Sunday, 19th May 2019

3 months ago

ಆಪರೇಷನ್ ಆಡಿಯೋ: ಸದನದಲ್ಲಿ ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಆಪರೇಷನ್ ಆಡಿಯೋ ಕುರಿತು ವಿಧಾನಸಭಾ ಕಲಾಪದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ಆಪರೇಷನ್ ಆಡಿಯೋವನ್ನು ನನ್ನ ಗಮನಕ್ಕೆ ತಂದ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು. ಸದನದ ಎಲ್ಲ ಸದಸ್ಯರಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಗೌರವ ಪೂರಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಅಪಚಾರವಾಗುವಂತೆ ನೀವು ನಡೆದುಕೊಳ್ಳಬಾರದು. ದೌರ್ಭಾಗ್ಯಕ್ಕೆ ಆಪರೇಷನ್ ಡೀಲ್‍ನಲ್ಲಿ ಮಾತನಾಡಿರುವವರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಶಾಸಕರು ರಾಜೀನಾಮೆ ನೀಡಿದರೆ ತಕ್ಷಣವೇ ಒಪ್ಪಿಕೊಳ್ಳಲು ಸ್ಪೀಕರ್ ಗೆ 50 ಕೋಟಿ ನೀಡಿ ಸರಿಮಾಡಿಕೊಂಡಿದ್ದೇವೆ ಎಂದು ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. […]