Monday, 20th May 2019

Recent News

10 months ago

ಭೂಕುಸಿತದಿಂದಾಗಿ ನದಿಯಲ್ಲಿ ಕೊಚ್ಚಿ ಹೋದ ಅಡಿಕೆ ಬೆಳೆ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಪಶ್ಚಿಮ ಘಟ್ಟಗಳ ಸಾಲಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಿಲ್ಲೆಯ ಕೊಪ್ಪ, ಕಳಸ, ಹೊರನಾಡು ಹಾಗೂ ಕುದುರೆಮುಖದ ಗುಡ್ಡಗಾಡು ಪ್ರದೇಶಗಳಿಂದ ನೀರು ಹರಿದು ಬರುತ್ತಿವೆ. ಮಳೆ ನೀರಿನಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮೂಡಿಗೆರೆ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನಾಲ್ಕು ವರ್ಷಗಳ ಬಳಿಕ ಹೇಮಾವತಿ ಕಳೆದೊಂದು ತಿಂಗಳಿಂದಲೂ ಮೈದುಂಬಿ ಹರಿಯುತ್ತಿದ್ದಾಳೆ. […]

10 months ago

ವರದಾ ನದಿಯ ಅಬ್ಬರ – 500 ಎಕರೆ ಭತ್ತದ ಗದ್ದೆ, ಅಡಿಕೆ ತೋಟಗಳು ಜಲಾವೃತ

ಕಾರವಾರ: ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಹೋಬಳಿಯಲ್ಲಿ ವರದಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಮಳೆಯಿಂದಾಗಿ ತಗ್ಗಿನ ಪ್ರದೇಶಗಳೆಲ್ಲ ಜಲಾವೃತವಾಗಿದ್ದು, ಬನವಾಸಿ-ಅಜ್ಜರಣಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ವರದಾ ನದಿ ತನ್ನ ತಟದ 500 ಎಕರೆಗಳಷ್ಟು ಕೃಷಿ ಕ್ಷೇತ್ರವನ್ನು ಹಾನಿ ಮಾಡಿದೆ. ಇಲ್ಲಿನ ಜೀವನದಿ ವರದಾ ಅಬ್ಬರಿಸುತ್ತಿದ್ದು, ಭತ್ತದ ಗದ್ದೆ...

ಜಮೀನಿಗೆ ನುಗ್ಗಿದ ನೀರಿನಿಂದ ಭತ್ತದ ಬೆಳೆ ನಾಶ- ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಯತ್ನಿಸಿದ ರೈತ – ವಿಡಿಯೋ ನೋಡಿ

11 months ago

ಮೈಸೂರು: ಕಷ್ಟಪಟ್ಟು 4 ಎಕರೆ ಜಮೀನಿನಲ್ಲಿ ಬೆಳೆದ ಭತ್ತ ನೀರಿನಲ್ಲಿ ಮುಳುಗಿ ನಾಶವಾಗಿದ್ದನ್ನು ಕಂಡ ರೈತರೊಬ್ಬರು ಅದೇ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವಯ್ಯ ಬೆಳೆ ನಾಶವಾಗಿದನ್ನು ಕಂಡು ಆತ್ಮಹತ್ಯೆಗೆ ಯತ್ನಿಸಿದ...

ಜನರ ಸೆಲ್ಫಿ ಕ್ರೇಜ್ – ಬೆಳೆಯ ನಷ್ಟ ಭರಿಸಲು ರೈತರಿಂದ ಮಾಸ್ಟರ್ ಪ್ಲಾನ್

12 months ago

ಚಾಮರಾಜನಗರ: ಜನರ ಸೆಲ್ಫಿ ಕ್ರೇಜ್‍ನಿಂದ ಹಾನಿಯಾಗುತ್ತಿದ್ದ ಬೆಳೆಯ ನಷ್ಟವನ್ನು ಭರಿಸಲು ರೈತರು ಮಾಸ್ಟರ್ ಪ್ಲಾನೊಂದನ್ನು ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆ ಜನರ ಸೆಲ್ಫಿ ಕ್ರೇಜ್ ಗೆ ತುತ್ತಾಗುತ್ತಿತ್ತು. ಇದೀಗ ಇಲ್ಲಿನ ರೈತರು ಸೆಲ್ಫಿ ತೆಗೆದುಕೊಳ್ಳುವವರ...

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ – ಬರೋಬ್ಬರಿ 47 ಕೋಟಿ ರೂ. ವಂಚನೆ!

12 months ago

ಚಾಮರಾಜನಗರ: ಒಂದು ಕಡೆ ರಾಜ್ಯದಲ್ಲಿ ರೈತರ ಸಾಲ ಮನ್ನಾ ಕುರಿತು ವ್ಯಾಪಕ ಚರ್ಚೆಗಳು ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಳೆದ ಒಂದೂವರೆ ವರ್ಷದಿಂದ ರೈತರಿಗೆ ಬೆಳೆ ನಷ್ಟದಲ್ಲಿ ತಲುಪಬೇಕಾದ 47 ಕೋಟಿ ರೂಪಾಯಿಯನ್ನು ನೀಡದೇ ಜಿಲ್ಲೆಯ ರೈತರಿಗೆ ವಂಚನೆ ಮಾಡಲಾಗಿದೆ...

ಮಳೆಯಿಂದಾಗಿ ನೆಲ ಕಚ್ಚಿದ ಮಾವು, ಟೊಮೆಟೋ, ಬಾಳೆ- ಸುಮಾರು 3.82 ಕೋಟಿ ಬೆಳೆ ನಷ್ಟ

12 months ago

ಬಳ್ಳಾರಿ/ಕೋಲಾರ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿತ್ತು. ಪರಿಣಾಮ ಸಾಕಷ್ಟು ಅನಾಹುತ ಸೃಷ್ಠಿಯಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ನೂರಾರು ಟನ್ ಮಾವು ಹಾಗೂ ಟೊಮೆಟೋ ಬೆಳೆ ನೆಲ ಕಚ್ಚಿದೆ. ಸುಮಾರು 440...

ಅರಣ್ಯ ಪ್ರದೇಶ ಗಡಿ ಭಾಗದಲ್ಲಿ ಆನೆಗಳು ಪ್ರತ್ಯಕ್ಷ- ಅಪಾರ ಬೆಳೆ ನಾಶ

1 year ago

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಟೊಮಾಟೋ, ಪಪ್ಪಾಯ, ಬೀನ್ಸ್, ಭತ್ತ ಸೇರಿದಂತೆ ರೈತರ ಪಂಪು ಮೋಟಾರ್, ಗುಡಿಸಲುಗಳನ್ನು ಧ್ವಂಸ ಮಾಡಿವೆ. ಶುಕ್ರವಾರ ರಾತ್ರಿ ರೈತರ ತೋಟಗಳ ಮೇಲೆ ದಾಳಿ ಮಾಡಿರುವ 6 ಆನೆಗಳ...

ಬಳ್ಳಾರಿ- ಮಳೆಯ ನೀರಿನಲ್ಲೇ ಶಿಕ್ಷಕರ ದಿನಾಚರಣೆ!

2 years ago

ಬಳ್ಳಾರಿ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತುಂಬೆಲ್ಲಾ ನೀರು ನುಗ್ಗಿದೆ. ಹೀಗಾಗಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಮಳೆಯ ನೀರಿನಲ್ಲೇ ಶಿಕ್ಷಕರ ದಿನಾಚರಣೆ ಆಚರಿಸಿದ್ದಾರೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಾದ್ಯಂತ ಉತ್ತಮ...