Friday, 15th November 2019

2 months ago

ನಂಗೆ ಹೋಳಿಗೆ ಊಟ ಬೇಡ – ನೆರೆ ಸಂತ್ರಸ್ತರೊಂದಿಗೆ ಊಟ ಮಾಡಿದ ಆರ್.ಅಶೋಕ್

ಚಿಕ್ಕಮಗಳೂರು: ತನಗಾಗಿ ಬೇರೆ ಊಟ ಮಾಡಿಸಿದ್ದರೂ ಸಹ ಕಂದಾಯ ಸಚಿವ ಆರ್.ಅಶೋಕ್ ಅವರು ನಿರಾಶ್ರಿತರ ಜೊತೆಗೆ ಕುಳಿತು ಊಟ ಮಾಡಿ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಮೂಡಿಗೆರೆಯ ಬಿದರಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಆರ್.ಅಶೋಕ್ ಭೇಟಿ ನೀಡಿದ್ದರು. ಈ ವೇಳೆ ಸಚಿವರಿಗೆ ಪ್ರತ್ಯೇಕವಾಗಿ ಹೋಳಿಗೆ ಊಟ ಮಾಡಿಸಿ, ಸಂತ್ರಸ್ತರಿಗೆ ಬೇರೆ ಊಟ ಮಾಡಿಸಿದ್ದರು. ಇದರಿಂದ ಕೋಪಿತರಾದ ಸಚಿವರು ನನಗೆ ಬೇರೆ ಊಟ ಬೇಡ, ನಾನೂ ಸಹ ಸಂತ್ರಸ್ತರ ಜೊತೆಯಲ್ಲೇ ಊಟ ಮಾಡುತ್ತೇನೆ. ಹಾಗೆಲ್ಲ ಬೇರೆ ಊಟ ಮಾಡಬಾರದು. ನನಗಾಗಿ ಯಾಕೆ […]

2 months ago

ಸರ್ಕಾರಿ, ಖಾಸಗಿ ಬಸ್ ಡಿಕ್ಕಿ – ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಚಿಕ್ಕಮಗಳೂರು: ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಸರ್ಕಾರಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಡ್ಲೂರು ಸಮೀಪದ ಪುಂಡನಹಳ್ಳಿಯಲ್ಲಿ ನಡೆದಿದೆ. ಮೃತ ಚಾಲಕನನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗದ್ದಿಗೆರೆಯ ಪುಟ್ಟಸ್ವಾಮಿ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಹೊಸಪೇಟೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ...

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮಣ್ಣಿನಲ್ಲಿ ಸಂಪೂರ್ಣ ಮುಳುಗಡೆ

3 months ago

ಚಿಕ್ಕಮಗಳೂರು: ಕರುಣೆಯಿಲ್ಲದ ವರುಣನ ಅಬ್ಬರಕ್ಕೆ ಮಲೆನಾಡು ಕೊಚ್ಚಿ ಹೋಗಿದೆ. ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಸಾವಿರಾರು ಜನ ನಿರ್ಗತಿಕರಾಗಿದ್ದಾರೆ. ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ 12 ಮನೆ, 2 ದೇವಸ್ಥಾನ ಸಂಪೂರ್ಣ ನೆಲಸಮವಾಗಿವೆ. 3800 ಅಡಿ ಎತ್ತರದಿಂದ ಬಿದ್ದ ಗುಡ್ಡದ...

ಅಲ್ಲಲ್ಲಿ ಬಂಡೆ, ಗುಡ್ಡ ಜರಿತ – ಮಳೆಗೆ ಕೊಚ್ಚಿ ಹೋಗಿದೆ ಚಾರ್ಮಾಡಿ ರಸ್ತೆ

3 months ago

ಚಿಕ್ಕಮಗಳೂರು: ಮಹಾ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ ತತ್ತರಿಸಿ ಹೋಗಿದ್ದು ಸಂಚಾರಕ್ಕೆ ಮುಕ್ತವಾಗಲು ಬಹಳ ಸಮಯ ಬೇಕಾಗಿದೆ. ದಕ್ಷಿಣ ಕನ್ನಡ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಮಳೆ ಬಂದಾಗ ಗುಡ್ಡದ ಮಣ್ಣು ಕುಸಿಯುತ್ತಿತ್ತು. ಆದರೆ ಈಗ ಕಳೆದ 7 ದಿನಗಳಿಂದ ನಿರಂತರವಾಗಿ...

ಚಿಕ್ಕಮಗಳೂರು ನದಿಯಲ್ಲಿ ತೇಲಿ ಬರುತ್ತಿವೆ ಶವಗಳು

3 months ago

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರಕ್ಕೆ ಜನರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈಗ ನದಿಯಲ್ಲಿ ಶವಗಳು ತೇಲಿ ಬರುತ್ತಿವೆ. ಮಳೆಯಿಂದಾಗಿ ಮಲೆನಾಡಲ್ಲಿ ಊರೂರೇ ಕೊಚ್ಚಿ ಹೋಗುತ್ತಿದ್ದು, ನೂರಾರು ಜನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ ಗ್ರಾಮಗಳು ನೀರಲ್ಲಿ ಮುಳುಗಿ ಜನ ಕಂಗಾಲಾಗಿದ್ದಾರೆ. ಈಗಾಗಲೇ...

ಏಕಾಏಕಿ ಕುಸಿದ ಮನೆಯ ಮೇಲ್ಛಾವಣಿ – ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರು

3 months ago

ಚಿಕ್ಕಮಗಳೂರು: ಮಹಾ ಮಳೆಗೆ ಏಕಾಏಕಿ ಮನೆಯ ಮೇಲ್ಛಾವಣಿಗೆ ಕುಸಿದಿದ್ದು, ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ನಡೆದಿದೆ. ಅರವಿಂದ ನಗರದ ಕುಸುಮ ಎಂಬವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕುಸುಮ ಅವರ ಪತಿ ಬೆಳಗ್ಗೆ...

ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

4 months ago

ಚಿಕ್ಕಮಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿದ್ದರು. ಆ ಬಳಿಕ ಪ್ರಾಥಮಿಕ ಶಿಕ್ಷಣ, ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಕಾಫಿರಾಜನಾದ ಕಥೆಯನ್ನೊಮ್ಮೆ ನೀವು ಓದಲೇ ಬೇಕು. ಸಿದ್ಧಾರ್ಥ್ ಹೆಗ್ಡೆ ಚಿಕ್ಕಮಗಳೂರಿನ ಮೂಡಿಗೆರೆ...

ಉದ್ಯಮಿ ಸಿದ್ಧಾರ್ಥ್ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿ ಬಂದ್

4 months ago

ಚಿಕ್ಕಮಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಿಗೂಢವಾಗಿ ಕಾಣೆಯಾದ ಬೆನ್ನಲ್ಲೇ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ...