Thursday, 21st November 2019

Recent News

4 days ago

ಹಾಲಾಯ್ತು, ಈಗ ಆಲ್ಕೋಹಾಲ್‍ನಲ್ಲೂ ಕಲಬೆರಕೆ – ಅರ್ಧ ಬಾಟಲ್ ಖಾಲಿ ಮಾಡ್ದಾಗ ಗೊತ್ತಾಯ್ತು ಸತ್ಯ

ಕೋಲಾರ: ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನ ಬೈರಸಂದ್ರ ಬಳಿಯ ಶ್ರೀ ಲಕ್ಷ್ಮೀ ವೈನ್ಸ್‍ನಲ್ಲಿ ಖರೀದಿಸಿದ ಬಿಯರ್ ನಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ. ಚಿಲ್ಡ್ ಬಿಯರ್ ನಲ್ಲಿ ಕಲಬೆರಕೆಯಾಗಿದ್ದು, ಅರ್ಧ ಬಾಟಲಿ ಕುಡಿದ ಬಳಿಕ ಇದು ಗ್ರಾಹಕನ ಅರಿವಿಗೆ ಬಂದಿದೆ. ಈ ಕುರಿತು ಬಾರ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಕ್ಸ್ ಮಾಡುವ ವೇಳೆ ಏನೋ ಬಿದ್ದಿದೆ ಎಂದು […]

8 months ago

ವಿಶ್ವಕಪ್ ಪ್ರೇಕ್ಷಕರಿಗೆ ಬಂಪರ್ ಅಫರ್ ಕೊಟ್ಟ ಐಸಿಸಿ!

ಲಂಡನ್: ಕ್ರಿಕೆಟ್ ಮೈದಾನದಲ್ಲಿ ವಿಶ್ವಕಪ್ ಮ್ಯಾಚ್ ನೋಡುತ್ತಾ ಕೈಯಲ್ಲಿ ತಣ್ಣನೆಯ ಬಿಯರ್ ಹಿಡಿದು ಪಂದ್ಯ ವೀಕ್ಷಣೆ ಮಾಡಬೇಕೆಂದು ಆಸೆ ಹೊಂದಿರುವ ಕ್ರಿಕೆಟ್ ಪ್ರೇಮಿಗಳಿಗೆ ಐಸಿಸಿ ಬಂಪರ್ ಆಫರ್ ನೀಡಿದೆ. ಬಿಯರ್ ಬೆಲೆ ದುಬಾರಿ ಎಂದು ಮೂಗು ಮುರಿಯುತ್ತಿದ್ದ ಮಂದಿಗೆ ಡಿಸ್ಕೌಂಟ್ ಬೆಲೆಯಲ್ಲಿ ಬಿಯರ್ ನೀಡುವುದಾಗಿ ತಿಳಿಸಿದೆ. ಈ ಬಾರಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್...

ಪೋಸ್ಟರ್‌ಗೆ ಬಿಯರ್ ಅಭಿಷೇಕ – ನಟ ಪುನೀತ್ ಪ್ರತಿಕ್ರಿಯೆ

10 months ago

ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷೆಯ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಬಿಡುಗಡೆ ಆಗಿದ್ದು, ಸಿನಿಮಾಗೆ ಭರ್ಜರಿ ಸ್ವಾಗತ ದೊರೆತಿದೆ. ಆದರೆ ಅಭಿಮಾನಿಯೊಬ್ಬ ಪುನೀತ್ ಅವರ ಪೋಸ್ಟರ್‌ಗೆ ಬಿಯರ್ ಅಭಿಷೇಕ ಮಾಡಿ ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಪವರ್...

ಮುಂದಿನ ದಿನಗಳಲ್ಲಿ ಬೀಯರ್ ಪ್ರಿಯರಿಗೆ ಕಾದಿದೆ ಶಾಕಿಂಗ್ ನ್ಯೂಸ್!

1 year ago

ವಾಷಿಂಗ್ಟನ್: ಬೀಯರ್ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಜಾಗತಿಕ ತಾಪಮಾನ ಏರಿಕೆಯಾದರೆ ಮುಂದಿನ ದಿನಗಳಲ್ಲಿ ಬೀಯರ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಯಿದೆ. ಹೌದು, ಬೀಯರ್ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಕಚ್ಚಾವಸ್ತುವಾದ ಬಾರ್ಲಿ ಬೆಳೆಯ ಇಳುವರಿ ಕಡಿಮೆಯಾಗುತ್ತಿದೆ. ಪ್ರಸ್ತುತ ಈಗ ಜಾಗತಿಕ ತಾಪಮಾನ...

ಸಂಪೂರ್ಣ ನಗ್ನಳಾಗಿ ಬಿಯರ್ ಸರ್ವ್ ಮಾಡಿದ ಮಹಿಳೆ- ವಿಡಿಯೋ ವೈರಲ್

1 year ago

ವಾಷಿಂಗ್ಟನ್: ಅಮೆರಿಕಾದ ಮಹಿಳೆಯೊಬ್ಬಳು ಸಂಪೂರ್ಣ ನಗ್ನಳಾಗಿ ಮೈಮೇಲೆ ಬಾಡಿ ಪೇಂಟ್ ಹಚ್ಚಿ ಬಿಯರ್ ಸರ್ವ್ ಮಾಡಿ ಸುದ್ದಿಯಾಗಿದ್ದಾಳೆ. ಶನೋನ್ ಎಂಬಾಕೆ ಸಂಪೂರ್ಣ ನಗ್ನಳಾಗಿ ಬಿಯರ್ ಸರ್ವ್ ಮಾಡಿದ್ದಾಳೆ. ಶನೋನ್ ಮೇರಿಲ್ಯಾಂಡ್‍ನ ಲೀಸ್ ಲ್ಯಾಂಡಿಂಗ್ ಡಾಕಿಂಗ್ ಬಾರ್ ನಲ್ಲಿ ವೇಟ್ರೆಸ್ ಆಗಿ ಕೆಲಸ...

ಬಿಯರ್ ಕೇವಲ ಜ್ಯೂಸ್ ಅಷ್ಟೇ – ರವಿಶಾಸ್ತ್ರಿ

1 year ago

ಮುಂಬೈ: ಬಿಯರ್ ಕೇವಲ ಜ್ಯೂಸ್ ಅಷ್ಟೇ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎಂದು ಹೇಳಿದ್ದಾರೆ. `ಬ್ರೇಕ್ ಫಸ್ಟ್ ವಿಥ್ ಚಾಂಪಿಯನ್’ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಯಾವುದೇ ಕ್ರಿಕೆಟರನ್ನು ಆತ ಕುಡಿಯುವ ಬಿಯರ್ ನಿಂದ ಆತನ...

ಯುವತಿಯ ಬಿಯರ್ ಗ್ಲಾಸ್ ಗೆ ಬಿತ್ತು ಬೇಸ್ ಬಾಲ್ – ವಿಡಿಯೋ ವೈರಲ್

1 year ago

ವಾಷಿಂಗ್ಟನ್: ಆಟಗಾರ ಹೊಡೆದ ಬೇಸ್ ಬಾಲ್ ನೇರವಾಗಿ ಯುವತಿಯ ಬಿಯರ್ ಗ್ಲಾಸ್ ಬಿದ್ದಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಟ್ಲಾಂಟಾ ನಗರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪಾಡ್ರೆಸ್-ಬ್ರೇವ್ಸ್ ತಂಡಗಳ ನಡುವೆ ಬೇಸ್ ಬಾಲ್ ಆಟ...

ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

2 years ago

ಪಣಜಿ: ಹುಡುಗಿಯರೂ ಮದ್ಯಪಾನ ಮಾಡಲು ಶುರು ಮಾಡಿರೋದ್ರಿಂದ ಆತಂಕ ಶುರುವಾಗಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ನನಗೀಗ ಭಯ ಶುರುವಾಗಿದೆ. ಯಾಕಂದ್ರೆ ಹುಡುಗಿಯರೂ ಕೂಡ ಬಿಯರ್ ಕುಡಿಯಲು ಶುರು ಮಾಡಿದ್ದಾರೆ. ಸಹಿಷ್ಣುತೆಯ ಎಲ್ಲೆ ಮೀರ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ....