Wednesday, 17th July 2019

8 months ago

ಎಸಿಬಿಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ತಿದೆ: ಬಿಎಸ್‍ವೈ

ಬೀದರ್: ಗಾಲಿ ಜನಾರ್ದನ ರೆಡ್ಡಿಯವರ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆಯ ಉದ್ಘಾಟನೆಗೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ಧನಿಲ್ಲ. ಪ್ರಕರಣಕ್ಕೆ ಸಂಬಂಧ ತನಿಖೆಯಾಗಿ ಸತ್ಯಾಂಶ ಹೊರಗೆ ಬರಲಿ, ಅದಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಟೀಕೆ ಮಾಡಲ್ಲ. ಆದರೆ ಒಟ್ಟಾರೆಯಾಗಿ ಹೇಳಬೇಕೆಂದರೇ ರಾಜ್ಯ ಸರ್ಕಾರ […]

9 months ago

ಹಾಲು ಕುಡಿದವರೇ ಬದುಕಲ್ಲ, ಎಣ್ಣೆ ಕುಡಿದವ್ರು ಬದುಕ್ತಾರಾ: ಬಿಜೆಪಿಗೆ ಮಾತಿನಲ್ಲೇ ಕುಕ್ಕಿದ ಭೋಜೇಗೌಡ

ಉಡುಪಿ: ರಾಮನಗರ ಬೆಳವಣಿಗೆ ಬಿಜೆಪಿಗೆ ನಮ್ಮ ಸಮ್ಮಿಶ್ರ ಸರ್ಕಾರದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಕೊಡುಗೆ ಅಂತ ವಿಧಾನಪರಿಷತ್ ಸದಸ್ಯ ಭೋಜೇಗೌಡ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನಗರ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ 63ನೇ ರಾಜ್ಯೋತ್ಸವ ಕೊಡುಗೆ ಇದು. ದೀಪಾವಳಿ ಹಬ್ಬದ ಉಡುಗೊರೆಯನ್ನು ಫಲಿತಾಂಶದ ದಿನ ಸಮ್ಮಿಶ್ರ ಸರಕಾರ ಕೊಡುತ್ತದೆ. ಹಾಲು...

ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಅಮಾನತು ಆದೇಶ ವಾಪಸ್!

9 months ago

ಬೆಂಗಳೂರು: ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿಯ ಅಮಾನತು ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಿಂಪಡೆದುಕೊಂಡಿದ್ದಾರೆ. ಜಮಖಂಡಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎನ್ನುವುದರ ಬಗ್ಗೆ ಬುಧವಾರ ಸಂಗಮೇಶ್ ನಿರಾಣಿ ನಗರದ ಬಸವ ಭವನದಲ್ಲಿ ಸಭೆಯನ್ನು ಕರೆದಿದ್ದರು....

ನಾಳೆ ಮಧ್ಯಾಹ್ನದ ಬಳಿಕ ರಾಜ್ಯ ರಾಜಕೀಯದಲ್ಲಿ ಏರುಪೇರು – ಕಾದು ನೋಡಿ ಎಂದ ಬಿಎಸ್‍ವೈ

9 months ago

ಶಿವಮೊಗ್ಗ: ಕಾಂಗ್ರೆಸ್ ಹಾಗೂ ಜೆಡಿಎಸ್ ಮನೆಗಳು ಬಿಜೆಪಿಯ ಮನೆಗಳಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮನೆಗಳು ಬಿಜೆಪಿಯ ಮನೆಗಳಾಗುತ್ತವೆ. ಮಂಗಳವಾರ ನಾಮಪತ್ರ ಸಲ್ಲಿಕೆ ಮುಗಿದ ಮೇಲೆ ರಾಜಕೀಯ ಏರುಪೇರು ಆಗಲಿದೆ....

ಕಾಂಗ್ರೆಸ್, ಜೆಡಿಎಸ್ ಷಡ್ಯಂತ್ರದಿಂದ ಸಿದ್ದರಾಮಯ್ಯಗೆ ಸೋಲು: ಬಿಎಸ್‍ವೈ

10 months ago

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಷಡ್ಯಂತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ವಿಶ್ವಕರ್ಮ ಯಜ್ಞ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಡಿಎಸ್ಸಿನವರು ರಾಹು, ಕೇತು ಹಾಗೂ ಶನಿಗಳು....

ನಾಡಿನ ಜನತೆ ಬಿಜೆಪಿ ವಿರುದ್ಧ ದಂಗೆ ಏಳಬೇಕು: ಸಿಎಂ ಎಚ್‍ಡಿಕೆ

10 months ago

ಹಾಸನ: ಜನಪರ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ನಾಡಿನ ಜನತೆ ದಂಗೆ ಏಳಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ....

ನನ್ನ ಇತಿಮಿತಿ ನನಗೆ ಗೊತ್ತಿದೆ, ಹದ್ದು ಮೀರಿ ಮಾತಾಡ್ತಿರೋದು ನೀವು: ಸಿಎಂ ವಿರುದ್ಧ ಬಿಎಸ್‍ವೈ ಗರಂ

10 months ago

ಬೆಂಗಳೂರು: ನನ್ನ ಇತಿಮಿತಿ ನನಗೆ ಗೊತ್ತಿದೆ, ಹದ್ದು ಮೀರಿ ಮಾತನಾಡುತ್ತಿರುವುದು ನೀವು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನನ್ನ ಇತಿಮಿತಿ ಏನೆಂಬುದು ನನಗೆ ಗೊತ್ತಿದೆ. ಹದ್ದು...

ಮಾಜಿ ಸಿಎಂ ಬಿಎಸ್‍ವೈಗೆ ಮುಖ್ಯಮಂತ್ರಿ ಎಚ್‍ಡಿಕೆ ಎಚ್ಚರಿಕೆ!

10 months ago

ಬೆಂಗಳೂರು: ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿರುವುದು ನಿಜ. ಆದ್ರೆ ಅಧಿಕಾರ ನನ್ನ ಕೈಯಲ್ಲಿದೆ ಅಂತ ಸಿಎಂ ಕುಮಾರಸ್ವಾಮಿಯವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು...