5 months ago

ದೋಸ್ತಿ ಸರ್ಕಾರ ಬೀಳಿಸಿದ್ದು ಪ್ರಜಾಪ್ರಭುತ್ವ ಇತಿಹಾಸದಲ್ಲಿ ಕರಾಳ ಅಧ್ಯಾಯ: ಮಾಯಾವತಿ

ಲಕ್ನೋ: ಕರ್ನಾಟಕದ ರಾಜಕೀಯ ಪ್ರಜಾಪ್ರಭುತ್ವ ಇತಿಹಾಸದಲ್ಲಿಯೇ ಅತ್ಯಂತ ಕರಾಳ ಅಧ್ಯಾಯ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯು ಸಂವಿಧಾನಕ್ಕೆ ವಿರುದ್ಧವಾಗಿ ಅಧಿಕಾರ ಮತ್ತು ಹಣ ಬಲದಿಂದ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಬೀಳಿಸಿದೆ. ಇದು ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿ ದಾಖಲಾಗಲಿದೆ. ಇದು ಖಂಡನೀಯ ಎಂದು ಹೇಳಿದ್ದಾರೆ. ಮಾಯಾವತಿ ಅವರು ನಿನ್ನೆಯಷ್ಟೇ ತಮ್ಮ ಮಾತು ಮೀರಿ ನಡೆದುಕೊಂಡ ಕರ್ನಾಟಕ ಬಿಎಸ್‍ಪಿ ಏಕೈಕ ಶಾಸಕ ಎನ್.ಮಹೇಶ್ ಅವರನ್ನು […]

5 months ago

ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವದ ಸೌಂದರ್ಯ ಎಂದ ಖಾದರ್

ತುಮಕೂರು: ಮೈತ್ರಿ ಸರ್ಕಾರದ 12 ಜನ ಶಾಸಕರುಗಳು ರಾಜೀನಾಮೆ ನೀಡುತ್ತಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ “ಇವೆಲ್ಲಾ ಪ್ರಜಾಪ್ರಭುತ್ವದ ಸೌಂದರ್ಯ” ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ರೀತಿಯ ಕೆಲವು ವಿಚಾರಗಳು ಬರುತ್ತವೆ. ಇವೆಲ್ಲಾ ಬ್ಯೂಟಿ ಆಫ್ ಡೆಮಾಕ್ರಸಿ ಎಂದು ಉತ್ತರಿಸಿದರು. ಶಾಸಕರು ರಾಜೀನಾಮೆ ನೀಡುವುದರಿಂದ ಸರ್ಕಾರಕ್ಕೆ...

ವೋಟ್ ಹಾಕಿದ ಕೂಡಲೇ ಶಾಯಿಯನ್ನು ಅಳಿಸಬಹುದು!

8 months ago

ನವದೆಹಲಿ: ಪ್ರಜಾಪ್ರಭುತ್ವದ ಹಬ್ಬ ಇಂದಿನಿಂದ ಆರಂಭಗೊಂಡಿದೆ. ಆದರೆ ಈ ಹಬ್ಬದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಕೈ ಬೆರಳನ್ನು ಎತ್ತಿ ತೋರಿಸಿ ಹೆಮ್ಮೆಯಿಂದ ಹೇಳಿಕೊಳ್ಳಲು ಕಾರಣವಾಗುವ ಶಾಯಿಯನ್ನು ಅಳಿಸಬಹುದು ಎನ್ನುವ ಸ್ಫೋಟಕ ಸುದ್ದಿ ಈಗ ಪ್ರಕಟವಾಗಿದೆ. ಹೌದು. ಚುನಾವಣಾ ಶಾಯಿ ಸುಲಭವಾಗಿ ಅಳಿಸಲು...

‘ದೇಶ ಮೊದಲು, ಪಕ್ಷ ನಂತರ’ – ಮೌನ ಮುರಿದ ಎಲ್‍ಕೆ ಅಡ್ವಾಣಿ

8 months ago

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯದ ಅಡ್ವಾಣಿಯವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ಬ್ಲಾಗಿನಲ್ಲಿ ‘ದೇಶ ಮೊದಲು, ಪಕ್ಷ ನಂತರ, ನಾನು ಎಂಬುದು ಕೊನೆ’ ಎಂದು ಬರೆದುಕೊಂಡಿದ್ದಾರೆ. 91 ವರ್ಷದ ಎಲ್‍ಕೆ ಅಡ್ವಾಣಿ ಅವರಿಗೆ ಟಿಕೆಟ್ ನೀಡದೇ ಬಿಜೆಪಿ...

ಇವತ್ತಿನ ರಾಜಕೀಯ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ: ದೇವೇಗೌಡ

1 year ago

ಬೆಂಗಳೂರು: ಇವತ್ತಿನ ರಾಜಕೀಯ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ಸಂಸತ್ತು ಪುಸ್ತಕ ಬಿಡುಗಡೆ ಕಾಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ರಾಜಕೀಯ ಹುಚ್ಚು ಇಲ್ಲ. 15 ಚುನಾವಣೆ ಎದುರಿಸಿದ್ದೇನೆ. ರಾಜಕೀಯದ ಹುಚ್ಚು ಸಾಕಾಗಿದೆ....

ಸುಪ್ರೀಂ ಜಡ್ಜ್ ಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ನವೆಂಬರ್ ನಲ್ಲೇ ಬಹಿರಂಗವಾಗಿತ್ತು

2 years ago

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ದೇಶದಲ್ಲೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ನೇರವಾಗಿ ಮುಖ್ಯ ನ್ಯಾಯಾಧೀಶರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ಈ ಸುದ್ದಿಗೋಷ್ಠಿಗೂ ಮುನ್ನವೇ ನ್ಯಾಯಮೂರ್ತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು  ಬಹಿರಂಗವಾಗಿತ್ತು. ಸುಪ್ರೀಂ ಕೋರ್ಟ್ ನ ಮುಖ್ಯ...

ಗಾಂಧಿ ಅನ್ನೋ ಹೆಸರೇ ನನಗೆ ಹೊರೆ- ಸಮಾಜವಾದಿಯಂತೆ ಆತ್ಮ ವಿಮರ್ಷೆ ಮಾಡಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ

2 years ago

ಉಡುಪಿ: ಗಾಂಧಿ ಎನ್ನುವ ಹೆಸರೇ ನನಗೆ ಹೊರೆ. ನನ್ನ ಹೆಸರಿನಲ್ಲಿ ಗಾಂಧಿ ಇಲ್ಲದಿದ್ದರೆ ನಾನು ಸಂಸದ ಆಗ್ತಾನೇ ಇರಲಿಲ್ಲ ಎಂದು ಉತ್ತರಪ್ರದೇಶ ಸಂಸದ ವರುಣ್ ಗಾಂಧಿ ಆತ್ಮ ವಿಮರ್ಷೆಯ ಮಾತುಗಳನ್ನಾಡಿದ್ದಾರೆ. ಉಡುಪಿಯ ಮಣಿಪಾಲದಲ್ಲಿ ಉತ್ತರಪ್ರದೇಶದ ಸುಲ್ತಾನ್ ಪುರ್ ಸಂಸದ ವರುಣ್ ಗಾಂಧಿ...