Tuesday, 16th July 2019

1 day ago

ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳ ಕಣ್ಣಿಗೆ ಕುತ್ತು

– ಮಿಂಟೋ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ – ಡ್ರಗ್ ಓವರ್ ರಿಯಾಕ್ಷನಿಂದ ಮೃತಪಟ್ಟಿರಬಹುದು – ಈ ಪ್ರಕರಣದಲ್ಲಿ ನಮ್ಮ ತಪ್ಪಿಲ್ಲ- ವೈದ್ಯರಿಂದ ಸ್ಪಷ್ಟನೆ ಬೆಂಗಳೂರು: ಕಣ್ಣಿನ ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳು ಕಣ್ಣು ಕಳೆದುಕೊಂಡಿರುವ ಘಟನೆ ನಗರದ ಮಿಂಟೋ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಮಂಗಳವಾರ 25 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿತ್ತು. ಅದರಲ್ಲಿ 15 ಜನರಿಗೆ ಕಣ್ಣು ಕಾಣುತ್ತಿಲ್ಲ, 5 ಮಂದಿಗೆ ಸ್ವಲ್ಪ ಚೇತರಿಕೆ ಕಂಡಿದೆ. ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನುವ […]

6 days ago

ತಾಯಿಯ ಪ್ರಾರ್ಥನೆಯಿಂದ ಸಾವನ್ನೇ ಜಯಿಸಿದ ಮಗ

ಅಮರಾವತಿ: ತಾಯಿ ಎಂದರೆ ದೇವರ ರೂಪ ಎಂಬ ಮಾತಿದೆ. ಅದರಂತೆ ತೆಲಂಗಾಣದಲ್ಲಿ ತಾಯಿಯೊಬ್ಬರು ಪವಾಡದ ರೀತಿಯಲ್ಲಿ ಸಾವಿನ ದವಡೆಯಲ್ಲಿದ್ದ ತನ್ನ ಮಗನನ್ನು ಉಳಿಸಿಕೊಂಡಿದ್ದಾರೆ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಪಿಳ್ಳಲಮರಿ ಎಂಬ ಹಳ್ಳಿಯ ಸಿದ್ದಮ್ಮ, ತನ್ನ 18 ವರ್ಷದ ಮಗ ಗಾಂಧಮ್ ಕಿರಣ್‍ಗೆ ಜೂನ್ 26 ರಂದು ವಾಂತಿ ಮತ್ತು ತೀವ್ರ ಭೇದಿ ಕಾಣಿಸಿಕೊಂಡ ಕಾರಣ ಅವನನ್ನು...

ಅನಸ್ತೇಶಿಯಾ ಡೋಸ್ ಹೆಚ್ಚಳ, ರೋಗಿ ಸಾವು – ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ

2 weeks ago

ಚಾಮರಾಜನಗರ: ವೈದ್ಯರ ನಿರ್ಲಕ್ಷ್ಯದಿಂದ ಅರಿವಳಿಕೆ(ಅನಸ್ತೇಶಿಯಾ) ಡೋಸ್ ಹೆಚ್ಚಾದ ಪರಿಣಾಮ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಉದ್ದನೂರು ಗ್ರಾಮದ ನಿವಾಸಿ ಸುರೇಶ್(42) ಮೂಳೆ ಶಸ್ತ್ರ ಚಿಕಿತ್ಸೆಗೆಂದು ಸೋಮವಾರ ಕೊಳ್ಳೇಗಾಲ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೂ ಮುನ್ನ ನೋವು ನಿವಾರಣೆಗೆ...

ನಾನು ಕರೆದರೂ, ಬಾರದೇ ನಿರ್ಲಕ್ಷ್ಯ ತೋರಿದ್ದೀರಿ: ವೈದ್ಯೆಗೆ ಜಿಪಂ ಅಧ್ಯಕ್ಷೆ ತರಾಟೆ

2 weeks ago

ಮಂಗಳೂರು: ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಪುತ್ತೂರು ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಬಾಲಕಿಯನ್ನು ಭೇಟಿಯಾಗಲು ತೆರಳಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಅಲ್ಲಿಯ ಕರ್ತವ್ಯನಿರತ ವೈದ್ಯೆಯನ್ನು ದಬಾಯಿಸಿದ ವಿಡಿಯೋ ಜಾಲತಾಣದಲ್ಲಿ ಭಾರೀ ಟೀಕೆಗೊಳಗಾಗಿದೆ. ಪೊಲೀಸರು ತನಿಖೆಯ ನೆಪದಲ್ಲಿ ಕೌಡಿಚ್ಚಾರಿನ ಆಶಾ...

ಕಚ್ಚಿದ ನಾಯಿಗೆ ವಾಪಸ್ ಕಚ್ಚಬೇಕಿತ್ತೆಂದ ವೈದ್ಯ- ಮಹಿಳೆ ಆರೋಪ

2 weeks ago

ಜೈಪುರ: ಮಹಿಳೆಯೊಬ್ಬರು ನಾಯಿ ಕಚ್ಚಿತ್ತು, ಔಷಧಿ ನೀಡಿ ಎಂದು ಆಸ್ಪತ್ರೆಗೆ ಹೋದರೆ ವೈದ್ಯ, ನೀವೂ ನಾಯಿಗೆ ಕಚ್ಚಬೇಕಿತ್ತು ಎಂದು ಹಾರಿಕೆಯ ಉತ್ತರ ನೀಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ವೈದ್ಯರು ಈ ರೀತಿ ಉತ್ತರ ನೀಡುತ್ತಿರುವಾಗ ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ...

ತನ್ನ ವೀರ್ಯ ಬಳಸಿ ಕೃತಕ ಗರ್ಭಧಾರಣೆ, ಮಕ್ಕಳಿಗೆ ಒಂದೊಂದು ರೋಗ – ವೈದ್ಯನ ಲೈಸೆನ್ಸ್ ರದ್ದು

3 weeks ago

ಒಟ್ಟಾವಾ: ತನ್ನ ವೀರ್ಯ ಬಳಸಿ ಕೃತಕ ಗರ್ಭಧಾರಣೆ ನಡೆಸಿದ ಕೆನಡಾ ವೈದ್ಯನ ಪರಾವನಗಿಯನ್ನು ರದ್ದು ಮಾಡಲಾಗಿದೆ. ಈ ಕೃತ್ಯವನ್ನು ಎಸಗಿದ 80 ವರ್ಷದ ಬರ್ನಾರ್ಡ್ ನಾರ್ಮನ್ ಬಾರ್ವಿನ್ ಅವರಿಗೆ ಕಾಲೇಜ್ ಆಫ್ ಫಿಸಿಶಿಯನ್ಸ್ ಆ್ಯಂಡ್ ಸರ್ಜನ್ಸ್ ಆಫ್ ಒಂಟಾರಿಯೊ ಶಿಸ್ತಿನ ಸಮಿತಿಯು...

ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಕೂಡಿ ಹಾಕಿ ತೆರಳಿದ ಸಿಬ್ಬಂದಿ

3 weeks ago

ಲಕ್ನೋ: ಸಿಬ್ಬಂದಿಯೊಬ್ಬ ಶಿಫ್ಟ್ ಮುಗಿಯಿತು ಎಂದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಗೇಟ್ ಲಾಕ್ ಮಾಡಿಕೊಂಡು ಹೊರ ನಡೆದಿರುವ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಸರ್ಕಾರಿ ಅರೋಗ್ಯ ಕೇಂದ್ರದಲ್ಲಿ ನಡೆದಿದೆ. ಸಾನಿಯಾ(30) ಎಂಬುವರನ್ನು ಶುಕ್ರವಾರ ಮುಜಾಫರ್ ನಗರ ಜಿಲ್ಲೆಯ...

ಸಹೋದರಿಯ ಮದ್ವೆಗೆ ರಜೆ ನೀಡದಕ್ಕೆ ವೈದ್ಯ ಆತ್ಮಹತ್ಯೆ

1 month ago

ಚಂಡಿಗಢ್: ಸಹೋದರಿಯ ಮದುವೆಗೆ ರಜೆ ನೀಡಲಿಲ್ಲ ಎಂದು ಕರ್ನಾಟಕದ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣಾದ ರೋಹ್ಟಕ್‍ನಲ್ಲಿ ನಡೆದಿದೆ. ಓಂಕಾರ್ (30) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಓಂಕಾರ್ ಮೂಲತಃ ಧಾರವಾಡದವರಾಗಿದ್ದು, ಹರಿಯಾಣಾದಲ್ಲಿ ಎಂಡಿ ಕೋರ್ಸ್ ಮಾಡುತ್ತಿದ್ದರು. ಸಹೋದರಿ ಮದುವೆಗೆ ರಜೆ ನೀಡಲಿಲ್ಲ...