Wednesday, 20th March 2019

Recent News

3 weeks ago

ಬಂಡೀಪುರ ಕಾಡ್ಗಿಚ್ಚು- ಗಮನಿಸಿ, ವೈರಲ್ ಆಗ್ತಿದೆ ಫೇಕ್ ಚಿತ್ರಗಳು

ಚಾಮರಾಜನಗರ: ಬಂಡೀಪುರದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶ ಸುಟ್ಟು ಹೋಗಿದ್ದು, ಸಾಕಷ್ಟು ವನ್ಯಜೀವಿಗಳು ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಟೋಗಳು ಹರಿದಾಡುತ್ತಿವೆ. ಕೊಲಂಬಿಯಾ, ಸ್ಪೇನ್, ಕ್ಯಾಲಿಫೋರ್ನಿಯಾ, ಇಂಡೊನೇಷ್ಯಾ ಹೀಗೇ ಹಲವೆಡೆ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿಗೆ ಬಲಿಯಾದ ಪ್ರಾಣಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಇದೇ ಬಂಡೀಪುರ ಅರಣ್ಯದ ಕಾಡ್ಗಿಚ್ಚಿಗೆ ಸಾವನ್ನಪ್ಪಿದ ವನ್ಯಜೀವಿಗಳು ಅಂತ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ರಕ್ಷಣೆಯ ಪ್ರಧಾನ ಅಧಿಕಾರಿ ಪುನ್ನತಿ ಶ್ರೀಧರ್ ಅವರು, […]

4 weeks ago

ಒಂದು ವಾರ ಬಂಡಿಪುರದಲ್ಲಿ ಸಫಾರಿ ಬಂದ್!

ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆ ಒಂದು ವಾರಗಳ ಕಾಲ ಸಫಾರಿ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ಈ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡಿಪುರದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಪರಿಣಾಮ ಬೆಂಕಿಯಿಂದ ಬಂಡಿಪುರ ಕಾಡಿನ ಸಫಾರಿ ಝೋನ್ ನಾಶವಾಗಿದೆ. ಆದರಿಂದ ಸಫಾರಿ ಝೋನ್‍ನಲ್ಲಿ ಸಫಾರಿ ಬಂದ್ ಮಾಡಲಾಗಿದೆ. ನೂರಾರು ಪ್ರವಾಸಿಗರು...

ಮತ್ತೆ ಕಾಡಂಚಿನ ಗ್ರಾಮಕ್ಕೆ ಕಾಲಿಟ್ಟ ಹುಲಿರಾಯ – ವ್ಯಾಘ್ರನನ್ನು ಕಂಡು ಬೆಚ್ಚಿಬಿದ್ದ ಜನ

1 month ago

ಚಾಮರಾಜನಗರ: ಕಳೆದ ಒಂದು ವಾರದಿಂದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಸುತ್ತ ಮುತ್ತ ಕಾಣಿಕೊಳ್ಳುತ್ತಿರುವ ಹುಲಿಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಹುಲಿ ಪ್ರತ್ಯಕ್ಷವಾಗಿ ಜನರನ್ನು ಬೆಚ್ಚಿ ಬೀಳಿಸಿದೆ. ಬೇಸಿಗೆ ಕಾಲ ಸಮೀಸುತ್ತಿರುವ ಕಾರಣಕ್ಕೆ...

ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಾಡಾನೆ ಕಾರ್ಯಚರಣೆ- ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯ

2 months ago

ಚಾಮರಾಜನಗರ: ಬೇಸಿಗೆ ಆರಂಭವಾಗುತ್ತಿದ್ದಂತೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಿಂದ ನಾಡಿನತ್ತ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಕಾಡಿಗೆ ಓಡಿಸಲು ಕಾರ್ಯಚರಣೆ ಮಾಡಿದ್ದಾರೆ. ಈ ಅದ್ಭುತ ವಿಡಿಯೋ ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ನೋಡುಗರ ಮನ ಗೆದ್ದಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ...

ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ: ಸಚಿವ ಪುಟ್ಟರಂಗಶೆಟ್ಟಿ

2 months ago

ಚಾಮರಾಜನಗರ: ಅತೃಪ್ತರಿಗೆ ಸ್ಥಾನಮಾನ ನೀಡುವ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮೈತ್ರಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನಮಾನ ನೀಡಿದೆ....

ಕಾಡಾನೆ ಕಾಲ್ತುಳಿತಕ್ಕೆ ವೃದ್ಧೆ ಸಾವು..!- ಹೆದ್ದಾರಿ ತಡೆದು ಗ್ರಾಮಸ್ಥರ ಆಕ್ರೋಶ

2 months ago

ಚಾಮರಾಜನಗರ: ಬಹಿರ್ದೆಸೆಗೆಂದು ತೆರೆಳಿದ್ದ ವೃದ್ಧೆ ಮನೆಗೆ ಮರಳುವಾಗ ದಾರಿ ಮಧ್ಯೆ ಆನೆ ತುಳಿದು ಆಕೆ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಮಹಂತಾಳಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಹಂತಾಳಪುರ ಗ್ರಾಮದ ನಿವಾಸಿ ಶಿವಮ್ಮ(65) ಆನೆ ದಾಳಿಗೆ ಬಲಿಯಾದ ವೃದ್ಧೆ. ಮಹಾಂತಾಳಪುರದ ಸುತ್ತಮುತ್ತ...

ಜಡ್ಜ್ ಮುಂದೆ ಸುಳ್ವಾಡಿ ವಿಷ ದುರಂತದ ಆರೋಪಿಗಳು ಹಾಜರು – ಕೋರ್ಟ್ ವಿಚಾರಣೆಯಲ್ಲಿ ಏನಾಯ್ತು?

3 months ago

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ದುರಂತದಲ್ಲಿ ಬಂಧನವಾಗಿರುವ ನಾಲ್ವರು ಆರೋಪಿಗಳನ್ನು ಇಂದು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಜಿಲ್ಲೆಯ ಕೊಳ್ಳೇಗಾಲದ ತಾಲೂಕು ನ್ಯಾಯಾಲಯಕ್ಕೆ ಇಂದು ಬಂಧಿತ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮೀಜಿ, ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಹಾಜರಾಗಿದ್ದಾರೆ. ಈ...

ಆನೆ ಓಡಿಸಲು ಸಿಡಿಸಿದ ಗುಂಡಿನ ಬಾಲ್ಸ್ ತಗುಲಿ ಬಾಲಕರಿಗೆ ಗಾಯ

3 months ago

ಚಾಮರಾಜನಗರ: ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಹಾರಿದ ಬಾಲ್ಸ್ ಗಳು ತಗುಲಿ ಐವರು ಬಾಲಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರವೀಣ್, ದರ್ಶನ್, ಸುಜೀತ್, ಸಿದ್ದಾರ್ಥ್ ಮತ್ತು ರಘುವೀರ್ ತಲೆಗೆ ಬಾಲ್ಸ್...