Sunday, 17th November 2019

5 months ago

ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ

ಮಂಡ್ಯ: 2018 ನವೆಂಬರ್ 24ರಂದು ಜಿಲ್ಲೆಯ ಪಾಂಡವಪುರದ ಕನಗನಮರಡಿ ಎಂಬ ಗ್ರಾಮದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 30 ಜನರು ಸಾವನ್ನಪಿದ್ದರು. ಈ ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂ. ಹಣ ಬಂದಿದೆ. ಆದರೆ ಈ ವಿಚಾರ ಈಗ ರಾಜಕೀಯ ತಿರುವು ಪಡೆದು ಚರ್ಚೆಗೆ ಕಾರಣವಾಗಿದೆ. ಇದೀಗ ಎಲ್ಲ ಗೊಂದಲಗಳಿಗೆ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ. ಶ್ರೀಮತಿ ಸುಮಲತಾ ಅಂಬರೀಶ್ ರವರೇ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದಲ್ಲಿ ದಿನಾಂಕ […]

11 months ago

ಮಂಡ್ಯ ಬಸ್ ದುರಂತದ ನಾಲೆಗೆ ತಡೆಗೋಡೆ ನಿರ್ಮಾಣ- ಶಾಂತಿ ಹೋಮ ನಡೆಸಲು ಗ್ರಾಮಸ್ಥರ ನಿರ್ಧಾರ

ಮಂಡ್ಯ: 30 ಜನರನ್ನು ಬಲಿ ಪಡೆದ ಕನಗನಮರಡಿ ಬಸ್ ದುರಂತದ ನಂತರ ಎಚ್ಚೆತ್ತುಕೊಂಡ ಸರ್ಕಾರ ನಾಲೆಗೆ ತಡೆಗೋಡೆಯನ್ನು ನಿರ್ಮಿಸಿದೆ. ಹಾಗೆಯೆ ಗ್ರಾಮಸ್ಥರು ಸ್ಥಳದಲ್ಲಿ ಶಾಂತಿ ಹೋಮ ನಡೆಸಲು ಮುಂದಾಗಿದ್ದಾರೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ನಾಲೆಯ ಎಡಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಸರ್ಕಾರ ತಡೆಗೋಡೆ ನಿರ್ಮಾಣ ಮಾಡಿದೆ. ಅಷ್ಟೆ ಅಲ್ಲದೆ ದುರಂತದಿಂದ ಎಚ್ಚೆತ್ತುಕೊಂಡ ಸರ್ಕಾರ ಅಪಘಾತ ನಡೆದ...

ರಸ್ತೆ ಅಭಿವೃದ್ಧಿಗೆ ಕೈ ಹಾಕಿದಾಗ ಪ್ರತಿಭಟನೆ ಆಗುತ್ತೆ, ಇನ್ನಾದ್ರೂ ಸಮಸ್ಯೆ ಬಗೆಹರಿಯಬೇಕು: ಅಂಬರೀಶ್

12 months ago

ಮಂಡ್ಯ: ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮಾಜಿ ಸಚಿವ ಅಂಬರೀಶ್ ಸಾಂತ್ವನ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಚಾಲಕರೂ ಅದೇ ಮಾರ್ಗವಾಗಿ ನಿತ್ಯವೂ ಬಸ್ ಚಾಲನೆ ಮಾಡುತ್ತಾರೆ. ಹೀಗಿರುವಾಗ ಅಪಾಯದ ಸ್ಥಳ ಅರಿತು ಚಾಲನೆ ಮಾಡಬೇಕಿತ್ತು. ಆದರೆ...

300 ಮೀಟರ್ ಎತ್ತರದಿಂದ ನದಿಗೆ ಉರುಳಿದ ಬಸ್ – 11 ಮಂದಿ ಸಾವು

12 months ago

ಡೆಹ್ರಾಡೂನ್: ಉತ್ತರಕಾಶಿಯಿಂದ ವಿಕಾಸನಗರಕ್ಕೆ ತೆರೆಳುತ್ತಿದ್ದ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 123 ಬಳಿ ಆಯ ತಪ್ಪಿ ಯಮುನಾ ನದಿಗೆ ಉರುಳಿ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 300 ಮೀ. ಮೇಲಿಂದ ಬಸ್ಸು ಪಲ್ಟಿಯಾಗಿ ನದಿಗೆ ಬಿದ್ದಿದೆ. ಬಸ್ಸಿನಲ್ಲಿದ್ದ 11 ಮಂದಿ...

ಪ್ರಸವಕ್ಕೆ ಮುನ್ನ ದಿನವೇ ವಿಧಿಯಾಟಕ್ಕೆ ಬಲಿಯಾದ ಅವಳಿ ಮಕ್ಕಳ ತುಂಬು ಗರ್ಭಿಣಿ!

1 year ago

ಹೈದರಾಬಾದ್: ವಿಧಿಯಾಟದ ಮುಂದೇ ಯಾರು ಹೊರತಲ್ಲ ಎಂಬುದಕ್ಕೆ ತೆಲಂಗಾಣದಲ್ಲಿ ನಡೆದ ಭೀಕರ ಬಸ್ ಅಪಘಾತ ಮತ್ತೊಮ್ಮೆ ಸಾಕ್ಷಿಯಾಗಿದ್ದು, ಇದುವರೆಗೂ 60 ಜನರನ್ನು ಬಲಿ ಪಡೆದ ಘಟನೆಯ ಹಿಂದಿನ ಮಾನವೀಯ ಅಂಶಗಳು ಮನಕಲಕುವಂತಿದೆ. ಹೌದು, ಕಳೆದ ಎರಡು ದಿನಗಳ ಹಿಂದೆಯಷ್ಟೇ ತೆಲಂಗಾಣದ ಜಗ್ತಿಯಾಲ್...

300 ಅಡಿ ಕಂದಕಕ್ಕೆ ಉರುಳಿದ ಬಸ್ – 33 ಮಂದಿ ಸ್ಥಳದಲ್ಲೇ ಸಾವು

1 year ago

ಮುಂಬೈ: ಬಸ್‍ವೊಂದು 300 ಅಡಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 30 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಂಬೇನಾಲಿ ಘಾಟ್ ಪ್ರದೇಶದಲ್ಲಿ ನಡೆದಿದೆ. ಬಸ್ ಅಪಘಾತದ ಬಳಿಕ ಬಸ್‍ನಲ್ಲಿದ್ದ ವ್ಯಕ್ತಿಯೊಬ್ಬರು ಫೋನ್ ಮಾಡಿ ಪೊಲೀಸರಿಗೆ...

ಖಾಸಗಿ ಬಸ್ ಪಲ್ಟಿ: ಓರ್ವನ ದುರ್ಮರಣ

3 years ago

ಕಾರವಾರ: ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 35 ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಇಳಸೂರಿನಲ್ಲಿ ನೆಡೆದಿದೆ. ಮೃತರನ್ನು 35 ವರ್ಷದ ದಿನೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್...