Sunday, 25th August 2019

2 days ago

ರಾತ್ರೋರಾತ್ರಿ ಅರೆ ಬೆತ್ತಲೆಯಾಗಿ ಎಸ್‍ಬಿಐ ಬ್ಯಾಂಕ್‍ಗೆ ಕನ್ನ ಹಾಕಿದ ಕಳ್ಳ

ಬೀದರ್: ತಡರಾತ್ರಿ ಎಸ್‍ಬಿಐ ಬ್ಯಾಂಕ್‍ಗೆ ನುಗ್ಗಿ ಕಂಪ್ಯೂಟರ್ ಹಾಗೂ ಕೆಲವು ಸಲಕರಣೆಗಳನ್ನು ಕದ್ದು ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಬೀದರ್‍ ನಲ್ಲಿ ನಡೆದಿದೆ. ಬೀದರ್ ತಾಲೂಕಿನ ಖೇಣಿ ರಜೋಳ ಗ್ರಾಮದ ಎಸ್‍ಬಿಐ ಬ್ಯಾಂಕ್ ಕಿಟಕಿ ಒಡೆದು ಅರೆ ಬೆತ್ತಲೆಯಾಗಿ ಒಳ್ಳ ನುಗ್ಗಿದ ದರೋಡೆಕೋರ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೈಸ್ ಖ್ಯಾತಿಯ ಅಶೋಕ್ ಖೇಣಿ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದಿಂದ ತೀವ್ರ […]

4 days ago

ಬೀದರ್‌ನಲ್ಲಿ ಮರಗಳಿಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

ಬೀದರ್: ಮರಗಳಿಗೆ ರಾಖಿ ಕಟ್ಟುವ ಮೂಲಕ ವಿದ್ಯಾರ್ಥಿನಿಯರು ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ. ಮರ ಉಳಿಸಿ ಕಾಡು ಬೆಳಸಿ ಎಂದು ವಿದ್ಯಾರ್ಥಿನಿಯರು ಪರಿಸರದ ಜಾಗೃತಿ ಮೂಡಿಸಿದ್ದಾರೆ. ಮರಗಳ ಮಾರಣಹೋಮದಿಂದಾಗಿ ಇಂದು ಪ್ರಕೃತಿ ವಿಕೋಪಗಳು, ಬರಗಾಲ ಸೃಷ್ಟಿಯಾಗಿ ಹನಿ ಹನಿ ನೀರಿಗೂ ರಾಜ್ಯದಲ್ಲಿ ಹಾಹಾಕಾರ ಶುರುವಾಗಿದ್ದು, ಇಂದು ಪರಿಸರವನ್ನು ಹೇಗೆ ನಾವು ಕಾಪಾಡಿಕೊಳ್ಳಬೇಕು ಎಂದು ನೂರಾರು ವಿದ್ಯಾರ್ಥಿನಿಯರು ಸಮಾಜಕ್ಕೆ...

ಕುಡಿಯುವ ನೀರಿನ ಟ್ಯಾಂಕಿಗೆ ಕಲುಷಿತ ನೀರು ಮಿಶ್ರಣ – 10 ಜನ ಅಸ್ವಸ್ಥ

2 weeks ago

ಬೀದರ್: ಕುಡಿಯುವ ನೀರಿನ ಟ್ಯಾಂಕ್‍ಗೆ ಮಿಶ್ರಣಗೊಂಡ ಕಲುಷಿತ ನೀರನ್ನು ಕುಡಿದ 10 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದಲ್ಲಿ ಇಂದು ನಡೆದಿದೆ. ಗ್ರಾಮದ ಚರಂಡಿ ನೀರು ಟ್ಯಾಂಕ್‍ಗೆ ಸಂಪರ್ಕವಿರುವ ಬೋರ್‍ವೆಲ್ ಒಳಗೆ ಮಿಶ್ರಣವಾಗಿದ್ದು, ಈ...

ಬೀದರ್‌ನಲ್ಲಿ ಮಳೆಗಾಗಿ ಮುಸ್ಲಿಮರಿಂದ ಪ್ರಾರ್ಥನೆ

2 weeks ago

ಬೀದರ್: ಒಂದು ಕಡೆ ಭೀಕರ ಪ್ರವಾಹದಿಂದ ರಾಜ್ಯದ ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿಸಿದ್ದರೆ, ಗಡಿ ಜಿಲ್ಲೆ ಬೀದರ್‌ನಲ್ಲಿ ಮಾತ್ರ ಬರಗಾಲ ತಾಂಡವಾಡುತ್ತಿದೆ. ಬರಗಾಲದಿಂದ ತತ್ತರಿಸಿ ಹೋಗಿರುವ ಜಿಲ್ಲೆಯ ಜನರಿಗೆ ವರುಣ ದೇವ ಕೃಪೆ ತೋರಲಿ ಎಂದು ಬೀದರ್‌ನಲ್ಲಿ ಇಂದು ಈದ್ಗಾ ಮೈದಾನದಲ್ಲಿ...

ಬ್ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು

3 weeks ago

ಬೀದರ್: ಹೆರಿಗೆಯ ನಂತರ ಬಾಣಂತಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷಿಸಿದ್ದರಿಂದ ಮಹಿಳೆ ಪ್ರಾಣ ಕಳೆದುಕೊಂಡ ಘಟನೆ ಬೀದರ್ ನ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಬೀದರ್ ತಾಲೂಕಿನ ಚಟನ್ನಳ್ಳಿ ಗ್ರಾಮದ ನಾಗಮ್ಮ ಎರಡು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು....

ಪಂಚಾಯಿತಿ ಅಧಿಕಾರಿಗಳ ಗೋಲ್ಮಾಲ್ – ಬಡವರಿಗೆ ಸೇರಬೇಕಿದ್ದ ಜಮೀನು ಖಾಸಗಿ ವ್ಯಕ್ತಿ ಪಾಲು

4 weeks ago

– ಕೋಟ್ಯಂತರ ರೂ. ಜಮೀನು ಖಾಸಗಿಯವರಿಗೆ ಬೀದರ್: ಸರ್ಕಾರ ಬಡ ಫಲಾನುಭವಿಗಳಿಗೆ ನೀಡಿದ್ದ ಸಿ-ಫಾರ್ಮ್ ಜಮೀನನ್ನು ಪಂಚಾಯಿತಿ ಅಧಿಕಾರಿಗಳು ಖಾಸಗಿ ವ್ಯಕ್ತಿ ಬಳಿ ಕೋಟ್ಯಂತರ ರೂ. ಹಣ ಪಡೆದು ಮಾರಿದ್ದಾರೆ ಎನ್ನುವ ಆರೋಪ ಬಸವಕಲ್ಯಾಣ ತಾಲೂಕಿನಲ್ಲಿ ಕೇಳಿಬಂದಿದೆ. ಪಂಚಾಯತಿ ಅಧಿಕಾರಿಗಳ ಭಾರೀ...

ಕರಾವಳಿಯಲ್ಲಿ ಧಾರಾಕಾರ ಮಳೆ – ಇತ್ತ ಬೀದರ್‌ನಲ್ಲಿ ವರುಣನಿಗಾಗಿ ಪ್ರಾರ್ಥನೆ

1 month ago

ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಭಾರೀ ಮಳೆ ಸುರಿಯುತ್ತಿದೆ. ಉಡುಪಿಯಲ್ಲಿ ಕಳೆದ 24 ಗಂಟೆಯಲ್ಲಿ 60 ಮಿಲಿಮೀಟರ್ ಮಳೆ ದಾಖಲಾಗಿದ್ದು, ನಾಲ್ಕನೇ ದಿನವು ನಿರಂತರ ವರ್ಷಧಾರೆ ಆಗುತ್ತಿದೆ. ಜಿಲ್ಲೆಯ ಕುಂದಾಪುರ, ಕಾರ್ಕಳದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಾರ್ಮೋಡ ಮುಂದುವರಿದಿದ್ದು...

ಸಾಲಬಾಧೆ ತಾಳಲಾರದೆ ಬೀದರ್ ರೈತ ಆತ್ಮಹತ್ಯೆ

1 month ago

ಬೀದರ್: ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಪಾಶಾಪೂರ್ ಗ್ರಾಮದಲ್ಲಿ ನಡೆದಿದೆ. ರಾಜಪ್ಪ ಬಿರಾದರ್ (42) ಆತ್ಮಹತ್ಯೆಗೆ ಶರಣಾದ ರೈತ. ವಿವಿಧ ಬ್ಯಾಂಕುಗಳಲ್ಲಿ ಆರು ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅಲ್ಲದೆ,...