Recent News

2 months ago

ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ನೆಹರು ಕುಟುಂಬದ ಕೊಡುಗೆ: ಸಾಧ್ವಿ ಪ್ರಾಚಿ

ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ವಿಶ್ವ ಹಿಂದು ಪರಿಷದ್ ನಾಯಕಿ ಸಾಧ್ವಿ ಪ್ರಾಚಿ, ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ಎಲ್ಲವೂ ಸಮಾಜಕ್ಕೆ ನೆಹರು ಕುಟುಂಬದ ಕೊಡುಗೆ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ ಪ್ರಾಚಿ, ಭಾರತ ಅತ್ಯಾಚಾರದ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ್ದಾರೆ. ನಕ್ಸಲಿಸಂ, ಭಯೋತ್ಪಾದನೆ, ಅತ್ಯಾಚಾರಗಳೆಲ್ಲ ನೆಹರು ಕುಟುಂಬದಿಂದಲೇ ಬಂದಿದ್ದು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಓದಿ: ಭಾರತ ವಿಶ್ವದ […]

2 months ago

ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ: ರಾಮ್ ದೇವ್

ಉಡುಪಿ: ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ ಎಂದು ಯೋಗ ಗುರು ಬಾಬಾ ರಾಮ್ ದೇವ್ ಚರ್ಚಾಸ್ಪದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಸಂತ ಸಮ್ಮೇಳನ ನಡೆದಿದ್ದು, ಸಭೆಯಲ್ಲಿ ಅಷ್ಟ ಮಠದ ಸ್ವಾಮೀಜಿಗಳು ಸೇರಿದಂತೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯ 18 ಸಂತರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ರಾಮ್ ದೇವ್, ಗೋವು...

ಗೋವು ಕಳ್ಳತನ ಕಡಿವಾಣಕ್ಕೆ ಮಹಿಳೆಯರು ತಲ್ವಾರ್ ಹಿಡಿಯಬೇಕು: ಮುರಳಿಕೃಷ್ಣ

1 year ago

ಮಂಗಳೂರು: ಗೋವುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಮನೆ ಮನೆಯ ಹೆಂಗಸರು ತಲವಾರುಗಳನ್ನು ಹಿಡಿದುಕೊಂಡು ಉತ್ತರ ನೀಡಲು ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಮುಖಂಡ ಮುರಳಿಕೃಷ್ಣ ಹಸಂತಡ್ಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದ ವಾಮಂಜೂರಿನಲ್ಲಿ ನಡೆದ ಗೋವು...

ದೇಶಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿಜೀವಿಗಳಿಂದಲೇ ಅಪಾಯ: ಶಾಸಕ ಯತ್ನಾಳ್

1 year ago

ವಿಜಯಪುರ: ನಮ್ಮ ದೇಶಕ್ಕೆ ಪಾಕಿಸ್ತಾನಕ್ಕಿಂತ ಅಪಾಯ ಇರುವುದು ದೇಶದ ಬುದ್ಧಿಜೀವಿಗಳಿಂದ. ಅವರಿಂದ ದೇಶ ಹಾಳಾಗಿದ್ದು ನಾನು ಗೃಹ ಮಂತ್ರಿಯಾದರೆ ಅವರಿಗೆ ಗುಂಡು ಹಾರಿಸಿ ಅಂತಾ ಆದೇಶ ನೀಡುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದ ಕನ್ನಡ...

ಶಶಿ ತರೂರ್ ಮುಖಕ್ಕೆ ಮಸಿ ಬಳಿದವರಿಗೆ ನಗದು ಬಹುಮಾನ ಘೋಷಿಸಿದ ಅಲಿಗಢ್ ಮುಸ್ಲಿಂ ಯುವ ನಾಯಕ

2 years ago

ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಜೆಪಿ ವಿರುದ್ಧ `ಹಿಂದೂ ಪಾಕಿಸ್ತಾನ’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಹಿನ್ನೆಲೆ ಅಲಿಗಢ್ ನ ಮುಸ್ಲಿಂ ಯುವ ಸಂಘಟನೆಯ ಅಧ್ಯಕ್ಷ ಮೊಹಮದ್ ಅಮೀರ್ ರಶೀದ್, ಶಶಿ ತರೂರ್ ಮುಖಕ್ಕೆ ಯಾರು ಕಪ್ಪು ಮಸಿ ಹಚ್ಚುವವರಿಗೆ...

ಬಿಜೆಪಿ ಶಾಸಕ ಯತ್ನಾಳ್ ಗಡಿಪಾರು ಮಾಡಿ: ಕೈ, ಡಿಎಸ್‍ಎಸ್ ನಾಯಕರ ಆಗ್ರಹ

2 years ago

ವಿಜಯಪುರ: ಬಿಜೆಪಿ ಶಾಸಕ ಬನವನಗೌಡ ಪಾಟೀಲ್ ಯತ್ನಾಳ್‍ರ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಮತ್ತು ದಲಿತ ಸಂಘರ್ಷ ಸಮಿತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಶಾಸಕರ ಗಡಿಪಾರಿಗೆ ಪೊಲೀಸರಲ್ಲಿ ಮನವಿಯನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಡಿಎಸ್‍ಎಸ್‍ನ ಮುಖಂಡರು ಜಂಟಿಯಾಗಿ ಇಂದು ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ,...

ಬುದ್ಧಿಜೀವಿಗಳು ಬರೆದ ಸಾಹಿತ್ಯಕ್ಕೆ ಅರ್ಥ, ತಲೆಬುಡ ಇರಲ್ಲ: ಅನಂತ್ ಕುಮಾರ್ ಹೆಗ್ಡೆ ಕಿಡಿ

2 years ago

ಬೆಳಗಾವಿ: ತನ್ನ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸುದ್ದಿಯಲ್ಲಿರೋ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಇದೀಗ ಮತ್ತೆ ತನ್ನ ಹೇಳಿಕೆಯಿಂದಲೇ ಮತ್ತೆ ಸುದ್ದಿಯಾಗಿದ್ದಾರೆ. ನಗರದಲ್ಲಿ ಮಂಗಳವಾರ ಕೆ.ಎಲ್.ಇ ಜೀರಗಿ ಸಭಾಭವನದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಕುರಿತ ರಾಷ್ಟ್ರೀಯ ಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ...

ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರೆಂದಿಲ್ಲ: ಭಗವಾನ್

2 years ago

ಮೈಸೂರು: ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರು ಎಂದಿಲ್ಲ. ನಮ್ಮ ದೇಶದಲ್ಲಿ ಈಗ ರಾಮನ ದೇವಸ್ಥಾನಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ. ದೇವಸ್ಥಾನ ಕಟ್ಟುವ ಮೊದಲು ರಾಮನ ಬಗ್ಗೆ ಗಮನಿಸಬೇಕು ಎಂದು ಸಾಹಿತಿ ಪ್ರೋ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಸರಾ ಮಹೋತ್ಸವದ...