Wednesday, 22nd May 2019

Recent News

1 day ago

ಗಮನಿಸಿ: ಬಸವಣ್ಣ ಐಕ್ಯ ಮಂಟಪ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ

ಬಾಗಲಕೋಟೆ: ಕೂಡಲಸಂಗಮದಲ್ಲಿರುವ ಬಸವಣ್ಣನ ಐಕ್ಯಮಂಟಪ ಶಿಥಿಲಾವಸ್ಥೆಗೆ ಬಂದಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಐಕ್ಯಮಂಟಪದ ಭಕ್ತಾದಿಗಳ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಬಸವಣ್ಣನ ಐಕ್ಯಮಂಟಪದ ಬಾವಿಯಲ್ಲಿ ಬಿರುಕು ಬಿಟ್ಟಿದ್ದು, ಯಾವುದೇ ಅಪಾಯ ಉಂಟಾಗದಿರಲೆಂದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ದುರಸ್ತಿ ಆಗುವರೆಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿ ವಿಶೇಷ ಅಧಿಕಾರಿ ಪಿ.ಎ. ಮೇಘಣ್ಣವರ ತಾತ್ಕಾಲಿಕ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ. ಕೃಷ್ಣಾ ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಳದಲ್ಲಿ ಈ […]

4 days ago

ಧರ್ಮಸ್ಥಳದ ನಂತರ ರಾಯರ ಮಂತ್ರಾಲಯಕ್ಕೂ ತಟ್ಟಿದ ಬರದ ಬಿಸಿ!

ರಾಯಚೂರು: ಧರ್ಮಸ್ಥಳದ ನಂತರ ಈ ಬಾರಿಯ ಬರಗಾಲದ ಎಫೆಕ್ಟ್ ಗುರುರಾಯರ ಸನ್ನಿಧಿ ಮಂತ್ರಾಲಯಕ್ಕೂ ತಟ್ಟಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿದೆ. ಈ ಬಾರಿಯ ಬರಗಾಲ ಎಲ್ಲ ಕಡೆ ನೀರಿನ ಸಮಸ್ಯೆಯನ್ನು ಉಂಟು ಮಾಡಿದೆ. ಈ ಪರಿಣಾಮ ಈಗ ಪುಣ್ಯಕ್ಷೇತ್ರಗಳಿಗೂ ತಟ್ಟಿದೆ. ತುಂಗಭದ್ರಾ ನದಿ ದಡದಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಬರುವ...

ಮೀನು ಬೇಟೆಯಾಡಿ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ ಭಕ್ತರು!

6 days ago

– ಮಂಗ್ಳೂರಿನ ಮೂಲ್ಕಿಯಲ್ಲಿ ಮೀನು ಜಾತ್ರೆ ಮಂಗಳೂರು: ಈ ದೈವಸ್ಥಾನದ ಪಕ್ಕದಲ್ಲಿರುವ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಮೀನು ಹಿಡಿಯುತ್ತಾರೆ. ಹಾಗಂತ ಅವರೆಲ್ಲರು ಮೀನುಗಾರರು ಅಲ್ಲ. ಬದಲಾಗಿ ಭಕ್ತರು. ತಾವು ಹಿಡಿದ ಮೀನನ್ನು ದೇವರ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ. ಮಾರಿ ಜಾತ್ರೆ,...

39 ವರ್ಷಗಳ ಬಳಿಕ ಗ್ರಾಮದಲ್ಲಿ ದ್ಯಾಮಮ್ಮ ದೇವಿ ಜಾತ್ರೆ

6 days ago

ಕೊಪ್ಪಳ: ಜಿಲ್ಲೆಯ ಈ ಗ್ರಾಮದಲ್ಲಿ ಕಳೆದ 39 ವರ್ಷಗಳಿಂದ ಜಾತ್ರೆ ಆಗಿರಲಿಲ್ಲ. ದೇವಿ ಪ್ರಸಾದ (ವರ) ಕೊಟ್ಟಿರಲಿಲ್ಲ ಎನ್ನುವ ಕಾರಣಕ್ಕೆ 39 ವರ್ಷಗಳಿಂದ ಜಾತ್ರೆ ಎನ್ನುವುದೇ ಮರೆತು ಹೋಗಿತ್ತು. ಆದರೆ ದೇವಿ ಈ ಬಾರಿ ಪ್ರಸಾದ ಕೊಟ್ಟ ಕಾರಣ ಈ ಬಾರಿ...

ಪ್ರತಿನಿತ್ಯ ದೇವಾಲಯಕ್ಕೆ ಬಂದು ಕರಡಿಗಳಿಂದ ಪ್ರಸಾದ ಸ್ವೀಕಾರ!

1 week ago

ದಾವಣಗೆರೆ: ಮನುಷ್ಯರನ್ನು ಕಂಡ ತಕ್ಷಣ ದಾಳಿ ಮಾಡುವ ಕರಡಿಗಳು ಜಿಲ್ಲೆಯ ಜಗಳೂರು ತಾಲೂಕಿನ ಕೊಣಚಗಲ್ಲು ರಂಗನಾಥ ದೇವಾಲಯಕ್ಕೆ ಆಗಮಿಸಿ, ಜನರ ಜೊತೆ ಅನ್ಯೋನ್ಯತೆಯಿಂದ ಇರುವುದು ವಿಶೇಷವಾಗಿದೆ. ಹೌದು. ಪ್ರತಿನಿತ್ಯ ದೇವಾಲಯಕ್ಕೆ ಬರುವ ಕರಡಿಗಳು, ಭಕ್ತರು ನೀಡಿದ ಪ್ರಸಾದ ಸೇವಿಸಿ ಹೋಗುತ್ತವೆ. ಕೊಣಚಗಲ್ಲು...

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನರಸಿಂಹ ಝರಣಾ ದರ್ಶನಕ್ಕೆ ನಿಷೇಧ!

2 weeks ago

ಬೀದರ್: ದಕ್ಷಿಣ ಭಾರತದ ಸುಪ್ರಸಿದ್ಧ ಹಾಗೂ ಪೌರಾಣಿಕ ನರಸಿಂಹ ಝರಣಾ ಧಾರ್ಮಿಕ ಕ್ಷೇತ್ರಕ್ಕೂ ಬರದ ಬಿಸಿ ತಟ್ಟಿದ್ದು, 400 ವರ್ಷಗಳ ಇತಿಹಾಸವಿರುವ ದೇವರ ದರ್ಶನಕ್ಕೆ ಜಲಕ್ಷಾಮ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೇವರ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ನಿಷೇಧ...

ದೇವರ ಪ್ರಸಾದ ಸೇವಿಸಿ 18ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

3 weeks ago

ತುಮಕೂರು: ದೇವಾಲಯದ ಹರಿಸೇವೆ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ನೀಡಿದ್ದ ದೇವರ ಪ್ರಸಾದ ಸೇವಿಸಿ 14ಕ್ಕೂ ಹೆಚ್ಚು ಭಕ್ತರು ಆಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪದ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶನಿವಾರ ಹರಿಸೇವೆ ಕಾರ್ಯಕ್ರಮವಿತ್ತು. ಕಾರ್ಯಕ್ರಮದ...

ಮನೆಯ ಸಜ್ಜ ಮುರಿದು ಬಿದ್ದು 30 ಜನರಿಗೆ ಗಾಯ

4 weeks ago

ತುಮಕೂರು: ಚೌಡೇಶ್ವರಿ ದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ವೀಕ್ಷಿಸಲು ಭಕ್ತರು ನಿಂತಿದ್ದ ಬಿಲ್ಡಿಂಗ್ ಸಜ್ಜ ಕಳಚಿ ಬಿದ್ದು 30 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗಿನ ಜಾವ ಸಂಭವಿಸಿದೆ. ದೇಶದ ಅತೀ ದೊಡ್ಡ ಅಗ್ನಿಕೊಂಡ ಎಂದು ಪ್ರಸಿದ್ಧಿಯಾಗಿರುವ ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕೊಂಡ...