Saturday, 18th January 2020

3 weeks ago

ಮನೆ ಮಂದಿ ಮಲಗಿದ್ದಾಗ 20 ಲಕ್ಷ ಮೌಲ್ಯದ ಬಂಗಾರ ಎಗರಿಸಿದ ಖದೀಮ

ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಹೆಚ್ಚಾಗಿದ್ದು, ಇಂದು ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದಾಗ ವೈದ್ಯರೊಬ್ಬರ ನಿವಾಸಕ್ಕೆ ನುಗ್ಗಿದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಬೀದರ್‍ನ ಬಸವ ನಗರದಲ್ಲಿರುವ ಡಾ. ರವೀಂದ್ರ ಪಾಟೀಲ್ ಅವರ ಮನೆಯಲ್ಲಿ ಇಂದು ಬೆಳಗಿನ ಜಾವ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಒಟ್ಟು 20 ಲಕ್ಷ ರೂ. ಬೆಲೆ ಬಾಳುವ 50 ತೋಲೆ ಬಂಗಾರ ಕದ್ದು ಖದೀಮ ಪರಾರಿಯಾಗಿದ್ದಾನೆ. ಮನೆಯವರು ಬೆಳಗ್ಗೆ ಎದ್ದ ತಕ್ಷಣ ವಿಷಯ ಗೊತ್ತಾಗಿ ಸ್ಥಳೀಯ […]

3 weeks ago

ಶೋರೂಂಗೆ ನುಗ್ಗಿದ್ರು, ಆ ಕಡೆ ಈ ಕಡೆ ನೋಡಿದ್ರು – ಅಲ್ಮೇರಾ ಒಡೆದು ದೋಚಿದ್ರು

ಬೀದರ್: ಶೋರೂಂ ಶಟರ್ ಮುರಿದು, ಗ್ಲಾಸ್ ಒಡೆದು ಅಲ್ಮೇರಾದಲ್ಲಿದ್ದ 24,500 ರೂ.ಗಳನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನಿರಂಜನ ಅಷ್ಟೂರೆ ಅವರ ಮಾಲೀಕತ್ವದ ಮಹಾಲಕ್ಷ್ಮಿ ಮೋಟಾರ್ಸ್ ಶೋರೂಮಿನಲ್ಲಿ ನಸುಕಿನ ಜಾವ ಕಳ್ಳತನ ನಡೆದಿದೆ. ಕಳ್ಳರು 24,500 ರೂ.ಗಳನ್ನು ದೋಚಿರುವುದು ಮಾತ್ರವಲ್ಲದೆ 33 ಸಾವಿರ ರೂ. ಬೆಲೆ ಬಾಳುವ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ....

ರಸ್ತೆ ಗುಂಡಿಗಳಿಂದಾಗಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್: ಕೆಳಗೆ ಬಿದ್ದು ಚಾಲಕ ಸಾವು

3 weeks ago

ಬೀದರ್: ರಸ್ತೆ ಗುಂಡಿಗಳಿಂದಾಗಿ ನಿಯಂತ್ರಣ ತಪ್ಪಿ ಚಾಲಕ ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಬಿದ್ದು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಬಂಡಗರವಾಡಿ ಬಳಿ ನಡೆದಿದೆ. ಬಸವಕಲ್ಯಾಣ ತಾಲೂಕಿನ ಕೋಹಿನೂರವಾಡಿ ಗ್ರಾಮದ ಸಾಯಿಬಣ್ಣ ಈರಣ್ಣ ಜಮಾದಾರ್ (34) ಮೃತ ಚಾಲಕ. ಸಾಯಿಬಣ್ಣ ಅವರು ಭಾನುವಾರ ತಗ್ಗು...

ಕಳಪೆ ಕಾಮಗಾರಿ ಆರೋಪ – ಶಾಸಕ ರಹೀಂಖಾನ್ ದಿಢೀರ್ ಭೇಟಿ

3 weeks ago

ಬೀದರ್: ಕಳಪೆ ಕಾಮಗಾರಿ ಆರೋಪ ಹಿನ್ನೆಲೆಯಲ್ಲಿ ಮಾಜಿ ಸಚಿವರು, ಬೀದರ್ ಉತ್ತರ ಕ್ಷೇತ್ರದ ಹಾಲಿ ಶಾಸಕರಾದ ರಹೀಂಖಾನ್ ತನ್ನ ಕ್ಷೇತ್ರದ ಸಿಸಿ ರೋಡ್ ಕಾಮಗಾರಿ ಪರಿಶೀಲನೆ ಮಾಡಿ ಗುತ್ತಿಗೆದಾರನಿಗೆ ಬಿಸಿ ಮುಟ್ಟಿಸಿದ್ದಾರೆ. ಇಂದು ಬೀದರ್ ನಗರದ ವಾರ್ಡ್ ನಂಬರ್ 24ಕ್ಕೆ ರಹೀಂಖಾನ್...

ಅಗ್ನಿ ಅವಘಡ- 5 ಲಕ್ಷ ರೂ. ಮೌಲ್ಯದ ಸೋಯಾ ಭಸ್ಮ

3 weeks ago

ಬೀದರ್: ಜಿಲ್ಲಾ ಉಸ್ತುವಾರಿ ಸಚಿವರ ಸ್ವ-ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ತಡರಾತ್ರಿ 80 ಕ್ವಿಂಟಾಲ್ ಸೋಯಾ ಸಂಪೂರ್ಣ ಬೆಂಕಿ ಆಹುತಿಯಾಗಿದೆ. ದೇವರಾವ್ ಜಾದವ್ ಅವರಿಗೆ ಸೇರಿದ ಸುಮಾರು 5 ಲಕ್ಷ ರೂ.ನ ಸೋಯಾ ಅಗ್ನಿಗೆ ಆಹುತಿಯಾಗಿದೆ. ಬೀದರ್ ಜಿಲ್ಲೆಯ ಔರಾದ್...

ನೀರಿನ ಕೊರತೆ ಬಗ್ಗೆ ದೂರು – 24 ಗಂಟೆಯೊಳಗೆ ಸಚಿವ ಪ್ರಭು ಚೌವ್ಹಾಣ್‍ರಿಂದ ಸ್ಪಂದನೆ

3 weeks ago

ಬೀದರ್: ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌವ್ಹಾಣ್ ಅವರು ಸ್ಥಾಪಿಸಿರುವ ದೂರು ಪೆಟ್ಟಿಗೆಯಲ್ಲಿ ದಾಖಲಾದ ದೂರುವೊಂದಕ್ಕೆ 24 ಗಂಟೆಯೊಳಗಡೆ ಸ್ಪಂದನೆ ಸಿಕ್ಕಿದೆ. ಬೀದರ್ ಜಿಲ್ಲೆ ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕುಡಿಯುವ ನೀರಿನ ಕೊರತೆಯಾಗಿದೆ...

ಕುಡಿದ ಅಮಲಿನಲ್ಲಿ ನಾಲ್ವರಿಂದ ಯುವಕನ ಬರ್ಬರ ಹತ್ಯೆ

3 weeks ago

ಬೀದರ್: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ನಾಲ್ವರು ಯುವಕರು ಚಾಕುವಿನಿಂದ ಇರಿದು ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ನಗರದ ಉಸ್ಮಾನ್ ಗಂಜ್‍ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮಹಮ್ಮದ್ ಅಕ್ಬರ್ (20) ಕೊಲೆಯಾದ ದುರ್ದೈವಿ. ತಡರಾತ್ರಿ ಮೈಲೂರಿನ ನಾಲ್ವರು ಮುಸ್ಲಿಂ ಯುವಕರು...

ಕೆರೆ ನೀರಿನಲ್ಲಿ ಸಿಲುಕಿದ್ದ ಎಮ್ಮೆ ರಕ್ಷಿಸಲು ಹೋಗಿ ಯುವಕ ಸಾವು

4 weeks ago

ಬೀದರ್: ಎಮ್ಮೆ ರಕ್ಷಿಸಲು ಹೋಗಿದ್ದ ಯುವಕನ್ನೊಬ್ಬ ಕೆರೆ ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗೋಪಾಲ ರೆಡ್ಡಿ ಪಲರಡ್ಡೆ(22) ಮೃತ ಯುವಕ. ಇಂದು ಮಧ್ಯಾಹ್ನ ಎಮ್ಮೆ ಮೇಯಿಸಲೆಂದು ಜಮೀನಿಗೆ ತೆರಳಿದಾಗ, ಗ್ರಾಮದ...