Recent News

1 week ago

ಕೊನೆಗೂ ಬಿಎಂಟಿಸಿ ಚಾಲಕ, ನಿರ್ವಾಹಕರ ಅಕೌಂಟ್‍ಗೆ ಬಿತ್ತು ಸಂಬಳ

ಬೆಂಗಳೂರು: ಬಿಎಂಟಿಸಿ ಚಾಲಕರು, ನಿರ್ವಾಹಕರಿಗೆ ವೇತನ ವಿಳಂಬದ ಬಗ್ಗೆ ಪಬ್ಲಿಕ್ ಟಿವಿ ವರದಿ ನೋಡಿ ಎಚ್ಚೆತ್ತ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಇಂದು ಸಭೆ ಕರೆದು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರಿಗೆ ಇಲಾಖೆಯ ನಾಲ್ಕು ನಿಗಮ ಎಂಡಿಗಳಿಗೆ ಮೌಖಿಕ ಆದೇಶ ನೀಡಿ ಇಂದು ಮಧ್ಯಾಹ್ನದೊಳಗೆ ವೇತನ ನೀಡಿ ವರದಿ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಕೊನೆಗೂ ಬಿಎಂಟಿಸಿ ಚಾಲಕ, ನಿರ್ವಾಹಕರ ಅಕೌಂಟ್‍ಗೆ ಸಂಬಳ ಬಂದಿದೆ. ಪಬ್ಲಿಕ್ ಟಿವಿ ವರದಿ ನೋಡಿ ಎಚ್ಚೆತ್ತ ಸಾರಿಗೆ ಸಚಿವರು ವೇತನ […]

4 weeks ago

ಪಾಸ್ ಇದೆ ಆದ್ರೆ ತೋರಿಸಲ್ಲ – ಬಿಎಂಟಿಸಿಯಲ್ಲಿ ಮಹಿಳೆ ಕ್ಯಾತೆ

– ಮಹಿಳಾ ಅಧಿಕಾರಿ ಮೇಲೆ ಹಲ್ಲೆ ಬೆಂಗಳೂರು: ನಗರದ ಬಿಎಂಟಿಸಿ ಬಸ್ಸಿನಲ್ಲಿ ಮಹಿಳೆಯೊಬ್ಬರು ಕ್ಯಾತೆ ತೆಗೆದಿದ್ದು, ಪರಿಣಾಮ ಪ್ರಯಾಣಿಕರು ಹಾಗೂ ಬಸ್ಸಿನ ನಿರ್ವಾಹಕರು ಸುಸ್ತಾಗಿದ್ದಾರೆ. ಈ ಘಟನೆ ಜೆಪಿ ನಗರದ ಬಿಎಂಟಿಸಿ ಬಸ್ಸಿನಲ್ಲಿ ನಡೆದಿದೆ. ಮಹಿಳೆ, ಟಿಕೆಟ್ ತಗೊಳ್ಳಲ್ಲ, ಪಾಸ್ ತೋರಿಸಲ್ಲ. ಏನ್ ಮಾಡ್ಕೋತಿರೋ ಮಾಡ್ಕೊಳ್ಳಿ ಎಂದು ರೇಗಾಡಿದ್ದಾರೆ. ಅಷ್ಟೇ ಅಲ್ಲದೆ ಟಿಕೆಟ್ ಕೊಡಮ್ಮ ಎಂದು...

ಮಗಳು ಮೃತಪಟ್ಟರೂ ಕಂಡಕ್ಟರ್ ಕೆಲಸಕ್ಕೆ ಹಾಜರಾಗಲು ಸೂಚಿಸಿದ ಅಧಿಕಾರಿ

1 month ago

– ರಾತ್ರಿ ಡಿಪೋಗೆ ಬಂದಾಗ ನಿರ್ವಾಹಕನಿಗೆ ಶಾಕ್ – ರಜೆ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡ ನಿರ್ವಾಹಕ ಕೊಪ್ಪಳ: ಮಗಳು ಮೃತಪಟ್ಟ ವಿಷಯವನ್ನು ಮುಚ್ಚಿಟ್ಟು ಕರ್ತವ್ಯಕ್ಕೆ ಕಳುಹಿಸಿದ ಅಮಾನವೀಯ ಘಟನೆಯೊಂದು ಕೊಪ್ಪಳದ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ನಡೆದಿದೆ. ಗಂಗಾವತಿ ಕೆಎಸ್‍ಆರ್ ಟಿಸಿ...

ಮಹಿಳೆಯರ ಮುಂದೆ ಬಟ್ಟೆ ಬದಲಿಸಿದ ಕಂಡಕ್ಟರ್ – ವಿರೋಧಿಸಿದವನಿಗೆ ಥಳಿತ

2 months ago

ಚೆನ್ನೈ: ಬಸ್ಸಿನಲ್ಲಿ ಮಹಿಳೆಯರ ಮುಂದೆಯೇ ನಿರ್ವಾಹನೊಬ್ಬ ಬಟ್ಟೆ ಬದಲಿಸಿದ್ದು, ಇದನ್ನು ಪ್ರಶ್ನೆ ಮಾಡಿದ ಪ್ರಯಾಣಿಕನಿಗೆ ಕೆಲ ಬಸ್ ಚಾಲಕರು ಮತ್ತು ನಿರ್ವಾಹಕರು ಸೇರಿ ಥಳಿಸಿರುವ ಘಟನೆ ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ. ಬಸ್‍ನಲ್ಲಿ ಮಹಿಳಾ ಪ್ರಯಾಣಿಕರ ಮುಂದೆಯೇ ಕಂಡಕ್ಟರ್ ಬಟ್ಟೆ ಬದಲಿಸಿದ್ದಾನೆ....

ಕಾರಿಗೆ ಸೈಡ್ ಕೊಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಪುಂಡರ ಗೂಂಡಾಗಿರಿ

4 months ago

ಶಿವಮೊಗ್ಗ: ರಸ್ತೆಯಲ್ಲಿ ಬರುತ್ತಿದ್ದಾಗ ತಮ್ಮ ಕಾರಿಗೆ ಸೈಡ್ ಕೊಡದ ಖಾಸಗಿ ಬಸ್ಸೊಂದರ ಚಾಲಕ ಹಾಗೂ ನಿರ್ವಾಹಕನ ಮೇಲೆ ಕಾರಿನಲ್ಲಿದ್ದ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೆಬ್ರಿ ಬಳಿ ನಡೆದಿದೆ. ಶಿವಮೊಗ್ಗದಿಂದ- ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸಿನ ನಿರ್ವಾಹಕ ಗಣೇಶ್...

ಅಪಘಾತವಾಗಿ ರಕ್ತದ ಮಡುವಿನಲ್ಲಿದ್ದರೂ ನೀರು ಕೊಡಿ ಅಂದ್ರು- ವೀಡಿಯೋ ಮಾಡ್ತಾ ನಿಂತ ಕಂಡಕ್ಟರ್, ಡ್ರೈವರ್

4 months ago

ಚಾಮರಾಜನಗರ: ಅಪಘಾತಕ್ಕೀಡಾಗಿ ನೀರು ಕೊಡಿ ಎಂದು ಕೂಗಾಡಿದರೂ ಅವರಿಗೆ ನೀರು ಕೊಡದೆ ಅಮಾನವೀಯತೆ ತೋರಿದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ. ಹೌದು. ಶನಿವಾರ ಗುಂಡ್ಲುಪೇಟೆ ಯಿಂದ ಊಟಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಬಂಡೀಪುರದ ಬಳಿ  ಅಪಘಾತ ನಡೆದಿತ್ತು. ಘಟನೆಯಲ್ಲಿ...

ಬೇರೆ ರೂಟ್‍ಗೆ ಹೋಗು ಅಂದಿದ್ದಕ್ಕೆ ಬಡಿದಾಡಿದ ಸಾರಿಗೆ ಸಿಬ್ಬಂದಿ!

5 months ago

ಹಾವೇರಿ: ವಾಯುವ್ಯ ಸಾರಿಗೆ ಬಸ್ ಕಂಟ್ರೋಲರ್ ಮತ್ತು ಕಂಡಕ್ಟರ್ ನಡುವೆ ಮಾತಿಗೆ ಮಾತು ಬೆಳೆದು ಬಸ್ ನಿಲ್ದಾಣದಲ್ಲಿಯೇ ಇಬ್ಬರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ. ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್.ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ನಡುವೆ ಗಲಾಟೆ ನಡೆದಿದೆ....

NWKRTC ಅಧಿಕಾರಿಗೆ ಸಿಬ್ಬಂದಿಯಿಂದ ಹಿಗ್ಗಾಮುಗ್ಗಾ ಕ್ಲಾಸ್!

6 months ago

ಗದಗ: ಎನ್‍ಡಬ್ಲೂಕೆಆರ್ ಟಿಸಿ ಚಾಲಕರು, ನಿರ್ವಾಹಕರುಗಳಿಗೆ ಹಲವು ವಿಷಯಗಳಿಗೆ ಕಿರುಕುಳ ನೀಡುತ್ತಿದ್ದ ಅಧಿಕಾರಿಯನ್ನು ಸಿಬ್ಬಂದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ಡಿಪೋದಲ್ಲಿ ನಡೆದಿದೆ. ರಜೆ, ಹಾಗೂ ಡ್ಯೂಟಿ ಹಾಕುವ ವಿಷಯದಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಗದಗ ಎನ್‍ಡಬ್ಲೂಕೆಆರ್ ಟಿಸಿ...