Sunday, 19th August 2018

Recent News

4 days ago

ದಾವಣಗೆರೆಯಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರ ಸಂಚಾರ ಅಸ್ತವ್ಯಸ್ತ!

ದಾವಣಗೆರೆ: ತುಂಗ ಹಾಗೂ ಭದ್ರಾ ನದಿಯ ನೀರು ಹೊರ ಬಿಟ್ಟ ಪರಿಣಾಮ ದಾವಣಗೆರೆಯ ನದಿಯ ತಟದಲ್ಲಿರುವ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಇದರಿಂದಾಗಿ ಚಿಕ್ಕ ಬಿದರಿಯಿಂದ ಸಾರಥಿ ಗ್ರಾಮಕ್ಕೆ ಬರುವ ಶಾಲಾ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ. ಚಿಕ್ಕಬಿದರಿ ಹಾಗೂ ಸಾರಥಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು, ಸೇತುವೆ ಮುಳುಗಡೆಯಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಅದರಲ್ಲೂ ಚಿಕ್ಕ ಬಿದರಿಯಿಂದ ಸಾರಥಿ ಗ್ರಾಮಕ್ಕೆ ಬರುವ ನೂರಾರು ಶಾಲಾ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ. […]

4 days ago

ಬಂದ್ಯಾ ಪುಟ್ಟಾ, ಹೋದ್ಯಾ ಪುಟ್ಟಾ- ಶ್ರೀನಿವಾಸ್ ವಿರುದ್ಧ ದಾವಣಗೆರೆ ಜನರ ಆಕ್ರೋಶ

ದಾವಣಗೆರೆ: ಜಿಲ್ಲೆಗೆ ಬಂದು ಧ್ವಜಾರೋಹಣ ನೆರವೇರಿಸಿ, ತುರ್ತಾಗಿ ಮರಳಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ನಡೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರೇ ಹೀಗೆ ಮಾಡಿದರೆ ಹೇಗೆ? ಬಂದ್ಯಾ ಪುಟ್ಟಾ, ಹೋದ್ಯಾ ಪುಟ್ಟಾ ಎನ್ನುವಂತೆ ಸಚಿವರು ನಡೆದುಕೊಂಡಿದ್ದಾರೆ. ಜಿಲ್ಲೆಯ ಜವಾಬ್ದಾರಿ ಮರೆತು ತಮ್ಮ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭೆ ಕ್ಷೇತ್ರಕ್ಕೆ ಹೋಗಿದ್ದಾರೆ ಎಂದು...

ಸರಿಯಾದ ಸಮಯಕ್ಕೆ ವೈದ್ಯರಿಲ್ಲದೆ ಅಪಘಾತಕ್ಕೀಡಾಗಿದ್ದ ಮಗು ಪರದಾಟ!

2 weeks ago

ದಾವಣಗೆರೆ: ಸರ್ಕಾರಿ ಆಸ್ಪತ್ರೆಗಳು ಎಂದರೆ ಸಾಕು ಇತ್ತೀಚಿನ ದಿನಗಳಲ್ಲಿ ಅವ್ಯವಸ್ಥೆಯ ಆಗರವಾಗಿವೆ. ಅದರಂತೆ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೈದ್ಯರಿಲ್ಲದೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಸೋಮವಾರ ತಡರಾತ್ರಿ ಅಪಘಾತಕ್ಕೀಡಾಗಿದ್ದ ಮಗುವೊಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲು ಮಕ್ಕಳ ತಜ್ಞ ವೈದ್ಯರಿಲ್ಲದೇ ಪರದಾಡುವಂತಹ...

ವೈದ್ಯರ ನಿರ್ಲಕ್ಷ್ಯದಿಂದಾಗಿ ಗೃಹಿಣಿ ಸಾವು

2 weeks ago

ದಾವಣಗೆರೆ: ವೈದ್ಯರ ನಿರ್ಲಕ್ಷದಿಂದಾಗಿ ಗೃಹಿಣಿ ಸಾವನ್ನಪ್ಪಿರುವ ಘಟನೆ ನಗರದ ಸುಚೇತನಾ ಆಸ್ಪತ್ರೆಯಲ್ಲಿ ನಡೆದಿದೆ. ಚಿತ್ತಾನಹಳ್ಳಿ ಗ್ರಾಮದ ಶಾರದಮ್ಮ (35) ಮೃತ ದುರ್ದೈವಿಯಾಗಿದ್ದಾರೆ. ಶಾರದಮ್ಮರವರು 15 ದಿನಗಳ ಹಿಂದೆ ನಗರದ ಸುಚೇತನಾ ಆಸ್ಪತ್ರೆಯಲ್ಲಿ ಗರ್ಭಕೋಶದ ಆಪರೇಷನ್ ಮಾಡಿಸಿಕೊಂಡಿದ್ದರು. ಇಂದು ಆಪರೇಷನ್ ಮಾಡಿದ ಹೊಲಿಗೆ...

ವರುಣರಾಯನಿಗಾಗಿ ಕತ್ತೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು!

2 weeks ago

ದಾವಣಗೆರೆ: ರಾಜ್ಯದ ವಿವಿದೆಡೆ ಮಳೆ ಸುರಿಯುತ್ತಿದ್ದು. ಕೆರೆ ಕಟ್ಟೆಗಳು ತುಂಬಿದ್ದು ಡ್ಯಾಂಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಆದರೆ ದಾವಣಗೆರೆಯ ಸುತ್ತಮುತ್ತಲೂ ಮಳೆಯ ಛಾಯೆ ಇಲ್ಲ. ಹಾಗಾಗಿ ಗ್ರಾಮಸ್ಥರು ಮೂಢನಂಬಿಕೆಯ ಮೊರೆ ಹೋಗಿ ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರದೇಶದಲ್ಲಿ...

ಯುವತಿ ಕುಟುಂಬಸ್ಥರಿಂದ ವಾರ್ನ್- ಮನನೊಂದು ಪ್ರೇಮಿ ಆತ್ಮಹತ್ಯೆ!

3 weeks ago

ದಾವಣಗೆರೆ: ಮನನೊಂದು ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿ ಕ್ಯಾಂಪ್ ನಲ್ಲಿ ನಡೆದಿದೆ. ಗಣೇಶ್(22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ಮೃತ ಗಣೇಶ್ ಶಿವಮೊಗ್ಗ ತಾಲ್ಲೂಕಿನ ನಾಗಸಮುದ್ರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಮಂಗಳವಾರ ಯುವತಿ ಮನೆಯವರು...

ಮಗನನ್ನು ಸರಪಳಿಯಿಂದ ಕಟ್ಟಿಹಾಕಿದ ಪೋಷಕರು!

3 weeks ago

ದಾವಣಗೆರೆ: ಗಾಂಧಿನಗರದ ಚೌಡೇಶ್ವರಿ ನಗರದಲ್ಲಿ ಪೋಷಕರು ತಮ್ಮ ಮಾನಸಿಕ ಅಸ್ವಸ್ಥ ಮಗನನ್ನು ಪ್ರಾಣಿಯಂತೆ ಕಟ್ಟಿ ಹಾಕಿದ ವಿಚಾರ ಬೆಳಕಿಗೆ ಬಂದಿದೆ. ಪೋಷಕರಾದ ಉಚ್ಚಂಗಪ್ಪ, ರೇಣುಕಮ್ಮ ತಮ್ಮ ಮಗನಾದ ರಘು(18)ವನ್ನು ಸರಪಳಿಯಿಂದ ಕಟ್ಟಿಹಾಕಿದ್ದಾರೆ. ರಘು ಮಾನಸಿಕ ಅಸ್ವಸ್ಥನಾಗಿದ್ದು, ಆತ ಸಾರ್ವಜನಿಕರಿಗೆ ಕಲ್ಲಿನಿಂದ ಹೊಡೆಯುತ್ತಿದ್ದ....

ಉತ್ತರ ಕರ್ನಾಟಕ ಅಭಿವೃದ್ಧಿ: ಸಿಎಂ ಎಚ್‍ಡಿಕೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

3 weeks ago

ದಾವಣಗೆರೆ: ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದಿದ್ದರೆ ಎಲ್ಲಾ ಮಠಾಧೀಶರು ಪ್ರತ್ಯೇಕ ರಾಜ್ಯದ ಪರ ನಿಲ್ಲಬೇಕಾಗುತ್ತದೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ. ನಗರದ ತೊಗಟಿವೀರಪ್ಪ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು, ಸಿ.ಎಂ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ...