Sunday, 22nd July 2018

Recent News

6 days ago

ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ- ಚಾಲಕ ಸೇರಿ ದಂಪತಿ ಸಾವು!

ತುಮಕೂರು: ಚಲಿಸುತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಕ್ಯಾಂಟರಿನಲ್ಲಿದ್ದ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಶಿರಾದ ದೊಡ್ಡ ಆಲದಮರದ ಬಳಿ ನಡೆದಿದೆ. ಚಾಲಕ ಲೋಕೇಶ್(34), ಹನುಮಂತರಾಜು(40) ಮತ್ತು ರಾಧಾ(35) ಮೃತ ದಂಪತಿ. ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ನಲ್ಲಿ ಸಿಕ್ಕಿ ಶವಗಳು ನುಜ್ಜುಗುಜ್ಜಾಗಿದೆ. ಶವಗಳನ್ನು ವಾಹನದಿಂದ ಹೊರ ತೆಗೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ದಂಪತಿ ರಾಣಿಬೆನ್ನೂರಿನ ಕರೂರು ಗ್ರಾಮದವರಾಗಿದ್ದು, ಕಳ್ಳಂಬೆಳ್ಳಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

6 days ago

ಮೋಜು ಮಸ್ತಿಗಾಗಿ ದರೋಡೆಗೆ ಇಳಿದ ಕಲಬುರಗಿಯ ಖಿಲಾಡಿ ದಂಪತಿ!

ಕಲಬುರಗಿ: ಮೋಜು ಮಸ್ತಿಗಾಗಿ ಸಾಲ ಮಾಡಿದ ಪ್ರತಿಷ್ಠಿತ ಫ್ಯಾಮಿಲಿಯ ದಂಪತಿ ಆ ಸಾಲ ತೀರಿಸಲು ದರೋಡೆಗೆ ಇಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಜೇವರ್ಗಿ ಪಟ್ಟಣದ ವಿಜಯಕುಮಾರ್ ಸ್ಥಾವರಮಠ್ ಮತ್ತು ಆತನ ಪತ್ನಿ ನಿಶಾ ಬಂಧಿತ ಆರೋಪಿಗಳು. ನಿಶಾ ಎಂಬಿಎ ಓದಿದ್ದರೆ ವಿಜಯ್‍ಕುಮಾರ್ ಬಿಕಾಂ ಓದಿದ್ದಾನೆ. ಇವರಿಬ್ಬರು ಜುಲೈ 10ರಂದು ಕಲಬುರಗಿಯ ಜೇವರ್ಗಿ ಕ್ರಾಸ್ ಬಳಿ ಸುಷ್ಮಾ...

ಪತ್ನಿ ಮೇಲಿನ ಕೋಪಕ್ಕೆ 3 ವರ್ಷದ ಮಗುವನ್ನು ಆಟೋಗೆ ಬಡಿದ- ವಿಡಿಯೋ ನೋಡಿ

2 weeks ago

ಹೈದರಾಬಾದ್: ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಪತ್ನಿ ಮೇಲಿನ ಕೋಪಕ್ಕೆ ಮೂರು ವರ್ಷದ ಮಗುವನ್ನು ಆಟೋಗೆ ಬಡಿದು ತನ್ನ ಕೋಪ ತೀರಿಸಿಕೊಂಡಿರುವ ಅಮಾನವೀಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆಟೋ ರಿಕ್ಷಾ ಚಾಲಕನಾಗಿರುವ ಶಿವ ಗೌಡರ್(40) ಮಗುವನ್ನು ಆಟೋಗೆ ಬಡಿದು ಆಕ್ರೋಶ...

ಅಗ್ನಿ ಅವಘಡದಿಂದ ಗಂಭೀರ ಗಾಯಗೊಂಡಿದ್ದ ದಂಪತಿ ದುರ್ಮರಣ

3 weeks ago

ಕಲಬುರಗಿ: ನಗರದ ಇಕ್ಬಾಲ್ ಕಾಲೋನಿಯಲ್ಲಿನ ಬೆಂಕಿ ದುರಂತದಿಂದ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೈಯದ್ ಅಕ್ಬರ್ (44) ಹಾಗೂ ಶೈನಾಜ್ ಬೇಗಂ (36) ಮೃತಪಟ್ಟ ದಂಪತಿ. ಬುಧವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಶೇ 80 ಕ್ಕಿಂತ ಹೆಚ್ಚು ಸುಟ್ಟಗಾಯಗಳಾಗಿದ್ದರಿಂದ ಚಿಕಿತ್ಸೆ...

ಮಗನಿಗಿಟ್ಟ ಹಣದಿಂದ ದತ್ತು ಮಕ್ಕಳಿಗೆ ಭವಿಷ್ಯ- ನೂರಕ್ಕೂ ಹೆಚ್ಚು ಮಂದಿಗೆ ದಾರಿದೀಪವಾದ್ರು ಚಿಕ್ಕೋಡಿಯ ದಂಪತಿ

4 weeks ago

ಚಿಕ್ಕೋಡಿ: ಈ ಕಾಲದಲ್ಲಿ ಹೆತ್ತ ಮಕ್ಕಳನ್ನ ಸಾಕೋಕೇ ಪೋಷಕರು ಒದ್ದಾಡ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಿಕ್ಷಕ ದಂಪತಿ, ಶೈಕ್ಷಣಿಕವಾಗಿ ದತ್ತು ಪಡೆದ ಮಕ್ಕಳಿಗೆ ಉನ್ನತ ವ್ಯಾಸಂಗದವರೆಗೆ ಸಹಾಯ ಮಾಡ್ತಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಡಿ.ಎಸ್.ನಾಡಗೆ...

ರಾತ್ರಿಯಿಡಿ ಜೋಡಿಯನ್ನು ಥಳಿಸಿ, ಬಟ್ಟೆ ಹರಿದು ಮಹಿಳೆಯ ತಲೆ ಬೋಳಿಸಿದ ಗ್ರಾಮಸ್ಥರು!

4 weeks ago

ಗುಹಾವಟಿ: ಅಕ್ರಮ ಸಂಬಂಧ ಹೊಂದಿದ್ದಾರೆಂದು ಗ್ರಾಮಸ್ಥರು ಜೋಡಿಯನ್ನು ಇಡೀ ರಾತ್ರಿ ಥಳಿಸಿ ಮಹಿಳೆಯ ತಲೆ ಬೋಳಿಸಿದ ಘಟನೆ ಭಾನುವಾರ ಅಸ್ಸಾಂನ ನಾಗಂನ್‍ನಲ್ಲಿ ನಡೆದಿದೆ. ಶನಿವಾರ ರಾತ್ರಿ ಜುಮುರ್ಮೂರ್ ನಲ್ಲಿ ಗ್ರಾಮಸ್ಥರು ಆ ಜೋಡಿಯನ್ನು ಥಳಿಸಲು ಶುರು ಮಾಡಿದ್ದರು. ಭಾನುವಾರ ಬೆಳಗ್ಗೆ ಗಂಭೀರವಾಗಿ...

ಹಾವೇರಿಯಲ್ಲಿ ದಂಪತಿ ಮರ್ಡರ್ ಕೇಸ್ – ಬುರ್ಖಾ ಧರಿಸಿ ಎಸ್ಕೇಪ್ ಆಗಿದ್ದ ಆರೋಪಿ ಬಂಧನ

4 weeks ago

ಹಾವೇರಿ: ಬೆಳ್ಳಂಬೆಳಗ್ಗೆ ದಂಪತಿಯನ್ನು ಬರ್ಬರ ಹತ್ಯೆ ಮಾಡಿ ಬುರ್ಖಾ ಧರಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಕೋಟೆಪ್ಪ ಬಂಧಿತ ಆರೋಪಿಯಾಗಿದ್ದು, ಹತ್ಯೆ ನಡೆದ ವೇಳೆ ಆರೋಪಿ ಹೆಲ್ಮೆಟ್ ಹಾಗೂ ಬುರ್ಖಾ ಧರಿಸಿ ಬಂದಿದ್ದ ಎನ್ನುವ ಮಾಹಿತಿಯನ್ನು ಗ್ರಾಮಸ್ಥರಿಂದ ಪಡೆದು ಪೊಲೀಸರು...

ಬೆಳ್ಳಂಬೆಳಗ್ಗೆ ದಂಪತಿಯ ಬರ್ಬರ ಹತ್ಯೆ- ಬೆಚ್ಚಿಬಿದ್ದ ಹತ್ತಿಮತ್ತೂರು ಗ್ರಾಮಸ್ಥರು!

4 weeks ago

ಹಾವೇರಿ: ದುಷ್ಕಮಿಗಳು ಬೆಳ್ಳಂಬೆಳಗ್ಗೆ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ನಡೆದಿದೆ. 40 ವರ್ಷದ ಮಾರ್ತಾಡಪ್ಪ ಅಂಬಿಗೇರೆ ಹಾಗೂ 26 ವರ್ಷದ ಸುಧಾ ಅಂಬಿಗೇರೆ ಕೊಲೆಯಾಗಿರುವ ದುರ್ದೈವಿಗಳು. ದುಷ್ಕರ್ಮಿಗಳು ಬೆಳಗಿನ ಜಾವ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ...