Wednesday, 24th July 2019

13 hours ago

ಮಾಧ್ಯಮದವರಿಗೆ ಹೃದಯ ತುಂಬಿದ ಅಭಿನಂದನೆಗಳು – ಕುಮಾರಸ್ವಾಮಿ

ಬೆಂಗಳೂರು: ವಿಶ್ವಾಸ ಮತಯಾಚನೆಯಲ್ಲಿ ಸೋತ ಬಳಿಕ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ ಮುಗಿಸಿ ರಾಜಭವನಕ್ಕೆ ಕುಮಾರಸ್ವಾಮಿ ಹೋಗುತ್ತಿದ್ದರು. ಈ ವೇಳೆ ವಿಧಾನಸೌಧದಲ್ಲಿದ್ದ ಮಾಧ್ಯಮದ ವ್ಯಕ್ತಿಗಳು ಪ್ರತಿಕ್ರಿಯೆ ನೀಡಿ ಸರ್ ಎಂದು ಕೇಳಿದ್ದಾರೆ. ಈ ವೇಳೆ, 14 ತಿಂಗಳು ಮೈತ್ರಿ ಸರ್ಕಾರದ ಆಡಳಿತಕ್ಕೆ ರಾಜ್ಯದ ಮಾಧ್ಯಮ ಮಿತ್ರರು ಕೊಟ್ಟ ಸಹಕಾರಕ್ಕೆ ನನ್ನ ಹೃದಯ ತುಂಬಿದ ಅಭಿನಂದನೆಗಳು ಎಂದು ಹೇಳಿ ಕೈ ಮುಗಿದು ಮೈತ್ರಿ ನಾಯಕರ ಜೊತೆ ತೆರಳಿದರು. ವಿಶ್ವಾಸ ಮತಯಾಚನೆಯ ಸಮಯದಲ್ಲಿನ […]

2 days ago

ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ – ಆಯೋಗ ರಚನೆ

ಬೆಂಗಳೂರು: ವಾಲ್ಮೀಕಿ ಸಮುದಾದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರಕ್ಕಾಗಿ ಆಯೋಗವೊಂದನ್ನು ರಚನೆ ಮಾಡಲಾಗಿದೆ. ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ ನೀಡುವುದರ ಬಗ್ಗೆ ಪರಿಶೀಲನೆಗಾಗಿ ನ್ಯಾ.ನಾಗಮೋಹನ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಿದ್ದು, ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಎರಡು ತಿಂಗಳೊಳಗಾಗಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಕಳೆದ ಜೂನ್ 25...

ಚಾಕ್ಲೇಟ್ ಕೊಡ್ತೀನೆಂದು ಮಗುವನ್ನು ಅಪಹರಿಸಿ ಮುಖ್ಯರಸ್ತೆಯಲ್ಲಿ ಬಿಟ್ಟ

3 days ago

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿ, ನಂತರ ವಿಜಯನಗರದ ಮುಖ್ಯರಸ್ತೆಯಲ್ಲಿ ಆಕೆಯನ್ನು ಬಿಟ್ಟು ಹೋಗಿರುವ ಆತಂಕಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯ ವಿಜಯನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಗೋವಿಂದರಾಜನಗರದ ಬಿಬಿಎಂಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ. 8 ವರ್ಷದ...

ಟ್ವೀಟ್ ಮೂಲಕ ಸ್ಪೀಕರ್, ಮೈತ್ರಿ ನಾಯಕರ ಕಾಲೆಳೆದ ಬಿ.ಎಲ್.ಸಂತೋಷ್

3 days ago

ಬೆಂಗಳೂರು: ಬಿಎಸ್‍ಪಿ ಪಕ್ಷದ ಶಾಸಕ ಎನ್ ಮಹೇಶ್ ನಾಳೆ ಸದನಕ್ಕೆ ಗೈರಾಗುವುದಾಗಿ ಘೋಷಿಸಿದ್ದಾರೆ ಎಂದು ಟ್ವೀಟ್ ಮಾಡಿರುವ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸ್ಪೀಕರ್ ಮತ್ತು ಮೈತ್ರಿ ನಾಯಕರನ್ನು ಕಾಲೆಳೆದಿದ್ದಾರೆ. ಇಂದು ಟ್ವೀಟ್ ಮಾಡಿರುವ ಸಂತೋಷ್, ಬಿಎಸ್‍ಪಿ ಪಕ್ಷದ...

ಕೇರಳ, ಕೊಡಗು ಭಾಗದಲ್ಲಿ ಮಳೆ- ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಜೀವಕಳೆ

4 days ago

ಕೊಡಗು/ಬೆಂಗಳೂರು: ಕೇರಳ, ಕೊಡಗಿನ ಭಾಗದಲ್ಲಿ ಭಾರೀ ಮಳೆಯಾಗ್ತಿರೋ ಕಾರಣ ಕಾವೇರಿ ಕೊಳ್ಳದ ಡ್ಯಾಮ್‍ಗಳಲ್ಲಿ ಜೀವಕಳೆ ತುಂಬಿದ್ದು, ಪಾತಾಳ ಸೇರಿದ್ದ ನೀರಿನ ಮಟ್ಟ ನಿಧಾನವಾಗಿ ಮೇಲೇರುತ್ತಿದೆ. ಕೆಆರ್‍ಎಸ್‍ನಲ್ಲಿ ನೀರಿನ ಮಟ್ಟ 90 ಅಡಿ ದಾಟಿದ್ದು, ಈ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ನೀರು ಹರಿಸಲಾಗಿದೆ. ಅಣೆಕಟ್ಟೆಯಿಂದ...

ಲಾರಿಗೆ ಡಿಕ್ಕಿ ಹೊಡೆದ ಕಾರು -ಬೆಂಗ್ಳೂರು ಮೂಲದ ಇಬ್ಬರ ದುರ್ಮರಣ

4 days ago

ಕೊಡಗು: ಕಾರು, ಲಾರಿ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಬಾಳೆಕಾಡು ಬಳಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ 23 ವರ್ಷದ ಕಿರಣ್ ಮತ್ತು 25 ವರ್ಷದ ಶ್ರವಣ್ ಎಂದು ಗುರುತಿಸಲಾಗಿದೆ. ರಾಜು ಮತ್ತು...

ರಾಷ್ಟ್ರಪತಿ ಆಡಳಿತ ಬಂದ್ರೆ ಸರ್ಕಾರದ ಮೊಂಡುತನವೇ ಕಾರಣ – ಕೋಟ

4 days ago

ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರಪತಿ ಅವರ ಆಡಳಿತ ಬಂದರೆ ಅದಕ್ಕೆ ಈ ಜಂಟಿ ಪಕ್ಷಗಳೇ ಕಾರಣ ಆಗುತ್ತವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ಇಂದು ಬೆಳಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ...

ಇಂದಿನಿಂದ ಜು.23ರ ವರೆಗೆ ಭಾರೀ ಮಳೆ – ಹವಾಮಾನ ಇಲಾಖೆ

4 days ago

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಜುಲೈ 23ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕರಾವಳಿ ಮತ್ತು ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಮತ್ತು...