Friday, 20th September 2019

1 month ago

ನೆರೆಪೀಡಿತ ಗ್ರಾಮವನ್ನು ದತ್ತು ಪಡೆಯಲು ಮುಂದಾದ ಗ್ರಾಮಸ್ಥರು

ಚಿಕ್ಕಬಳ್ಳಾಪುರ: ನೆರೆಪೀಡಿತ ಜನರ ಸಂಕಷ್ಟಕ್ಕೆ ಮಿಡಿದ ಬಿಕ್ಕಲಹಳ್ಳಿ ಗ್ರಾಮಸ್ಥರು ನೆರೆಪೀಡಿತ ಗ್ರಾಮವೊಂದನ್ನ ದತ್ತು ಪಡೆಯುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ತಮ್ಮ ಗ್ರಾಮದ ದೇವಾಲಯದ ಹುಂಡಿಗೆ ಹಣ ಹಾಕಬೇಡಿ, ಬದಲಾಗಿ ನೆರೆ ಸಂತ್ರಸ್ತರಿಗೆ ಹಣ ನೀಡಿ ಎಂದು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದ ನೆರೆಗೆ ಸ್ಪಂದಿಸಿರುವ ಗೌರಿಬಿದನೂರು ತಾಲೂಕಿನ ಬಿಕ್ಕಲಹಳ್ಳಿ ಗ್ರಾಮಸ್ಥರು ಅಕ್ಕಿ, ಬೇಳೆ, ಚಾಪೆ, ಬಟ್ಟೆ ಸೇರಿದಂತೆ ಜಾನುವಾರುಗಳಿಗೆ ಮೇವು ಸಂಗ್ರಹಣೆ ಮಾಡಿದ್ದಾರೆ. ಸದ್ಯ ಈ ಎಲ್ಲಾ ಅಗತ್ಯ ಸಾಮಾಗ್ರಿಗಳನ್ನ ನೆರೆ ಸಂತ್ರಸ್ತರಿಗೆ ತಲುಪಿಸಲು ಮುಂದಾಗಿದ್ದಾರೆ. […]

1 month ago

ಕೆರೆಯ ಏರಿಯಲ್ಲಿ ಸಿಗ್ತು 200ಕ್ಕೂ ಹೆಚ್ಚು ನಾಗರಕಲ್ಲು

ಚಿಕ್ಕಬಳ್ಳಾಪುರ: ಗೌರಿ ಗಣೇಶ ಹಬ್ಬ ಹತ್ತಿರ ಬಂತು ಕೆರೆ ಏರಿ ಬಳಿ ಇರೋ 5 ನಾಗರಕಲ್ಲುಗಳ ಸುತ್ತಮುತ್ತ ಸ್ವಚ್ಛ ಮಾಡೋಣ ಎಂದು ಹೋದ ತಾಲೂಕಿನ ಮಂಚನಬಲೆ ಗ್ರಾಮಸ್ಥರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 200ಕ್ಕೂ ಹೆಚ್ಚು ನಾಗರಕಲ್ಲುಗಳು ಸಿಕ್ಕಿವೆ. ಪ್ರತಿ ವರ್ಷ ಗೌರಿ ಗಣೇಶ ಹಬ್ಬದಂದು ಕೆರೆ ಏರಿ ಮೇಲಿರೋ ನಾಗರಕಲ್ಲುಗಳಿಗೆ ಗ್ರಾಮಸ್ಥರು ಪೂಜೆ ಪುನಸ್ಕಾರ ಮಾಡಿಕೊಂಡು...

ನಾನು ಕೇಳೋವಾಗ ಕೊಟ್ಟಿಲ್ಲ, ಆದ್ರೆ ಕನಕಪುರಕ್ಕೆ ಕೊಟ್ರು- ಹೆಚ್‍ಡಿಕೆ ವಿರುದ್ಧ ಸುಧಾಕರ್ ಕಿಡಿ

1 month ago

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅನರ್ಹ ಶಾಸಕ ಕೆ ಸುಧಾಕರ್ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ನೀಡದ್ದು, ಮಲತಾಯಿ ಧೋರಣೆ ತಾಳಿದ್ದೇ ನಾನು ರಾಜೀನಾಮೆ ನೀಡಲು ಪ್ರಮುಖ ಕಾರಣವಾಗಿದೆ...

ಮಾಜಿ  ಸ್ಪೀಕರ್​ಗೆ  ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಸುಧಾಕರ್

2 months ago

ಚಿಕ್ಕಬಳ್ಳಾಪುರ: ನಿಮಗೆ ಮಾನ ಮರ್ಯಾದೆ ಇದ್ದರೆ ಮೊದಲು ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ, ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅನರ್ಹ ಶಾಸಕ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ...

‘ರಾಜಕೀಯ ಬೆಳವಣಿಗೆಯಿಂದ ನೊಂದಿದ್ದೆ’ – ವಿವಾಹವಾದ ದೇವಾಲಯಕ್ಕೆ ರಮೇಶ್ ಕುಮಾರ್ ಭೇಟಿ

2 months ago

ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ಹಾಗೂ ಹಾಲಿ ಶ್ರೀನಿವಾಪುರ ಶಾಸಕ ರಮೇಶ್ ಕುಮಾರ್ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಂದಹಾಗೆ 1977 ರ ಮೇ 22 ರಂದು ರಮೇಶ್ ಕುಮಾರ್ ಇದೇ ದೇವಾಲಯದಲ್ಲಿ...

ಪೊಲೀಸರನ್ನೇ ಅಡ್ಡ ಹಾಕಿ ಹೆಲ್ಮೆಟ್ ಎಲ್ಲಿ ಎಂದ ಸಾರ್ವಜನಿಕರು

2 months ago

ಚಿಕ್ಕಬಳ್ಳಾಪುರ: ಹೆಲ್ಮೆಟ್ ಧರಿಸದೆ ಬರುತ್ತಿದ್ದ ಪೊಲೀಸರ ಬೈಕ್‍ನ್ನು ಅಡ್ಡಗಟ್ಟಿದ ಸಾರ್ವಜನಿಕರು ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿ ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಬಳಿ ನಡೆದಿದೆ. ಆಂದಹಾಗೆ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಪಿಂಡಿಪಾಪನಹಳ್ಳಿ ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು...

101ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಅಜ್ಜಿ

2 months ago

ಚಿಕ್ಕಬಳ್ಳಾಪುರ: ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಜೊತೆ ಅಜ್ಜಿಯೊಬ್ಬರು 101ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಸೇರಿದಂತೆ ನೂರಾರು ಜನರಿರುವ ತನ್ನ ಕುಡಿಯನ್ನು ನೋಡುವ ಅದೃಷ್ಟ ಅದು ಎಷ್ಟು ಜನಕ್ಕೆ ಇರುತ್ತೋ ಇಲ್ಲವೊ ಗೊತ್ತಿಲ್ಲ. ಆದರೆ ಚಿಕ್ಕಬಳ್ಳಾಪುರ ನಗರದ ಗಂಗಮ್ಮಮಿದ್ದೆ...

ಯಾರ್ ಬರ್ತಿರೋ ಬರ್ರೋ ಕೊಚ್ಚಾಕಿ ಬಿಡ್ತೀನಿ- ಲಾಂಗ್ ಹಿಡಿದು ಯುವಕನ ಧಮ್ಕಿ

2 months ago

ಚಿಕ್ಕಬಳ್ಳಾಪುರ: ಹಾಡಹಗಲೇ ಹಳೇ ಮನೆ ವಿವಾದದ ಜಗಳದ ವೇಳೆ ಯುವಕನೋರ್ವ ಲಾಂಗ್ ತೋರಿಸಿ ಯಾರ್ ಬರ್ತಿರೋ ಬರ್ರೋ ಕೊಚ್ಚಾಕಿ ಬಿಡ್ತೀನಿ ಅಂತ ಧಮ್ಕಿ ಹಾಕಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇದ್ಲೂಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನರಸಿಂಹಮೂರ್ತಿ ಎಂಬವರ ಪುತ್ರ...