Monday, 22nd October 2018

Recent News

1 week ago

ಶೀಘ್ರವೇ ಅಲಹಾಬಾದ್ ಹೆಸರು ಪ್ರಯಾಗ್‍ರಾಜ್ ಆಗುತ್ತೆ: ಯೋಗಿ

ಲಕ್ನೋ: ಅಲಹಾಬಾದ್ ಜಿಲ್ಲೆಯ ಹೆಸರನ್ನ ಶೀಘ್ರವೇ ಪ್ರಯಾಗ್‍ರಾಜ್ ಎಂದು ಬದಲಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಮಹಾ ಕುಂಭ ಮೇಳದ ಚರ್ಚೆಯಲ್ಲಿ ಮಾತನಾಡಿದ ಯೋಗಿ ಅವರು, ನನಗೆ ಅಖಾಡ ಪರಿಷದ್ ಮತ್ತು ಇತರೆ ಕೆಲವರು ಅಲಹಾಬಾದ್ ಜಿಲ್ಲೆಯಲ್ಲಿ ಪ್ರಯಾಗ್‍ರಾಜ್ ಎಂದು ಬದಲಿಸುವಂತೆ ಪ್ರಸ್ತಾವನೆ ನೀಡಿದ್ದಾರೆ. ರಾಜ್ಯಪಾಲರದ ರಾಮ್ ನಾಯಕ್ ಸಹ ಈ ನಿರ್ಧಾರಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರವೇ ಸರ್ಕಾರ ಅಲಹಾಬಾದ್ ಹೆಸರನ್ನು ಪ್ರಯಾಗ್‍ರಾಜ್ ಎಂದು […]

2 weeks ago

ನಾನು ನೆಮ್ಮದಿಯಿಂದ ಸಿಎಂ ಪಟ್ಟ ಅನುಭವಿಸುತ್ತಿಲ್ಲ- ಎಚ್‍ಡಿಕೆ

ಮೈಸೂರು: ನಾನು ನೆಮ್ಮದಿ, ಸಂತೋಷದಿಂದ ಸಿಎಂ ಪಟ್ಟ ಅನುಭವಿಸುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದು ಹೇಳುವ ಮೂಲಕ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮೂಲತಃ ರಾಜಕಾರಣಿಯೇ ಅಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು, ಆಕಸ್ಮಿಕವಾಗಿಯೇ ಎರಡು ಬಾರಿ ಸಿಎಂ ಆಗಿದ್ದೇನೆ. ಆದರೆ...

ಚೇರ್ ಹೋಗುತ್ತೆ ಅನ್ನೋ ಭಯವಿಲ್ಲ, ಸಿಎಂ ಸ್ಥಾನ ಶಾಶ್ವತವೂ ಅಲ್ಲ – ಎಚ್‍ಡಿಕೆ

1 month ago

ಚಿಕ್ಕಮಗಳೂರು: ಚೇರ್ ಹೋಗುತ್ತೆ ಅನ್ನೋ ಭಯ ನನಗಿಲ್ಲ. ಮುಖ್ಯಮಂತ್ರಿ ಸ್ಥಾನ ಶಾಶ್ವತವೂ ಅಲ್ಲ. ಈ ರಾಜ್ಯದಲ್ಲಿ ಅನೇಕ ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗುತ್ತಾ ಇರುತ್ತವೆ ಅಂತ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ...

ಅಧಿಕಾರದ ಗದ್ದುಗೆ ಹಿಡಿಯಲು ಕೇರಳದ ದೇಗುಲಕ್ಕೆ ಮೊರೆ ಹೊದ್ರಾ ಬಿಎಸ್‍ವೈ..?

1 month ago

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಯಜ್ಞ-ಯಾಗಾದಿಗಳನ್ನು ನೇರವೇರಿಸುತ್ತಿದ್ದಾರೆ. ಕೈತಪ್ಪಿರುವ ಅಧಿಕಾರದ ಗದ್ದುಗೆಯನ್ನು ಮತ್ತೊಮ್ಮೆ ಪಡೆಯಬೇಕೆಂದಿರುವ ಬಿ.ಎಸ್.ಯಡಿಯೂರಪ್ಪನವರು, ಕೇರಳದ ಕಣ್ಣೂರಿನ ಅರಣ್ಯ ಪ್ರದೇಶದಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿರುವ ರಾಜರಾಜೇಶ್ವರ ದೇವಾಲಯದಲ್ಲಿ ಕಳೆದ ಅಮಾವಸ್ಯೆಯ ದಿನ ಶನಿವಾರ ಹಾಗೂ ಭಾನುವಾರದಂದು...

ಶೀಘ್ರವೇ ಬಿಎಸ್‍ವೈ ಸಿಎಂ ಆಗ್ತಾರೆ, ಬಿಜೆಪಿಯ ಯಾವೊಬ್ಬ ಶಾಸಕರನ್ನ ಟಚ್ ಮಾಡೋಕ್ಕಾಗಲ್ಲ: ರೇಣುಕಾಚಾರ್ಯ

1 month ago

ಬೆಂಗಳೂರು: ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮುಂದಿನ ಮುಖ್ಯಮಂತ್ರಿಗಳಾಗುತ್ತಾರೆ. ಅಲ್ಲದೇ ಬಿಜೆಪಿಯ ಯಾವೊಬ್ಬ ಶಾಸಕರನ್ನು ಸಹ ಕಾಂಗ್ರೆಸ್ಸಿನವರು ಟಚ್ ಮಾಡಲು ಸಾಧ್ಯವಾಗಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಡಾಲರ್ಸ್ ಕಾಲೋನಿಯ ಬಿಎಸ್‍ವೈ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ...

ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ- ವೀರಪ್ಪ ಮೊಯ್ಲಿ

2 months ago

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. 5 ವರ್ಷನೂ ಎಚ್‍ಡಿ ಕುಮಾರಸ್ವಾಮಿ ಅವರೇ ಸಿಎಂ ಆಗಿರಬೇಕು ಅಂತ ಮಾಜಿ ಮುಖ್ಯಮಂತ್ರಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಐತಿಹಾಸ ಪ್ರಸಿದ್ಧ ನಂದಿಗಿರಿಧಾಮದಲ್ಲಿ...

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ನನ್ನ ಮಾತಿಗೆ ಬದ್ಧ: ಸಿದ್ದರಾಮಯ್ಯ

2 months ago

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಇದೇ ನನ್ನ ಕೊನೆ ಚುನಾವಣೆ, ಮುಂದಿನ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೆ. ಈ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದು ಮಾಜಿ ಸಿಎಂ, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಸಮನ್ವಯ ಸಮಿತಿ ಸಭೆ...

ನಾನು ಸಿಎಂ ಆಗ್ತೀನಿ ಅಂತ ಹೇಳಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ

2 months ago

ಬಾಗಲಕೋಟೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ, ಆಗ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರ ಸಂಬಂಧ ಬಾದಾಮಿಗೆ ಆಗಮಿಸಿ...