Tag: Divya Uruduga

  • ಮಂಜು ಉಲ್ಟಾ ನನ್ಮಗ ಅಂತ ಗೊತ್ತು: ದಿವ್ಯಾ ಉರುಡುಗ

    ಮಂಜು ಉಲ್ಟಾ ನನ್ಮಗ ಅಂತ ಗೊತ್ತು: ದಿವ್ಯಾ ಉರುಡುಗ

    ಬಿಗ್‍ಬಾಸ್ ಆರಂಭಗೊಂಡು ಇಷ್ಟು ದಿನಗಳ ಬಳಿಕ ಸ್ಪರ್ಧಿಗಳು ಒಬ್ಬರಿಗೊಬ್ಬರು ಕ್ಲೋಸ್ ಆಗ್ತಿದ್ದಾರೆ. ತಮ್ಮ ಆಲೋಚನೆಗಳಿಗೆ ಅಡ್ಜಸ್ಟ್ ಆಗೋ ಸ್ಪರ್ಧಿಗಳ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಿದ್ದಾರೆ. ಟಾಸ್ಕ್ ಹೊರತಾಗಿ ಇನ್ನುಳಿದ ಸಮಯವನ್ನ ಅತ್ಯಂತ ಮಜಾವಾಗಿ ಎಲ್ಲರೂ ಕಳೆಯುತ್ತಿದ್ದಾರೆ. ವಾಹಿನಿ ಸದ್ಯ ಅನ್‍ಸೀನ್ ದೃಶ್ಯವನ್ನ ಹಂಚಿಕೊಂಡಿದ್ದು, ಇದರಲ್ಲಿ ಮಂಜು ಉಲ್ಟಾ ನನ್ ಮಗ ಅಂತ ನನಗೆ ಗೊತ್ತಿದೆ ಎಂದು ದಿವ್ಯಾ ಉರುಡಗ ಹೇಳಿದರು.

    Divya Manju Arvind 1

    ಸ್ವಿಮ್ಮಿಂಗ್ ಪೂಲ್ ಬಳಿ ದಿವ್ಯಾ ಉರುಡುಗ, ಅರವಿಂದ್, ಮಂಜು ಮತ್ತು ದಿವ್ಯಾ ಸುರೇಶ್ ಕುಳಿತು ಹರಟೆ ಹೊಡಿತ್ತಿದ್ದರು. ಆಗ ಮಂಜು ಕುದುರೆಮುಖದಲ್ಲಿ ಏನಿದೆ ಅಂತ ದಿವ್ಯಾಗೆ ಕೇಳಿದರು. ಸ್ವಲ್ಪ ಯೋಚಿಸಿ ಉತ್ತರಿಸಿದ ದಿವ್ಯಾ, ಕುದುರೆಮುಖದಲ್ಲಿ ಕಣ್ಣು, ಬಾಯಿ, ಮೂಗು ಇದೆ ಅಂತ ಹೇಳಿದರು. ನಿಮ್ಮ ಉತ್ತರ ತಪ್ಪು. ಕುದುರೆಮುಖದಲ್ಲಿ ಕೆಮ್ಮಣ್ಣುಗುಂಡಿ ಇದೆ ಅಂತ ಮಂಜು ಪಂಚ್ ಕೊಟ್ಟರು.

    Divya Manju Arvind 2

    ಒಂದು ಕ್ಷಣ ಶಾಕ್ ಆದಂತೆ ಕಂಡ ದಿವ್ಯಾ, ಹೌದಾ, ಕುದುರೆಮುಖದಲ್ಲಿ ಕೆಮ್ಮಣ್ಣುಗುಂಡಿ ಇದೆಯಾ ಅಂತ ಅಂದ್ರು. ಈ ವೇಳೆ ಮಧ್ಯ ಪ್ರವೇಶಿಸಿದ ದಿವ್ಯಾ ಸುರೇಶ್, ನೀನು ಕೆಮ್ಮಣ್ಣುಗುಂಡಿ ಅಂತ ಹೇಳಿದ್ರೆ, ಇವನು ಕಣ್ಣು, ಬಾಯಿ, ಮುಖ ಇದೆ ಅಂತ ಹೇಳ್ತಿದ್ದ. ನೀನು ಹಾಗೆ ಹೇಳಿದ್ದಕ್ಕೆ, ಈ ರೀತಿ ಹೇಳಿದ್ದಾನೆ ಅಂತ ಮಂಜುಗೆ ಟಕ್ಕರ್ ಕೊಟ್ಟರು.

    ನೀನು ಉಲ್ಟಾ ನನ್ ಮಗ ಅಂತ ನನಗೆ ಗೊತ್ತು. ಅದಕ್ಕೆ ನಾನು ಹಾಗೆ ಹೇಳಿದೆ ಎಂದು ಮಂಜು ಮೇಲೆ ದಿವ್ಯಾ ಹುಸಿ ಕೋಪ ಮಾಡಿಕೊಂಡರು. ನಂತ್ರ ನಾನು ಒಂದು ಪ್ರಶ್ನೆ ಕೇಳ್ತೀನಿ. ಈಗ ಯೋಚನೆ ಮಾಡಿ ಹೇಳ್ತೀನಿ ಅಂತ ಸಮಯಾವಕಾಶ ಕೇಳಿದರು. ಇನ್ನು ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ಅರವಿಂದ್, ಫಸ್ಟ್ ಹೆಸರು ಹೇಳಬೇಕು. ಆಮೇಲೆ ಟಾಸ್ಕ್ ರೆಡಿಯಾಗುತ್ತೆ ಅಂತ ನಗೆ ಚಟಾಕಿ ಹಾರಿಸಿದರು.

  • ಅರವಿಂದ್ ಅಂದ್ರೆ ಇಷ್ಟ: ದಿವ್ಯಾ

    ಅರವಿಂದ್ ಅಂದ್ರೆ ಇಷ್ಟ: ದಿವ್ಯಾ

    ಬಿಗ್‍ಬಾಸ್ ಮನೆಯ ಕ್ಯೂಟ್ ಕಪಲ್ ಆಗಿರುವ ದಿವ್ಯಾ ಉರುಡುಗ ಮತ್ತು ಅರವಿಂದ್‍ಗೆ ಎದುರಾದ ಪ್ರಶ್ನೆಗಳಿಗೆ ಒಂದೆ ಉತ್ತರ ನೀಡಿದ್ದಾರೆ. ದಿವ್ಯಾ ಹೇಳಿ ಅರವಿಂದ್ರನಾ ನೀವು ಲವ್ ಮಾಡುತ್ತಿಲ್ಲವಾ? ನಿಮ್ಮ ಇಬ್ಬರು ಜೋಡಿ ತುಂಬಾ ಚೆನ್ನಾಗಿದೆ. ನಾನು ದೇವರ ಹತ್ತಿರ ನಾನು ಪ್ರಾರ್ಥಿಸುತ್ತೇನೆ. ಆಚೆನೂ ಹೀಗೆ ಇರಲಿ ನಿಮ್ಮ ಇಬ್ಬರ ಪ್ರೀತಿ ಎಂದು ರಘು ಹೇಳಿದ್ದಾರೆ.

    divya uruduga3

    ರಘು ಮಾತನ್ನು ಕೇಳಿದ ದಿವ್ಯಾ ಇಲ್ಲ.. ನಗೆ ಅವಿ ಅಂದರೆ ತುಂಬಾ ಇಷ್ಟ… ನನಗೆ ಅವರು ತುಂಬಾ ಇಷ್ಟವಾಗುತ್ತಾರೆ. ಮುಂದೆ ಹೇಗೆ ಆಗುತ್ತೆ ಎಂದು ಗೊತ್ತಿಲ್ಲ. ನಾನು ಇರುವುದನ್ನು ಹೇಳುತ್ತಿದ್ದೇನೆ. ಅವಿ ಬಂದಾ ಇದೇ ಪ್ರಶ್ನೆಯನ್ನು ಕೇಳಿ. ಯಾಕೆಂದರೆ ಅವರು ಇದೇ ಉತ್ತರವನ್ನು ಕೊಡುತ್ತಾರೆ ಎಂದು ದಿವ್ಯಾ ಹೇಳಿದ್ದಾರೆ. ಈ ವೇಳೆ ರಘು ಅರವಿಂದ್ ದಿವ್ಯಾನಾ ಎಷ್ಟು ಇಷ್ಟಾಪಡುತ್ತಿರಾ ಎಂದು ಕೇಳಿದ್ದಾರೆ. ಅರವಿಂದ್ ಕೂಡಾ ದಿವ್ಯಾ ಹೇಳಿರುವ ಹಾಗೆಯೆ ಮಾತನಾಡಿದ್ದಾರೆ.

     ದಿವ್ಯಾ ಎಂದರೆ ನನಗೆ ಬಾರಿ ಇಷ್ಟ ಎಂದ ಅರವಿಂದ್‍

    ದಿವ್ಯಾ ಎಂದರೆ ನನಗೆ ಬಾರಿ ಇಷ್ಟ ಎಂದಿದ್ದಾರೆ. ಆಗ ರಘು ಪ್ರೀತಿ, ಪ್ರೇಮ ಇದೆಯಾ ಎಂದು ಕೇಳಿದ್ದಾರೆ. ಆಗ ಅರವಿಂದ್ ನಗುತ್ತಾ ಸದ್ಯಕ್ಕೆ ಹಾಗೆನು ಇಲ್ಲಾ. ಮುಂದೆ ನೋಡುವಾ ಸಮಯ ಇದೆ. ಬಿಗ್‍ಬಾಸ್ ಮನೆಯಿಂದ ಆಚೆ ನೋಡುವಾ ಎಂದು ಹೇಳಿದ್ದಾರೆ. ಆಗ ವೈಷ್ಣವಿ, ಶಮಂತ್ ನಾವು ತುಂಬಾ ಎಕ್ಸೈಟೆಡ್ ಆಗಿದ್ದೇವೆ ಎಂದು ಹೇಳಿದ್ದಾರೆ.

    ಅವರಿಗೂ ನಾನು ಇಷ್ಟ…. ನನಗೂ ಅವರು ಇಷ್ಟ… ಎಂದು  ನಗು ನಗುತ್ತಾ ದಿವ್ಯಾ ಹೇಳಿದ್ದಾರೆ. ಶಮಂತ್ ಭಾವ ಎಂದು ಕರೆಯಲಾ ಎಂದು ದಿವ್ಯಾಗೆ ತಮಾಷೆ ಮಾಡಿದ್ದಾರೆ. ದಿವ್ಯಾ ಮಾತ್ರ ಮತ್ತೆ ಮತ್ತೆ ಇದೇ ವಿಚಾರವನ್ನು ಅರವಿಂದ್ ಬಳಿ ದಿವ್ಯಾಗೆ ಹೇಳಿದ್ದಾರೆ. ಅಲ್ಲಿಯೇ ಇದ್ದ ವೈಷ್ಣವಿ, ರಘು, ಶಮಂತ್ ದಿವ್ಯಾಗೆ ಮತ್ತೆ ಯಾಕೆ ಅರವಿಂದ್ ಬಳಿ ಅದೇ ವಿಚಾರವನ್ನು ಮಾತನಾಡುತ್ತೀದ್ದಿಯಾ? ನಿನಗೆ ಅರವಿಂದ್ ಕಡೆಯಿಂದ ಏನು ಉತ್ತರಬೇಕು ಎಂದು ಕೇಳಿದ್ದಾರೆ. ಈ ವೇಳೆ ದಿವ್ಯಾ ನಗುತ್ತಾ ಸುಮ್ಮನಾಗಿದ್ದಾರೆ.

  • ನಾಚಿ ನೀರಾದ ಅರವಿಂದ್, ದಿವ್ಯಾ ಉರುಡುಗ

    ನಾಚಿ ನೀರಾದ ಅರವಿಂದ್, ದಿವ್ಯಾ ಉರುಡುಗ

    ಬಿಗ್‍ಬಾಸ್  ಮನೆಯ ಸ್ಪರ್ಧಿಗಳ ಆಟವನ್ನು ನೋಡಿದ ವೀಕ್ಷಕರಿಗೆ ವಾರಾಂತ್ಯದಲ್ಲಿ ಕಾಲ್ ಮಾಡಿ ತಮ್ಮ ಅಭಿಪ್ರಾಯವನ್ನು ಹೇಳುವ ಅವಕಾಶವನ್ನು ನೀಡಲಾಗುತ್ತದೆ. ಇಂದು ಬಂದಿರುವ ಫೋನ್ ಕರೆ ದಿವ್ಯಾ ಉರುಡುಗ ಅವರಿಗೆ ಆಗಿತ್ತು. ದಿವ್ಯಾ ಕಾಲ್ ಮಾಡಿರುವ ವೀಕ್ಷಕರ ಮಾತನ್ನು ಕೇಳಿ ನಾಚಿ ನೀರಾಗಿದ್ದಾರೆ.

    arvind
    ದಿವ್ಯಾ ಉರುಡುಗ ನಿಮ್ಮ ಅರವಿಂದ್ ಜೋಡಿ ತುಂಬಾ ಚೆನ್ನಾಗಿದೆ. ನೀವು ಸ್ಟ್ರಾಂಗ್ ಅಂತಾ ಅರವಿಂದ್ ನಿಮ್ಮನ್ನು ಜೋಡಿ ಟಾಸ್ಕ್‍ನಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ತುಂಬಾ ಸ್ಟ್ರಾಂಗ್ ಚೆನ್ನಾಗಿಯೇ ಆಡುತ್ತಾ ಇದ್ದೀರಾ. ಆದರೆ ಕೆಲವು ದಿನಗಳಿಂದ ನಿಮ್ಮ ಆಟ ನಮಗೆ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

    Divya Arvind 1 1

    ನೀವು ಹುಡುಗರಿಗೂ ಸರಿಸಮಾನವಾಗಿ ಆಟವನ್ನು ಆಡುತ್ತಿರಾ. ಹೀಗೆ ಆಟವನ್ನು ಮುಂದುವರೆಸಿ. ನಿಮ್ಮನ್ನು ನಾವು ಇನ್ನು ಹೆಚ್ಚು ಟಾಸ್ಕ್‍ನಲ್ಲಿ ನೋಡಲು ಇಚ್ಚಿಸುತ್ತೇವೆ ಎಂದು ಹೇಳಿದ್ದಾರೆ. ಆಗ ದಿವ್ಯಾ ಇಲ್ಲ ನನಗೆ ಕೆಲವು ಟಾಸ್ಕ್‍ಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಲ್ಲ. ನಾನು ಚೆನ್ನಾಗಿ ಆಡುತ್ತೇನೆ ಮುಂದೆ ಎಂದು ಹೇಳಿದ್ದಾರೆ.

    ಅರವಿಂದ್ ದಿವ್ಯಾ ಕೇಮಿಸ್ಟ್ರೀ ಸೂಪರ್ ಆಗಿದೆ. ಚೆನ್ನಾಗಿ ಆಡಿ. ಶುಭಾ ಎಂದರೆ ನನಗೆ ತುಂಬಾ ಇಷ್ಟ ಅವರು ಎಷ್ಟೊಂದು ಕ್ಯೂಟ್. ಎಲ್ಲರೂ ಚೆನ್ನಾಗಿ ಆಡಿ ಎಂದು ಕಾಲರ್ ಹೇಳಿದ್ದಾರೆ. ಕಾಲರ್ ಮಾತನ್ನು ಕೇಳಿ ಮನೆಮಂದಿಗೆ ಸಖತ್ ಇಷ್ಟವಾಗಿದೆ. ದಿವ್ಯಾ, ರವಿಂದ್ ಮಾತ್ರ ನಿಮ್ಮ ಕೆಮಿಸ್ಟ್ರೀ ಸೂಪರ್ ಆಗಿದೆ ಎಂದು ಹೇಳಿರುವುದನ್ನು ಕೇಳಿ ನಾಚಿ ನೀರಾಗಿದ್ದಾರೆ. ಇಬ್ಬರು ಮನಸ್ಸಿನಲ್ಲಿಯೇ ಸಂತೋಷವನ್ನು ಪಟ್ಟಂತೆ ಕಾಣುತ್ತಿದೆ.

  • ಮನಸ್ಸು ಬಿಚ್ಚಿ ಮಾತನಾಡಿದ ದಿವ್ಯಾ, ಅರವಿಂದ್

    ಮನಸ್ಸು ಬಿಚ್ಚಿ ಮಾತನಾಡಿದ ದಿವ್ಯಾ, ಅರವಿಂದ್

    ಬಿಗ್‍ಬಾಸ್ ಮನೆಯ ಪ್ರೇಮ ಪಕ್ಷಿಗಳಾದ ದಿವ್ಯಾ ಅರವಿಂದ್ ಇಬ್ಬರು ಒಟ್ಟಿಗೆ ಕುಳಿತು ತಮ್ಮ ಜೀವನದ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಬಿಗ್‍ಬಾಸ್ ಮನೆಯ ಹೊರಗಿನ ಜೀವನ ಕುರಿತಾಗಿ ಪರಸ್ಪರ ತಮ್ಮ ಅಭಿಪ್ರಾಯಗಳ ಕುರಿತಾಗಿ ಮಾತನಾಡಿಕೊಂಡಿದ್ದಾರೆ.

    divya uruduga3

    ನನ್ನ ವಯಸ್ಸು 35 ಎಂದು ಅರವಿಂದ್ ದಿವ್ಯಾ ಬಳಿ ಹೇಳುವಾಗ ದಿವ್ಯಾ ನನೆಗ ಗೊತ್ತು ನಿಮ್ಮ ಬಗ್ಗೆ ಸ್ಪಲ್ಪ ಗೊತ್ತು ನನಗೆ ನಿಮ್ಮ ಸ್ಕೂಲ್, ಪ್ಯಾಮಿಲಿ ಎಲ್ಲಾ ಸ್ಪಲ್ಪ ಗೊತ್ತು ಎಂದು ದಿವ್ಯಾ ಹೇಳಿದ್ದಾರೆ. ಎಲ್ಲಾ ಗೊತ್ತಿರ ಬೇಕು ಎಂದು ನನಗೆ ಅನ್ನಿಸುತ್ತದೆ. ಆಗ ಇಬ್ಬರಿಗೂ ಒಳ್ಳೆಯದು ಆಗುತ್ತದೆ. ಇಬ್ಬರು ಚೆನ್ನಾಗಿರಬೇಕು ಎಂದ್ರೆ ತಿಳಿದುಕೊಂಡಿರಬೇಕು ಎಂದು ಅರವಿಂದ್ ಹೇಳಿದ್ದಾರೆ.

    Divya Arvind 3

    ನಿಮ್ಮ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದು ಕೊಂಡಿರುವ ನನಗೆ ಪೂರ್ತಿ ವಿಷಯ ತಿಳಿದರೆ ನಾನು ಹೇಗೆ ವರ್ತಿಸುತ್ತೇನೆ ಎಂದು ನೀವು ಅಂದುಕೊಂಡಿದ್ದೀರಾ? ಎಂದು ದಿವ್ಯಾ ರವಿಂದ್‍ನನ್ನು ಪ್ರಶ್ನಿಸುವಾಗ ಅರವಿಂದ್ ನಾನು ಆ ಕುರಿತಾಗಿ ಯೋಚನೆ ಮಾಡಲು ಹೋಗುವುದೆ ಇಲ್ಲ. ನಾವು ನ್ಯಾಯುತವಾಗಿ ಇರಬೇಕು. ಇಲ್ಲಾ ಎಂದರೆ ಜೀವನಕ್ಕೆ ತೊಂದರೆ ಆಗುತ್ತದೆ ಎನ್ನುವ ರೀತಿಯಲ್ಲಿ ಅರವಿಂದ್ ಮಾತನಾಡಿದ್ದಾರೆ. ದಿವ್ಯಾ ಮತ್ತು ಅರವಿಂದ್ ಇಬ್ಬರು ಬಿಗ್‍ಬಾಸ್ ನಿಂದ ಹೊರಗೆ ಹೋಗಿ ಜೀವನ ಹೇಗೆ ಎನ್ನುವುದ ಕುರಿತಾಗಿ ಮಾತನಾಡಿದ್ದಾರೆ.

     ಬಿಗ್‍ಬಾಸ್ ಮನೆಯ ಜೋಡಿ ಟಾಸ್ಕ್‍ನಿಂದ ಒಂದಾಗಿರುವ ಈ ಜೋಡಿ ಮೊದಲಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಬರುತ್ತಿದೆ. ಈ ಜೋಡಿ ಲವ್‍ನಲ್ಲಿದ್ದಾರೆ ಎನ್ನುವುದು ಮೇಲ್ನೊಟಕ್ಕೆ ಹೌದು ಎಂದು ಅನ್ನಿಸುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಈ ಜೋಡಿ ಬಿಗ್‍ಬಾಸ್ ಮನೆಯ ಹೊರಗಿನ ತಮ್ಮಜೀವನದ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೆ ಏನೆಲ್ಲಾ ಟ್ವೀಸ್ಟ್ ಸಿಗಲಿವೆ ಎಂಬುದನ್ನು ಕಾದುನೋಡಬೇಕಿದೆ.

  • ದಿವ್ಯಾಗೆ ಲಟ್ಟಿಗೆ ತೆಗೆದು ನೆಟ್ಟಗೆ ಮಾಡುವ: ಅರವಿಂದ್

    ದಿವ್ಯಾಗೆ ಲಟ್ಟಿಗೆ ತೆಗೆದು ನೆಟ್ಟಗೆ ಮಾಡುವ: ಅರವಿಂದ್

    ವೀಕೆಂಡ್ ನಲ್ಲಿ ಬಿಗ್‍ಬಾಸ್ ಮನೆಗೆ ಸ್ಪೆಷಲ್ ಅಕ್ಕಿ ಬಳಸಿ ಚಿಕನ್ ಮತ್ತು ಮಟನ್ ಬಿರಿಯಾನಿ ಮಾಡುವ ಟಾಸ್ಕ್ ನೀಡಿದ್ದಾರೆ. ವೈಷ್ಣವಿ ಮತ್ತು ಪ್ರಿಯಾಂಕಾ ಅಡುಗೆ ಮಾಡುತ್ತಿದ್ರೆ, ಅರವಿಂದ್, ದಿವ್ಯಾ ಉರುಡುಗ ಮತ್ತು ಶುಭಾ ಪೂಂಜಾ ಮಾತಾಡುತ್ತಾ ಸಮಯ ಕಳೆಯುತ್ತಿದ್ದರು. ಈ ವೇಳೆ ವಾಯು ಆಗಿರೋ ಹಾಗಿದೆ. ಬೆನ್ನು ಹಿಡಿದುಕೊಂಡಿದೆ. ಹಾಗಾಗಿ ಒಂದು ಲಟ್ಟಿಗೆ ತೆಗೆದುಕೊಂಡ್ರೆ ಸರಿ ಹೋಗುತ್ತೆ ಅಂದ್ರು. ಪಕ್ಕದಲ್ಲಿಯೇ ಕುಳಿತಿದ್ದ ಅರವಿಂದ್, ಲಟ್ಟಿಗೆ ತೆಗೆದು ನೆಟ್ಟಗೆ ಮಾಡುವ ಅಂದ್ರು.

    Divya Arvind 1 1

    ಇದಕ್ಕೂ ಮೊದಲು ಪ್ರಿಯಾಂಕಾ, ದಿವ್ಯಾ ಯು, ಅರವಿಂದ್ ಮತ್ತು ಶುಭಾ ಮಧ್ಯೆ ಲಟ್ಟಿಗೆ ಸರಿನಾ? ನೆಟ್ಟಿಕೆ ಸರಿಯಾ? ಅನ್ನೋ ವಿಷ್ಯ ಚರ್ಚೆ ಆಯ್ತು. ದಿವ್ಯಾ ಅದು ಲಟ್ಟಿಗೆ, ನೆಟ್ಟಿಗೆ ಅಲ್ಲ ಅಂತ ವಾದಿಸುತ್ತಿದ್ದರು. ಇತ್ತ ಭದ್ರಾವತಿ ಭಾಗದವರಾದ ಪ್ರಿಯಾಂಕಾ ಸಹ ದಿವ್ಯಾಗೆ ಸಾಥ್ ನೀಡಿದರು. ಅಲ್ಲಿಯೇ ಕುಳಿತಿದ್ದ ಶುಭಾ ಪೂಂಜಾ, ಕನ್ನಡ ಮತ್ತು ತುಳು ಭಾಷೆಯಲ್ಲಿಯೂ ಅದು ನೆಟ್ಟಿಕೆ. ಅದು ಹೇಗೆ ನಿಮ್ಮ ಊರಲ್ಲಿ ಲಟ್ಟಿಗೆ ಎಂದು ಪ್ರಶ್ನೆ ಮಾಡಿದರು.

    Shubha 1

    ನಮ್ಮಲ್ಲಿ ಚಪಾತಿ ಲಟ್ಟಿಸೋದು ಲಟ್ಟಣಿಗೆ ಅಂತ ಕರೀತಿವಿ. ಅದು ನೆಟ್ಟಿಕೆ ಸರಿ ಎಂದು ಅರವಿಂದ್ ಹೇಳಿದ್ರು. ಆಗ ನೆಟ್ಟಗೆ ಅಂದ್ರೆ ನೇರ ಎಂದರ್ಥ. ನೆಟ್ಟಗಿರಿ ಅಂತ ಹೇಳ್ತಾರೆ ಅಲ್ವಾ ಎಂದು ದಿವ್ಯಾ ಮತ್ತು ಪ್ರಿಯಾಂಕ ಹೇಳಿದ್ರು.

    Divya Arvind 3

    ಕೊನೆಗೆ ವಾದ ಮುಂದುವರಿಸಲು ಇಷ್ಟಪಡದ ಅರವಿಂದ್, ದಿವ್ಯಾಗೆ ಲಟ್ಟಿಗೆ ತೆಗೆದು ನೆಟ್ಟಗೆ ಮಾಡುವ ಎಂದು ಮುಗುಳ್ನಕ್ಕರು. ದಿವ್ಯಾರನ್ನ ಮೇಲೆಕೆತ್ತಿ ಲಟ್ಟಿಗೆ ತೆಗೆದರು. ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ ಮತ್ತು ರಾಜೀವ್ ಜೊತೆಯಾಗಿ ಮಟನ್ ಬಿರಿಯಾನಿ ತಯಾರಿಸಿದರು. ಮತ್ತೊಂದು ತಂಡದ ಸದಸ್ಯರಾದ ವೈಷ್ಣವಿ, ಶುಭಾ ಪೂಂಜಾ ಮತ್ತು ದಿವ್ಯಾ ಸುರೇಶ್ ಚಿಕನ್ ಬಿರಿಯಾನಿ ತಯಾರಿಸಿದ್ರು.

  • ರಾತ್ರಿ ಗುಸು ಗುಸು ಮಾತಾಡಿದ ಅರವಿಂದ್, ದಿವ್ಯಾ – ಲೈಟ್ ಆಫ್ ಮಾಡಿ ಅಂದ ಡಿಎಸ್

    ರಾತ್ರಿ ಗುಸು ಗುಸು ಮಾತಾಡಿದ ಅರವಿಂದ್, ದಿವ್ಯಾ – ಲೈಟ್ ಆಫ್ ಮಾಡಿ ಅಂದ ಡಿಎಸ್

    ಬೆಂಗಳೂರು: ಬೆಡ್ ರೂಮ್ ಇಲ್ಲದೆ ಮನೆಮಂದಿಯೆಲ್ಲಾ ಇದೀಗ ಲಿವಿಂಗ್ ಏರಿಯಾದಲ್ಲಿ ಒಟ್ಟಾಗಿ ಮಲಗಿಕೊಳ್ಳುತ್ತಿದ್ದಾರೆ. ಈ ಮಧ್ಯೆ ದಿವ್ಯಾ ಹಾಗೂ ಅರವಿಂದ್ ಜೊತೆಯಾಗಿ ಮಲಗಿದ್ದರು.

    FotoJet 9 24

    ಈ ವೇಳೆ ದಿವ್ಯಾ ಉರುಡುಗ.. ಬಿಗ್‍ಬಾಸ್ ಅರವಿಂದ್ ಕೆ.ಪಿ ಮೈಕ್ ಹಾಕಿಕೊಳ್ಳದೇ ಮಾತನಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಆಗ ಅರವಿಂದ್ ಬೆಡ್ ಶೀಟ್ ಎತ್ತಿ ಮೈಕ್ ಇಲ್ಲಿಯೇ ಇದೆ ಬಿಗ್‍ಬಾಸ್ ಎಲ್ಲಿಯೂ ತೆಗೆದಿಲ್ಲ. ಇಲ್ಲಿ ನೀವು ಅರವಿಂದ್ ನಿಮ್ಮ ಮೈಕ್‍ನನ್ನು ಸರಿಯಾಗಿ ಧರಿಸಿ ಎಂದು ಹೇಳುತ್ತೀರಾ, ಆಗ ಎಲ್ಲರೂ ನನ್ನನ್ನೇ ಎದ್ದು ನೋಡುತ್ತಾರೆ.

    FotoJet 11 15

    ನಂತರ ದಿವ್ಯಾ ಉರುಡುಗ ಅಲ್ಲಿ ಪ್ರಶಾಂತ್‍ರವರು ಒಬ್ಬರೆ ಮಲಗಿದ್ದರು. ಏನಾದರೂ ಬೇಜಾರಾಗಿದ್ಯಾ ಅಂತ ದಿವ್ಯಾ ಕೇಳಿದಾಗ ಅರವಿಂದ್ ನನಗೆ ಗೊತ್ತಿಲ್ಲ, ನಾನು ಕೇಳುವುದಕ್ಕೂ ಕೂಡ ಹೋಗಲಿಲ್ಲ ಎನ್ನುತ್ತಾರೆ.

    FotoJet 13 10

    ಬಳಿಕ ನಾವು ಕೂಡ ಎಲ್ಲರ ಜೊತೆ ಅಲ್ಲಿಯೇ ಮಲಗಬಹುದಿತ್ತಾಲ್ವಾ ಎಂದು ದಿವ್ಯಾ ಕೇಳಿದಾಗ, ನಾವು ಅಲ್ಲಿ ಮಲಗಬಾರದು ಎಂದಲ್ಲ, ಜಾಗ ಸಾಲುವುದಿಲ್ಲ ಅಂತಾ ಅಷ್ಟೇ. ಯಾಕೆ ನಿನಗೆ ಅಲ್ಲೇ ಮಲಗಬೇಕಾಗಿತ್ತಾ ಎಂದು ಕೇಳುತ್ತಾರೆ. ಆಗ ದಿವ್ಯಾ ಥೂ ಇಲ್ಲಪಾ.. ಅಂತಾರೆ.

    FotoJet 12 15

    ಆಗ ದಿವ್ಯಾ ಸುರೇಶ್ ಇವರೇ.. ಲೈಟ್ ಆಫ್ ಮಾಡಿ ಎಂದು ಬಿಗ್‍ಬಾಸ್‍ಗೆ ಹೇಳುತ್ತಾರೆ. ಈ ವೇಳೆ ಮನೆ ಮಂದಿಯೆಲ್ಲಾ ಜೋರಾಗಿ ನಗುತ್ತಾರೆ.

  • ಲೆಕ್ಕಾಚಾರದಲ್ಲಿ ಅರವಿಂದ್ ವೀಕ್ ಅಂದಿದ್ದೇಕೆ ದಿವ್ಯಾ..?

    ಲೆಕ್ಕಾಚಾರದಲ್ಲಿ ಅರವಿಂದ್ ವೀಕ್ ಅಂದಿದ್ದೇಕೆ ದಿವ್ಯಾ..?

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಪ್ರೇಮಪಕ್ಷಿಗಳಾಗಿರುವ ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರತಿದಿನ ಒಂದಲ್ಲ ಒಂದು ವಿಷಯಗಳ ಕುರಿತು ಒಬ್ಬರಿಗೊಬ್ಬರು ಶೇರ್ ಮಾಡಿಕೊಂಡು ಬಹಳ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಕಳೆದ ಸಂಚಿಕೆಯಲ್ಲಿ ದಿವ್ಯ ಉರುಡುಗ, ಅರವಿಂದ್ ನೀವು ಎಲ್ಲಾ ವಿಷಯಗಳಲ್ಲಿ ಶಾರ್ಪ್ ಇದ್ದೀರ ಆದರೆ ಆ ಒಂದು ವಿಷಯದಲ್ಲಿ ಮಾತ್ರ ವೀಕ್ ಎಂದಿದ್ದಾರೆ!

    divya 7

    ಬಿಗ್‍ಮನೆಯಲ್ಲಿ ಮನೆಯ ಸದಸ್ಯರೆಲ್ಲರು ಅಲ್ಲಲ್ಲಿ ಹರಟೆ ಹೊಡೆದುಕೊಂಡಿದ್ದಾಗ ಜೊತೆ ಸೇರಿದ ದಿವ್ಯ ಮತ್ತು ಅರವಿಂದ್ ಈ ಹಿಂದೆ ಬಿಗ್ ಮನೆಯಲ್ಲಿ ಅವರಿಬ್ಬರು ಹೈಟ್ ನೋಡಿಕೊಂಡಿದ್ದ ವಿಚಾರವಾಗಿ ಮಾತಿಗಿಳಿದಿದ್ದಾರೆ. ಈ ವೇಳೆ ದಿವ್ಯ, ಅರವಿಂದ್ ಜೊತೆ ನೀವು ಎಲ್ಲಾ ವಿಷಯಗಳಲ್ಲಿ ಶಾರ್ಪ್ ಇದ್ದೀರಿ. ಎಲ್ಲಾ ಓಕೆ ಆದರೆ ಒಂದು ವಿಷಯದಲ್ಲಿ ಮಾತ್ರ ವೀಕ್ ಇದ್ದೀರಿ ಎಂದರು. ಇದಕ್ಕೆ ಮರು ಪ್ರಶ್ನಿಸಿದ ಅರವಿಂದ್ ಯಾವುದರಲ್ಲಿ ವೀಕ್ ಎಸೆಟ್ಸ್ ನಲ್ಲಿನ ಎಂದರು. ಇದಕ್ಕೆ ಉತ್ತರಿಸಿದ ದಿವ್ಯಾ ಅಲ್ಲ ನೀವು ಲೆಕ್ಕಾಚಾರದಲ್ಲಿ ವೀಕ್ ಎಂದು ತಿಳಿಸಿದರು.

    FotoJet 5 46

    ಮತ್ತೆ ಮಾತು ಮುಂದುವರಿಸಿದ ದಿವ್ಯಾ ನಿಮಗೆ ಲೆಕ್ಕಾಚಾರದಲ್ಲಿರುವ ಬೇಸಿಕ್‍ಗಳೆ ಗೊತ್ತಿಲ್ಲ ಎಂದು ತಮ್ಮ ಕೈಗಳಿಂದ ಬೇಸಿಕ್ ಕಲಿಸಿಕೊಡಲು ಮುಂದಾದರು. ದಿವ್ಯ ಅವರ ಲೆಕ್ಕಾಚಾರದ ಬೇರೆ ಬೇರೆ ಹಂತಗಳನ್ನು ಗಮನಿಸಿದ ಅರವಿಂದ್ ಜೋರಾಗಿ ನಕ್ಕುಬಿಟ್ಟರು. ಇದನ್ನು ನೋಡಿ ದಿವ್ಯಾ ಕೂಡ ನಗಲು ಪ್ರಾರಂಭಿಸಿದರು. ನಂತರ ದಿವ್ಯಾ ನಾನು ಪೂರ್ತಿಯಾಗಿ ತಿಳಿಸುವವರೆಗೆ ಕಾಯಿರಿ ಎಂದು ಅರವಿಂದ್‍ಗೆ ಸೂಚನೆ ನೀಡಿದರು.

    aravindh

    ದಿವ್ಯಾ ಮತ್ತು ಅರವಿಂದ್ ಜೋಡಿಹಕ್ಕಿಗಳಾಗಿ ಬಿಗ್ ಮನೆಯಲ್ಲಿ ಕಾಣಿಸಿಕೊಂಡು ಬಿಗ್‍ಬಾಸ್ ಅಭಿಮಾನಿಗಳನ್ನು ರಂಜಿಸುತಿದ್ದು, ಇದೀಗ ಅರವಿಂದ್‍ಗೆ ಲೆಕ್ಕಾಚಾರ ಕಲಿಸಿಕೊಟ್ಟಿರುವ ದಿವ್ಯ ಮುಂದೆ ಏನೆಲ್ಲಾ ಕಲಿಸಿಕೊಡಲಿದ್ದಾರೆ ಎಂಬುದನ್ನು ನೋಡಲು ಕಾದುಕುಳಿತಿದ್ದಾರೆ.

  • ಏಯ್ ಪೆರ್ಗುಡೆ, ಪೂರಿ ಬೇಡ, ಬೇರೆ ಕೇಳು

    ಏಯ್ ಪೆರ್ಗುಡೆ, ಪೂರಿ ಬೇಡ, ಬೇರೆ ಕೇಳು

    ದಾ ಮನೆ ಪೂರ್ತಿ ವಸ್ತುಗಳಿಂದ ತುಂಬಿ ತುಳುಕಾಡುತ್ತಿದ್ದ ಬಿಗ್‍ಬಾಸ್ ಮನೆ, ನಿನ್ನೆ ಖಾಲಿ ಖಾಲಿಯಾಗಿತ್ತು. ಮನೆಮಂದಿ ನೀರಿಲ್ಲದೆ ಬ್ರಶ್, ಸೋಪು, ಶ್ಯಾಂಪೂ, ಧರಿಸಲು ಬಟ್ಟೆ, ತಿನ್ನಲು ತಿಂಡಿ ಕೂಡ ಇಲ್ಲದೇ ಪರದಾಡಿದ್ದಾರೆ. ಆದರೆ ಇವೆಲ್ಲದರ ಮಧ್ಯೆ ಶುಭಾ ಪೂಂಜಾ ಬಿಗ್‍ಬಾಸ್ ಮುಂದೆ ಪೂರಿ ಸಾಗೂ ಕಳುಹಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.

    FotoJet 7 31

    ಹೌದು, ನಿನ್ನೆ ಮನೆಯಲ್ಲಿದ್ದ ವಸ್ತುಗಳೆಲ್ಲವನ್ನು ಬಿಗ್‍ಬಾಸ್ ವಶಪಡಿಸಿಕೊಂಡಿದ್ದಾರೆ. ಇದರಿಂದ ಈ ವಿಚಾರವಾಗಿ ಮನೆ ಮಂದಿ ಎಲ್ಲ ಆತಂಕಗೊಂಡು ಗಾರ್ಡನ್ ಏರಿಯಾದಲ್ಲಿ ಚರ್ಚೆ ನಡೆಸುತ್ತಿದ್ದರೆ, ಶುಭಾ ಪೂಂಜಾ ಮಾತ್ರ ನನಗೆ ಹೊಟ್ಟೆ ಹಸಿಯುತ್ತಿದೆ ಬಿಗ್‍ಬಾಸ್.. ಪೂರಿ ಸಾಗೂ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಅಲ್ಲದೇ ನನ್ನ ಬಳಿ ಒಂದೇ ನೈಟ್ ಡ್ರೆಸ್ ಇದೆ ಇನ್ನೆರಡು ನೈಟ್ ಡ್ರೆಸ್ ಕಳಹಿಸಿಕೊಡಿ ಎಂದಿದ್ದಾರೆ.

    FotoJet 8 30

    ಬ್ರಶ್ ಆಯ್ತು, ಪೂರಿ ಸಾಗೂ ಆಯ್ತು, ಈಗ ನೈಟ್ ಡ್ರೆಸ್ ಅಂತೆ ಎಂದು ದಿವ್ಯಾ ಉರುಡುಗ ರೇಗಿಸುತ್ತಾರೆ. ಈ ವೇಳೆ ರಾಜೀವ್ ಪೆರ್ಗುಡೆ.. ಪೂರಿ ಸಾಗೂ ಬೇಡ ಬೇರೆ ಏನಾದರೂ ಕೇಳು, ದಾವಣಗೆರೆ ಬೆಣ್ಣೆ ದೋಸೆ ಕೇಳು ಅಂತಾರೆ. ಅದಕ್ಕೆ ಶುಭಾ ಬೆಣ್ಣೆ ದೋಸೆ ಒಕೆ ಒಕೆ ಅಷ್ಟೇ ಎನ್ನುತ್ತಾರೆ. ಹೋಗ್ಲಿ ಪಡ್ಡು ಕೇಳು ಅಂದಾಗ, ಪಡ್ಡು ನನಗೆ ಅಷ್ಟು ಇಷ್ಟವಾಗುವುದಿಲ್ಲ. ಈ ಎಲ್ಲದಕ್ಕಿಂತ ಇಡ್ಲಿ, ವಡೆ ನೇ ಒಕೆ ಎಂದು ಶುಭಾ ಹೇಳುತ್ತಾರೆ.

    FotoJet 5 46

    ಒಟ್ಟಾರೆ ಮನೆಮಂದಿಯೆಲ್ಲಾ ಮನೆಯಲ್ಲಿದ್ದ ವಸ್ತುಗಳೆಲ್ಲ ಕಾಣೆಯಾಗಿರುವುದಕ್ಕೆ ಆತಂಕಗೊಂಡಿದ್ದರೆ ಶುಭಾಗೆ ಮಾತ್ರ ಪೂರಿ ಸಾಗೂ ಚಿಂತೆಯಾಗಿದೆ.

  • ದೊಡ್ಮನೆಯಲ್ಲಿ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡ ಅರವಿಂದ್!

    ದೊಡ್ಮನೆಯಲ್ಲಿ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡ ಅರವಿಂದ್!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ ಐವತ್ತು ದಿನ ಮುಕ್ತಾಯಗೊಂಡಿದೆ. ಸದ್ಯ ನಿನ್ನೆ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ‘ನೆನಪುಗಳ ಮಾತು ಮಧುರ’ ಎಂಬ ಚಟುವಟಿಕೆಯನ್ನು ನೀಡಿದ್ದರು. ಅದರ ಅನುಸಾರ ಮನೆಯ ಸದಸ್ಯರು ಇಷ್ಟು ದಿನ ದೊಡ್ಮನೆಯಲ್ಲಿ ನಡೆದ ಮರೆಯಲಾಗದ ಹಾಗೂ ಮರೆಯಲು ಇಷ್ಟಪಡುವಂತಹ ಒಂದು ಘಟನೆಗಳನ್ನು ಹಂಚಿಕೊಳ್ಳುವಂತೆ ತಿಳಿಸಿದ್ದರು.

    FotoJet 77

    ಅದರಂತೆ ಈ ವಾರ ಕ್ಯಾಪ್ಟನ್ ಆಗಿ ಮಿಂಚುತ್ತಿರುವ ಅರವಿಂದ್, ನಾನು ಹೊರಗಡೆ ಇರುವಂತೆಯೇ ಇಲ್ಲಿಯೂ ಇದ್ದೇನೆ. ಎದುರುತ್ತರ ಮಾತನಾಡುವುದಾಗಲಿ, ಯಾವುದೇ ಘರ್ಷಣೆಯಾಗುತ್ತಿದ್ದರೆ ತುಪ್ಪ ಸುರಿಯುವುದು ಬಹಳ ಕಡಿಮೆ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನನಗೆ ಎಫೆಕ್ಟ್ ಕೂಡ ಆಗುವುದಿಲ್ಲ. ಆದರೆ ಕೆಲವೊಮ್ಮೆ ಮಿತಿ ಮೀರಿ ಪ್ರಶಾಂತ್ ಹಾಗೂ ನಿಧಿಗೆ ಕೆಲವು ಮಾತನ್ನು ಆಡಿದ್ದೇನೆ. ಅದನ್ನು ಮರೆಯಲು ಇಷ್ಟ ಪಡುತ್ತೇನೆ ಎಂದು ಹೇಳುತ್ತಾರೆ.

    FotoJet 3 48

    ನಂತರ ನನಗೆ ಮರೆಯುವುದಕ್ಕೆ ಆಗದೇ ಇರುವುದು ಎಂದರೆ ರಿಂಗ್. ಅಲ್ಲದೇ ರಿಂಗ್ ಸಿಕ್ಕಿ ಅರ್ಧ ಗಂಟೆಗೆ ಕಳೆದು ಹೋಗಿತ್ತು. ಆಗ ಇಡೀ ಮನೆ ಒಟ್ಟಾಗಿ ಸೇರಿಕೊಂಡು ರಿಂಗ್ ಹುಡುಕುವುದಕ್ಕೆ ಸಹಾಯ ಮಾಡಿದ್ದು, ನನಗೆ ಯಾವತ್ತಿಗೂ ಮರೆಯುವುದಕ್ಕೆ ಆಗುವುದಿಲ್ಲ. ದಿವ್ಯಾ ಉರುಡಗಗೆ 4 ರಿಂದ 5 ಗಂಟೆ ಈ ರೀತಿ ರಿಂಗ್ ಕಳೆದು ಹೋಗಿದೆ ಎಂಬುವುದು ಗೊತ್ತೆ ಇರಲಿಲ್ಲ. ನೀವು ಮಾಡಿದ ಹೆಲ್ಪ್ ಅನ್ನು ಎಂದು ಕೂಡ ಹೇಳಲು ಆಗುವುದಿಲ್ಲ. ಏಕೆಂದರೆ ಎಲ್ಲರೂ ನಿಮ್ಮದೇ ವಸ್ತು ಕಳೆದು ಹೋಗಿರುವಂತೆ ಹುಡುಕಿದ್ರಿ. ಈ ಗಿಫ್ಟ್ ಹಾಗೂ ನೀವು ಮಾಡಿರೋ ಸಹಾಯ ನನಗೆ ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ.

    FotoJet 2 50

    ಹಾಗೆಯೇ ಇನ್ನು ಮುಂದಿನ ಐವತ್ತು ದಿನ ಉಳಿದುಕೊಂಡರೆ ಇದೇ ರೀತಿ ಮರೆಯಲಾಗದಂತಹ ಘಟನೆಗಳು ಜಾಸ್ತಿಯಾಗಲಿ, ದಿವ್ಯಾ ಉರುಡುಗ ಅಂತೂ ಮರೆಯಲಾಗದ ಸಾಕಷ್ಟು ನೆನಪುಗಳನ್ನು ಕೊಟ್ಟಿದ್ದಾಳೆ ಎಂದು ಹೇಳುತ್ತಾ ಕಿರುನಗೆ ಬೀರಿದರು.

  • ಅರವಿಂದ್ ಕೈಯಲ್ಲಿ ಮಗು – ಬಿದ್ದು ಬಿದ್ದು ನಕ್ಕ ದಿವ್ಯಾ

    ಅರವಿಂದ್ ಕೈಯಲ್ಲಿ ಮಗು – ಬಿದ್ದು ಬಿದ್ದು ನಕ್ಕ ದಿವ್ಯಾ

    ವಾರದ ಎಲಿಮಿನೇಷನ್ ಪ್ರಕ್ರಿಯೆಯ ವೇಳೆ ಅರವಿಂದ್ ಕೈಯಲ್ಲಿ ಮಗು ನಗುವುದನ್ನು ನೋಡಿ ದಿವ್ಯಾ ಉರುಡುಗ ಬಿದ್ದು ಬಿದ್ದು ನಕ್ಕ ಪ್ರಸಂಗ ನಡೆಯಿತು.

    ಮೊದಲ ರೌಂಡ್‌ನ ಎಲಿಮಿನೇಷನ್‌ನಲ್ಲಿ ದಿವ್ಯಾ ಉರುಡುಗ ಸೇಫ್ ಆದ ಬಳಿಕ ಎರಡನೇ ರೌಂಡ್ ನಡೆಯಿತು. ಅಳುತ್ತಿರುವ ಮಗುವನ್ನು ಸಮಾಧಾನ ಮಾಡಿ ಯಾರ ಕೈಯಲ್ಲಿ ನಗುತ್ತದೋ ಆ ಸದಸ್ಯ ಸೇಫ್ ಎಂದು ಬಿಗ್ ಬಾಸ್ ಘೋಷಿಸಿದರು.

    divya uruduga

    ಚಕ್ರವರ್ತಿ ಚಂದ್ರಚೂಡ್, ಶಮಂತ್ ಆದ ಬಳಿಕ ಮಗು ಅರವಿಂದ್ ಕೈಯಲ್ಲಿ ಬಂತು. ಅರವಿಂದ್ ಹೆಗಲ ಮೇಲೆ ಹಾಕಿ ಸಮಾಧಾನ ಮಾಡುವುದನ್ನು ನೋಡಿದ ನೋಡಿ ಶುಭ ಪೂಂಜಾ, “ಇಷ್ಟು ಪಕ್ಕ ರೆಡಿ ಮಾಡಿ ಬಿಟ್ರಾ ನೀವು?” ಎಂದು ಪ್ರಶ್ನಿಸಿ ದಿವ್ಯಾ ಉರುಡುಗ ಅವರ ಕಾಲೆಳೆದರು. ಅರವಿಂದ್ ಬಳಿಕ ರಾಜೀವ್, ವಿಶ್ವನಾಥ್, ಮಂಜ, ದಿವ್ಯಾ ಸುರೇಶ್ ಅವರ ಬಳಿ ಹೋದರೂ ಮಗು ಮಾತ್ರ ನಗಲಿಲ್ಲ.

    bigg boss

    ಎರಡನೇ ರೌಂಡ್ ಆರಂಭದಲ್ಲಿ ಚಕ್ರವರ್ತಿ ಅವರು ಮಗುವನ್ನು ಕೆಳಗಡೆ ಮಲಗಿಸಿ ಹಾಡು ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದರೂ ಮಗು ಅಳುತ್ತಲೇ ಇತ್ತು. ನಂತರ ಶಮಂತ್ ಪ್ರಯತ್ನ ಪಟ್ಟರೂ ಮಗು ಅಳುವುದನ್ನು ನಿಲ್ಲಿಸಲೇ ಇಲ್ಲ. ಬಳಿಕ ಮಗು ಅರವಿಂದ್ ಕೈಗೆ ಬಂತು. ಆರಂಭದಲ್ಲಿ ಅಳುತ್ತಿದ್ದ ಮಗು ಕೆಲ ಸೆಕೆಂಡ್‌ನಲ್ಲಿ ನಗಲು ಆರಂಭಿಸಿತು. ಅರವಿಂದ್ ಕೈಯಲ್ಲಿ ಮಗು ನಕ್ಕಿದ್ದನ್ನು ನೋಡಿ ದಿವ್ಯಾ ಉರುಡುಗ ಎರಡು ಕೈಯನ್ನು ಕೆನ್ನೆಗೆ ಹಿಡಿದು ಬಿದ್ದು ಬಿದ್ದು ನಗಲು ಆರಂಭಿಸಿದರು. ಈ ವೇಳೆ ಬಿಗ್ ಮನೆಯ ಸದಸ್ಯರು ಸಹ ನಕ್ಕು ಅರವಿಂದ್ ಅವರನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

    arvaind kp

    ಈ ಸಂದರ್ಭಲ್ಲಿ ಬಿಗ್ ಬಾಸ್,”ಅರವಿಂದ್ ನೀವು ಸೇಫ್ ಆಗಿದ್ದೀರಿ ಅಭಿನಂದನೆಗಳು” ಎಂದು ಹೇಳಿದಾಗ ಅರವಿಂದ್ ಧನ್ಯವಾದ ಹೇಳಿದರು. ಬಳಿಕ ಅರವಿಂದ್ ಶುಭಾ ಪೂಂಜಾ ಕೈಯಲ್ಲಿರುವ ಗೊಂಬೆಯನ್ನು ಪಡೆಯಲು ಮುಂದಾದಾಗ ಕೂಡಲೇ ಬಂದ ದಿವ್ಯಾ ಉರುಡುಗ, “ಎಲ್ಲರಿಗೂ ಥ್ಯಾಂಕ್ಯೂ ಹೇಳಿಲ್ಲ” ಎಂದು ಹೇಳಿ ಅರವಿಂದ್ ಅವರನ್ನು ಎಚ್ಚರಿಸಿದರು. ಕೂಡಲೇ ಅರವಿಂದ್ ಕೈ ಮುಗಿದು,”ವೋಟ್ ಮಾಡಿದ ಎಲ್ಲ ಕನ್ನಡಿಗರಿಗೆ ಧನ್ಯವಾದಗಳು. ಮುಂದೆ ನಾನು ಪ್ರತಿ ವಾರ ನಾಮಿನೆಟ್ ಆಗಬಹುದು. ಹೀಗಾಗಿ ನನಗೆ ವೋಟ್ ಮಾಡಿ” ಎಂದು ವಿನಂತಿ ಮಾಡಿಕೊಂಡರು.

    arvaind shubhapoonja

    ಸದಸ್ಯರ ಕೈಗೆ ಮಗುವಿನ ಗೊಂಬೆಯನ್ನು ನೀಡಿ ಅಳುವ ಮತ್ತು ನಗುವ ಮ್ಯೂಸಿಕ್ ಪ್ಲೇ ಮಾಡಿದ ಈ ರೌಂಡ್ ಬಿಗ್ ಮನೆಯ ಸದಸ್ಯರಿಗೆ ಭರಪೂರ್ಣ ಮನರಂಜನೆಯನ್ನು ನೀಡಿತು. ಇದನ್ನೂ ಓದಿ: ನಿನ್ನ ಜೊತೆ ನಾನಿದ್ದೇನೆ- ದಿವ್ಯಾ ಬೆನ್ನಿಗೆ ನಿಂತ ಅರವಿಂದ್