Friday, 22nd November 2019

Recent News

2 months ago

ಬರ ಇದ್ರೂ ಅಧಿಕಾರಿಗಳ ನಿರ್ಲಕ್ಷ್ಯ – ಚರಂಡಿ ಪಾಲಾಗುತ್ತಿದೆ ಕುಡಿಯುವ ನೀರು

ಬೀದರ್: ಗಡಿ ಜಿಲ್ಲೆಯಲ್ಲಿ ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಬೀದರ್ ತಾಲೂಕಿನ ಮರಕಲ್ ಗ್ರಾಮದ ಪಾಟೀಲ್ ಗಲ್ಲಿಯಲ್ಲಿ ಸತತ ಎರಡು ದಿನಗಳಿಂದ ಕುಡಿಯುವ ನೀರು ಚರಂಡಿ ಸೇರುತ್ತಿದೆ. ಪಂಚಾಯ್ತಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯಕ್ಕೆ ನಲ್ಲಿಯ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಕುಡಿಯುವ ನೀರು ಸತತವಾಗಿ ಎರಡು ದಿನಗಳಿಂದ ಚರಂಡಿ ಪಾಲಾಗುತ್ತಿದ್ದರೂ ಯಾವ ಅಧಿಕಾರಿಗಳು ಕೂಡ ಈ ಬಗ್ಗೆ ಗಮನ […]

2 months ago

ಕೆರೆ ತುಂಬಿದ್ರೂ ಹಾವೇರಿ ಜನರಿಗೆ ಗಗನ ಕುಸುಮವಾದ ಕುಡಿಯುವ ನೀರು

– ನೀರು ಕಾಣದೇ ತುಕ್ಕು ಹಿಡಿದ ನಲ್ಲಿಗಳು ಹಾವೇರಿ: ಕೆರೆ ಭರ್ತಿಯಾಗಿ ದಿನಗಳೇ ಕಳೆದ್ರೂ ಹಾವೇರಿ ಜನತೆಗೆ ಕುಡಿಯುವ ನೀರು ಗಗನ ಕುಸುಮವಾಗಿದೆ. ಹದಿನೈದು ದಿನಗಳಿಗೊಮ್ಮೆ ಬರುವ ನೀರಿಗಾಗಿ ಜನರು ಕಾಯುತ್ತಿರುವ ದೃಶ್ಯಗಳು ಹಾವೇರಿಯಲ್ಲಿ ಕಾಣಸಿಗುತ್ತವೆ. ಹಾವೇರಿ ನಗರದ ಹೊರವಲಯದಲ್ಲಿ ವಿಶಾಲವಾದ ಕೆರೆ ಇದೆ. ಈ ಕೆರೆ ತುಂಬಿದರೆ ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ...

ಪ್ರವಾಹಕ್ಕೆ ತುತ್ತಾದರೂ ಕುಡಿಯುವ ನೀರಿಗೆ ಜನರ ಪರದಾಟ

3 months ago

ಯಾದಗಿರಿ: ಜಿಲ್ಲೆಯ ಒಂದು ಕಡೆ ಕೃಷ್ಣಾ ನದಿಯಿಂದ 6 ಲಕ್ಷ ಕ್ಯೂಸೆಕ್, ಮತ್ತೊಂದು ಕಡೆ ಭೀಮಾ ನದಿಯಿಂದ 2 ಲಕ್ಷ ಕ್ಯೂಸೆಕ್ ನೀರಿನಿಂದ ತುಂಬಿ ತುಳುಕಿ, ಗ್ರಾಮಸ್ಥರು ಪ್ರವಾಹದಿಂದ ತತ್ತರಿಸಿದ್ದರು. ಆದರೆ ಪ್ರವಾಹಕ್ಕೆ ತುತ್ತಾದ ಗ್ರಾಮಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆಯಿಂದ...

ಉತ್ತರ ಕರ್ನಾಟಕದಲ್ಲಿ ವಿಚಿತ್ರ ಸನ್ನಿವೇಶ – ಒಂದೆಡೆ ಪ್ರವಾಹ, ಮತ್ತೊಂದೆಡೆ ಕುಡಿಯುವ ನೀರು ಸೇಲ್

4 months ago

ಕಲಬುರಗಿ: ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತ ಕಲಬುರಗಿಯ ಭೀಮಾನದಿ ತೀರದಲ್ಲಿ ಕುಡಿಯುವ ನೀರನ್ನು ಬಕೆಟ್‍ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿನ ಭೀಕರ ಮಳೆಯಿಂದ ಕೋಯ್ನಾ ಜಲಾಶಯದ ಮೂಲಕ...

ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಜಲಕಂಟಕ

4 months ago

ಚಿಕ್ಕಬಳ್ಳಾಪುರ: ಅದು ಒಂದಲ್ಲ ಎರಡಲ್ಲ 8 ವರ್ಷಗಳಿಂದಲೂ ಬರಪೀಡಿತ ಜಿಲ್ಲೆಯಾದರೂ, ಅವಳಿ ನಗರಗಳ ಜನತೆಗೆ ಎಂದು ಕುಡಿಯುವ ನೀರು ಎಂದೂ ಕೊರತೆಯಾಗಿರಲಿಲ್ಲ. ಬೆಂಗಳೂರು ಮಹಾನಗರಕ್ಕೆ ಕಾವೇರಿ ಆಸರೆಯಾದಂತೆ, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಎರಡು ನಗರಗಳಿಗೆ ಜಕ್ಕಲಮಡುಗು ಜಲಾಶಯವೇ ಆಸರೆ ಆಗಿತ್ತು. ಆದರೆ ಈ ಬಾರಿ...

ಬೆಂಗ್ಳೂರಿಗೆ 1 ತಿಂಗಳು ಮಾತ್ರ ಕುಡಿಯುವ ನೀರು- ಡಿಸಿಎಂ

5 months ago

ಬೆಂಗಳೂರು: ಕೃಷ್ಣ ರಾಜಸಾಗರದ ಅಣೆಕಟ್ಟಿನಲ್ಲಿ(ಕೆಆರ್‍ಎಸ್) 80 ಅಡಿ ನೀರು ಇದೆ. ಹೀಗಾಗಿ ಇನ್ನು ಒಂದು ತಿಂಗಳು ಮಾತ್ರ ಬೆಂಗಳೂರಿಗೆ ಕುಡಿಯವ ನೀರು ಕೊಡುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬರದೇ ಇದ್ದಲ್ಲಿ ಅಥವಾ ಒಳ ಹರಿವು ಬರದೇ ಹೋದಲ್ಲಿ ಬೆಂಗಳೂರಿಗೆ...

ಮಂಡ್ಯದಲ್ಲಿ ಕುಡಿಯುವ ನೀರಿಗೆ ಸದ್ದು ಮಾಡ್ತಿದೆ ಸೇಡಿನ ರಾಜಕೀಯ

5 months ago

ಮಂಡ್ಯ: ಲೋಕಸಭಾ ಚುನಾವಣೆಯ ಬಳಿಕ ಮಂಡ್ಯದಲ್ಲಿ ಸೇಡಿನ ರಾಜಕೀಯದ ಸದ್ದು ಜೋರಾಗಿದ್ದು, ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಪ್ರಾರಂಭವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು, ಮಂಡ್ಯ ತಾಲೂಕಿನ ಬೇವುಕಲ್ಲುಕೊಪ್ಪಲು ಗ್ರಾಮದಲ್ಲಿ ಸುಮಲತಾಗೆ ಹೆಚ್ಚು ಲೀಡ್ ಬಂದಿದೆ ಎಂಬ ಕಾರಣಕ್ಕೆ ಕುಡಿಯುವ...

ಪ್ರಯಾಣಿಕರಿಗಾಗಿ ಕೊಂಕಣ ರೈಲ್ವೆ ನಿಗಮದಿಂದ ನೀರಿನ ಎಟಿಎಂ ಅಳವಡಿಕೆ

5 months ago

ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಇದರಲ್ಲಿ ಸದ್ಯ ಕೊಂಕಣ ರೈಲ್ವೆ ನಿಗಮದ(ಕೆಆರ್‌ಸಿಎಲ್‌) ಅಡಿಯಲ್ಲಿ ಬರುವ ನಿಲ್ದಾಣಗಳಲ್ಲಿ ನೀರಿನ ಎಟಿಎಂ ಅಳವಡಿಸುವ ಸೌಲಭ್ಯ ಕೂಡ ಒಂದಾಗಿದೆ. ಹೌದು. ಕೊಂಕಣ ರೈಲ್ವೆ ನಿಗಮದಿಂದ ರೈಲು ನಿಲ್ದಾಣಗಳಲ್ಲಿ ನೀರಿನ...