸೆ. ಎಷ್ಟೇ ಕಷ್ಟ ಬಂದ್ರೂ ಓದಿ ಸಾಧಿಸಿದ ಛಲಗಾತಿ ಪುಷ್ಪ. ಈಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮ ಪಂಚಾಯ್ತಿಯ ಶಿರೂರು ಗ್ರಾಮದ ಬಡ ಪ್ರತಿಭಾವಂತ ವಿದ್ಯಾರ್ಥಿನಿ. ತಂದೆ ಮಂಜುನಾಥ್...

ಕಟ್ಟಡದಿಂದ ಹಾರಿ ಮಂಗ್ಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

3 months ago

ಮಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ನಡೆದಿದೆ. ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಳಚ್ಚಿಲ್‍ನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗುರುಪ್ರಸಾದ್ ಇಂದು ಮಧ್ಯಾಹ್ನದ ಸ್ಥಳೀಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ...